ಪೋಸ್ಟ್‌ಗಳು

ಆಗಸ್ಟ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗಣೇಶನ ಸ್ಟೋರಿ

ಇಮೇಜ್
ಗಣೇಶನ ಸ್ಟೋರಿ  ಸಿ.ಪಿ. ರವಿಕುಮಾರ್  (ಈ ಪದ್ಯ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ೨೦೧೩ ಸೆಪ್ಟೆಂಬರ್  ತಿಂಗಳಲ್ಲಿ ಪ್ರಕಟವಾಗಿದೆ.) ಎಲ್ಲಾ ಆಬ್ಸ್ಟೆಕಲ್ಸ್ ರಿಮೂವ್ ಮಾಡಪ್ಪಾ ಅಂತ ಕೋರಿ ಹೇಳ್ತೀನಿ ಕೇಳಿ ಇಂದಿನ ಮಕ್ಕಳಿಗೆ ಗಣೇಶನ ಸ್ಟೋರಿ  ।। ಸ್ವೀಟೀ, ಹೇಳ್ತೀನಿ ಕೇಳು ಗಣೇಶನ ಕತೇನ ಸೆಲಿಬ್ರೇಟ್ ಮಾಡೋದಕ್ಕೆ ಅವನ ಬರ್ತ್ ಡೇನ ಅವನ ಮಮ್ಮಿ ಡಬಲ್ ಲೇಯರ್  ಚಾಕ್ಲೇಟ್ ಕೇಕ್ ಮಾಡಿದ್ಲು ಯಾಕೇಂದ್ರೆ ಗಣೇಶಂಗೆ  ಎರಡು ಸ್ವೀಟ್ ಟೂತ್  ಇತ್ತು ದೊಡ್ಡದು ಅರ್ಧ ಕೊಟ್ರೆ ಸಾಲ್ದು ನನಗೆ ಅಷ್ಟೂ ಬೇಕು ಅಂತ ಭಾರ ಆಯ್ತು ಹೊಟ್ಟೆ ತಿಂತಾ ತಿಂತಾ ಅಯ್ಯೋ ಇನ್ನೂ ಏನೇನೋ ಇದೆ ತಿನ್ನೋದಕ್ಕೆ ಮಜಾ ಮಜಾ ತಿಂಡಿ! ನೀನು ಕೇಕ್ ನಲ್ಲೇ ಹೊಟ್ಟೆ ತುಂಬ್ಕೊಂಡಿ! ವಾಕಿಂಗ್ ಹೋಗ್ ಬಾ ಒಂದು ರೌಂಡು, ಫ್ರೆಂಡ್ಸ್ ಬರೋದಕ್ಕೆ ಮುಂಚೆ ತಿಂದಿದ್ದು ಕರಗಿ ಸ್ವಲ್ಪ ಹಸಿವೆ ಆಗುತ್ತೆ ಗಣೇಶನ ಹತ್ರ ಒಂದು ಮಿಕ್ಕಿ ಮೌಸ್ ಇತ್ತು ಅದರ ಮೇಲೆ ಕೂತ್ಕೊಂಡು ಹೊರಟ ಟುಕುಟುಕು ಅಲ್ಲೊಂದು ಸ್ನೇಕ್ ಇತ್ತಂತೆ ಭುಸ್ ಅಂತ ಹೆಡೆ ಬಿಚ್ಕೊಂಡು ಮಿಕ್ಕಿ ಪುಕ್ಕಲ !  ಓಡಿದ ನೋಡು ಗಣೇಶನ್ನೂ ಹೊತ್ಕೊಂಡು! ಪಾಪ ಮುಗ್ಗರಿಸಿ  ಬಿದ್ದ ಒಂದು ಕಡೆ ಅರ್ಧ ಮುರೀತು ಗಣೇಶನ ಒಂದು ಸ್ವೀಟ್ ದವಡೆ ಪಾಪ ಢಮ್ ಅಂತ ಒಡೆದು ಗಣೇಶನ ಸ್ಟಮಕ್ಕು ಚೆಲ್ಲಾಪಿಲ್ಲಿ ಆಗೋಯ್ತು ಒಳಗಿದ್ದ ಕೇಕು ಅದನ್ನೆಲ್ಲಾ ಹಾಗೇ ಹೊಟ್ಟೇಲಿ ಸ್ಟಫ್ ಮಾಡಿ ಹಾವನ್ನೇ ಬೆಲ್ಟ್ ಥರಾ ಕಟ್ಕೊಂಡ ಟೈಟಾಗ

