ಪೋಸ್ಟ್‌ಗಳು

Couplets ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಮೀರ್ ಖುಸ್ರೋನ ಒಗಟುಗಳು

ಇಮೇಜ್
ಮೂಲ - ಅಮೀರ್ ಖುಸ್ರೋ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ रात समय वह मेरे आवे। भोर भये वह घर उठि जावे॥ यह अचरज है सबसे न्यारा। ऐ सखि साजन? ना सखि तारा॥ ಸರಿರಾತ್ರಿ ನನ್ನ ಮನೆಗೆ ಬರುತಾರೆ | ಬೆಳಗಾಗ ಮೇಲೆದ್ದು ಹೊರಟುಬಿಡುತಾರೆ || ಜಾಣರಾದವರು ಈ ರಹಸ್ಯ ಬಿಡಿಸುತಾರೆ  | ಗೆಳೆಯನೇನೇ ಸಖೀ? ಅಲ್ಲವೇ, ತಾರೆ|| नंगे पाँव फिरन नहिं देत। पाँव से मिट्टी लगन नहिं देत॥ पाँव का चूमा लेत निपूता। ऐ सखि साजन? ना सखि जूता॥ ಬರಿಗಾಲಿನಲ್ಲಿ ನಡೆಯಲು ಬಿಡುವುದಿಲ್ಲ | ಮಣ್ಣು ಕಾಲಿಗೆ ಹತ್ತಲು ಬಿಡುವುದಿಲ್ಲ || ಮಾತುಮಾತಿಗೆ ಪಾದ ಚುಂಬಿಸುವ ಮತ್ತು | ಗೆಳೆಯನೇನೇ ಸಖೀ? ಅಲ್ಲ, ಮುಳ್ಳೊತ್ತು || वह आवे तब शादी होय। उस बिन दूजा और न कोय॥ मीठे लागें वाके बोल। ऐ सखि साजन? ना सखि ढोल॥ ಬರುವನು   ಅವನು ಮದುವೆಯ ದಿವಸ |  ಅಂದಿಲ್ಲ  ಬೇರಾರಿಗೂ ಒಳಗೆ  ಪ್ರವೇಶ || ಅವನು ನುಡಿದರೆ ಎಷ್ಟು ಸುಖಿಸುವನು ಕೇಳುಗ | ಗೆಳೆಯನೇನೇ ಸಖಿ? ಅಲ್ಲವೇ, ಓಲಗ || जब माँगू तब जल भरि लावे। मेरे मन की तपन बुझावे॥ मन का भारी तन का छोटा। ऐ सखि साजन? ना सखि लोटा॥ ಕೇಳಿದಾಗ ನೀರು ತುಂಬಿ ತರುತಾರೆ | ಮನದ ಬೇಗೆಗೆ ತಂಪೆರೆಯುತಾರೆ || ಮನಸು ದೊಡ್ಡದು, ಅವರ ಮೂರ್ತಿಯಷ್ಟೆ ಚಿಕ್ಕದು  | ಗೆಳೆಯನೇನೇ ಸ...

ಹತ್ತು ಶೇರ್ ಗಳು

ಇಮೇಜ್
ಅನುವಾದ - ಸಿ. ಪಿ. ರವಿಕುಮಾರ್  ಬಾಗಿ ನಮಿಸಲು ಬೇಕಾದಷ್ಟಿವೆ ನೆಲಗಟ್ಟು, ತಬ್ಬಿಕೊಳ್ಳುವ ಬಾಗಿಲುಗಳು ಎಲ್ಲೂ ಕಾಣವು ಸುತ್ತಲೂ ಕಾಣುತ್ತಾರೆ ಸಾವಿರಾರು ದೇವರು, ಮಾನವರು ಮಾತ್ರ ಕಾಣರಲ್ಲ ಎಲ್ಲೂ -- ಖಾಲಿದ್ ಹಸನ್ ಕಾದಿರಿ ಮನುಷ್ಯ ಮನುಷ್ಯನನ್ನು ಸಂಧಿಸುತ್ತಾನೆ ಹೃದಯಗಳು ಸಂಧಿಸುವುದು ಮಾತ್ರ ಕಡಿಮೆ -- ಜಿಗರ್ ಮುರಾದಾಬಾದಿ ಮನುಷ್ಯತ್ವವೆಂಬುದು ಬೇರೆ, ಕಲಿಕೆ ಎಂಬುದೇ ಬೇರೆ ಗಿಳಿಗೆ ಎಷ್ಟೇ ಪಾಠ ಹೇಳಿದರೂ ಒರಟು ಪ್ರಾಣಿಯಾಗಿಯೇ ಉಳಿಯಿತು -- ಶೇಖ್ ಇಬ್ರಾಹಿಮ್ ಜೌಕ್ ಯಾರಿಂದ ಮನುಷ್ಯನಿಗೆ ಆಗುವುದೋ ತೊಂದರೆಯೇ ಸದಾ ಅಂಥವರು ತಾವೇ ದೇವಮಾನವರೆಂದು ಮಾಡುತ್ತಿದ್ದಾರೆ ವಾದ -- ಅಬ್ದುಲ್ ಹಮೀದ್ ಅದಮ್ ಭೂಮಿ ಸುತ್ತಿಬಳಸಿ ಸ್ವಸ್ಥಾನಕ್ಕೆ ಬರುತ್ತದೆಯಾದರೂ ಬಾರವು ಏತಕ್ಕೆ ಕಳೆದ ಸಮಯಗಳು ಮರಳಿ ವಾಪಸ್ಸು? -- ಇಬರತ್ ಮಛಲಿಶಹರಿ ತಮ್ಮದೇ ಸಮಸ್ಯೆಗಳನ್ನು ಕುರಿತು ಏನೂ ಮಾಡಲಾಗದವರು ಮಾತಾಡುವರು ತಾವೇ ಎಂಬಂತೆ ದೇವರು -- ಇಫ್ತಿಕಾರ್ ಆರಿಫ್ ಕೆಲವರು ಹಿಂದೂ ಕೆಲವರು ಮುಸಲ್ಮಾನರು ಮತ್ತು ಕೆಲವರು ಕ್ರೈಸ್ತರು ಮನುಷ್ಯರಾಗುವುದಿಲ್ಲ ಎಂದು ಭಾಷೆ ತೊಟ್ಟಂತಿದೆ ಎಲ್ಲರೂ -- ನಿದಾ ಫಾಜಲಿ ಗುಂಪು ಎಂಬುದು ಒಂಟಿತನಗಳ ಸಮ್ಮಿಲನ ಪ್ರತ್ಯೇಕವಾಗಿದ್ದಾರೆ ಜನರಿಂದ ಜನ -- ಸಬಾ ಅಕ್ಬರಾಬಾದಿ ಅವನಿಗೆ ಶತ್ರುಗಳು ಬಹಳ, ಮನುಷ್ಯ ಒಳ್ಳೆಯವನೇ ಇರಬೇಕ...

