ಪೋಸ್ಟ್‌ಗಳು

Shiv Mangal Sen ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!

ಇಮೇಜ್
ಮೂಲ ಹಿಂದಿ ಕವಿತೆ: ಶಿವಮಂಗಲ ಸಿಂಗ್ ಸುಮನ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ಇಂದು ಸಾಗರವು ವಿಷವನು ಕಕ್ಕಿ  ಅಲೆಗಳಲೊಮ್ಮೆಲೆ   ಯೌವ್ವನ ಉಕ್ಕಿ  ಹೃದಯದಲ್ಲಿಯೂ ಸಾಗರದಂತೆ  ಮೇಲೇಳುತ್ತಿದೆ ಪ್ರವಾಹಸಿಂಧು  ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!  ಅಲೆಗಳ ಭಾಷೆಯಲೇ ಮಾತಾಡು  ಚಂಡಮಾರುತದ ಸಾಹಸ ಬೇಡು   ಜೀವನದಲ್ಲೆಲ್ಲೋ ಒಮ್ಮೊಮ್ಮೆ  ಸಿಗುವುದು ಬಿರುಗಾಳಿಯ  ಸಮ ಬಂಧು! ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!  ಅನಂತ ಸಾಗರವೂ ಅರಿತಿಹುದು  ಸೀಮಾರೇಖೆಯು ಇದೆ ತನಗೊಂದು! ಉಕ್ಕುತಿರುವ ಅಲೆಗಳಿಗೂ ಗೊತ್ತು  ಸೋಲೊಪ್ಪನು ಮೃಡ ಮಾನವನೆಂದು! ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!  ಇರಬಹುದೆಷ್ಟೋ ಕಡಲೊಳು ಕೆಚ್ಚು  ದಣಿವಿಲ್ಲದ ನಾವಿಕನಿಗೆ ಇನ್ನೆಷ್ಟು? ದೇಹದೊಳಿರುವಾಗಿನ್ನೂ ಕೊನೆಯುಸಿರು  ತ್ಯಜಿಸುವನೇ ಹರಿಗೋಲನು ಕೈಬಿಟ್ಟು? ಈ ಛಲದಿಂದಲೆ ಗೆದ್ದನು ಬಿಡದೆ  ಸಪ್ತಸಾಗರಗಳಲೊಂದೂ! ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು! (Hindi poem by Shivmangal Singh Suman, translated by C.P. Ravikumar)