ಗಾಂಧಿ, ಜುರಾಸಿಕ್ ಪಾರ್ಕ್ ಮತ್ತು ಆಟೆನ್ ಬರೋ

ಇಮೇಜ್
"ಗಾಂಧಿ" ನಿರ್ದೇಶಿಸಿದ ಆಟೆನ್ ಬರೋಗೆ  ಜುರಾಸಿಕ್ ಪಾರ್ಕ್ ಪಾತ್ರಕ್ಕೆ ಗಾಂಧಿಯೇ ಪ್ರೇರಣೆಯಾಗಿದ್ದರೇನೋ! ಸಿ ಪಿ ರವಿಕುಮಾರ್ ರಿಚರ್ಡ್ ಆಟೆನ್ ಬರೋ ಅವರು ತೊಂಬತ್ತು ವರ್ಷಗಳ ತಮ್ಮ ಸುದೀರ್ಘ ಪಯಣ ಮುಗಿಸಿದರೆಂಬ ಸುದ್ದಿ ಬಂದಿದೆ.  ಭಾರತೀಯರಿಗೆ  ಅವರು "ಗಾಂಧಿ" ಚಿತ್ರದ ನಿರ್ಮಾಪಕ-ನಿರ್ದೇಶಕರೆಂದು ಚಿರಪರಿಚಿತರು.  ಎಂಬತ್ತರ ದಶಕದಲ್ಲಿ ಈ ಚಿತ್ರ ಬಿಡುಗಡೆಯಾದಾಗ ಅದನ್ನು ನೋಡಲು ನಾನು ನನ್ನ ತಂದೆಯವರ ಜೊತೆ ಹೋಗಿದ್ದು ನೆನಪಾಗುತ್ತಿದೆ. ಆಗ ನನ್ನ ತಂದೆಯವರ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಹೊರಗೆ ಹೋಗಿ ಬಂದರೆ ಒಂದು ಬದಲಾವಣೆ ಇರುತ್ತದೆಂದು ಅವರನ್ನು "ಗಾಂಧಿ" ಚಿತ್ರ ನೋಡಲು ಹೋಗೋಣವೇ ಎಂದು ಕರೆದೆ.  ಆಶ್ಚರ್ಯಕ್ಕೆ ಅವರು ಒಪ್ಪಿಕೊಂಡರು.  ಹತ್ತಿರ ಇದ್ದ ಬೆಂಗಳೂರು ಡ್ರೈವ್-ಇನ್ ಥಿಯೇಟರಿನಲ್ಲಿ ಹಿಂದಿ ಭಾಷೆಯಲ್ಲಿ ಚಿತ್ರ ನೋಡಲು ಹೊರಟೆವು. ಈಗ ಈ ಚಿತ್ರಮಂದಿರ ಇಲ್ಲ. ದೊಡ್ಡ ತೆರೆಯ ಮೇಲೆ ಗಾಂಧಿ ಚಿತ್ರವನ್ನು ನೋಡಿದಾಗ ರೋಮಾಂಚನವಾಯಿತು.  ಚಿತ್ರ ಪ್ರಾರಂಭವಾಗುವುದು ಗಾಂಧೀಜಿಯ ಹತ್ಯೆಯ ಸನ್ನಿವೇಶದಿಂದ.  "ಹೇ ರಾಮ್!" ಎಂದು ಗಾಂಧೀಜಿ ಕುಸಿದಾಗ ಕಥೆ ಹಿಂದಕ್ಕೆ ಹಾರುತ್ತದೆ. ಅಪಾರ್ಥೇಡ್ ನಾಡಾದ ದಕ್ಷಿಣ ಆಫ್ರಿಕಾದಲ್ಲಿ ಒಬ್ಬ ಬಿಳಿದೊರೆಯ ಜೊತೆ ಪ್ರಯಾಣ ಮಾಡುವ ಧಾರ್ಷ್ಟ್ಯ ತೋರಿಸಿದ ಒಬ್ಬ ಮಧ್ಯವಯಸ್ಕ ಭಾರತೀಯನನ್ನು ರೈಲಿನಿಂದ ಹೊರಗೆ ತಳ್ಳಿದ ಘಟನೆ. ಮುಂದೆ ಇದೇ ಕಂದು ತ