ತುಲಸೀದಾಸರ ದ್ವಿಪದಿಗಳು - 2

ಇಮೇಜ್
ತುಲಸೀದಾಸರ ದ್ವಿಪದಿಗಳು - 2  ಸಿ. ಪಿ. ರವಿಕುಮಾರ್  ಭಯ-ಲೋಭಗಳಿಂದ ಸವಿಮಾತಾಡಿದರೆ ವೈದ್ಯನೂ ಮಂತ್ರಿಯೂ ಗುರುವೂ   ನಿಶ್ಚಿತವಾಗಿ ರಾಜ್ಯವೂ ದೇಹ ಧರ್ಮಗಳು ಬೇಗ ನಾಶವಾಗುವುವು ಇದರ ಅರ್ಥವನ್ನು ಇನ್ನೂ ಬಿಡಿಸಿ ಹೇಳಬೇಕೆಂದರೆ ಹೀಗೆ : ಯಾವಾಗ ರಾಜ್ಯದ ಮಂತ್ರಿಯು ಭಯ ಅಥವಾ ಲೋಭದಿಂದ ರಾಜನಿಗೆ ನಿಜಾಂಶದ ಬದಲು ರಾಜ್ಯದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಾನೋ ಆಗ ರಾಜ್ಯ ನಾಶದ ದಾರಿ ಹಿಡಿಯುತ್ತದೆ. ಯಾವಾಗ ರೋಗಿಗೆ ವೈದ್ಯನು ಲೋಭದಿಂದ ನಿಜವಾದ ಕಾಯಿಲೆಯನ್ನು ತಿಳಿಸದೆ ಎಲ್ಲವೂ ಸೌಖ್ಯವೆಂದು ಸವಿಮಾತಾಡುತ್ತಾನೋ ಆಗ ರೋಗಿಯ ದೇಹ ನಾಶವಾಗತೊಡಗುತ್ತದೆ. ಯಾವಾಗ ಗುರುವಾದವನು ಶಿಷ್ಯರ ತಪ್ಪುಗಳನ್ನು ತಿದ್ದದೇ ಅವರನ್ನು ಸ್ವಾರ್ಥಕ್ಕಾಗಿ ಹೊಗಳುತ್ತಾನೋ, ಆಗ ಧರ್ಮವು ನಾಶವಾಗುತ್ತದೆ. ತುಲಸಿ, ಹೊಂದಬಯಸುವೆಯಾ ಬೆಳಕು, ಹೊರಗಲ್ಲದೆ ಒಳಗೂ?   ನಾಲಗೆಯ ಹೊಸ್ತಿಲ ಮೇಲೆ ರಾಮನಾಮದ ಮಣಿದೀಪ ಬೆಳಗು ತಾತ್ಪರ್ಯ: ನಾಲಗೆಯ ಮೇಲೆ ರಾಮನಾಮವಿದ್ದರೆ ಹೊಸ್ತಿಲ ಮೇಲೆ ದೀಪವಿಟ್ಟಂತೆ (ಮನದ) ಒಳಗನ್ನೂ ಹೊರಗನ್ನೂ ಬೆಳಗುತ್ತದೆ. ರಾಮನ ಹೆಸರನ್ನು ಕೇಳಿದವರಿಗೂ ಹೇಳಿದವರಿಗೂ ಬೆಳಕಾಗುತ್ತದೆ. ಯಾರು ಪಡೆಯುತ್ತಾರೋ ಕೀರ್ತಿ ಪರರ ಕೀರ್ತಿಗೆ ಮಾಡಿ ಘಾಸಿ ಅವರ ಮುಖಕ್ಕೆ ಹತ್ತುತ್ತದೆ ಎಷ್ಟು ತೊಳೆದರೂ ಹೋಗದ ಮಸಿ ತಾತ್ಪರ್ಯ: ಸ್ವಂತ ಸಾಧಿಸಲು ಸಾಧ್ಯವಾಗದವನು ಇನ್ನೊಬ್ಬನ ಕೀರ್ತಿಗೆ ಧಕ್ಕೆ ತರುವ ಮೂಲಕ ಪಡ...