ಪೋಸ್ಟ್‌ಗಳು

ಭಾಷಾಂತರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಣ್ಣಿಗೆ ಹರಿದರ್ಶನದ ದಾಹ (ಸೂರದಾಸರ ರಚನೆ)

ಇಮೇಜ್
"ಅಂಖಿಯಾ ಹರಿದರ್ಶನ್ ಕೀ ಪ್ಯಾಸೀ" ... ಸೂರದಾಸರ ಈ ಗೀತೆಯನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಅವರ ದಿವ್ಯಕಂಠದಲ್ಲಿ ನೀವು ಕೇಳಬಹುದು.  ಈ ರಚನೆಯಲ್ಲಿ ಸೂರದಾಸರು ತಮ್ಮ ಇಷ್ಟದೈವ ಕೃಷ್ಣನನ್ನು ಕಾಣಲಾರದೇ ತಮಗೆ ಉಂಟಾಗುವ ಸಂಕಟವನ್ನು ತೋಡಿಕೊಂಡಿದ್ದಾರೆ.  ಸೂರದಾಸರು ಹುಟ್ಟಾ ಕುರುಡರಾಗಿದ್ದವರು. ಅವರಿಗೆ ಕೃಷ್ಣನ ದರ್ಶನ ಹೇಗೆ  ಉಂಟಾಯಿತು ಎಂಬುದಕ್ಕೆ ಒಂದು ಕಥೆ ಜನಜನಿತವಾಗಿದೆ.   ಒಮ್ಮೆ ಸೂರದಾಸರು ದಾರಿಯಲ್ಲಿದ್ದ ಬಾವಿಯನ್ನು ಕಾಣದೇ ಅದರೊಳಕ್ಕೆ ಬಿದ್ದರಂತೆ. ಆಗ ಸಾಕ್ಷಾತ್ ಶ್ರೀ ಕೃಷ್ಣನೇ ಬಂದು ಅವರನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸಿದನಂತೆ.  ಕೃಷ್ಣನ ಸಂಗಡ ಇದ್ದ ರಾಧೆ "ಇವನಿಗಾಗಿ ನೀನೇ ಸ್ವತಃ ಬರುವ ಅಗತ್ಯವೇನಿತ್ತು?" ಎಂದು ಪ್ರಶ್ನಿಸುತ್ತಾಳೆ.  "ಅವನು ನನ್ನ ಪರಮ ಭಕ್ತ" ಎಂದು ಕೃಷ್ಣ ಉತ್ತರಿಸುತ್ತಾನೆ. ಹಾಗೇ "ಅವನ ಬಳಿಗೆ ಹೋಗಬೇಡ," ಎಂದು ಎಚ್ಚರಿಸುತ್ತಾನೆ. ಆದರೆ ರಾಧೆ ಕುತೂಹಲದಿಂದ ಸೂರದಾಸನ ಬಳಿಗೆ ಹೋಗುತ್ತಾಳೆ.  ಆಕೆ ಯಾರೆಂದು ಊಹಿಸಿದ ಸೂರದಾಸರು ಆಕೆಯ ಕಾಲಿನ ಗೆಜ್ಜೆಯನ್ನು ಕಿತ್ತುಕೊಂಡು ಇಟ್ಟುಕೊಳ್ಳುತ್ತಾರೆ.  ರಾಧೆ ಎಷ್ಟು ಬೇಡಿಕೊಂಡರೂ ಕೊಡುವುದಿಲ್ಲ. "ನಾನು ಯಾರು ಗೊತ್ತೇ? ನಾನು ಕೃಷ್ಣನ ಪ್ರಿಯತಮೆ, ರಾಧೆ" ಎಂದು ಆಕೆ ಹೇಳಿದಾಗ ಸೂರದಾಸರು "ನಾನು ಹೇಗೆ ನಂಬಲಿ?  ಕುರುಡನೆಂದು ನೀನು  ಮೋಸ ಮಾಡುತ್ತಿರಬಹುದು!" ಎನ್ನುತ್ತಾರೆ.  ರಾಧೆ ...