ಈ ವಿಶ್ವವೊಂದು ನಾಟಕರಂಗ

ಇಮೇಜ್
ಮೂಲ - ವಿಲಿಯಂ ಶೇಕ್ಸ್ ಪಿಯರ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಈ ವಿಶ್ವವೊಂದು ನಾಟಕರಂಗ, ಎಲ್ಲ ಗಂಡುಹೆಣ್ಣುಗಳೂ ಅಲ್ಲಿ ಪಾತ್ರಧಾರಿಗಳು; ಪ್ರತಿಯೊಬ್ಬರಿಗೂ ಇದೆ ಅವರವರ ಪ್ರವೇಶ-ಪ್ರಸ್ಥಾನ, ಒಬ್ಬ ಮಾನವನಿಗೆ ಒಂದಲ್ಲ ಹಲವಾರು ಪಾತ್ರ: ಅವನ ಏಳು ವಯೋಮಾನಗಳು ಏಳು ನಾಟಕಾಂಕಗಳು.  ಮೊದಲನೆಯ ಅಂಕದಲ್ಲಿ ಹಸುಗೂಸು: ತಾಯ ಕಂಕುಳಲ್ಲಿ ಕಾಲ ಕಳೆಯುವುದು ಬಿಕ್ಕುತ್ತ ಕಕ್ಕುತ್ತ.  ಮುಂದೆ ಶಾಲಾಬಾಲಕ: ಹೊಳೆವ ಕಣ್ಣಿನ ಸುಕುಮಾರ ಮುಖ  ಪಾಟೀಚೀಲ ಹೊರಲಾರದೆ ಹೊತ್ತು  ಬಸವನ ಹುಳು ವೇಗದಲ್ಲಿ ಹೊರಟ ಗಮ್ಮತ್ತು.  ನಂತರ ಪ್ರೇಮಿ, ಹಬೆಯ ಒಲೆಯಂತೆ  ಉಸ್ಸೆಂದು ಆಗಾಗ ನಿಟ್ಟುಸಿರು; ವಿರಹಗೀತೆ  ಪ್ರೇಮಿಕೆಯ ಕುಡಿಹುಬ್ಬನ್ನು ನೆನೆದು.  ಮುಂದೆ ಹೋರಾಡಲು ಹೊರಟ ಹುರಿಯಾಳು, ಚಿರತೆಯ ಮೀಸೆ, ಬಾಯಲ್ಲಿ ವಿಚಿತ್ರ ಆಣೆಮಾತುಗಳು, ಹೊಟ್ಟೆಯಲ್ಲಿ ಮಾತ್ಸರ್ಯದ ಕಿಚ್ಚು  ಭುಗಿಲೆದ್ದು  ಸಿಟ್ಟು ಜಗಳಕ್ಕೆ ತಿರುಗುವುದು; ಗೌರವವು ಕೈಗೆ ಸಿಕ್ಕದ ನೀರಗುಳ್ಳೆ ಅದಕ್ಕಾಗಿ ತೋಪಿನ ಬಾಯಿಗೆ ಕಟ್ಟಿದರೂ ಸೈ! ಮತ್ತೂ ಮುಂದೆ ಪಟೇಲ; ನ್ಯಾಯ ಮಾಡುತ್ತಾನೆ ಧರಿಸುತ್ತಾನೆ ಜರಿಯ ಉತ್ತರೀಯ ಡೊಳ್ಳು ಹೊಟ್ಟೆಯ ಮೇಲೆ  ಮೊನಚಾಗಿದೆ ಕಣ್ ದೃಷ್ಟಿ, ನುಣುಪಾಗಿದೆ ದಾಡಿ, ಬಾಯ್ ಬಿಟ್ಟರೆ ದೃಷ್ಟಾಂತದ ಮಾತು ಮಾಡುತ್ತದೆ ಮೋಡಿ.  ಆರನೆಯ ಅಂಕದಲ್ಲಿ ನರಪೇತಲನಾಗಿದ್ದಾನೆ, ಮಾಗಿದ್ದಾನೆ, ಕನ್ನಡಕ ಕಣ್ಮುಂದೆ; ಮುಖದಲ್ಲಿ ಮೈ

