ಕಾರ್ಲಾಸ್


ಮೂಲ ಚೈನೀಸ್ ಕವಿತೆ: ಯಾವೋ ಫೆಂಗ್ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 

Image result for sail wiki soar
ಅವರು ಜೀವನದ ಜಂಜಡಗಳಿಂದ ಜರ್ಝರಿತರಾಗಿದ್ದರು, ಬಹುಮಟ್ಟಿಗೆ
ಈಗ ಅವನು ಆsನಾಳ ತಲೆಯನ್ನು ಅದುಮಿ ಹಿಡಿದಾಗಲೇ 
ಸಾಧ್ಯವಾಗುತ್ತದೆ ಅವನಿಗೆ ಪಿಸುಗುಟ್ಟುವುದು  ಮೆಲ್ಲಗೆ: ಪ್ರೇಮ ಮತ್ತು ಸಾವಿನ ಬಗ್ಗೆ, 
ಸಾವೆಂಬುದು ಪ್ರೇಮದ ಉತ್ತುಂಗ ಶಿಖರವೋ, ಸ್ವರ್ಗದ ಸೋಪಾನವೋ ಎಂಬಹಾಗೆ.  

ಒದ್ದೆಯಾದ ಮುದುರಿದ ಚಾದರಗಳು 
ಅಲೆಗಳಂತೆ, ಹುಚ್ಚೆದ್ದ ಗಾಳಿಯಂತೆ ತೋರುತ್ತವೆ. 
ಜೋಡಿಯು ತೇಲುತ್ತಾ ಸಾಗುತ್ತದೆ ಮುಂದೆ,
ಹಾರುತ್ತದೆ ಮೇಲೆ, 
ಇಷ್ಟಾಗಿ ಭೂಮಿಯ ಮೇಲೇ ಇದ್ದರೂ ಎರಡೂ ಅಂತ್ಯಗಳ ಕೊನೆ. 


ಕವಿತೆಯನ್ನು ಕುರಿತು: ಈ ಕವಿತೆಯ ಕಾರ್ಲಾಸ್ ಮತ್ತು ಆsನಾ ಯಾರೆಂಬ ವಿವರಗಳು ಮುಖ್ಯವಲ್ಲ. ಅವರು ಜೀವನದ ಒತ್ತಡಗಳಿಗೆ ಮಣಿದು ಆತ್ಮಹತ್ಯೆಗೆ ಶರಣಾದ ಪತಿ-ಪತ್ನಿಯಾಗಿರಬಹುದು. ಅಥವಾ ಅವಳನ್ನು ಕೊಂದು ಕಾರ್ಲಾಸ್ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು. ಕೊನೆಯ ಗಳಿಗೆಯಲ್ಲಿ ಅವಳ ತಲೆಯನ್ನು ಅದುಮಿ ಹಿಡಿದಾಗಲೇ ಕಾರ್ಲಾಸ್ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಲು ಸಾಧ್ಯವಾಗುವುದು ಎಂಬ ಸಾಲನ್ನು ಓದಿದಾಗ ಅವರಿಬ್ಬರೂ ಪರಸ್ಪರ ದ್ವೇಷಿಸುತ್ತಿದ್ದರೇ ಎಂಬ ಅನುಮಾನ ಕೂಡಾ ಬರುತ್ತದೆ.  ಕೆಲವೇ ಸಾಲುಗಳಲ್ಲಿ ಒಂದು ಚಿತ್ರವನ್ನು ಬಿಡಿಸಿಕೊಡುವ ಕವಿತೆ ತುಂಬಾ ಪರಿಣಾಮಕಾರಿಯಾಗಿದೆ.  ಕೊನೆಯ ಸಾಲಿನಲ್ಲಿ ಬರುವ "ಎರಡೂ ಅಂತ್ಯಗಳ ಕೊನೆ" ಎಂಬ ಸಾಲಿನ ಅರ್ಥ ಏನೆಂದು ಸ್ವಲ್ಪ ಯೋಚಿಸಬೇಕಾಗುತ್ತದೆ. ಎರಡೂ ಅಂತ್ಯಗಳು ಎಂದರೆ ಕಾರ್ಲಾಸ್ ಮತ್ತು ಆsನಾ ಅವರ ಸಾವೇ? ಅಥವಾ ಹಿಂದೆ ಕವಿ ಉಲ್ಲೇಖಿಸಿದ ಎರಡು ವಿಷಯಗಳೇ - ಪ್ರೇಮ ಮತ್ತು ಸಾವು - ಎಂಬ ಬಗ್ಗೆ ಯೋಚಿಸಿ. ಇವುಗಳು ಎರಡೂ ಎರಡು ಅಂತ್ಯಗಳು (ತುದಿಗಳು) ಅಥವಾ ಒಂದೇ ನಾಣ್ಯದ ಎರಡು ಮುಖಗಳು ಎಂಬ ಅರ್ಥವೂ ಹೊಮ್ಮಬಹುದು.  ಈ ಎರಡೂ ಅಂತ್ಯಗಳ ಅಂತ್ಯವೂ ಭೂಮಿಯ ಮೇಲೇ ಇದೆ ಎಂದಾಗ ಕವಿ ಏನು ಹೇಳಲು ಪ್ರಯತ್ನಿಸುತ್ತಿದ್ದಾನೆ? ಈ ಎರಡೂ ತುದಿಗಳು ಹುಟ್ಟು ಮತ್ತು ಸಾವು ಕೂಡಾ ಆಗಿರಬಹುದು. ಇವುಗಳ ಅಂತ್ಯವೂ ಭೂಮಿಯ ಮೇಲೇ ಎಂದಾಗ ಈ ಸಾಲಿಗೆ ಇನ್ನೂ ಒಂದು ಅರ್ಥ ಹೊಮ್ಮುತ್ತದೆ. 


ಕಾಮೆಂಟ್‌ಗಳು

  1. CARLOS
    Mostly, they are crushed by life’s oppressiveness
    It is only now
    when he clasps so firmly Anna’s head
    that he can murmur softly: Love, and death
    as if death were love’s acme, heaven’s bedrock

    Dampened and ruffled, the blankets
    resemble waves or demented gales
    Onwards the pair sail, or they soar
    though both endings have their end in earth

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)