ಪೋಸ್ಟ್‌ಗಳು

ಡಿಸೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರಿತ್ಯಾಗ (ಜಾನಪದ ಕತೆ)

ಪರಿತ್ಯಾಗ (ಜಪಾನ್ ದೇಶದ ಒಂದು ಕತೆ) ಬಹಳ ಬಹಳ ಹಿಂದಿನ ಮಾತು. ಒಬ್ಬ ರೈತ ತನ್ನ ವಯೋವೃದ್ಧ ವಿಧವೆ ತಾಯಿಯೊಂದಿಗೆ ಬೆಟ್ಟದ ತಪ್ಪಲಿನ ಪುಟ್ಟ ಮಣ್ಣಿನ ಮನೆಯಲ್ಲಿ ವಾಸವಾಗಿದ್ದ.  ಅವರಿಗೆ ಸೇರಿದ ಒಂದು ತುಂಡು ಜಮೀನಿತ್ತು. ಹೀಗಾಗಿ ಉಣ್ಣಲು ಕೊರತೆ ಇರಲಿಲ್ಲ.  ಅವರ ಜೀವನ ನೆಮ್ಮದಿಯಿಂದ ಸಾಗುತ್ತಿತ್ತು. ಆ ಹಳ್ಳಿಯು ಯಾವ ಪಾಳೆಯಕ್ಕೆ ಸೇರಿತ್ತೋ ಅದರ ಪಾಳೇಗಾರನು ಬಹಳ ದುರಹಂಕಾರದ ಸ್ವಭಾವದವನು. ಸ್ವತಃ ವೀರಯೋಧನಾದರೂ ಅವನಿಗೆ ವೃದ್ದಾಪ್ಯ ಮತ್ತು ಅನಾರೋಗ್ಯಗಳೆಂದರೆ ವಿಪರೀತ ಭಯವಿತ್ತು.  ತನ್ನ ಆಡಳಿತ ಇರುವ ಪ್ರದೇಶದಲ್ಲಿ ಎಲ್ಲೂ ವೃದ್ಧರೂ ರೋಗಿಷ್ಠರೂ ಇರಬಾರದೆಂದು ಅವನು ನಿರ್ಧರಿಸಿದ. ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವುದೆಷ್ಟು ಹೊತ್ತು! ಅವನು ಊರಿನಲ್ಲಿ ಎಲ್ಲರಿಗೂ ಓಲೆ ಕಳಿಸಿದ.  ಮನೆಯಲ್ಲಿರುವ ವಯೋವೃದ್ಧರನ್ನೂ ಅನಾರೋಗ್ಯ ಪೀಡಿತರನ್ನೂ  ಈಗಿಂದೀಗಲೇ ಕೊಲ್ಲಬೇಕೆಂಬ ಕಠಿಣ ಆದೇಶವನ್ನು ಕಂಡು ರೈತನ ಎದೆ ನಡುಗಿತು. ಆಗಿನ ಕಾಲದಲ್ಲಿ ವಯಸ್ಸಾದವರನ್ನು ಕಾಡಿನಲ್ಲಿ ಬಿಟ್ಟು ಬರುವುದು ಸಾಮಾನ್ಯ ವಿಷಯವಾಗಿತ್ತು.  ತನ್ನ ತಾಯಿಯನ್ನು ರೈತ ಬಹಳ ಆದರದಿಂದ ಕಾಣುತ್ತಿದ್ದ.  ಅವಳನ್ನು ಮೃತ್ಯುವಿಗೆ ದೂಡುವುದೇ! ಬೇರೆ ಮಾರ್ಗವೇ ಇಲ್ಲ! ತಾಯಿಯನ್ನು ಕೊನೆಗಾಣಿಸಲು ಅತ್ಯಂತ ದಯಾಮಯವಾದ ಮಾರ್ಗವೇನು? ಹೀಗೆ ಯೋಚಿಸುತ್ತಾ ಅವನು ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತಾ ನಿಡುಸುಯ್ದ. ಬೆಳಗ್ಗೆ ಅವನು ಬೇಗ ಎದ್ದು ಅನ್ನ ಬೇಯಿಸಿದ. ಅ

