ಪೋಸ್ಟ್‌ಗಳು

2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜ್ಜಿಯ ಬೆಕ್ಕು

ಇಮೇಜ್
  ಅಜ್ಜಿಯ ಹಿಂದೆ ಓಡಾಡುವುದು ಪಟ್ಟಾಪಟ್ಟೆ ಕರಿಬೆಕ್ಕು ಹುಲಿ ಎಂದೇ ತಿಳಿದಿದೆ ತನ್ನನ್ನು ಅಬ್ಬಾ ಎಂತಹ ಸೊಕ್ಕು! ಮಜ್ಜಿಗೆ, ಹಾಲು, ಏನೇ ಇರಲಿ, ಕೃಷ್ಣನಿಗೊಂದು ಪಾಲು! ಬೆಣ್ಣೆಯ ಕಡೆಯಲು ಕೂತರೆ ಅಜ್ಜಿ ನೆಕ್ಕುವುದು ಕಡಗೋಲು! ಹೂವನು ಬಿಡಿಸಲು ಹೋದರೆ ಅಜ್ಜಿ ಅಲ್ಲಿಗೆ ಬರುವನು ಕೃಷ್ಣ ಅಯ್ಯೋ ಹಸಿವಾಯಿತೆ ಕೃಷ್ಣನಿಗೆ ಎನ್ನುತ ಎದ್ದು ತಕ್ಷ್ಣ ಅಜ್ಜನಿಗೆಂದು ಮಾಡಿದ ಕಾಫಿ ಕೊಟ್ಟರೆ ಬಟ್ಟಲಿನಲ್ಲಿ ಒಂದೇ ನಿಮಿಷದಿ ಹೀರಿಬಿಡುವನು ಕೃಷ್ಣನು ಮಹಾಮಳ್ಳಿ! ಊರಿಗೆ ಹೋದಾಗೆಲ್ಲಾ ಅಜ್ಜಿ ಅಜ್ಜನದೇ ವಹಿವಾಟು, ಅಜ್ಜಿಯ ಮುದ್ದು ಮುಚ್ಚಟೆಗೆಲ್ಲ ಸ್ವಲ್ಪ ದಿನ ಫುಲ್ ಸ್ಟಾಪು ಅಡಿಗೆಮನೆಗೇ ನುಗ್ಗುವ ಕೃಷ್ಣ, ಅವನಿಗಿಲ್ಲ ಸಂಕೋಚ ಕುಡಿದು ತಪ್ಪಲೆಯ ತುಂಬಾ ಹಾಲು ಮಿಯಾಂವ್ ಎನ್ನುವನು, ಸಾಚಾ! ಮರಳಿ ಬಂದಾಗ ಅಜ್ಜಿಯು ಇವನು ಅವಳ ತೊಡೆಯ ಏರಿದರೆ  ಬಾರೋ ಕೃಷ್ಣ ಬಾರೋ ಎಂದು ಮುದ್ಧಿನ ಸುರಿಮಳೆಧಾರೆ ಅಯ್ಯೋ ಸೊರಗಿಸಿಬಿಟ್ಟಿರಿ ಮಗುವನ್ನು ಹಾಕದೆ ಊಟ, ಪಾಪ! ಎನ್ನುತ ಹಾಲು ಸುರಿದು ಬಟ್ಟಲಿಗೆ ಕರೆವಳು, ಕುಡಿ ಬಾರಪ್ಪಾ! ಅವನಿಗೇನು ಆಗಿದೆಯೇ! ನೋಡು ಕಣ್ಣು ಬಿಟ್ಟು ಸರಿಯಾಗಿ! ಮೈ ಬಂದಿದೆ ಹಾಲೂ ಮೊಸರೂ ಬೆಣ್ಣೆ ಕದ್ದು ತಿಂದಿಹನು ತೇಗಿ! ಹೊತ್ತಿಗೆ ಕಾಫಿ ತಿಂಡಿ ಇಲ್ಲದೆ ಸೊರಗಿಹೋಗಿರುವೆ ನಾನು ಬಂದ ಕೂಡಲೇ ಅವನಿಗೆ ಉಪಚಾರ ಮಾಡುತ್ತಿರುವೆ ನೀನು! ಸಾಕು ಸುಮ್ಮನಿರಿ, ಕಣ್ಣು ಹಾಕದಿರಿ, ಎನ್ನುತ ಅಜ್ಜಿ ಬಿಗಿಯುವಳು ಮುಷ್ಟಿ! ಬಾರೋ ಕೃಷ್ಣಾ, ಉಪ್ಪು ನಿವಾಳಿಸಿ ತೆಗೆಯ

ಅಜ್ಜಿಯ ವೇಷ

ಇಮೇಜ್
  ಉಡಿಸಮ್ಮಾ ಅಜ್ಜಿಯ ಜರಿಸೀರೆ! ತೊಡಿಸಮ್ಮಾ  ಕನ್ನಡಕ! ನಾನೂ ಹಾಕುವೆ ಅಜ್ಜಿಯ ವೇಷ ಧ್ವನಿಯಲಿ ನಟಿಸುತ ನಡುಕ! ಟವೆಲ್ ಸುತ್ತಿದರೂ ಪರವಾಗಿಲ್ಲ, ಸೀರೆಯು ತುಂಬಾ ಉದ್ದ! ಓಡಾಡಲು ತೊಂದರೆ ಆಗುವುದು ಬಿದ್ದರೆ ಅಯ್ಯೋ ಸದ್ಯ! ಮೂಗಿನ ಮೇಲೆ ಜಾರುವುದಮ್ಮಾ ಅಜ್ಜಿಯ ಹಳೇ ಚಷ್ಮಾ! ಮೇಲೇರಿಸಿ ದುರುಗುಟ್ಟುವೆ ನೋಡು, ಮುಂದಿದ್ಧವರು ಭಸ್ಮ! ಅಬ್ಬಾ ಏನು ಸೆಖೆ, ಸಾಕಾಯ್ತು, ನಿಂಬೆಯ ಪಾನಕ ಮಾಡೇ! ಬರುತಿದೆಯಲ್ಲೇ ಸುಟ್ಟ ವಾಸನೆ, ಹಾಲು ಉಕ್ಕಿತೋ ನೋಡೇ! ಮೂರು ಹೊತ್ತೂ ಈ ಹಾಳು ಮೊಬೈಲು ಎಲ್ಲಾ ಕೆಲಸ ಹಾಳು! ಕುಕ್ಕರ್ ಕೂಗಾಯಿತು ಮೂರು ಸಲ ಒಲೆ ಆರಿಸು ಮೇಲೇಳು! ಮೊಮ್ಮಗಳಿಗೆ ಮಲ್ಲಿಗೆಜಡೆ ಹಾಕಿ ನೋಡುವ ಆಸೆ ಇತ್ತು! ಯಾರು ಕೇಳುವರು ನಾ ಹೇಳಿದ್ದು ಮಾಡಿಕೊಂಡೆ ಬಾಬ್ ಕಟ್ಟು! ಉಡಿಸಮ್ಮಾ ಅಜ್ಜಿಯ ಜರಿಸೀರೆ! ತೊಡಿಸಮ್ಮಾ  ಕನ್ನಡಕ! ನಾನೂ ಹಾಕುವೆ ಅಜ್ಜಿಯ ವೇಷ ಧ್ವನಿಯಲಿ ನಟಿಸುತ ನಡುಕ!

