ಪೋಸ್ಟ್‌ಗಳು

Sagar Khayyami ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಲ್ಲಂಗಡಿಯ ಭೂತ

ಇಮೇಜ್
ಸ್ಫೂರ್ತಿ ... ಸಾಗರ್ ಖಯ್ಯಾಮಿ ಅವರ ಉರ್ದು ಕವಿತೆ ಕನ್ನಡ ಅವತರಣ ... ಸಿ.ಪಿ. ರವಿಕುಮಾರ್ ಬೆಂಗಳೂರಲ್ಲಿ ಬಾಡಿಗೆಗೆ ಮನೆಯೊಂದನ್ನು ಹುಡುಕುತ್ತ ಪ್ರಾಣ ಬಿಡುವುದೇ ಏನೋ ಪರದೈವದ ಚಿತ್ತ ಒಂದು ದಿನ ಹೀಗೇ ಅಲೆದಲೆದೂ ದಿನವೆಲ್ಲಾ ಹೊಟ್ಟೆಯಲ್ಲಿ ನಡೆಯುತಿತ್ತು ತಾಳಮದ್ದಳೆ ಮೇಳ ನನ್ನ ಹೊಟ್ಟೆಯು ಕೂಡಾ ತುಸು ದೊಡ್ಡದೇ, ಕ್ಷಮಿಸಿ ! ಮತ್ತು ಜೋಬಿನಲ್ಲಿದ್ದದ್ದು ಅತ್ಯಲ್ಪ ಧನರಾಶಿ! ಇನ್ನೇನು ಸಿಕ್ಕುವುದು ಜುಜುಬಿ ಕಲ್ಲಂಗಡಿ ಹೊರತು? ಹೊತ್ತು ಬರುವಾಗ ಎಡವಿ ಅದು ಕೂಡಾ ಕೈಜಾರಿತು! ಆಯಿತು ನೋಡಿರಿ ಆಗ ಒಂದು ಕರಾಮತ್ತು ಹೊಗೆಯೆದ್ದು ಭುಸ್ ಒಂದು ಭೂತ ಹೊರಬಂತು! ರಸ್ತೆಯಲ್ಲೇ ನನ್ನ ಕಾಲಿಗೆ ಸಾಷ್ಟಾಂಗ ಪ್ರಣಾಮ ನೀಡು ಆಜ್ಞೆಯ! ಶಿರಸಾ ವಹಿಸುವನು ಗುಲಾಮ! ಬೀರಿದರೆ ನಾನು ಒಂದೇ ಕಟಾಕ್ಷ ಸಾಹಿತ್ಯ ಸಮ್ಮೇಳನಕ್ಕೆ ನೀನೇ ಅಧ್ಯಕ್ಷ ಕವಿಗೋಷ್ಠಿಯಲ್ಲಿ ನಿನ್ನದೇ ಮೊದಲ ಕವಿತಾ ವಾಚನ ತಡೆಹಿಡಿಯಬಲ್ಲೆ ಓಡದಂತೆ ಅಧ್ಯಕ್ಷರ ವಾಚನ್ನ! ಮುದ್ರಿಸುವೆನು ನಿನ್ನ ಕವನಸಂಗ್ರಹಗಳ ಸಂಪುಟ ಮುನ್ನುಡಿ, ಬೆನ್ನುಡಿ, ಬಿಡುಗಡೆಯೆಲ್ಲಾ ಚಟಪಟ ಮುಖಪುಟದಲ್ಲೇ ಬಂದೀತು ಅರೆಪುಟದ ವರದಿ ನೀನೆಂತೆಂಥಾ ದೊಡ್ಡ ಕಾವ್ಯಗಳ ಬರದೀ ನೋಡುತ್ತಿರು ನೀನು ಏನೇನು ಆಗುವೆ ಏನೂ ಮಾಡದೆ ಅವಾರ್ಡ್ ಪಡೆಯುತ್ತ ಸಾಗುವೆ! ಕೆಟ್ಟ ವಿಮರ್ಶಕರನ್ನು ಮಾಡುವೆನು ನಾಶ ನಿನ್ನ ಬಕ್ಕತಲೆ ಮೇಲೂ ಬೆಳೆಸುವೆನು ಕೇಶ ಅಪ್ರತಿಮ ಸುಂದರ...