ಆಲಿಸು ಕೃಷ್ಣನ ಕೊಳಲಿನ ಕರೆ!

ಇಮೇಜ್
 ಸಿ ಪಿ ರವಿಕುಮಾರ್ ಕೃಷ್ಣನ ಕೊಳಲಿನ ಕರೆ! ಆಲಿಸು ಕೃಷ್ಣನ ಕೊಳಲಿನ ಕರೆ! ಹಿಂ ದೊಮ್ಮೆ ರೇಡಿಯೋ ಮನರಂಜನೆಯ ಮುಖ್ಯ ಸಾಧನವಾಗಿದ್ದ ಕಾಲದಲ್ಲಿ ಈ ಗೀತೆ ಆಕಾಶವಾಣಿಯಿಂದ ಆಗಾಗ ತೇಲಿಬರುತ್ತಿತ್ತು. ಇಂದು ಈ ಹಾಡು ಅಷ್ಟಾಗಿ ಕೇಳಿಸುವುದಿಲ್ಲ.  ನೀವು ಈ ಹಾಡನ್ನು ಕೇಳಿಲ್ಲದೆ ಇದ್ದರೆ ನನಗೆ ಆಶ್ಚರ್ಯವಾಗುವುದಿಲ್ಲ. ಇಂಟರ್ ನೆಟ್ ಮೇಲೆ ಹುಡುಕಿದಾಗ ಇಲ್ಲಿ ಸಿಕ್ಕಿತು - ನೀವೂ ಕೇಳಿ.  ಇದು "ಸುಬ್ಬಾಶಾಸ್ತ್ರಿ"  ಎಂಬ ಚಲನಚಿತ್ರದಲ್ಲಿ ಬರುವ ಗೀತೆ; ಬಹಳ ದೊಡ್ಡ ಘಟಾನುಘಟಿಗಳು ಈ ಗೀತೆಯ ರಚನೆಯ ಹಿಂದೆ ಇದ್ದಾರೆ! ಕನ್ನಡದ ಕವಿ ಪು. ತಿ. ನರಸಿಂಹಾಚಾರ್ ಅವರ ಕವಿತೆಯನ್ನು ಗೀತೆಗೆ ಅಳವಡಿಸಿಕೊಳ್ಳಲಾಗಿದೆ. ಗೀತೆಗೆ ಸಂಗೀತ ನೀಡಿದವರು ಸ್ವತಃ ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಆಕಾಶವಾಣಿಯ ಡೈರೆಕ್ಟರ್ ಆಗಿದ್ದ ಶ್ರೀ ಎಸ್. ಕೃಷ್ಣಮೂರ್ತಿ.  ಹಾಡಿದವರು ಶ್ರೀರಂಗಂ ಗೋಪಾಲರತ್ನಂ.  ಅತ್ಯಂತ ಸುಶ್ರಾವ್ಯವಾದ ಸಂಗೀತ. ಕೇಳಿದ ನಂತರ ಮತ್ತೆ ಮತ್ತೆ ಕೇಳಬೇಕು ಎನ್ನಿಸುವಂಥ ಹಾಡು. ಪು ತಿ ನರಸಿಂಹಾಚಾರ್ ಕನ್ನಡದ ನವೋದಯ ಕಾವ್ಯಪ್ರಕಾರದಲ್ಲಿ ಬಹಳ ಮುಖ್ಯ ಕವಿ; ಬೇಂದ್ರೆ, ಕುವೆಂಪು ಮತ್ತು ಪು.ತಿ.ನ. ಇವರನ್ನು ನವೋದಯ ಕಾಲದ ದಿಗ್ಗಜರು ಎಂದು ಕರೆಯಲಾಗುತ್ತದೆ. ಪು.ತಿ.ನ. ಅವರ ವಿಶೇಷವೆಂದರೆ ಅವರು ಸಂಗೀತದಲ್ಲಿ ವಿಶೇಷ ಜ್ಞಾನ ಹೊಂದಿದ್ದರಿಂದ ಅನೇಕ ಗೀತೆಗಳನ್ನು ಅವರು ಹಾಡಲೆಂದೇ ಬರೆದಿದ್ದಾರೆ.  ಇದನ್ನು ನಾವು ಡಿವಿಜಿ ಮತ್ತು ವಿ.