ಉಯ್ಯಾಲೆ ಆಟ

ಇಮೇಜ್
ಹಿತ್ತಲ ತೋಟದ ಹಲಸಿನ ಮರಕ್ಕೆ ಕಟ್ಟಿರುವಳಮ್ಮ ಉಯ್ಯಾಲೆ ಕೂಡಿಸಿ ನನ್ನನು ತೂಗುವಳಮ್ಮ ಆಡಿಸುವಳು ಕೆಳಗೆ, ಮೇಲೆ! ನಾನು ತೂಗಿದೆಡೆ ಬೌವೌ ಎನ್ನುತ ತಾನೂ ಬರುವನು ರಾಮಹರಿ ನನ್ನ ತೊಡೆ ಮೇಲೆ ಕೂತು ಜೋಕಾಲಿ ಆಡುವುದವನಿಗೆ ನಿತ್ಯಚರಿ! ಬಿಡುವಿಲ್ಲದೆ ಇದ್ದರೆ ಅಮ್ಮನಿಗೆ ಅಜ್ಜಿಯ ಹೋಗಿ ಕೇಳುವೆನು ನಡುಬಗ್ಗಿದ್ದರೂ ಹೇಗೋ ಎದ್ದು ಹುಡುಗಿಯಾಗಿಬಿಡುವಳು ತಾನೂ! ಅಜ್ಜಿಯ ಕೂಡಿಸಿದೆನು ನಾನೊಮ್ಮೆ ಮಾಡಿದೆ ತುಂಬಾ ಬಲವಂತ ಜೀವವ ಕೈಯಲಿ ಹಿಡಿದು ಕುಳಿತಳು ನೆನೆಯುತ ಬಾಯಲಿ "ಭಗವಂತ!" ಬೀಸುವ ತಂಗಾಳಿಯದೋ ಅಥವಾ ಜೋಕಾಲಿಯದೋ ತಿಳಿಯದು, ಮಾಯೆ! ಮಾಯವಾಯ್ತು ಅಜ್ಜಿಯ ಮುಖದಿಂದ ಬಿದ್ದುಬಿಡುವ ಭೀತಿಯ ಛಾಯೆ! ಬಾಲ್ಯದ ಸಖಿಯರ ನೆನೆದು ಮುಖದಲ್ಲಿ ಮೂಡಿತು ನಗೆ ಕಾಮನಬಿಲ್ಲು ಎಷ್ಟೆತ್ತರ ನೂಕುತ್ತಿದ್ದರು ಗೊತ್ತೇ ಎನ್ನಲು ಮಿಂಚಿತು ಬಿಳಿಹಲ್ಲು! ಅಮ್ಮನು ನೋಡಿದಳು ಬೆರಗಾಗಿ ಅಜ್ಜಿ ಆಡುವುದು ಉಯ್ಯಾಲೆ ಉಕ್ಕಿತು ನಗೆ ಹಾಲುಕ್ಕಿದ ಹಾಗೆ ಕಾಯಲಿಟ್ಟದ್ದು ಒಲೆ ಮೇಲೆ! ಹಿತ್ತಲ ತೋಟದ ಹಲಸಿನ ಮರಕ್ಕೆ ಕಟ್ಟಿರುವಳಮ್ಮ ಉಯ್ಯಾಲೆ ಕೂಡಿಸಿ ನನ್ನನು ತೂಗುವಳಮ್ಮ ಆಡಿಸುವಳು ಕೆಳಗೆ, ಮೇಲೆ! - ಸಿ. ಪಿ. ರವಿಕುಮಾರ್ ಏಪ್ರಿಲ್ ೨೩, ೨೦೨೪

ಅಮ್ಮನ ಸೀಕ್ರೆಟ್

ಇಮೇಜ್
ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು! ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು! ಪರಿಮಳ ಬರುತಿದೆ ಘಮಘಮ ಎಂದು ಇರಲಾಗದು ಬರಿಹೊಟ್ಟೆಯೊಳಿನ್ನು ಕೈತೊಳೆದಾಗಿದೆ, ಬೇಕಾದರೆ ನೋಡು ಹೇಳುವೆನೇ ಎಂದಾದರೂ ಸುಳ್ಳನ್ನು! ಗುಂಡಗೆ ಕೆಂಪಗೆ ಗರಿಗರಿ ರೊಟ್ಟಿ ಮೇಲ್ಗಡೆ ಕರಗುವ ತುಪ್ಪದ ಗಟ್ಟಿ ಮುರಿಯಿತೇ ಅಯ್ಯೋ ಪರವಾಗಿಲ್ಲ ಮುರಿದೇ ಬಾಯಿಗೆ ಹಾಕುವೆನಲ್ಲ! ರುಚಿರುಚಿಯಾಗಿದೆ ಬಿಸಿಬಿಸಿ ರೊಟ್ಟಿ ಇದು ಒನ್ ಹಂಡ್ರೆಡ್ ಪರ್ಸೆಂಟ್ ಬಿಟ್ಟಿ! ಏನಮ್ಮಾ ಹಾಕಿದೆ ಈ ಅದ್ಭುತ ರುಚಿಗೆ ಹೇಳಿಬಿಡಮ್ಮಾ ಸೀಕ್ರೆಟ್ ನನಗೆ! ಎಂದರೆ ನಗುವಳು ಗಲ್ಲವ ಹಿಂಡುತ್ತಾ ಪ್ರೀತಿ ಎಂಬುದೇ ಸೀಕ್ರೆಟ್ ಪುಟ್ಟಾ! ಇರುವುದು ಅಮ್ಮಂದಿರ ಬಳಿ ಮಾತ್ರ ಎಲ್ಲಾಕಡೆಗೂ ಸಿಕ್ಕಿಬಿಡುತ್ತಾ! ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು

ಚಾರ್ಲಿ ಚಾಪ್ಲಿನ್ ಪ್ರಸಂಗ

ಇಮೇಜ್
  ಹೀಗಾಯಿತಂತೆ ಒಮ್ಮೆ, ಚಾರ್ಲಿ ಚಾಪ್ಲಿನ್ ರಂಗದ ಮೇಲೆ ಹೋಗಿ ಹೇಳಿದನಂತೆ ಒಂದು ಹಾಸ್ಯಪ್ರಸಂಗ. ಸಭಿಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು, ಬಿದ್ದುಹೋಗುವ ಹಾಗೆ ಸೂರು ತಟ್ಟಿದರು ಚಪ್ಪಾಳೆ.  ಕಾದು ಕೂತರು ಮುಂದಿನ ಹಾಸ್ಯಚಟಾಕಿಗೆ. ಹೇಳಿದ ಪ್ರಸಂಗವನ್ನೇ ಚಾರ್ಲಿ ಹೇಳಿದನು ಮತ್ತೊಮ್ಮೆ. ಕೇಳಿ ನಕ್ಕರು ಹಲವರು, ಕೆಲವರು ಮಾಡಿದರು ಕರತಾಡನ. ಅದೇ ಹಾಸ್ಯಪ್ರಸಂಗ ಮೂರನೇ ಸಲ ಪುನರುಚ್ಚರಿಸಿ ಕಾದನಂತೆ ಚಾರ್ಲಿ ಸಭಿಕರ ಪ್ರತಿಕ್ರಿಯೆಗೆ. ಮೌನವಾಗಿತ್ತು ಸಭಾಭವನ. ಒಬ್ಬರೂ ನಗಲಿಲ್ಲ. ಏನಿದು ಹುಡುಗಾಟ ಎಂಬಂತಿತ್ತು ಎಲ್ಲರ ಭಾವ. ಆಗ ಹೇಳಿದನಂತೆ ಚಾರ್ಲಿ: ನೋಡಿದಿರಾ! ಒಂದೇ ನಗೆಪ್ರಸಂಗಕ್ಕೆ ನಗುವುದಿಲ್ಲ ಯಾರೂ ಪದೇಪದೇ ಅಳುವಿರಿ ಹೇಳಿ ಹಾಗಾದರೆ ಏಕೆ  ಮತ್ತೆ ಮತ್ತೆ ನೆನೆನೆನೆದು ಹಳೆಯ ಯಾವುದೋ ದುಃಖವನ್ನು ಬಗೆ ಬಗೆದು? - ಸಿ. ಪಿ. ರವಿಕುಮಾರ್  ಏಪ್ರಿಲ್ ೨೦, ೨೦೨೪

ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ

ಇಮೇಜ್
  ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ ಎಲ್ಲ ನನಗೆ ಬೇಕು ಎಂದು ಅಗೋ ಅಲ್ಲಿ ಮರಿಯು ಒಂದು ಎಂಥ ಹೊಟ್ಟೆಬಾಕ! ನಿನ್ನ ಹಾಗೇ ಅಲ್ಲವೇನು ತಿಂದೆ ನಾಲ್ಕು ಜಾಮೂನು ಬಿಡದೆ ತೊಟ್ಟು ಪಾಕ! ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ ಹಂಚಿಕೊಂಡು ತಿಂದರೆ ಹೊಟ್ಟೆಗಿಲ್ಲ ತೊಂದರೆ ಇಬ್ಬರಿಗೂ ತೃಪ್ತಿ! ಸರಿ ಹಾಗಾದರೆ ಅಕ್ಕಾ ನೆನ್ನೆ ನಿನಗೆ ಸಿಕ್ಕ ಚಾಕೋಲೇಟ್ ಫಿಫ್ಟಿ ಫಿಫ್ಟಿ! ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ ಸಿ. ಪಿ. ರವಿಕುಮಾರ್