ಗಡಿ

ಇಮೇಜ್
ಮೂಲ ಉರ್ದೂ : ಜಾಹೀದ್ ಇಮ್ರೋಜ್ (ಪಾಕೀಸ್ತಾನಿ ಯುವಕವಿ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಗಡಿಯ ಮೇಲೆ ಬರಿಹೊಟ್ಟೆಯಲ್ಲೇ ನಮಗೆ ಕಟ್ಟಲಾಗದು ಬೇಲಿ. ರಾತ್ರಿಗಳನ್ನು ಒಣಗಿಸಿಬಿಡುತ್ತದೆ ಹಸಿವು. ದಾಹ ತೀರಿಸದು ನಮ್ಮ ಕಣ್ಣೀರು. ಧಾರ್ಮಿಕ ಸಂಗೀತಕ್ಕೆ ರಣಗೀತೆಯ ರಾಗ ದೊರೆತಾಗ ಫಲವಂತಿಕೆಯಲ್ಲೂ ಬೆಳೆಯುತ್ತದೆ ಬರಗಾಲ. ಮಕ್ಕಳು ತಾಯಿಎದೆಯಿಂದ ರಕ್ತ ಹೀರತೊಡಗುತ್ತಾರೆ. ಮುಖಗಳ ಮೇಲೆ ಯಾರೂ ಬಾವುಟಗಳನ್ನು ತೊಡುವುದಿಲ್ಲ, ಸ್ವಾತಂತ್ರ್ಯದಿನದಂದು ಜನ ತಮ್ಮ ಸಂತೋಷವನ್ನು ಸುಡುತ್ತಾರೆ, ನಕ್ಷತ್ರಕಡ್ಡಿಯನ್ನಲ್ಲ. ಸಿಪಾಯಿಗಳು ಹೊಲ ನಾಶಮಾಡುವ ಯಂತ್ರಗಳೆಂಬ ಹಾಡನ್ನು ಸೇನೆಯು ಎಂದೂ ಗುಣುಗುಣಿಸುವುದಿಲ್ಲ. ಹೂವುಗಳು ನವವಧುವಿನ ಹೆರಳಲ್ಲಿ ಮತ್ತು ಮಕ್ಕಳ ಸಮವಸ್ತ್ರಗಳ ಮೇಲೆ ಮಾತ್ರ ಭೂಷಣವಾಗುತ್ತವೆಯೇ? ಗಡಿಗಳ ರೇಖೆಗಳನ್ನು ಗುರುತಿಸಲು ಮುಳ್ಳುತಂತಿಯ ಬದಲು ಹೂಗಿಡಗಳ ಸಾಲನ್ನು ಕಟ್ಟಲಾಗದೆ?

ಎಲ್ಲಿ ಹುಡುಕುತ್ತಿರುವೆ ಪ್ರಶ್ನೆಗಳಿಗೆ ಉತ್ತರ?

ಇಮೇಜ್
ಮೂಲ: ಬಾಬ್ ಡಿಲನ್ (2016 ನೊಬೆಲ್ ಪ್ರಶಸ್ತಿ ವಿಜೇತ) ಕನ್ನಡ ಅನುವಾದ : ಸಿ. ಪಿ. ರವಿಕುಮಾರ್ ಈ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದುಕೊಂಡ ಬಾಬ್ ಡಿಲನ್ ಪ್ರಸಿದ್ಧ ಅಮೆರಿಕನ್ ಗೀತಕಾರ ಮತ್ತು ಹಾಡುಗಾರ.  ಅರವತ್ತನೆಯ ಶತಮಾನದಲ್ಲಿ ಅವನು ಬರೆದು ಹಾಡಿದ ಶಾಂತಿಪರ ಗೀತೆಗಳಿಂದ ಅವನಿಗೆ ಖ್ಯಾತಿ ದೊರೆಯಿತು. "ದ ಆನ್ಸರ್ ಈಸ್ ಬ್ಲೋಯಿಂಗ್ ಇನ್ ದ ವಿಂಡ್" ಅವನ ಪ್ರಸಿದ್ಧ ಗೀತೆ. ಜಗತ್ತಿನಲ್ಲಿ ಕೆಲವು ಜನಾಂಗಗಳ ಶೋಷಣೆಗೆಅಡೆತಡೆಯೇ ಇಲ್ಲದಂತೆ ಇತಿಹಾಸದ ಉದ್ದಕ್ಕೂ ನಡೆದು ಬಂದಿದೆ. ಯುದ್ಧಗಳು ಇತಿಹಾಸದ ಉದ್ದಕ್ಕೂ ನಡೆಯುತ್ತಲೇ ಇವೆ. ಇವುಗಳಿಗೆಲ್ಲ ಯಾವಾಗ ಕೊನೆ? ಈ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಾದದ್ದು ಬೇರೆಲ್ಲೂ ಅಲ್ಲ, ನಮ್ಮಲ್ಲೇ. "ಇದು ತಪ್ಪು, ಇದನ್ನು ನಿಲ್ಲಿಸಬೇಕು" ಎಂಬ ನಿರ್ಧಾರ ತೆಗೆದುಕೊಳ್ಳಲು ತಡವೇಕೆ ಎಂಬುದು ಕವಿಯ ಪ್ರಶ್ನೆ.  ಇನ್ನೆಷ್ಟು ಅಗ್ನಿಗಳನ್ನು ಹಾದು ಬರಬೇಕು ಮಾನವ ಮನುಷ್ಯನೆಂದು ನೀನವನನ್ನು ಗುರುತಿಸುವ ಮುನ್ನ? ಇನ್ನೆಷ್ಟು ಸಾಗರಗಳನ್ನು ಈಜಿ ಬರಬೇಕು ಬೆಳ್ಳಕ್ಕಿ ಮರಳಿನಲ್ಲಿ ಹಾಯಾಗಿ ನಿದ್ರಿಸುವ ಮುನ್ನ? ಇನ್ನೆಷ್ಟು ತೋಪುಗುಂಡುಗಳು ಹಾರಬೇಕಾಗಿದೆ ಸಂಪೂರ್ಣ ಅವನ್ನು ನಿಷೇಧಿಸುವ ಮುನ್ನ? ಎಲ್ಲಿ ಹುಡುಕುತ್ತಿರುವೆ ಗೆಳೆಯಾ ಈ ಪ್ರಶ್ನೆಗಳಿಗೆ ಉತ್ತರ?  ಗಾಳಿಯಲ್ಲಿ ಅಲ್ಲೇ ಹಾರುತ್ತಿದೆ ಹತ್ತಿರ. ಎಷ್ಟು ಸಾವಿರ ವರ್ಷ ಬಾಳುವುದು ಪರ್ವತ ಸಾಗರದಲ್ಲಿ ಕರಗಿ ನೀರಾ...