ತಮಸ್ - ಸ್ವಾತಂತ್ರ್ಯ ದಿವಸದ ಸಂದರ್ಭದಲ್ಲಿ ಒಂದು ನೋಟ

ಇಮೇಜ್
ಯಾರು ಹಿಂದೆ ನಡೆದದ್ದನ್ನು ನೆನಪಿಡಲಾರರೋ ಅವರಿಗೆ ಅದರ  ಪುನರಾವೃತ್ತಿಯೇ ಶಾಪ - ಜಾರ್ಜ್ ಸಾಂತಾಯನ .  ಸಿ ಪಿ ರವಿಕುಮಾರ್ ಗೋವಿಂದ್ ನಿಹಲಾನಿ ಅವರು ನಿರ್ದೇಶಿಸಿದ "ತಮಸ್" ಚಿತ್ರವನ್ನು ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ನೋಡಿ; ಇದು ಇಂಟರ್ ನೆಟ್ ಮೇಲೆ ಲಭ್ಯವಾಗಿದೆ.  ಪ್ರಸಿದ್ಧ ಹಿಂದಿ ಲೇಖಕ ಭೀಷ್ಮ ಸಾಹನಿ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರದ ಕತೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಪೂರ್ವದ ಕೆಲವು ದಿನಗಳಲ್ಲಿ ನಡೆದ ಘಟನೆಗಳ ಸುತ್ತ ಹೆಣೆಯಲಾಗಿದೆ. ಈಗಾಗಲೇ ದೇಶವನ್ನು ವಿಭಜನೆ ಮಾಡುವ ಮಾತು ಪ್ರಾರಂಭವಾಗಿದೆ.  ಲಾಹೋರ್ ನಗರದಲ್ಲಿ ದಂಗೆಯ ಸೂಚನೆಗಳು ದಟ್ಟವಾಗಿವೆ.  ಮೂರು ವಿವಿಧ ಧರ್ಮದ ಜನ ಲಾಹೋರ್ ನಲ್ಲಿ ನೆಲೆಸಿದ್ದಾರೆ - ಹಿಂದೂ, ಮುಸ್ಲಿಂ, ಮತ್ತು ಸಿಖ್. ಇವರ ನಡುವೆ ಭಿನ್ನಾಭಿಪ್ರಾಯಗಳು ಇದ್ದರೂ ಸಾಮಾನ್ಯ ಜನ ಅದನ್ನು ಮರೆತು ತಮ್ಮ ಪಾಡಿಗೆ ತಾವಿದ್ದಾರೆ; ಸಾಮರಸ್ಯದಿಂದ ಬಾಳುತ್ತಿದ್ದಾರೆ.  ಒಬ್ಬ ಮುಸ್ಲಿಂ ಕವಿ ಸಂಸ್ಕೃತದ ಶಾಕುಂತಲಾ ಕಾವ್ಯವನ್ನು ಉರ್ದುವಿಗೆ ತರ್ಜುಮೆ ಮಾಡುತ್ತಾನೆ. ಮುಸ್ಲಿಂ ಶಿಕ್ಷಕನೊಬ್ಬ ಸಿಖ್ ಪರಿವಾರದವರ ಮನೆಯಲ್ಲಿ ಬಾಡಿಗೆಗೆ ಇದ್ದಾನೆ. ಮುಸ್ಲಿಂ ಜನರೇ ಹೆಚ್ಚಾಗಿ ವಾಸಿಸುವ ಬಡಾವಣೆಯಲ್ಲಿ ಹಿಂದೂ ಧರ್ಮೀಯ ಸೇಠ್ ಜೀ ಯಾವ ಭಯವಿಲ್ಲದೆ ವಾಸವಾಗಿದ್ದಾನೆ.  ತೊಂಬತ್ತೊಂಬತ್ತು ಭಾಗ ಸಾಮರಸ್ಯ ಮತ್ತು  ಎಲ್ಲೋ ಒಂದು ಭಾಗ ಭಿನ್ನಾಭಿಪ್ರಾಯ.  ಆದರೆ ಸಮಾಜವನ್ನು ಒಡೆಯುವ ಶಕ