ತೃಪ್ತಿ

ಇಮೇಜ್
ಮೂಲ: ಕ್ಯಾಥರೀನ್ ಹೆಪ್ ಬರ್ನ್ ಅನುವಾದ: ಸಿ. ಪಿ. ರವಿಕುಮಾರ್ ನಾನು ಹದಿಹರೆಯದ ಹುಡುಗಿಯಾಗಿದ್ದಾಗ ಒಮ್ಮೆ.ನನ್ನ ತಂದೆಯ ಜೊತೆಗೆ ಸರ್ಕಸ್ ನೋಡಲು ಹೋಗಿದ್ದೆ. ಟಿಕೆಟ್ ಖರೀದಿಸಲು ನಾವು ಸಾಲಿನಲ್ಲಿ ನಿಂತಿದ್ದೆವು. ಉದ್ದದ.ಸಾಲು ಕ್ರಮೇಣ ಚಿಕ್ಕದಾಗುತ್ತಾ ಕೊನೆಗೂ ನಾವು ಟಿಕೆಟ್ ಪೆಟ್ಟಿಗೆಯ ಮುಂದೆ ಬಂದೆವು. ನಮಗೂ ಮತ್ತು  ಟಿಕೆಟ್ ಪೆಟ್ಟಿಗೆಗೂ ನಡುವೆ  ಈಗ ಒಂದು ಸಂಸಾರದವರು ಮಾತ್ರ ಉಳಿದಿದ್ದರು.  ನಮ್ಮ ಮುಂದೆ ನಿಂತಿದ್ದವರನ್ನು ನಾನು ಬಹಳ ಹೊತ್ತಿನಿಂದ ಗಮನಿಸುತ್ತಿದ್ದೆ. ಹನ್ನೆರಡು ವರ್ಷದ ಒಳಗಿನ ಎಂಟು ಮಕ್ಕಳು. ಅವರು ಧರಿಸಿದ್ದ ಬಟ್ಟೆಗಳು ಅವರು ಅಷ್ಟೇನೂ ಸ್ಥಿತಿವಂತ ಮನೆಯವರಲ್ಲ ಎಂದು ಸಾರುತ್ತಿದ್ದವು. ಸಾಧಾರಣವಾಗಿದ್ದರೂ  ಅವರ ಬಟ್ಟೆಗಳು ಶುಭ್ರವಾಗಿದ್ದವು.  ಅವರ ನಡೆನುಡಿಗಳು ಉತ್ತಮವಾಗಿದ್ದವು. ಅವರ ಉತ್ಸಾಹ ಹೇಳತೀರದು. ಸರ್ಕಸ್ಸಿನಲ್ಲಿ ಬರುವ ಪ್ರಾಣಿಗಳು, ಬಫೂನ್ ಇತ್ಯಾದಿಗಳ ಬಗ್ಗೆ ಅವರು ಹರಟೆ ಕೊಚ್ಚುತ್ತಿದ್ದರು. ಅವರು ಎಂದೂ ಸರ್ಕಸ್ ನೋಡಿರಲಿಲ್ಲ ಮತ್ತು ಬಹುಶಃ ಅವರು ಮೊಟ್ಟಮೊದಲ ಸಲ ಪಟ್ಟಣಕ್ಕೆ ಬಂದಿರಬಹುದು ಎಂದು ಊಹಿಸಬಹುದಾಗಿತ್ತು.  ಸರತಿಯ ಸಾಲಿನಲ್ಲಿ ಮಕ್ಕಳು ಇಬ್ಬಿಬ್ಬರು ಕೈ ಹಿಡಿದು ನಿಂತಿದ್ದರು. ಅವರೆಲ್ಲರ ಮುಂದೆ ಅವರ ಅಪ್ಪ ಅಮ್ಮ ನಿಂತಿದ್ದರು. ಅವರ ತಾಯಿ ತನ್ನ ಗಂಡನ ಕಡೆಗೆ ಬಹಳ ಹೆಮ್ಮೆಯಿಂದ ನೋಡುತ್ತಿದ್ದಳು. ಮಕ್ಕಳನ್ನು ಹೀಗೆ ಸರ್ಕಸ್ ತೋರಿಸಲು ಕರೆದು ತಂದ ತಂದೆಯನ್ನು ಅವಳು ಅಭಿಮಾನ ಮತ್ತು ಕೃತಜ್ಞ

ಕೈಸಾಲ

ಇಮೇಜ್
ಮಗಳೇ ಇಗೋ ಹಿಡಿ ಈ ಕಪ್ಪು ಹೋಗು ಪಕ್ಕದ ಮನೆಗೆ ಹೋಗಿ ಪಡೆದು ತಾ ಉಪ್ಪು ಅಮ್ಮಾ ನಮ್ಮ ಮನೆಯಲ್ಲಿ ಇದೆಯಲ್ಲ ಆಗಲೇ ಸುಮ್ಮನೆ ಯಾಕೆ ಅವರ ಮನೆಗೆ ಹೋಗಲೇ? ಮಗಳೇ ಪಕ್ಕದ ಮನೆಯಾಕೆ ಆಗಾಗ ಬಂದು ಕೇಳುತ್ತಿರುತ್ತಾಳೆ ಏನಾದರೂ ಬೇಕೆಂದು ಒಮ್ಮೆ ಚಹಾಪುಡಿ, ಇನ್ನೊಮ್ಮೆ ಬೆಲ್ಲ ಇಂಥದ್ದೇ ಏನಾದರೂ ಸಣ್ಣಪುಟ್ಟ ಸಾಲ ನಾನೂ ಕೇಳುತ್ತೇನೆ ಆಗಾಗ ಅವಳಲ್ಲಿ ಉಪ್ಪು, ಮೆಣಸು ಇತ್ಯಾದಿ ಅಗ್ಗದ ವಸ್ತು ಹಾಗೆ ಕೇಳಿದರೆ ತಾನೂ ಏನಾದರೂ ಕೊಟ್ಟೆ ಎಂಬ ಸಾರ್ಥಕ ಭಾವ ಅವಳ ಕಣ್ಣಲ್ಲಿ ಇತ್ತು ಅವಳು ಬಡವಿ, ಅವಳಿಗೆ ಬೇಡುವುದು ಬಹುಕಷ್ಟ ನಾನೂ ಬೇಡಿದರೆ ನಡುವೆ ಅಭಿಮಾನ ಬಾರದು ಅಡ್ಡ (ಒಂದು ವಾಟ್ಸಪ್ ಸಂದೇಶದ ಸ್ಫೂರ್ತಿ)

ದ್ರಾಕ್ಷಿಯ ಗೊಂಚಲು ಮತ್ತು ಕವಿತೆ

ಇಮೇಜ್
ದ್ರಾಕ್ಷಿಯ ಗೊಂಚಲು  ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತಿದೆ: ಹಸಿರು, ಕೆಂಪು, ಊದಾ, ನೇರಳೆ, ಕಪ್ಪು, ಕಿತ್ತಳೆ! ಹೀಗೆ ಒಂದೊಂದು ಹಣ್ಣಿಗೂ ಒಂದೊಂದು ವರ್ಣ ತುಂಬುತ್ತಾ ಅದೆಷ್ಟು ಹೊತ್ತು ವ್ಯಯಿಸುವೆ ಎಂದು ಕೋಪಿಸಿಕೊಂಡು ಕೇಳಿದೆ ಪ್ರಕೃತಿಯನ್ನ. ಎಷ್ಟು ದಿನ ಇದ್ದೀತು ಗೊಂಚಲಿನ ಬಣ್ಣ! ಗಾಳಿ ಬಿಸಿಲಿಗೆ ಪಕ್ವವಾಗಿ ಯಾರೋ ಕಿತ್ತರೆ ಸರಿ ಕಿತ್ತದಿದ್ದರೆ ಕೆಳಬಿದ್ದು ಸೇರುವುದು ಮಣ್ಣ! ನಕ್ಕು ನುಡಿಯಿತು ಅದೇ ನನ್ನ ಪ್ರಕೃತಿ ಏನೇ ಮಾಡಿದರೂ ಸಾವಧಾನ! ನೀನು ಬರೆದಾಗ ಕವಿತೆ ಹೇಗೆ ಒಂದೊಂದೇ ಪದವನ್ನೂ ತೂಗಿ ಅಳೆದು ಸುರಿದು ಬದಲಿಸಿ  ಅಲ್ಲಿಂದ ಇಲ್ಲಿ ಕದಲಿಸಿ ಒಂದೆಡೆ ಬಿಡಿಸಿ ಇನ್ನೊಂದೆಡೆ ಸೇರಿಸಿ ಒದ್ದಾಡುವಾಗ ಬಂದವರು ಯಾರೋ ಎಷ್ಟು ದಿನ ಈ ಕವಿತೆಯ ಜೀವನ ಎಂದು ಕೇಳಿದರೆ ಏನು ಹೇಳುವೆ ಉತ್ತರವನ್ನ! ಇಷ್ಟಾಗಿ ನಿನ್ನ ನಿರೀಕ್ಷೆ ಮೀರಿ  ಕವಿತೆ ಅಮರವಾದರೆ ಆಗ ಕೈ ಹಿಸುಕುತ್ತ ಅಯ್ಯೋ ಇನ್ನಷ್ಟು ಚೆನ್ನಾಗಿ ಬರೆಯಬೇಕಿತ್ತು  ಎಂದು ಅನುಭವಿಸುವೆಯಾ ಕೊರಗಿನ ಕಷ್ಟ! (ಜಲವರ್ಣ: ಕಾರಾ ಬ್ರೌನ್) ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಅತಿಥಿಪಾತ್ರ

