ಕಾವ್ಯ



ಒಳ್ಳೆಯ ಕಾವ್ಯ ಹೇಗಿರುತ್ತದೆ? ಡಾನ್ ಪ್ಯಾಟರ್ಸನ್ ಅವರ ಉತ್ತರ ಒಂದು ಕವಿತೆಯ ರೂಪದಲ್ಲಿದೆ! ವಜ್ರದಲ್ಲಿ ಬಂಧಿತವಾಗಿರುವ ಬೆಳಕಿನ ಕಿಡಿ ಭೂಮಿಯ ಮೊದಲ ಬೆಂಕಿಯದು. ಹಾಗೇ ಕವಿತೆಯಲ್ಲಿ ಬಂಧಿಸಲು ಸಾಧ್ಯವಾಗುವುದು ಪ್ರೇಮದ ಉತ್ಕಟತೆಯನ್ನಲ್ಲ, ಪ್ರೇಮದ ಮೊದಲ ಕಿಡಿಯನ್ನು ಮಾತ್ರ ಎಂಬುದು ಕವಿಯ ನಿಲುವು. ಯಾವಾಗ (ಕಾವ್ಯದ) ಕೆಂಡವು ನಿಗಿನಿಗಿ ಎಂದು ದಹಿಸುತ್ತದೋ ಆಗ ಅದರಲ್ಲಿ ಕಾವ್ಯದ ಅಂಶವೂ ಸುಟ್ಟುಹೋಗುತ್ತದೆ. ಅದು ಮಂದವಾಗಿ ಉರಿದಾಗ ಮಾತ್ರ ಅದು ಕಾವ್ಯವಾಗುತ್ತದೆ. ಉದಾ. ಗಟ್ಟಿ ಘೋಷಣೆಗಳು ಕಾವ್ಯವಾಗುವುದಿಲ್ಲ. ಅಂತ ಘೋಷಣೆಗಳು ಕೇಳಿದಾಗ ಪಿಟೀಲುಗಳ ಸದ್ದಿನಲ್ಲಿ ಕಾವ್ಯದ ಧ್ವನಿ ಎಲ್ಲೋ ಕಳೆದುಹೋಗುತ್ತದೆ. ಕವಿಗೆ ಇದು ಗೊತ್ತು. ತನ್ನ ಕಾವ್ಯವು ಘೋಷಣೆಯಾದಾಗ ತನ್ನ ಧ್ವನಿಯಲ್ಲಿರುವ ಬಲವಂತವನ್ನು ಅವನು ಗುರುತಿಸಬಲ್ಲ. ತನಗೆ ಪರಿಶುದ್ಧ ಕಾವ್ಯ ಬೇಕೆಂದರೆ ತಾನು ಕಾಯಬೇಕೆಂದು ಕೂಡಾ ಅವನಿಗೆ ಗೊತ್ತು. ಅಂತ ಕಾವ್ಯವು ಬೆಟ್ಟದ ತೊರೆಯಂತೆ. ಅದರ ಶುದ್ಧನೀರಿನಲ್ಲಿ ಯಾವುದೇ ಬಣ್ಣವಿಲ್ಲ. ಯಾರದೇ ಹೆಸರಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)