ಪೋಸ್ಟ್‌ಗಳು

DVG ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವನಸುಮ - ಡಿವಿಜಿ ಅವರ ಕವಿತೆ

ಇಮೇಜ್
ಸಿ ಪಿ ರವಿಕುಮಾರ್ ಡಿವಿಜಿ ಅವರ "ವನಸುಮ" ನಾನು ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ನಮಗೆ ಪ್ರಾರ್ಥನಾಗೀತೆಯಾಗಿತ್ತು. ನಾನು ಮಾಧ್ಯಮಿಕ ಶಾಲೆ ಓದಿದ್ದು ದೆಹಲಿ ಕನ್ನಡ ಶಾಲೆಯಲ್ಲಿ.  ಅಲ್ಲಿ ಕನ್ನಡ ವಿದ್ಯಾರ್ಥಿಗಳು ನೂರಕ್ಕೆ ಒಬ್ಬರೋ ಇಬ್ಬರೋ. ಉಳಿದವರು ಹಿಂದಿ ಅಥವಾ ಪಂಜಾಬಿ ಮಾತಾಡುವ ಮಕ್ಕಳು. ಅವರಿಗೆ ಈ ಪ್ರಾರ್ಥನಾಗೀತೆ ಕಬ್ಬಿಣದ ಕಡಲೆಯಾಗಿತ್ತು. ನಮಗೂ ಆವಾಗ ಈ ಕವಿತೆ ಅರ್ಥವಾಗಿದ್ದು ಅಷ್ಟರಲ್ಲೇ ಇದೆ! "ವನಸುಮದೋಲೆನ್ನ ಜೀ| ವನವು ವಿಕಸಿಸುವಂತೆ ..." ಎನ್ನುವ ಸಾಲನ್ನು "ಜೀ" ಎನ್ನುವ ಕಡೆ ಕತ್ತರಿಸಿರುವುದು ಪ್ರಾಸಕ್ಕಾಗಿ ಎನ್ನುವ ಸರಳ ವಿಷಯ ನಮಗೆ ಗೊತ್ತಿರಲಿಲ್ಲ. ಪ್ರಾರ್ಥನೆಯನ್ನು ನಮ್ಮ ನೋಟ್ ಪುಸ್ತಕಗಳ ಹಿಂದೆ ಹಿಂದಿಯಲ್ಲಿ ಮುದ್ರಿಸಲಾಗಿತ್ತು.  ಇದನ್ನು ಓದಿಕೊಂಡು ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಕಲಿತುಕೊಳ್ಳಬೇಕಾಗಿತ್ತು! ಅಬ್ಬಾ, ಎಂಥ ಶಿಕ್ಷೆ! ಪಾಪ, ಹಿಂದಿ ಮಾತಾಡುವ ಮಕ್ಕಳು "ವನಸುಮದೊಲೆನ್ನ ಜೀ" ಎನ್ನುವುದನ್ನು ಸಂಬೋಧನೆ ಎಂದುಕೊಂಡು ಹಾಗೇ ಹೇಳುತ್ತಿದ್ದರು!! ಕವಿತೆ ನನಗೆ ಅರ್ಥವಾದಾಗ ಅದೆಷ್ಟು ಸರಳಸುಂದರವಾಗಿದೆ ಎನ್ನಿಸಿತು. ನನಗೆ ಇಂದಿಗೂ ಇದು ಪ್ರಿಯವಾದ ಕವಿತೆ. ಇದರ ಭಾವಾರ್ಥವನ್ನು ಬರೆಯುವ ಮೂಲಕ ನನ್ನ ಮಾಧ್ಯಮಿಕ ಶಾಲೆಯ ತಪ್ಪುಗಳನ್ನು ದೇವರು ನನ್ನನ್ನು ಮನ್ನಿಸಲಿ ಎಂದು ಕೇಳಿಕೊಳ್ಳುತ್ತಿದ್ದೇನೆ!!

ಕಗ್ಗ ಮತ್ತು ಫೇಸ್ ಬುಕ್ ಬಳಕೆದಾರ -1

ಸಿ ಪಿ ರವಿಕುಮಾರ್ ಡಿವಿಜಿ ಅವರ ಪುಣ್ಯತಿಥಿಯನ್ನು ಯಾರೋ ನೆನಪಿಸಿದರು. ಅವರ ಒಂದು ಕಗ್ಗ ನೆನಪಿಗೆ ಬಂತು. ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ | ಹಿತವಿರಲಿ ವಚನದಲಿ, ಋತವ ಬಿಡದಿರಲಿ || ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ | ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ | ಫೇಸ್ ಬುಕ್ ಬಳಕೆದಾರರು  ಡಿವಿಜಿ ಅವರ ಹಿತವಚನವನ್ನು ಹೀಗೆ ಅರ್ಥೈಸಿಕೊಳ್ಳಬಹುದು ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ - ಓದುವಾಗ ನಗು ಬಂದರೆ ಅದು ನಿಮ್ಮ ಮುಖದ ಮೇಲೆ ಮಾತ್ರ ಇರಲಿ, LOL ಇತ್ಯಾದಿ ಬೇಡ!  ಜೋರಾಗಿ ನಕ್ಕರೆ ಟೀಚರ್ ಅಥವಾ ಅಪ್ಪ-ಅಮ್ಮ ಬಂದು ನಿನ್ನ ಮೊಬೈಲ್ ಕಿತ್ತುಕೊಳ್ಳುವುದು ಖಂಡಿತ. ಹಿತವಿರಲಿ ವಚನದಲಿ, ಋತವ ಬಿಡದಿರಲಿ - ನಿಮ್ಮ ಕಾಮೆಂಟ್ ಹಿತವಾಗಿರಲಿ, ಆದರೆ ತೀರಾ ಸುಳ್ಳು ಹೇಳಬೇಡ.  ಮಿತ್ರನ  ಪ್ರೊಫೈಲ್ ಚಿತ್ರ ತೀರಾ ಕೆಟ್ಟದಾಗಿದ್ದರೂ ಲೈಕ್ ಒತ್ತುವ ಕಾರಣವಿಲ್ಲ! ಸ್ನೇಹಿತನ ಜೋಕ್ ತೀರಾ ಕಳಪೆಯದಾಗಿದ್ದರೂ ಅದಕ್ಕೆ ವಾವ್, ಸೂಪರ್ ಇತ್ಯಾದಿ ಕಾಮೆಂಟ್ ಹಾಕಬೇಡ! ಮಿತವಿರಲಿ ಮನಸಿನುದ್ವೇಗದಲಿ, ಹೋಗದಲಿ, ಅತಿ ಬೇಡವೇಲ್ಲಿಯುಂ - ಕಾಮೆಂಟ್ ಹಾಕುವಾಗ ಮನಸ್ಸಿನಲ್ಲಿ ಉದ್ವೇಗ ಬೇಡ! ಜಗಳವಾದೀತು! ನಿನ್ನ ಸ್ನೇಹಿತರು ಬೇರೆ ಪಕ್ಷದವರಾಗಿದ್ದರೆ ಅವರು ನಿನಗೆ ಇಷ್ಟವಾದ ಪಕ್ಷವನ್ನು ತೆಗಳಿ ಬರೆಯುತ್ತಾರೆ ಅನ್ನುವುದನ್ನು ನೆನಪಿಡು. ಯುದ್ಧದಲ್ಲಿ ತೊಡಗಬೇಡ!   ಹಾಗೂ ಅತಿ ಭೋಗ ಬೇಡ - 3000...