ಇಮೇಜ್
  ನನ್ನ ಮೇಜಿನ ಮೇಲೆ ಕೂತಿದೆ ಅಮೃತ ಶಿಲೆಯ ಮೇಲೆ ಕುಸುರಿ ಕೆಲಸದ ಪೆನ್ ಹೋಲ್ಡರ್ ಅಲ್ಲಿವೆ ಒಂದಕ್ಕಿಂತ ಒಂದು ಚೆಂದದ ಪೆನ್ ಓವರ್ ವೇಟ್ ಎನ್ನಿಸುವ ಕಪ್ಪು ಬಣ್ಣದ್ದು ಸಮ್ಮೇಳನದ ಹೆಸರನ್ನು ಹೊತ್ತ ನೀಲಿ ಬಣ್ಣದ್ದು ಕಂಪನಿಯ ಹೆಸರುಳ್ಳ ಕೆಂಪು ಬಣ್ಣದ್ದು ಎಣಿಸಿದರೆ ಹತ್ತಾದರೂ ಇರಬಹುದು ಸಂಖ್ಯೆ ಎಲ್ಲ ಬಾಲ್ ಪಾಯಿಂಟ್, ಈಗಿಲ್ಲ ಇಂಕೇ ಬೇಕಾದಾಗ ಕೈಗೆತ್ತಿಕೊಂಡು ಬರೆದಾಗ ಮಾತ್ರ ಬಯಲಾಗುವುದು ಇವುಗಳದ್ದು ಬರೀ ಅತಿಥಿ ಪಾತ್ರ ಗೋಗರೆದರೂ ಬೈದರೂ "ಬರೆ ಬರೆ" ಎಂದು ಅಕ್ಷರ ಹಾಗಿರಲಿ ಮೂಡದು ಗೆರೆ ಒಂದು! ಕೊನೆಗೆ ಸಿಕ್ಕುವ  ಐದು ರೂಪಾಯಿ ಪೆನ್ನು ಬರೆಯಲು ಅದಕ್ಕೆ ಉತ್ಸಾಹವಿದೆ ಇನ್ನೂ! - ಸಿ.ಪಿ. ರವಿಕುಮಾರ್

ಒಬ್ಬಂಟಿ

ಇಮೇಜ್
ಬಹಳ ಮುಖ್ಯ ನೀನು ಹೊರಗೆ ಹೋಗಿ ಒಬ್ಬಂಟಿ ವಿರಮಿಸುವುದು ಒಂದು ಮರದ ಕೆಳಗೆ, ಆಗ ಜೊತೆಯಲ್ಲಿ ಕೊಂಡೊಯ್ಯದಿರು ಯಾವುದೇ ಪುಸ್ತಕ, ಯಾರೇ ಸಹಚರ ನಿನ್ನನ್ನು ಹೊರತು. ಗಮನಿಸು  ಕೆಳಗೆ ಬೀಳುವ ಎಲೆಯನ್ನು, ನೀರು ದಡಕ್ಕೆ ಬಡಿಯುವ ಸದ್ದನ್ನು, ಕೇಳು ಮೀನುಗಾರರ ಹಾಡನ್ನು. ಹಕ್ಕಿಯ ಹಾರಾಟವನ್ನು ನೋಡು, ಮತ್ತು ಗಮನಿಸು ನಿನ್ನದೇ ಆಲೋಚನೆಗಳನ್ನು: ನಿನ್ನ ಮನೋಭೂಮಿಕೆಯಲ್ಲಿ ಅವು ಒಂದು ಇನ್ನೊಂದರ ಬೆನ್ನಟ್ಟಿ ಹೋಗುವುದನ್ನು. ಹೀಗೆ ನೀನು ಒಬ್ಬನೇ ಇವನ್ನೆಲ್ಲ ಗಮನಿಸಬಲ್ಲೆಯಾದರೆ ದಕ್ಕುವುವು ಅನರ್ಘ್ಯ ಐಶ್ವರ್ಯಗಳು ನಿನಗೆ ಅವುಗಳ ಮೇಲೆ ಹೇರಲಾರದು ತೆರಿಗೆ ಯಾವುದೇ ಸರಕಾರ ಅವುಗಳನ್ನು ಭ್ರಷ್ಟಗೊಳಿಸಲಾಗದು ಯಾವುದೇ ಮಾವನಾಧಿಕಾರ ಅದು ಯಾರೂ ನಾಶ ಮಾಡಲಾಗದ ಕೋಶಾಗಾರ. ಜಿಡ್ಡು ಕೃಷ್ಣಮೂರ್ತಿ (ಕನ್ನಡಕ್ಕೆ: ಸಿ. ಪಿ. ರವಿಕುಮಾರ್) [ಕ್ಯಾಮೆರಾ ಕೂಡಾ ಬೇಡ :) ]

ಸಾಕ್ರಟೀಸ್ ಹೇಳಿದ ಜಾಣ್ಮೆ

ಇಮೇಜ್
  "ನಿನಗೆ ಏನೂ ತಿಳಿದಿಲ್ಲ ಎಂಬುದರಲ್ಲೇ ಎಲ್ಲಾ ತಿಳಿವಳಿಕೆಯೂ ಇದೆ"  ಹೀಗೆ ಯಾರು ಹೇಳಿರಬಹುದು? ಅ. ತನ್ನ ಪಿಎಚ್. ಡಿ. ವಿದ್ಯಾರ್ಥಿಗೆ ಓರ್ವ ಸೂಪರ್ ವೈಸ್ ಆದ ಸೂಪರ್ವೈಸರ್ ಬ. ಹೊಸದಾಗಿ ಮದುವೆಯಾಗಿ ಮನೆಗೆ ಬಂದ ಸೊಸೆಗೆ ಓರ್ವ ಸಾಸ್ ಭೀ ಕಭೀ ಬಹೂ ಥೀ ಎಂಬುದನ್ನು ಮರೆತ ಅತ್ತೆ ಕ.  ತದ್ವಿರುದ್ಧವಾದವುಗಳನ್ನು ಒಂದೇ ವಾಕ್ಯದಲ್ಲಿ ಬಳಸಿ "ಯೂ ಕನ್ ಫ್ಯೂಸ್" ಅಸ್ ಎನ್ನಿಸಿಕೊಳ್ಳುತ್ತಿದ್ದ ಕನ್ಫ್ಯೂಷಿಯಸ್ ಡ. ಇಂಥ ಹೇಳಿಕೆಗಳನ್ನು ಕೊಟ್ಟು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದ್ದ ಸಾಕ್ರಟೀಸ್ ಮಹಾಶಯನಿಗೆ ಅವನ ಜಗಳಗಂಟಿ ಹೆಂಡತಿ ಇದಕ್ಕೆ ಉತ್ತರ ಸಾಕ್ರಟೀಸ್ ಎಂದು ನನ್ನ ಮಿತ್ರ ರಾಜಾರಾಂ ಹೇಳಿದರು.  ಅದು ಆದದ್ದು ಹೀಗೆ. ಶಿವರಾತ್ರಿಯ ಹಿಂದಿನ ಬೆಳಗ್ಗೆ ನಾವು ಮೂವರು ಅರ್ಥಾತ್ ಮರಿಗೌಡ, ರಾಜಾರಾಂ ಮತ್ತು ನಾನು ಶಿವಶಂಕರದರ್ಶಿನಿಗೆ ದರ್ಶನ ಪಡೆಯಲು ಬಂದಿದ್ದೆವು. ತಾಳಿ, ತಾಳಿ, ನೀವು ನಮ್ಮ ಬಗ್ಗೆ ತಾತ್ಸಾರ ಭಾವನೆ ತಳೆಯುವ ಮುನ್ನವೇ ಹೇಳಿಬಿಡುತ್ತೇನೆ. ನಾವು ಮೊದಲು ಭವಾನೀಶಂಕರನ ಗುಡಿಗೆ ಹೋಗಿ ಶಿವನಿಗೆ ಹಾಲು ನೀರನ್ನು ಅಥವಾ ನೀರು ಹಾಲನ್ನು ಎರೆದು ನಂತರವೇ ಶಿವಶಂಕರ ದರ್ಶಿನಿಗೆ ಬಂದಿದ್ದೆವು. ಭವಾನೀಶಂಕರನ ಗುಡಿಯಿಂದ ಕೇವಲ ಹತ್ತು ಹೆಜ್ಜೆಗಳ ನಡೆಯ ದೂರದಲ್ಲಿ ಸ್ಥಿತವಾಗಿರುವ ಶಿವಶಂಕರ ದರ್ಶಿನಿಯಲ್ಲಿ ಅಂದು ಶಿವರಾತ್ರಿ ಸ್ಪೆಷಲ್ ಊಷ್ಟಾ ಇದ್ದಿತು.  ಏನಿದು ಊಷ್ಟಾ ಎಂದು ಹುಬ್ಬೇರಿಸಿದವರಿಗೆ ಸಂದೇಹ ನಿವಾರಣೆ ಮಾಡಿ