ಸ್ಟ್ಯಾಚೂ ಆಟ

ಇಮೇಜ್

ಸ್ನೇಹ ... !

ಇಮೇಜ್
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಸ್ನೇಹ - ತಾನು ಪರೀಕ್ಷೆ ಒಡ್ಡುವುದಿಲ್ಲ ತನ್ನನ್ನು ಪರೀಕ್ಷೆಗೆ ಒಡ್ಡಿಕೊಳ್ಳುವುದೂ ಇಲ್ಲ ಹೇಳುತ್ತೇನೆ ಕೇಳು ಸ್ನೇಹ ಏನೆಂದು - ಮಳೆಯಲ್ಲಿ ನೆಂದ ಚೆಹರೆಯ ಮೇಲೂ ಗುರುತಿಸುವುದಿದೆಯಲ್ಲ ಕಣ್ಣೀರ ಕಲೆ  ಸ್ನೇಹದ ಗುರುತೆಂದರೆ ನೋಡು, ಅದೇ! ಇಂದು ಕಳೆದೆ ಒಂದಿಷ್ಟು ಹೊತ್ತು ಭಗವಂತನ ಜೊತೆ ನನ್ನ ಬಗ್ಗೆ ಸಾಕಷ್ಟು ಆಯಿತು ಮಾತುಕತೆ ನಾನೆಂದೆ - "ಎಂಥೆಂಥ ಗೆಳೆಯರಿದ್ದಾರೆ ನನಗೆ! ನನ್ನ ಭಾಗ್ಯಕ್ಕೆ ತುಂಬಿ ಬರುತ್ತದೆ ಎದೆ" ಭಗವಂತನು ಹೀಗೆಂದ:  "ಜೋಪಾನ! ಕಳೆದುಕೊಂಡೀಯೆ ಜೋಕೆ!" ನನ್ನ ಮೆಚ್ಚಿನವರು ಅವರು, ಹೇಗೋ ಬಂದಿದ್ದಾರೆ ನಿನ್ನ ಭಾಗಕ್ಕೆ!" ದಿನಗಳು ಕಳೆದುಹೋಗಿ ಉಳಿಯುತ್ತವೆ ಸವಿನೆನಪು ಕತೆಗಳಾಗಿ ಉಳಿಯುತ್ತವೆ ನಡೆದು ಹೋದ ಮಾತು ಆದರೆ ಗೆಳೆಯರೋ! ಇರುವರು ಸದಾ ನಮ್ಮ ಹೃದಯಕ್ಕೆ  ಹತ್ತಿರದಲ್ಲಿ  ಕೆಲವೊಮ್ಮೆ ಮುಗುಳ್ನಗೆಯಾಗಿ, ಕೆಲವೊಮ್ಮೆ ಕಣ್ಣಲ್ಲಿ ಸುರಿವ ಜಲವಾಗಿ. --- Translation of a poem by Harivansha Rai Bachchan  C.P. Ravikumar

