ಪೋಸ್ಟ್‌ಗಳು

ಫೆಬ್ರವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ಕಂಪ್ಯೂಟರ್ ಮೇಲೆ ಕನ್ನಡದಲ್ಲಿ ಟೈಪ್ ಮಾಡುವುದು ಹೇಗೆ?

ಸಿ ಪಿ ರವಿಕುಮಾರ್ 1.       ಟ್ರಾನ್ಸ್-ಲಿಟರೇಷನ್ ಎಂದರೇನು ? ನಿಮ್ಮ ಬಳಿ ಇರುವುದು ಇಂಗ್ಲಿಷ್ ಅಕ್ಷರಗಳ ಕೀ ಬೋರ್ಡ್. ನೀವು ಇಂಗ್ಲಿಷ್ ಬೆರಳಚ್ಚು ಬಳಸಿ kamala ಎಂದು ಟೈಪ್ ಮಾಡಿದರೆ ಅದನ್ನು ಟ್ರಾನ್ಸ್-ಲಿಟರೇಷನ್ ಎಂಬ ಪ್ರಕ್ರಿಯೆ ಮೂಲಕ ಕನ್ನಡದ ‘ ಕಮಲ ’ ಎಂದು ಸಾಫ್ಟ್ ವೇರ್ ಅರ್ಥ ಮಾಡಿಕೊಳ್ಳುತ್ತದೆ. ಇಂಥ ಸಾಫ್ಟ್ ವೇರ್ ಅಥವಾ ತಂತ್ರಾಂಶಕ್ಕೆ ಟ್ರಾನ್ಸ್-ಲಿಟರೇಟರ್  ಎಂದು ಹೆಸರು. 2.      ಕನ್ನಡದಲ್ಲಿ ಟೈಪ್ ಮಾಡಲು ಇರುವ ತಂತ್ರಾಂಶಗಳು ಯಾವುವು ? ಬರಹ ಮತ್ತು ನುಡಿ ಇವೆರಡೂ ಸ್ವತಂತ್ರವಾಗಿ ಕನ್ನಡ ಬರವಣಿಗೆಗೆ ಉಪಯೋಗವಾಗುವ ತಂತ್ರಾಂಶಗಳು.  ಮೈರ್ಕೋಸಾಫ್ಟ್ ಆಫೀಸ್ ಮೊದಲಾದ ತಂತ್ರಾಂಶಗಳು ಈಗಾಗಲೇ ನಿಮಗೆ ಲಭ್ಯವಾಗಿದ್ದರೆ ಅವುಗಳನ್ನೇ ಟ್ರಾನ್ಸ್-ಲಿಟರೇಷನ್ ಪ್ರಕ್ರಿಯೆಗೆ ಹೊಂದಿಸಿಕೊಳ್ಳಬಹುದು. 3.      ಯೂನಿಕೋಡ್ ಎಂದರೆ ಏನು ? ಹಿಂದೆ ಇಂಗ್ಲಿಷ್ ಅಕ್ಷರಗಳನ್ನು ಮಾತ್ರ ಟೈಪ್ ಮಾಡುವುದು ಸಾಧ್ಯವಿತ್ತು. ಇದಕ್ಕಾಗಿ ಆಸ್ಕಿ ಕೋಡ್ ಎಂಬುದನ್ನು  ಆವಿಷ್ಕರಿಸಲಾಯಿತು. ಇತ್ತೀಚೆಗೆ ಕನ್ನಡ ಮತ್ತಿತರ ಭಾಷೆಗಳ ಅಕ್ಷರಗಳನ್ನು ಕಡತಗಳಲ್ಲಿ ಸೇರಿಸಲು ಯೂನಿಕೋಡ್ ಎಂಬ ಅಕ್ಷರಮಾಲೆಯನ್ನು ಆವಿಷ್ಕರಿಸಲಾಗಿದೆ. ಇದನ್ನು ಬಹುತೇಕ ಎಲ್ಲಾ ತಂತ್ರಾಂಶಗಳೂ ಅರ್ಥ ಮಾಡಿಕೊಳ್ಳುವುದರಿಂದ ಯೂನಿಕೋಡ್ ಬಳಸಿ ಟೈಪ್ ಮಾಡುವುದು ಒಳಿತು. 4.     ಮೈಕ್ರೋಸಾಫ್ಟ್ ಬಳಕೆದಾರರಿಗೆ ಉಪಯೋಗವಾಗುವ ಒಂದು ಟ್ರಾನ್ಸ್-ಲಿಟರೇಟರ್ ಯಾವುದು ?