ಪೋಸ್ಟ್‌ಗಳು

story ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒಂದು ಹಳೆಯ ನೀತಿಕಥೆ

ಇಮೇಜ್
 ಮೂಲ : ರಾಲ್ಫ್ ವಾಲ್ಡೋ ಎಮರ್ಸನ್ ಅನುವಾದ: ಸಿ. ಪಿ. ರವಿಕುಮಾರ್ ಬೆಟ್ಟಕ್ಕೂ ಅಳಿಲಿಗೂ ಜಗಳವಾಯಿತು ಒಮ್ಮೆ, ವಿಷಯ ಇಷ್ಟೇ ಪುಟ್ಟದಾದರೂ ನಿನಗೆ ಎಷ್ಟೋ ದುರಹಂಕಾರ ಎಂದಿತಂತೆ ಬೆಟ್ಟ. ಅಳಿಲು ನೀಡಿತು ಮಾರುತ್ತರ: ನೀನೇನೋ ಮಹಾಕಾಯ, ದಿಟ, ಹಲವು ಋತು ಹೇಗೋ ವರ್ಷದಲ್ಲಿ, ಹಲವು ಬಗೆ ವಸ್ತು ಭೂಮಿಯ ಸುತ್ತ. ನನ್ನ ಸ್ಥಾನದಲ್ಲಿ ನಾನಿರುವೆ, ನನಗೇನೂ ಕೀಳೆಂದು ಅನ್ನಿಸದು. ನಾನಿಲ್ಲದೇ ಇರಬಹುದು ನಿನ್ನಷ್ಟು ಅಗಾಧ, ನೀನೂ ಅಲ್ಲ ನನ್ನಷ್ಟು ಪುಟ್ಟ. ನನ್ನಷ್ಟು ಚುರುಕಂತೂ ಇಲ್ಲವೇ ಇಲ್ಲ, ಚಲಿಸಲೂ ಆಗದು ಅತ್ತಿತ್ತ. ನಿಸ್ಸಂಶಯ ನೀನು ಒಳ್ಳೆಯ ಆಡುಂಬೊಲ ಅಳಿಲುಗಳಿಗೆ ಓಡಾಡಲು ಸುತ್ತ. ಎಲ್ಲರೂ ಚೆನ್ನ ಅವರವರ ಸ್ಥಳದಲ್ಲಿ, ಎಲ್ಲರಿಗೂ ಅವರವರ ಪ್ರತಿಭೆ, ದೈವಚಿತ್ತ. ನಿನ್ನಂತೆ ನಾನು ಹೊರಲಾರೆ ಕಾನು, ನನ್ನಂತೆ ಕಾಯಿ ಹೊರಲಾರೆ ನೀನು.

ಆಟೋ

  ಇದು ಈ ವರ್ಷ ಬಿಡುಗಡೆಯಾದ ಟಾಮ್ ಹ್ಯಾಂಕ್ಸ್ ಅಭಿನಯಿಸಿರುವ "ಆಟೋ" ಚಿತ್ರದ ಕಥೆಯನ್ನು ಸಂಗ್ರಹಿಸುವ ಪ್ರಯತ್ನ. ಇನ್ನೂ ಪೂರ್ಣವಾಗಿಲ್ಲ. ಸಮಯ ಸಿಕ್ಕಾಗ ಪೂರೈಸುವೆ.

ಭೂಮಿ

ಇಮೇಜ್
೨೦೨೧ರಲ್ಲಿ ಬಿಡುಗಡೆಯಾದ ಲ್ಯಾಂಡ್ ಎಂಬ ಚಲನಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿ ಚಿತ್ರವನ್ನು ನಿರ್ದೇಶಿಸಿದವಳು ರಾಬಿನ್ ರೈಟ್ ಎಂಬ ಕಲಾವಿದೆ. ಜೆಸ್ಸಿ ಚಾಟ್ಹಾಮ್ ಮತ್ತು ಎರಿನ್ ಡಿಗ್ನಮ್ ಅವರ ಚಿತ್ರಕಥೆಯನ್ನು ಆಧರಿಸಿದ ಚಿತ್ರ. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರದ ಕಥೆಯನ್ನು ಕೆಳಗೆ ಸಂಕ್ಷೇಪವಾಗಿ ಕೊಟ್ಟಿದ್ದೇನೆ. ಈ ಚಿತ್ರವನ್ನು ನಾನು ನೆಟ್ಫ್ಲಿಕ್ಸ್ ಮೇಲೆ ನೋಡಿದೆ. ಬಹಳ ಪರಿಣಾಮಕಾರಿ ಚಿತ್ರ. ಹೆಚ್ಚು ಸಂಭಾಷಣೆ ಇಲ್ಲ. ಸೂಕ್ಷ್ಮವಾದ ವಿಷಯವನ್ನು ಕುರಿತು ಮಾಡಿದ ಗಂಭೀರ ಚಿತ್ರ. ಕಥೆ ನಿಮಗೂ ಇಷ್ಟವಾಗಬಹುದು ಎಂದು ನಂಬಿದ್ದೇನೆ.