ಬಾಣ ಮತ್ತು ಹಾಡು

ಇಮೇಜ್
ಮೂಲ: ಎಚ್. ಡಬ್ಲ್ಯೂ. ಲಾಂಗ್ ಫೆಲೋ ಬಿಲ್ಲಿಗೇರಿಸಿ ಬಿಟ್ಟರೆ ಬಾಣವನ್ನು ಗಾಳಿಯಲ್ಲಿ, ಎಲ್ಲಿ ಹೋಗಿ ಬಿತ್ತೋ ಧರೆಯ ಪಾತಳಿಯಲ್ಲಿ! ಎಷ್ಟು ತೀವ್ರವಾದದ್ದು ಎಂದರೆ ಶರವೇಗ, ಹಿಂಬಾಲಿಸಿದ ಕಣ್ಣು ಸೋತುಹೋಯಿತು ಬೇಗ. ಉಸಿರಿದೆನು ಗಾಳಿಯಲ್ಲಿ ನಾನೊಂದು ಹಾಡು, ಎಲ್ಲಿ ಚೆದುರಿದವೋ ಪದ, ತಿಳಿಯೆನು ಜಾಡು! ಹಾಡನ್ನು ಹಿಂಬಾಲಿಸಿ ಹೋಗುವ ಸಾಮರ್ಥ್ಯ ಪಡೆದಿಲ್ಲ ಯಾವುದೇ ಸಾಧಾರಣ ಮರ್ತ್ಯ. ಬಹುದಿನಗಳ ತರುವಾಯ ತೇಗದ ತರುವೊಂದರಲ್ಲಿ ಸಿಕ್ಕಿತು, ನಾನಂದು ಹೂಡಿದ ಬಾಣ, ಕಂಡು ಮುಗುಳ್ನಕ್ಕಿತು, ಸಿಕ್ಕಿತು ಮುಂದೊಂದು ದಿನ ಗೆಳೆಯನೊಬ್ಬನ ಎದೆಯಲ್ಲಿ ಹಿಂದೊಂದು ದಿನ ನಾ ಗುನುಗಿದ ಗೀತೆಯ ಹೂಬಳ್ಳಿ.

ನಂತರವೂ

ಇಮೇಜ್
ಮೂಲ: ಪಿ. ಬಿ. ಶೆಲ್ಲಿ ಅನುವಾದ: ಸಿ. ಪಿ. ರವಿಕುಮಾರ್   ಹಾಡುವ ಗಾಯಕರು ನಿಲ್ಲಿಸಿದರೂ ಸಮೂಹಗಾನ ಕಿವಿಯಲ್ಲಿ ಹಾಡಿನದೇ ಅನುರಣನ ಘಮಘಮ ಪರಿಮಳ ಸೂಸುತ್ತಿದ್ದ  ಮಲ್ಲಿಗೆ ಬಾಡಿದ ಮೇಲೂ ಸೌರಭಸಾಧನ ಶವವಸ್ತ್ರದ ಮೇಲೆ ಹರಡುವರು  ಗುಲಾಬಿಯು ಸತ್ತರೂ ಪಕಳೆಗಳನ್ನ ಹಾಗೇ ನೀನು ತೆರಳಿದ ನಂತರವೂ ಪ್ರೇಮವು ಸಿಹಿನಿದ್ದೆಯಲ್ಲಿ ಕಾಣುವುದು ಸ್ವಪ್ನ .

ವಸಂತಾಗಮನದಲ್ಲಿ ಬರೆದ ಸಾಲುಗಳು

ಇಮೇಜ್
ಮೂಲ: ವಿಲಿಯಂ ವರ್ಡ್ಸ್ ವರ್ತ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಉದ್ಯಾನದಲ್ಲಿ ಒರಗಿ ಕುಳಿತಿದ್ದಾಗ ಒಂದು ದಿನ ಕೇಳಿದವು ಕಿವಿಗೆ ಸಹಸ್ರಾರು ಇನಿಸ್ವನ ಕೆಲವು ಸಲ ಸಂತೋಷದ ಸಿಹಿಘಳಿಗೆಯಲ್ಲೂ ಒಳನುಗ್ಗುತ್ತವೆ ದುಃಖದಾಯಿ ಆಲೋಚನೆಗಳು ಪ್ರಕೃತಿಯ ಸೃಷ್ಟಿಯನ್ನು ಆಸ್ವಾದಿಸುತ್ತಾ  ದೃಷ್ಟಿ ಹರಿಯಿತು ಒಳಗಿನ ಆತ್ಮದತ್ತ ಮುದುಡಿ ಮರುಗಿತು ನನ್ನ ಮನವು ಮರುಕ್ಷಣ ನೆನೆದು ಮನುಷ್ಯ ಮನುಷ್ಯನಿಗೆ ಮಾಡಿರುವುದನ್ನ ನಲಿಯುತ್ತಿದ್ದವು ಗಿಡದಲ್ಲಿ ಡೇರೆ ಹೂಗಳ ಗುಚ್ಛ ನಡುನಡುವೆ ಬಸವನಪಾದ ಬೆಳೆದಿತ್ತು ಯಥೇಚ್ಛ ಪ್ರತಿಯೊಂದು ಹೂವೂ ತಾನು ಉಸಿರಾಡುವ ಗಾಳಿ ಸಂತೋಷದಿಂದಲೇ ಸೇವಿಸುವುದಿಲ್ಲವೇ ಹೇಳಿ! ಆಡುತ್ತಿದ್ದವು ಅಲ್ಲೇ ಹಕ್ಕಿಗಳು ಹತ್ತಾರು ಏನು ಯೋಚಿಸುತ್ತಿದ್ದವೋ ಬಲ್ಲವರು ಯಾರು ನೋಡಿದರೆ ಕುಪ್ಪಳಿಸುತ್ತಾ ಹಾರಾಡುವುದನ್ನು ಎಲ್ಲೆಡೆ ಸಂತೋಷವೇ ತುಂಬಿದಂತಿತ್ತು ಹಕ್ಕಿಗಳ ಪ್ರತಿ ನಡೆ. ಸೂಸಲು ಸುಳಿಗಾಳಿ ಅತ್ತಿತ್ತ ತೂಗಿ ನಕ್ಕವು ಎಳೆರೆಂಬೆಗಳು ಸಂತಸದಿ ಬೀಗಿ ರೆಂಬೆಗಳ ಮೇಲೆ ಹಸಿರು ಚಿಗುರೆಲೆ, ಹೂವು ತಂಗಾಳಿಯ ಸ್ಪರ್ಶಕ್ಕೆ ಸುಖಿಸಿದವು ತಾವೂ. ಆಗಿದ್ದಲ್ಲಿ ಎಲ್ಲರೂ ಸುಖವಾಗಿರಲಿ ಎಂಬುದೇ  ಪ್ರಕೃತಿಯ ಯೋಜನೆ, ನನ್ನ ಆತ್ಮ ಕೇಳುತ್ತಿದೆ  ಏಕೆಂದು ರೋದಿಸುತ್ತಾ,  ವಹಿಸುತ್ತ ಮೌನ ನೆನೆದು ಮನುಷ್ಯ ಮನುಷ್ಯನಿಗೆ ಮಾಡಿರುವುದನ್ನ.