ಮುಳ್ಳು ಹೂವಿನ ಹಾಸಿಗೆ

ಇಮೇಜ್
(ಗಿಯ್ ಡಿ ಮೂಪಸಾನ ಕಥೆಯನ್ನು ಆಧರಿಸಿ) ನಾನೊಮ್ಮೆ ನನ್ನ ಗೆಳೆಯರೊಂದಿಗೆ ಕೆಲವು ದಿನ ಕಾಲ ಕಳೆಯಲು ಚಿಕ್ಕಮಗಳೂರಿನ ಎಸ್ಟೇಟಿಗೆ ಹೋದೆ. ನನ್ನ ಬಾಲ್ಯಸ್ನೇಹಿತರು, ಅವಳಿಜವಳಿ ಸೋದರರು, ನನ್ನನ್ನು ಗೇಟಿನ ಬಳಿಯೇ ಬಂದು ಆದರದಿಂದ ಬರಮಾಡಿಕೊಂಡರು. ಈ ಸ್ನೇಹಿತರು ಏನಾದರೂ ತರಲೆ ಕಿತಾಪತಿ ಮಾಡುವುದರಲ್ಲಿ ಸಿದ್ಧಹಸ್ತರು. ಹಾಗಿಲ್ಲದಿದ್ದರೆ ನಾನು ಅವರ ಸ್ನೇಹ ಬಯಸುತ್ತಲೂ ಇರಲಿಲ್ಲ. ಅವರು ಈ ಸಲ ನನ್ನನ್ನು ಬೇಸ್ತು ಬೀಳಿಸಲು ಹೊಸದಾಗಿ ಏನು ತರಲೆ ಮಾಡಲಿದ್ದಾರೆ ಎಂಬ ಪ್ರಶ್ನೆ ನನ್ನನ್ನು ಕೊರೆಯುತ್ತಿತ್ತು. ನಾನು ಗೇಟನ್ನು ಬಹಳ ಸಾವಧಾನವಾಗಿ ಪ್ರವೇಶಿಸಿದೆ. ಅತ್ತಿತ್ತ ನೋಡುತ್ತಲೇ ಒಳಗೆ ಹೋದೆ. ಗೆಳೆಯರು ನನ್ನನ್ನು ಅಪ್ಪಿಕೊಂಡಿದ್ದು, ಅದೇಕೆ ಇಷ್ಟು ದಿನಗಳಿಂದ ನಾಪತ್ತೆಯಾಗಿದ್ದೆ ಎಂದು ದೂರಿದ್ದು, ಹೆಗಲ ಮೇಲೆ ಕೈಹಾಕಿ ತಮ್ಮ ಗಾಡಿಯ ಬಳಿ ಕರೆದೊಯ್ದಿದ್ದು, ಎಲ್ಲವೂ ನನ್ನಲ್ಲಿ ಸಂಶಯ ಮೂಡಿಸಿದವು. ನಾನು ಕಾರಿನಲ್ಲಿ ಕೂಡುವ ಮುನ್ನ ಸೀಟನ್ನು ಒಮ್ಮೆ ಮುಟ್ಟಿ ಪರೀಕ್ಷಿಸಿದೆ. ಗೆಳೆಯರು ಏನೋ ಹಳೆಯದನ್ನು ನೆನೆದು ನಗುತ್ತಿದ್ದರು. ಆದರೆ ನನಗೆ ಅದರ ಮೇಲೆ ಗಮನವಿರಲಿಲ್ಲ. ಮನೆಯಲ್ಲಿ ನನಗೆ ಅದೇನು ಅದ್ಧೂರಿಯ ಸ್ವಾಗತ! ನನಗಾಗಿ ಮಹಡಿಯಲ್ಲಿ ಒಂದು ಕೋಣೆಯನ್ನು ರೆಡಿ ಮಾಡಿಸಿದ್ದರು. ಅದೊಂದು ಹೋಟೆಲ್ ಕೋಣೆಯಂತೆ ಸುಸಜ್ಜಿತವಾಗಿತ್ತು. ಸ್ನಾನ ಮಾಡಿ ಬಾ, ತಿಂಡಿ ರೆಡಿಯಾಗಿದೆ ಎಂದು ಅವರು ಕೆಳಗೆ ಹೋದರು.  ಬಿಸಿನೀರಿನ ಮತ್ತು ತಣ್ಣೀರಿನ ನಲ್ಲಿಗಳ