ಮಾಸ್ತಿ, ಪ್ರೇಮ್ ಚಂದ್ ಮತ್ತು ಕಾಸ್ಮಿಕ್ ಎನರ್ಜಿ

ಇಮೇಜ್
ಸಿ ಪಿ ರವಿಕುಮಾರ್ ಗುಲ್ಜಾರ್ ಅವರ ನಿರ್ದೇಶನದಲ್ಲಿ ಪ್ರೇಮ್ ಚಂದ್ ಅವರ ಕತೆಗಳು ಹೊಳಪು ಮಾಡಿದ ವಜ್ರಗಳ ಹಾಗೆ ಕಂಗೊಳಿಸುತ್ತಿವೆ. ಮಾಸ್ತಿ ಅವರ ಕತೆಗಳನ್ನೂ ಇಂದಿನ ಪೀಳಿಗೆಗೆ ಇದೇ ರೀತಿ ಅತ್ಯುತ್ತಮ ರೀತಿಯಲ್ಲಿ ಸಮರ್ಥ ನಿರ್ದೇಶಕರ ಕೈಯಲ್ಲಿ ಸಿದ್ಧಗೊಳಿಸಿ ಸುಲಭವಾಗಿ ಸಿಕ್ಕುವ ಹಾಗೆ ಮಾಡುವುದು ಇಂದಿನ ಅಗತ್ಯ. ಕೆಲವು ದಿನಗಳ ಹಿಂದೆ ನನಗೆ ಒಂದು ಈ-ಮೇಲ್ ಸಂದೇಶ ಬಂತು. ಕನ್ನಡ ಲೇಖಕ ಶ್ರೀ ಕೆ ಸತ್ಯನಾರಾಯಣ ಅವರ ಪತ್ರ. ಇದಕ್ಕೆ ಒಂದು ಹಿನ್ನೆಲೆ ಹೀಗೆ.  ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂದಿಗೂ ಪ್ರಸ್ತುತರೇ ಎಂಬ ಬಗ್ಗೆ  ಅವರು ನೀಡಿದ ಭಾಷಣದ ಬಗ್ಗೆ ನಾನು ಹಿಂದೆ ಬರೆದಿದ್ದೆ. ಅದನ್ನು ನೀವು ಇಲ್ಲಿ ಓದಬಹುದು . ನನ್ನ ಗುರುಗಳಾದ ಶ್ರೀ ಎಚ್ ಎಸ್ ಮಾಧವರಾವ್ ಈ ಬ್ಲಾಗನ್ನು ಓದಿ ಕೆ ಎಸ್ ಅವರಿಗೆ ಆ ವಿಷಯ ಹೇಳಿದರಂತೆ. ತಮ್ಮ ಪತ್ರದಲ್ಲಿ ನನ್ನ ತಂದೆಯವರು ಹಿಂದೂ ಪತ್ರಿಕೆಯಲ್ಲಿ ಬರೆಯುತ್ತಿದ್ದ ಕಾಲಂ "Between You and Me" ತಾವು ಓದುತ್ತಿದ್ದರೆಂದು  ನೆನೆಸಿಕೊಂಡಿದ್ದರು. ನಾನು ಮಾಸ್ತಿ ಅವರನ್ನು ಕುರಿತು ಬರೆದದ್ದು ಅವರಿಗೆ ತುಂಬಾ ಸಂತೋಷವಾಗಿತ್ತು. ತಾವು ಬರೆದ "ಮಾಸ್ತಿಗನ್ನಡಿ" ಎಂಬ ಕತೆಯನ್ನು ನನಗೆ ಓದಲು ಕಳಿಸಿದರು. ಕೆ ಎಸ್ ಅವರ ಭಾಷಣ ಕೇಳಿದ ನಂತರ ನಾನು ನನ್ನಲ್ಲಿದ್ದ ಮಾಸ್ತಿ ಅವರ ಸಣ್ಣಕತೆಗಳ ಸಂಗ್ರಹವನ್ನು ಮತ್ತೆ ಹೊರತೆಗೆದೆ. ಪ್ರಿಸಂ ಪ್ರಕಾಶಕರು ಪ್ರಕಟಿಸಿದ ಪುಸ್ತಕದಲ್ಲಿ ಕನ್ನಡ