ನನ್ನ ಸಮಾಧಿಯ ಎದುರು ನಿಂತು ಅಳದಿರು

ಇಮೇಜ್
ಮೂಲ: ಕ್ಲೇರ್ ಹಾರ್ನರ್ ಅನುವಾದ: ಸಿ. ಪಿ. ರವಿಕುಮಾರ್ ನನ್ನ ಸಮಾಧಿಯ ಎದುರು ನಿಂತು ಅಳದಿರು, ನಾನಲ್ಲಿಲ್ಲ,  ನಾನು ನಿದ್ರಿಸುವುದಿಲ್ಲ, ತಿಳಿದಿರು: ಲೀನವಾಗಿದೆ ಬೀಸುವ ಗಾಳಿಗಳಲ್ಲಿ ಸಾವಿರಾರು ವಜ್ರದಂತೆ ಹೊಳೆವ ಹಿಮಕಣದಲ್ಲಿ ನನ್ನುಸಿರು. ಬಲಿತ ಕಾಳಿನ ಮೇಲೆ ಹೊಳೆವ  ಕಿರಣವು ನಾನು, ನಾನು ಶ್ರಾವಣದ ನಿಶಬ್ದ ತುಂತುರು ಮಳೆ. ಶಾಂತ ನಸುಕಿನೊಳು ನಿದ್ದೆಯಿಂದೆದ್ದಾಗ ನೀನು ಯಾವ ಸದ್ದಿನಿಂದ ಪುಳಕಗೊಳ್ಳುವುದೋ ಇಳೆ, ಆ ಇಂಚರಗೈಯುವ ಪಕ್ಷಿವೃಂದವು ನಾನು, ದಿವರಾತ್ರಿಗಳ ಮಾಯಾ ಪರಿವರ್ತನೆ ನಾನು. ಸುರಿಸದಿರು ನನ್ನ ಸಮಾಧಿಯ ಎದುರು  ನಿನ್ನ ಕಣ್ಣುಗಳಿಂದ ಅಶ್ರುಬಿಂದು. ನಾನಲ್ಲಿಲ್ಲ ಎಲ್ಲರೂ ತಿಳಿದಿರುವಂತೆ, ಯಾರು ಹೇಳಿದರು ನಾನು ಇನ್ನಿಲ್ಲವೆಂದು?

ದೊರೆ ನೆಬುಕಡ್ನೆಜ್ಜರ್ ಕಂಡನಂತೆ ಒಂದು ದುಃಸ್ವಪ್ನ

ಇಮೇಜ್
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕವಿತೆ ಓದುವ ಮುನ್ನ: ನೆಬೂಕಡ್ನೆಜ್ಜರ್ ಎಂಬ ರಾಜನ ಕಥೆ ಬೈಬಲ್ಲಿನಲ್ಲಿದೆ. ಇವನು ಬ್ಯಾಬಿಲಾನ್ ದೇಶದ ದೊರೆ. ತನ್ನ ಬಗ್ಗೆ ಅವನಿಗೆ ಗರ್ವ ಉಂಟಾದಾಗ ದೇವರು ಅವನಿಗೆ ಪಾಠ ಕಲಿಸಲೆಂದು ಒಂದು ಕನಸು ಕಾಣುವಂತೆ ಮಾಡುತ್ತಾನೆ. ಈ ಕನಸಿನಲ್ಲಿ ಅವನ ಪ್ರತಿಮೆಯೊಂದು ಕಾಣುತ್ತದೆ. ಅದರ ತಲೆ ಬಂಗಾರದ್ದು. ತಲೆಯಿಂದ ಪಾದಗಳ ಕಡೆಗೆ ಇಳಿಯುತ್ತಾ ಬೆಳ್ಳಿ, ಕಂಚು ಇತ್ಯಾದಿ ಕಡಿಮೆ ಮೌಲ್ಯದ ಲೋಹಗಳು. ಈ ಕನಸಿನ ಅರ್ಥವೇನೆಂದು ಅವನಿಗೆ ಹೊಳೆದರೂ ಅವನು ತನ್ನ ಆಸ್ಥಾನದ ಮುತ್ಸದ್ದಿಗಳನ್ನು ಕೇಳುತ್ತಾನೆ. ಮುಂದೆ ಬರುವ ರಾಜರು ಇವನಿಗಿಂತಲೂ ಕಡಿಮೆ ಮಹತ್ವದ ರಾಜರು ಎಂಬುದು ಕನಸಿನ ಗೂಢ.  ಯಾರೂ ಕನಸಿನ ಅರ್ಥ ಹೇಳಲಾರದಾದಾಗ ಕೋಪಗೊಂಡ ರಾಜ ಅವರನ್ನು ಕೊಲ್ಲಿಸುತ್ತಾನೆ.  ಡೇನಿಯಲ್ ಎಂಬುವನು ಮಾತ್ರ ಅದರ ಅರ್ಥ ಹೇಳುತ್ತಾನೆ. ರಾಜನ ಗರ್ವಭಂಗ ಮಾಡಲು ದೇವರು ಅವನಿಗೆ ಹುಚ್ಚು ಹಿಡಿಯುವ ಹಾಗೆ ಮಾಡುತ್ತಾನೆ. ರಾಜನು ಇಲಿಬಾವಲಿಗಳೊಂದಿಗೆ ಬಾಳುತ್ತಾ ಹುಲ್ಲು ತಿನ್ನುತ್ತಾ ಬದುಕುತ್ತಾನೆ.  ಕೆಲವು ವರ್ಷಗಳ ನಂತರ ಅವನ ಮನೋವ್ಯಾಧಿ ಗುಣವಾಗಿ ಅವನು ದೇವರಿಗೆ ತಲೆಬಾಗುತ್ತಾನೆ.  ಪ್ರಸ್ತುತ  ಸಾನೆಟ್ಟಿನಲ್ಲಿ ಕೀಟ್ಸ್ ಅಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಕುರಿತು ಕೂಡಾ ವಿಶ್ಲೇಷಿಸುತ್ತಿರಬಹುದು.  ಕವಿತೆ: ಇಲಿಬಾವಲಿಗಳೊಂದಿಗೆ ವಾಸ ಮಾಡಲು ಹೊರಡುವ ಮುನ್ನ ದೊರೆ ನೆಬುಕಡ್ನೆಜ್ಜರ್ ಕಂಡನಂತೆ ಒಂದು ದು

ನಾನಿರುವುದಿಲ್ಲ ಎಂಬ ಭೀತಿ

ಇಮೇಜ್
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಾನಿರುವುದಿಲ್ಲ ಮುಂದೊಂದು ದಿನ, ಅದಕ್ಕೆ ಮೊದಲೇ ಜೇನುನೊಣದಂತೆ ಹೀರಿಕೊಂಡು ನನ್ನ ಲೇಖನಿಯು ಮಾನಸೋದ್ಯಾನದ ಅಸಂಖ್ಯ ಕಲ್ಪನಾಪುಷ್ಪಗಳ ಮಧುವನ್ನು ಘನೀಕರಿಸದಿದ್ದರೆ ಅಕ್ಷರರೂಪ ಗ್ರಂಥಮಾಲೆಯಲ್ಲಿ , ಎಂದು ಧೇನಿಸಿ ಭೀತಗೊಳ್ಳುವೆನು. ನೋಡಿದಾಗ ಆಗಸದ ಕಡೆಗೆ ಕಾಣಿಸಿ ನಕ್ಷತ್ರಪುಂಜದಲ್ಲಿ ಯಾವುದೋ ಪ್ರೇಮಕಥನವು ಬಾನಲ್ಲಿ, ನಿಡುಸುಯ್ಯುವೆನು ಅದರ  ನೆರಳನ್ನಾದರೂ ನಾನಿಲ್ಲಿ ಗ್ರಹಿಸಿಡಲು ಬಿಡುವುದೇ ವಿಧಿಯ ಮಾಯಾಹಸ್ತ! ನಿನ್ನ ಮೊಗದ ಚೆಲುವನ್ನು ನೋಡುತ್ತಾ ದುಃಖಿಸುವೆ ಮತ್ತೆ ಇನ್ನೆಂದೂ ಕಾಣಲು ಸಿಕ್ಕದೆಂದು;  ದೊರೆಯದು ನನಗೆ ಇನ್ನೆಂದೂ ಭಾವನಾತೀತ, ನಿಷ್ಕಲ್ಮಶ ಪ್ರೇಮದ ಸುಖ; ಕಣ್ಣಾಡಿಸಿ ನೋಡುತ್ತೇನೆ ಜಗತ್ತಿನ ಕಿನಾರೆಯಲ್ಲಿ ನಿಂತು: ಎಲ್ಲಿಯವರೆಗೆ ನಿಂತಿರುತ್ತೇನೆ ಇಲ್ಲಿ ನಾನೆಂದರೆ ಯಾವ ಘಳಿಗೆ ಮುಳುಗುವುವೋ ಕೀರ್ತಿ ಮತ್ತು ಪ್ರೇಮ ಶೂನ್ಯದೊಳಗೆ.