ಶಿಷ್ಯ (ಕವಿತೆ)

ಇಮೇಜ್
ಮೂಲ: ಆಸ್ಕರ್ ವೈಲ್ಡ್ ಅನುವಾದ: ಸಿ.ಪಿ. ರವಿಕುಮಾರ್ ನಾರ್ಸಿಸಸ್ ಸತ್ತಾಗ ಅವನ ಅಚ್ಚುಮೆಚ್ಚಿನ ಸಿಹಿನೀರಿನ ಕೊಳ ಉಪ್ಪು ಕಣ್ಣೀರಿನ ಮಡುವಾಗಿಹೋಯ್ತು. ಕೇಳಿದಾಗ ಈ ಸಂಗತಿ ಗಿರಿಕಿನ್ನರಿಯರು ಹಾರಿ ಬಂದು ನಿಜಕ್ಕೂ ಸಿಹಿನೀರಿನ ಕೊಳ ಉಪ್ಪು ಕಣ್ಣೀರ ಮಡುವಾಗಿದ್ದು ಕಂಡು ಸಂತೈಸಿದರು ತಮ್ಮ ನೀಳ ಹಸಿರುಕೇಶವನ್ನು ಇಳಿಬಿಟ್ಟು ಕೊಳದೊಳಗೆ. ನಿನ್ನ ದುಃಖ ನನಗೆ ಅರ್ಥವಾಗುತ್ತದೆ! ನಾರ್ಸಿಸಸ್‌ನಂಥ ಚೆಲುವನಿರಲಿಲ್ಲ ಬೇರೊಬ್ಬ! ಕುತೂಹಲದಿಂದ ಕೇಳಿತು ಕೊಳ: ನಾರ್ಸಿಸಸ್ ಚೆಲುವನಾಗಿದ್ದನೇ? ನಿನಗಿಂತಲೂ ಚೆನ್ನಾಗಿ ಬಲ್ಲವರಾರು ಈ ವಿಷಯ? ನಿನ್ನ ಮೊಗದ ಕನ್ನಡಿಯಲ್ಲಿ ಅವನು ನೋಡಿಕೊಳ್ಳುತ್ತಿರಲಿಲ್ಲವೇ ತನ್ನ ಮುಖ! ಕೊಳವು ಉತ್ತರಿಸಿತು: ಹೌದೇ! ಅವನು ಬಾಗಿ ನೋಡಿದಾಗ ಅವನ ಕಣ್ಣಲ್ಲಿ ನಾನು ನನ್ನ ಸೌಂದರ್ಯವನ್ನು ನೋಡಿ ಹಿಗ್ಗುತ್ತಿದ್ದೆ.