ಹತ್ತು ಉರ್ದು ಶೇರ್

ಇಮೇಜ್
೧  ಮುಳ್ಳಿಂದಲೇ ತೆಗೆದೆ ಕಾಲಿಗೆ ಚುಚ್ಚಿದ ಮುಳ್ಳು ಏಕೆಂದರೆ ನೋಡಿ ಹೂವಿಗೆ ಬರಗಾಲ ಎಲ್ಲೆಲ್ಲೂ (ಆಕೀಲ್ ಶಾದಾಬ್) ೨ ಹೇಗೆ ಬದುಕಿದ್ದೇನೆ ಭೂಮಿಯ ಮೇಲೆ ಗೊತ್ತೇ? ಶತ್ರುವಿನ ಮನೆಯಲ್ಲಿ ಅತಿಥಿ ರಾತ್ರಿ ಕಳೆದಂತೆ (ಭಗವಾನ್ ದಾಸ್ ಏಜಾಜ್) ೩ ಮನೆಯಲ್ಲೇ ಆಗುಬಹುದು ಭಗವಂತನ ದರ್ಶನ ಮಕ್ಕಳೊಂದಿಗೆ ಮಗುವಾಗಿ ಆಡಿದರೆ ಎರಡು ಕ್ಷಣ (ಬಿಸ್ಮಿಲ್ ನವಶ್ ಬಂದಿ ) ೪ ಎಲ್ಲರ ಮನೆಗೆ ಹೋಗಿ ಕೊಚ್ಚುತ್ತಾರಲ್ಲ ಅವರಿವರ ಬಗ್ಗೆ ಹರಟೆ ಗಮ್ಮತ್ತು ತಮ್ಮ ಮನೆಯಲ್ಲೇ ಅವರಿಗೆ ಸಿಕ್ಕುವುದಿಲ್ಲ ಸವಕಲು ಕಾಸಿನ ಕಿಮ್ಮತ್ತು (ಅಸಿಮ್ ಶಹನಾಜ್ ಶಿಬ್ಲಿ) ೫ ಪ್ರತಿಯೊಂದು ವಿಷಯಕ್ಕೂ ಹಿಂದೂ ಮುಸ್ಲಿಂ ಎನ್ನುವೆಯಲ್ಲ ಕರ್ಮ! ಗೊತ್ತಿಲ್ಲವೇ ನಿನಗೆ ಸುಂದರಿ, ಪ್ರೇಮವೆಂಬುದೇ ಬೇರೆ ಧರ್ಮ (ಜಮಾಲುದ್ದೀನ್ ಆಲಿ) ೬ ಹೇಗೆ ಕೂಡಿಬಂದೀತು ಮಾತು? ಪ್ರತಿಯೊಂದೂ ಇಜ್ಜೋಡು ಕಣ್ಣಿಗಿಂತಲೂ ದೊಡ್ಡದು ಕನಸು, ನಿದ್ದೆಗಿಂತ ರಾತ್ರಿಯೇ ದೊಡ್ಡದು (ಶಾಹಿದ್ ಮೀರ್) ೭ ತೆರಳುವ ಮುನ್ನ ಕಾಲ ಉಳಿಸುವುದು ನೆನಪು ಮಾತ್ರ ಹಲವಾರು ಹಾರಿಹೋದರೂ ಹಕ್ಕಿ ಉಳಿದಂತೆ ಪಂಜರದಲ್ಲದರ ನೆರಳು (ನರೇಶ್) ೮ ಕಿಸೆ ಖಾಲಿಯಾದಾಗ ಹೇಗೆ ತೆಪ್ಪಗಾಗುತ್ತಾನೆ ಮನುಷ್ಯ ನೀರಿಲ್ಲದೇ ಹೋದಾಗ ಹೇಗೆ ತೆಪ್ಪಗಾಗುತ್ತದೋ ಮತ್ಸ್ಯ (ಜಹೀರ್ ಆತಿಶ್) ೯ ಬದುಕಿನುದ್ದಕ್ಕೂ ದೊಡ್ಡ ಮರಗಳನ್ನೇ ಹುಡುಕುತ್ತ ಹಾರಾಡಿದ ಹಕ್ಕಿ ಯಾವುದೋ ಬಳ್ಳಿಯ ತೊಡರಿನಲ್ಲಿ ನೆನ್ನೆ ಅದರ ಮೃತದೇಹ ಸಿಕ್ಕಿ...