ಲಾಟ್ ಮಹಾಶಯನ ಹೆಂಡತಿ

ಇಮೇಜ್
ಮೂಲ: ಆನಾ ಅಹ್ಮತೋವಾ  (ರಷ್ಯಾ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಕಪ್ಪು ಪರ್ವತದ ಮೇಲೆ ಕಡುಕಷ್ಟದ ದಾರಿಯಲ್ಲಿ  ಅವನು ಹೊರಟಿದ್ದ ದೇವಸೇವಕರನ್ನು ಹಿಂಬಾಲಿಸಿ.  ನಿಯತ್ತಿನ ಮನುಷ್ಯ; ಆದರವನ ಹೆಂಡತಿಗೆ ಯಾಕೋ "ಹಿಂತಿರುಗಿ ನೋಡೆಂದು" ಒಳದನಿಯ ಕಸಿವಿಸಿ.  "ನೋಡು ಸೊಡೋಮ್ ನಗರದ ಕೆಂಪು ಮೀನಾರಗಳು,  ಅಗೋ ನೀನು ಹಾಡುತ್ತಿದ್ದ ಸಭಾಮೈದಾನ.  ನಿನ್ನ ಮನೆಯ ಕಿಟಕಿಗಳು ಕಾಣುತ್ತಿವೆ ಇನ್ನೂ,  ಈ ಮನೆಯಲ್ಲೇ ಅಲ್ಲವೇ ಹಡೆದದ್ದು ನಿನ್ನೆಲ್ಲ ಮಕ್ಕಳನ್ನ?"  ಒಮ್ಮೆ ಹಿಂದಿರುಗಿ ನೋಡಿಯೇ ಬಿಟ್ಟಳು! ಕೂಡಲೇ ದೇಹದಲ್ಲಿ  ಎದ್ದಿತು ನೋವು, ಕಡಿಮೆಯಾಗಿತ್ತು ಕಚ್ಚಿದಂತೆ ಚೇಳು. ಹೊಲೆದುಕೊಂಡು ಕಣ್ಣು, ಉಪ್ಪಿನ ಹೊರೆಯಾಯ್ತು ದೇಹ, ನಿಂತಲ್ಲೇ ಮರಗಟ್ಟಿದವು ಅವಳ ಕಾಲು.  ಈ ಹೆಂಗಸಿಗಾಗಿ ಯಾರು ಅಳುವರು ಹೇಳಿ?  ತೀರಾ ಯಃಕಶ್ಚಿತ್ ಅನಿಸುವುದಲ್ಲವೇ ಅವಳ ಸಂಗತಿ? ನನ್ನ ಹೃದಯದಲ್ಲಂತೂ ಅವಳಿಗೆ ಸದಾ ಇರುವುದು ಸ್ಥಾನ, ತಿರುಗಿದ್ದಕ್ಕೆ ಪಡೆದಳಲ್ಲ ಸಾವಿನ ದುರ್ಗತಿ! ಆನಾ ಅಹ್ಮತೋವಾ ರಷ್ಯಾ ದೇಶದ ಪ್ರಸಿದ್ಧ ಕವಯಿತ್ರಿ. ಪ್ರಸ್ತುತ ಕವಿತೆಯಲ್ಲಿ ಬೈಬಲ್ ಗ್ರಂಥದಲ್ಲಿ ಬರುವ ಒಂದು ಕಥೆಯ ಉಲ್ಲೇಖವಿದೆ. ಲಾಟ್ಸ್ ಎಂಬುವನು ಸೊಡೋಮ್ ನಗರದ ನಿವಾಸಿ. ಆ ನಗರದ ನಿವಾಸಿಗಳೆಲ್ಲರೂ ಪಾಪಕ್ಕೆ ಮುಡಿಪಾದವರು; ಇವನೊಬ್ಬನೇ ಸದಾಚಾರಿ. ಒಮ್ಮೆ ಇವನ ಮನೆಗೆ ಇಬ್ಬರು ಅಪ್ಸರೆಯರು ರಾತ್ರಿ ತಂಗಲೆಂದು ಬರುತ್ತಾರೆ. ಊರಿನವರ ಕಣ್

ಸುಲಭ ಎನ್ನುತಿಹನು ಕಬೀರ

ಇಮೇಜ್
ಮೂಲ: ಮಹಾತ್ಮಾ ಕಬೀರ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕಣ್ಣಿಗೆ ಹೇಗೆ ಕಾಣುವುದೋ ಅದಲ್ಲ ವರ್ಣಿಸಲಾಗದು ಏನೆಂದು, ಇಲ್ಲ ಪದಗಳಾಧಾರ. ನೋಡದೇ ಹೇಗೆ ಬಂದೀತು ನಂಬಿಕೆ? ಅರ್ಥವಾದೀತೆ ಮಾಡದೇ ಶಬ್ದಲೋಕವಿಹಾರ? ಪದಗಳ ಪರಿಚಯ ಬರೀ ಜ್ಞಾನಿಗೆ ಮಾತ್ರ ಅಜ್ಞಾನಿಗೆ ಬರಿ ವಿಸ್ಮಯಿಸುವ ಪರಿಹಾರ. ನಿರಾಕಾರನೆಂದು ಪೂಜಿಸುವರು ಕೆಲವರು ಕೆಲವರಿಗೋ ದೇವನು ಹಲವು ರೂಪ ಪ್ರಕಾರ. ದೇವನು ಇವೆರಡನ್ನೂ ಮೀರಿದವನೆಂದು ಜ್ಞಾನಿಯು ತಿಳಿದ ವಿಚಾರ. ಬರೆದಿಡಲಾಗದ ರಾಗವು ದೇವರು, ಹಾಕಲಾಗುವುದೆ ಪ್ರಸ್ತಾರ? ಸುರತ ನಿರಋತಗಳನು ಅರಿತವನಿಗೆ ಮಾತ್ರ ಸುಲಭ ಎನ್ನುತಿಹನು ಕಬೀರ

ನಾನು

ಇಮೇಜ್
ಮೂಲ: ಚಾರ್ಲ್ಸ್ ಕಾಸ್ಲೆ ಅನುವಾದ: ಸಿ. ಪಿ. ರವಿಕುಮಾರ್ ಹಕ್ಕಿಯನ್ನು ಹಾಡುವ ಹಾಡು ನಾನು, ನಾನು ಭೂಮಿಯನ್ನು ಬೆಳೆವ ಎಲೆ. ನಾನು ಚಂದ್ರಮನನ್ನು ಚಲಿಸುವ ಅಲೆ, ನಾನು ಮರಳನ್ನು ತಡೆಹಿಡಿವ ನೀರ ಸೆಲೆ. ನಾನು ಬಿರುಗಾಳಿಯನ್ನಟ್ಟಿ ಓಡಿಸುವ ಮುಗಿಲು, ನಾನು ಸೂರ್ಯನನ್ನು ಬೆಳಗಿಸುವ ಭೂಮಿ. ಕಲ್ಲಿನ ಮೇಲೆರಗುವ ಬೆಂಕಿಯ ಕಿಡಿ ನಾನು, ನಾನು ಕೈಗಳನ್ನು ರೂಪಿಸುವ ಜೇಡಿಮಣ್ಣು, ಆ ಸದ್ದು ನಾನು ಯಾವುದು  ಉದ್ಗರಿಸುವುದೋ ಮನುಷ್ಯನನ್ನು.