ಬಾಳೆಹಣ್ಣು ಮತ್ತು ಕಲೆ

ಇಮೇಜ್
ಸಿ.ಪಿ. ರವಿಕುಮಾರ್ ಪ್ರಸಿದ್ಧ ಆರ್ಟ್ ಗ್ಯಾಲರಿಯಲ್ಲೊಬ್ಬ ಭೂಪ ತಿಂದುಬಿಟ್ಟನಂತೆ ಒಂದು ಬಾಳೆಹಣ್ಣು, ಪಾಪ! ಪಾಪ ಎಂದಿದ್ದು ಅವನಿಗಲ್ಲ, ಬಾಳೆಹಣ್ಣಿಗೆ ಸಾಧಾರಣ ಎನ್ನಿಸುತ್ತಿತ್ತು ಎಲ್ಲರ ಕಣ್ಣಿಗೆ! ಆದರೆ ಕಲಾವಿದನೊಬ್ಬ ಅಸಾಧಾರಣ ಕಲೆಯನ್ನು ಕಂಡನು ಹಣ್ಣಿನಲ್ಲಿ, ಜಾಣ! ಟೇಪ್ ಹಾಕಿ ಅಂಟಿಸಿ ಗೋಡೆ ಮೇಲೆ ಕಲೆಗೆ ಅವನಿಟ್ಟ ಹೆಸರು "ನಗೆಗಾರ." ನೋಡಿದ ಜನರಲ್ಲಿ ವಾವ್‌ವಾವ್‌ಕಾರ! ಬಂದನೊಬ್ಬನು ನಕಲೀಶಾಮ ಗ್ಯಾಲರಿಗೆ ನೋಡಿ ಬಾಳೆಹಣ್ಣು ಹಣೆಯಲ್ಲಿ ನೆರಿಗೆ! ಎಡದಿಂದ ನೋಡಿದನು  ಬಲದಿಂದ ನೋಡಿದನು! ಸನಿಹದಿಂ ನೋಡಿದನು ದೂರದಿಂ ನೋಡಿದನು! ಉದ್ದನೆಯ ಬಾಳೆಹಣ್ಣು, ಹಳದಿ ಸಿಪ್ಪೆ! ಕಣ್ಣಗಲಿಸಿ ಏನದರ ಸಿಂಬಾಲಜಿ ಎಂದು ಗೂಗಲಿಸಿ ನೋಡಿದನು ತಿರುತಿರುಗಿ! ಅರ್ಥವಾಗದೆ ಮರುಗಿ! "ಏನು ಹೇಳಲು ಬಯಸುತ್ತಿದ್ದೀರಾ ಕಲೆಯಲ್ಲಿ?" ಎಂದು ಕೇಳಿಯೇ ಬಿಟ್ಟ ಕೊನೆಯಲ್ಲಿ. ಶ್ ಶ್ ಶ್ ಎಂದಿಟ್ಟು ಬಾಯಮೇಲ್ ಬೆರಳು "ಯಾರಿವನು, ಅರಸಿಕ ಹೊರಗಟ್ಟಿ ಮೊದಲು!" "ಕಲೆಯೆಂದರೆ ಕಲೆ!" "ಕಲೆಗಾಗಿ ಕಲೆ!" "ಇವನಿಗೇನು ಅರ್ಥವಾದೀತು, ಅವನ ತಲೆ!" ಎಂದು ಕಲಾವಿಮರ್ಶಕರೆಲ್ಲ ಸೇರಿ  ಗದರಿ ಸುಮ್ಮನಾದನು ಕಲಾಪ್ರೇಮಿಯೂ ಹೆದರಿ! ಕಟ್ಟಲಾಗದು ಬೆಲೆ, ಆದರೂ ಕೇಳುವೆವು ಕ್ಷಮಿಸಿ! ಮಂತ್ರಮುಗ್ಧ ಜನರೆಂದರು ಕಲಾವಿದನನ್ನು ರಮಿಸಿ ನಾನು ಹೇಳುವುದಿಲ್ಲ, ನೀವೇ ಬೆಲೆ ಕಟ್ಟಿ!