ಕೊನೆಯ ಎಲೆ

ಇಮೇಜ್
 ಕೊನೆಯ ಎಲೆ ಹೊರಗೆ ಹಿಮಪಾತ, ಕೆಟ್ಟ ಚಳಿ ; ಬೆಳಗಿನಲ್ಲೂ ಹಾಕಿದ ಪರದೆ. ಮಲಗಿದಲ್ಲೇ ನಿಟ್ಟಿಸುವನು ಬರಿದೇ  ಕಿಟಕಿಯ ಹೊರಗೆ ಹಬ್ಬಿದ ಬಳ್ಳಿ ರೋಗಿಯು ಕಲಾವಿದ; ಅವನ ಕಣ್ಣು ಕಾಣುವುದು ಬಳ್ಳಿಯಲ್ಲಿ ಬದುಕಿನ ಸಂಕೇತ; ಮೊನ್ನೆ ಬೀಸಿದ ಝಂಝಾವಾತ ಅಲ್ಲಾಡಿಸಿದೆ ನಿರ್ಬಲ ಬಳ್ಳಿಯನ್ನು. ಉದುರಿಹೋದವು ಬಹುಮಟ್ಟಿಗೆ ಎಲೆ ತನ್ನ ಬಾಳಿನ ವರ್ಷಗಳು ಉದುರಿದಂತೆ; ಬಾರಿಸುತ್ತಿದೆ ಅಪಾಯದ ಗಂಟೆ ಬತ್ತಿ ಹೋಗುತ್ತಿದೆ ಬಾಳ ಬಳ್ಳಿಯಲ್ಲಿ ಸೆಲೆ. ಕಲಾವಿದ ಮಲಗಿದ್ದಾನೆ, ತಪಿಸುವ ಜ್ವರದಲ್ಲಿ; ಬಡಬಡಿಸುತ್ತಾನೆ ಕನವರಿಕೆಯಲ್ಲಿ ಕೊನೆಯ ಎಲೆ ಉದುರಿಸಿದಾಗ ಬಳ್ಳಿ ವಿಲೀನವಾಗುವುದು ಪ್ರಾಣ ಕಾಲ ನಿರಂತರದಲ್ಲಿ...  ಹಣೆಯ ಮೇಲೆ ತಣ್ಣೀರು ಪಟ್ಟಿ ಇಟ್ಟು ಅವನ ಶಿಷ್ಯೆ ಹೊದ್ದಿಸುತ್ತಾಳೆ ಬೆಚ್ಚನೆ ಹೊದಿಕೆ; ಏನೂ ಆಗದು ಬಳ್ಳಿಗೆ, ಯಾತಕ್ಕೆ ಹೆದರಿಕೆ! ಎಂದು ಶಾಂತ ಸ್ವರದಲ್ಲಿ ಆಶ್ವಾಸನೆ ಕೊಟ್ಟು. ಬಣ್ಣ ಕುಂಚಗಳನ್ನು ಹೊತ್ತು ಕಿಟಕಿಯ ಹೊರಗಡೆ  ಚಜ್ಜದ ಮೇಲೆ ಹತ್ತಿ ಹಿಮವಂತ ಕುಳಿರ್ಗಾಳಿಯ ರಾತ್ರಿ ಬೆಳಕು ಬೀರುವ ಲಾಂದ್ರದ ದುರ್ಬಲ ಬತ್ತಿ: ಬಿಡಿಸುತ್ತಾಳೆ ಹಸಿರೆಲೆ ಉದುರಿದ ಎಲೆ ಇದ್ದೆಡೆ. ಬೆಳಕು ಹರಿದಾಗ ಕಲಾವಿದನು ಮೆಲ್ಲನೆ ತೆರೆದು ಕಣ್ಣು ಹರಿಸುತ್ತಾನೆ ಕಿಟಕಿಯ ಕಡೆಗೆ ದೃಷ್ಟಿ: ಉಳಿದುಕೊಂಡಿದೆ ಇನ್ನೂ! ಹಿಮವೃಷ್ಟಿ ವಿನಾಶಗೊಳಿಸಲಿಲ್ಲ ಬಳ್ಳಿಯ ಕೊನೆಯ ಹಸಿರನ್ನು! ಹಾಸಿಗೆಯಲ್ಲಿ ಮೆಲ್ಲನೆ ಮೇಲೆದ್ದು ಕುಳಿತ, ಜ್ವರ ಬಿಟ್ಟಿತ್ತು, ಮೈಯಲ್ಲಿ ...