ಪ್ರೇಮವನ್ನು ಸ್ವೀಕರಿಸು ಹಗುರಾಗಿ

ಇಮೇಜ್
ಮೂಲ: ಡಬ್ಲ್ಯು. ಬಿ. ಯೇಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಸಂಧಿಸಿದೆ ನನ್ನೊಲವನ್ನು ರಾ ಣಿಯ ಉದ್ಯಾನದೊಳಗೆ, ಹಿಮದ ಹೆಜ್ಜೆ ಇಡುತ್ತಾ ಹೆಣ್ಣು ನಡೆದುಬಂದಳು ಬಳಿಗೆ, ಹೇಗೆ ಚಿಗುರುವುದೋ ಹಸಿರೆಲೆ ಮರದಲ್ಲಿ ಹಾಗೆ, ಪ್ರೇಮವನ್ನು ಸ್ವೀಕರಿಸು ಹಗುರವಾಗಿ ಎಂದಳು ನನಗೆ. ಕೇಳುವ ವಿವೇಕವಿತ್ತೇ ನನ್ನ ಬಿಸಿರಕ್ತಕ್ಕೆ? ಹತ್ತಲಿಲ್ಲ ತಲೆಗೆ. ನದಿಯ ಬಳಿ ಹೊಲದಲ್ಲಿ ಸಂಧಿಸಿದೆನು ನನ್ನೊಲವನ್ನು, ಹೀಗೆಂದಳು ಹೆಗಲ ಮೇಲೆ ಹಿಮಶ್ವೇತ ಕೈಯಿಟ್ಟು ಹೆಣ್ಣು: ನೋಡಿದೆಯಾ ಪಾತಿಯ ಮೇಲೆ ಬೆಳೆದ ಹುಲ್ಲನ್ನು? ಹಾಗೆ ಸ್ವೀಕರಿಸು ಹಗುರವಾಗಿ ಪ್ರೇಮವನ್ನು. ಅವಳ ಮಾತಿಗೆ ಬೆಲೆ ಕೊಡದೆ ಈಗ  ಕಂಬನಿ ಹರಿಸುತ್ತಿವೆ ಕಣ್ಣು.

ಆಧುನಿಕ ಕವಿಯ ಆತ್ಮಸ್ವೀಕಾರ

ಇಮೇಜ್
ಹಿಂದಿ ಮೂಲ: ಅಗ್ನೇಯ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಯಾರದ್ದೋ ಸತ್ಯವಾಗಿತ್ತು ಅದು ಸಂದರ್ಭಕ್ಕೆ ಸರಿಯಾಗಿ ಸೇರಿಸಿದೆ ನಾನು ಯಾರೋ ಕಿತ್ತು ತಂದಿದ್ದರು ಜೇನುಗೂಡು ನಾನು ಹಿಂಡಿಕೊಂಡೆ  ಜೇನು ಯಾರದೋ ಉಕ್ತಿಯಲ್ಲಿತ್ತು ಗರಿಮೆ ನಾನು ಅದನ್ನು ಸ್ವಲ್ಪ ತಿದ್ದಿದೆ  ಯಾರದೋ ಸಂವೇದನೆಯಲ್ಲಿತ್ತು ಬೆಂಕಿಯ ತಾಪ ದೂರದಿಂದಲೇ ನಾನದನ್ನು ಧಿಕ್ಕರಿಸಿದೆ. ಯಾರಲ್ಲೋ ಕಂಡಾಗ ನೈಪುಣ್ಯ ನಾನು ನೋಡಿ ಉದ್ಗರಿಸಿದೆ: ಹೀಗೆ! ದಣಿದಿದ್ದ ಭಾರ ಹೊತ್ತವನನ್ನು ಕಂಡು ಏಕೆ ಎಂದು ಬೊಗಳಿದೆ ರೇಗಿ. ಯಾರದ್ದೋ ಸಸಿಗೆ ನಾನು ನೀರೆರೆದೆ ಬೆಳೆದಾಗ ಅದನ್ನು ನನ್ನದೇ ಎಂದೆ. ಯಾರೋ ಬೆಳೆಸಿದ್ದರು ಒಂದು ಬಳ್ಳಿ, ಬೊಂಬು ನೆಟ್ಟು ಅದಕ್ಕೆ ಹಬ್ಬಿಸಿಕೊಂಡೆ. ಬೇರೆ ಯಾರದ್ದೋ  ಬಳ್ಳಿಯ ಮೊಗ್ಗು, ನಾನು ನನ್ನದೇ ಎಂಬಂತೆ ಎತ್ತಿಕೊಂಡೆ. ಯಾರದ್ದೋ ಆಗಿತ್ತು ಮಾತು, ಅವರ ಬಾಯಿಂದ  ಕಿತ್ತುಕೊಂಡೆ. ಹೀಗೆ ನಾನು ಕವಿ, ಆದುನಿಕನು, ನವ್ಯನು, ಕಾವ್ಯ ತತ್ತ್ವ ಶೋಧನೆಗೆ ಎಲ್ಲೆಲ್ಲೂ ಅಲೆವೆನು, ಆಶಿಸುವೆ ನಾನು ಬರೆದ ಒಂದೊಂದೂ ಪದ ಅಕ್ಕರೆಯಿಂದ ನೀವು ಓದಿ ತಿಳಿಯಬೇಕು ಹದ, ಪ್ರತಿಮೆಯ ವಿಷಯವೇ, ಅಯ್ಯೋ, ಅದಕ್ಕೇನು, ನಿಮಗೆ ಯಾವುದು ಇಷ್ಟವೋ ಸ್ಥಾಪಿಸಿಕೊಳ್ಳಿ ಅದನ್ನು.

ನಗುತ್ತಿರು

ಇಮೇಜ್
ಮೂಲ: ಜಾನ್ ಮೇಸ್ ಫೀಲ್ಡ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಗುತ್ತಿರು, ನಲಿಯುತ್ತಿರು, ಜಗವನ್ನು ಇನ್ನಷ್ಟು  ಹಸನಾಗಿಸಲಿ ನಿನ್ನ ಹಾಡು, ತಪ್ಪಿನ ಹಲ್ಲಿನ ಮೇಲೆ ಹಾಕಿ ಒಂದೇಟು ಜಗವನ್ನು ಇನ್ನಷ್ಟು ಹಸನು ಮಾಡು, ನಗುತ್ತಿರು, ಏಕೆಂದರೆ ಸಮಯ ಹೆಚ್ಚಿಲ್ಲ, ಅಳೆದರೆ ಇದ್ದೀತು ಒಂದು ಮಾರು, ಹೊರಟಿದೆ ಮಾನವನ ಹೆಮ್ಮೆಯ  ಜಾತ್ರೆ, ನಗುನಗುತ್ತಾ ಈ ಪುರಾತನ ಜಾತ್ರೆಯನು ಸೇರು. ಕೂದಲು ನೆರೆತಾಗಲೂ ನೆನಪಿಟ್ಟುಕೋ ನಗುನಗುತ್ತಾ ನಲಿಯುತ್ತಿರಲು, ಸ್ವರ್ಗ ಸೃಷ್ಟಿಸಿದವನೇ ಸೃಜಿಸಿದನು ಭೂಮಿಯಲ್ಲದರ ನಕಲು, ತುಂಬಿದನು ಅವುಗಳಲ್ಲಿ ತನ್ನ ಸಂತೋಷದ ಕೆಂಪು ದ್ರಾಕ್ಷಾರಸ, ನಕ್ಷತ್ರಗಳಲ್ಲಿ ನಗೆಮಿನುಗನ್ನು, ಭೂಮಿಯಲ್ಲಿ  ತುಂಬಿದನು ಸಂತಸ. ಹೀಗಿರಲು ತುಂಬಿಕೋ ಬಟ್ಟಲಿಗೆ, ಹೀರು, ನೀಲನಭದಿಂದ ಸುರಿವ ರಸಧಾರೆ, ಸೇರಿ ನೀನೂ ಹಾಡು, ಕೇಳಿಸಿಕೋ! ಸಮೂಹಗೀತೆ ಹಾಡುತ್ತಿವೆ ತಾರೆ, ನಗುತ್ತಾ ಮಾಡು ದುಡಿಮೆಯ ಯುದ್ಧ, ಸುರಿಸು ಬೆವರು ಹೀರು ದೇವನು ಭೂಮಿಯ ಮೇಲೆ ಚೆಲ್ಲಿರುವ ಹಸಿರು  ಎಲ್ಲರೂ ನಿನ್ನ ಸೋದರರು, ಅವರೊಂದಿಗೆ ನಗುತ್ತಾ ಕಳೆದುಬಿಡು ಸಿಕ್ಕ ಪ್ರತಿಕ್ಷಣ, ಕೆಲವೇ ದಿನಗಳ ಅತಿಥಿಗಳು ನಾವು, ಈ ಭೂಮಿ ನಮ್ಮ ತಂಗುದಾಣ, ನರ್ತಿಸುತ್ತಿರು ನಿಲ್ಲುವವರೆಗೂ ವಾದ್ಯಗೋಷ್ಠಿ, ಸಂಗೀತ, ನಗುತಿರು ಗೆಳೆಯಾ, ನಿಲ್ಲುವವರೆಗೂ ನೆಲದ ಆಟ.