ಗೋಬಿ ಮಂಚೂರಿ (ಕಥನಕವನ)

ಇಮೇಜ್
ಸಿ.ಪಿ. ರವಿಕುಮಾರ್ ನೆಲಮಂಗಲದ ರೈತ ಬಂದಿದ್ದಾನೆ ಬೆಂಗಳೂರಿಗೆ ಜಮೀನು ಕುರಿತಾದ ವ್ಯಾಜ್ಯ ಪರಿಹಾರಕ್ಕಾಗಿ ಬಂದಿದ್ದಾನೆ ವ್ಯಾಜ್ಯಗಳ ನಗರಿಗೆ ಅವನ ತಾಯಿಯೂ ಬಂದಿದ್ದಾಳೆ ಜೊತೆ ಎಂಬತ್ತು ದಾಟಿದರೂ ದಾಟಲು ಹೆದರುತ್ತಾಳೆ ಬೆಂಗಳೂರಿನ ರಸ್ತೆ ನೋಡೋ ಬಿದ್ದಿವೆ ಬಾಳೇಹಣ್ಣಿನ ಸಿಪ್ಪೆ ಬಿಸಾಡಿ ಹೋಗಿದ್ದಾರೆ ಎತ್ತಿಕೊಡು ಆಕಳಿಗೆ ಮೇಯುತ್ತಿದೆ ಪ್ಲಾಸ್ಟಿಕ್ ತಿಪ್ಪೆ ಸುಮ್ಮನಿರಕ್ಕ ನಿನಗೇನು ಗೊತ್ತು ಇದು ನಗರ, ಇಲ್ಲೇ ಬೇರೆ ಥರ, ನಡಿ ನಿನಗೆ ಕೊಡಿಸುತ್ತೇನೆ ನೀನು ತಿಂದಿಲ್ಲ ಯಾವತ್ತೂ ಗೋಬಿ ಮಂಚೂರಿ ಉಪ್ಪುಸಿಹಿಕಾರ ಘಮಘಮ  ಪರಿಮಳದ ಗಾಳಿ ಉಸಿರಾಡಿದಾಗ ಮಣ್ಣಿನ ಧೂಳಿ ಹೊಕ್ಕವು ಎದೆಯೊಳಗೆ ಜೊತೆಗೆ ವಾಹನಗಳ ಹೊಗೆ ಬಂತು ಗಾಳಿಯಲ್ಲಿ ತೇಲಿ ಎಷ್ಟಂತೆ ಕೇಳು ಮೊದಲು ಎಂದು ಅಜ್ಜಿ ಪಿಸುಗುಟ್ಟಿದಳು ತಂದಿದೀನಿ ಡಬ್ಬಿಯಲ್ಲಿ ಉಪ್ಪಿಟ್ಟು ಹಾಕಿದ್ದೆ ಕಣೋ ಬೇಕಾದಷ್ಟು ನಮ್ಮ ಹೊಲದ ಅವರೆಕಾಳು ಅಮ್ಮಾ, ಸುಮ್ಮನಿರು ದಯವಿಟ್ಟು ದಿನಾ ಇದ್ದಿದ್ದೇ ನಿನ್ನ ಉಪ್ಪಿಟ್ಟು ತಿನ್ನೋಣ ಏನಾದರೂ ಬೇರೆ ಇವತ್ತು ಇಲ್ಲೂ ಉಪ್ಪಿಟ್ಟು ತಿಂದರೇನು ಬಂತು ಎಷ್ಟಿದ್ದೀತು ಬೆಲೆ ಐವತ್ತು ಅರವತ್ತು ವಿಪರೀತ ಜನ ಗಲ್ಲಾಪೆಟ್ಟಿಗೆ ಹತ್ತಿರ ಪ್ರಶ್ನೆಗೆ ಯಾರೂ ಕೊಡವಲ್ಲರು ಉತ್ತರ ನೆಲದ ಮೇಲೇ ಕೂತಳು ಅಜ್ಜಿ ಘಮಘಮಾ ಉಪ್ಪೇರಿ, ಬಟಾಟೆ ಬಜ್ಜಿ ಎಲ್ಲಾ ನೋಡುತ್ತಾ ಏನೇನು ಥರಥರ ಬಂತು ಮಗನ ಸರತಿ ಕಾದು ಕಾದು ಕಣ್ಣಿನಲ್ಲೇ ಕೇಳಿ ಏನ