ಪೋಸ್ಟ್‌ಗಳು

Kannada Language ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕನ್ನಡ ಕಾರ್ಟೂನ್ ಲೋಕ

ಇಮೇಜ್
 

ಥಟ್ ಅಂತ ಒಂದು ಕ್ವಿಜ್ ಕಾರ್ಯಕ್ರಮ!

- ಸಿ ಪಿ ರವಿಕುಮಾರ್ ಡಾ. ನಾ. ಸೋಮೇಶ್ವರ ಅವರನ್ನು ನಮ್ಮ ಕಚೇರಿಯಲ್ಲಿ ನಡೆಸಿದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದಾಗ ಅವರು ಯಾವ ಶರತ್ತುಗಳೂ ಇಲ್ಲದೆ ಸಂತೋಷವಾಗಿ ಒಪ್ಪಿಗೆ ಕೊಟ್ಟರು.  "ಥಟ್ ಅಂತ ಹೇಳಿ" ಕಾರ್ಯಕ್ರಮವನ್ನು 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಡಾ. ಸೋಮೇಶ್ವರ ಅವರು ಈಗಾಗಲೇ ಲಿಮ್ಕಾ ದಾಖಲೆಯಲ್ಲಿ ಸ್ಥಾನ ಕಂಡುಕೊಂಡಿದ್ದಾರೆ. ಇದುವರೆಗೂ "ಥಟ್ ಅಂತ ಹೇಳಿ" ಕಾರ್ಯಕ್ರಮದ 2902 ಕಂತುಗಳು ಪ್ರಸಾರವಾಗಿವೆ ಎಂದು ಅವರೇ ನಮಗೆ ತಿಳಿಸಿದರು. ವಿಕಿಪೀಡಿಯಾದಲ್ಲಿರುವ  ಮಾಹಿತಿ ಹಳತಾಗಿದೆ! ಈ ಕಾರ್ಯಕ್ರಮ 3000 ಮುಟ್ಟಿದಾಗ ಗಿನ್ನೆಸ್ ದಾಖಲೆಯನ್ನೇ ಮುರಿಯುತ್ತದೆ. ಡಾ. ಸೋಮೇಶ್ವರ ಅವರಿಂದ ನಾವು ಭಾಷಣವನ್ನು ಅಪೇಕ್ಷಿಸಿದ್ದು ತಪ್ಪು! ಅವರು ಪ್ರಶ್ನೆಗಳನ್ನು ಕೇಳಲು ಸಿದ್ಧರಾಗಿ ಬಂದಿದ್ದರು - ತಾವೇ ಸಂಪಾದಿಸಿದ ಪುಸ್ತಕಮಾಲೆಯಿಂದ ಕೆಲವು ಕನ್ನಡ ಪುಸ್ತಕಗಳನ್ನು  ಬಹುಮಾನವಾಗಿ ಕೊಡಲು ಕೈಯಲ್ಲಿ ಹಿಡಿದೇ ಬಂದರು. ನಮ್ಮ ಕಚೇರಿಯ ಅಂಗಳದಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದುದನ್ನು ಕಂಡು ಸಂತೋಷ ಪಟ್ಟರು. ಕೆಲವು ಹೊಸ ಪುಸ್ತಕಗಳನ್ನು ತಿರುವಿ ಹಾಕಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.  ಅವರು ಅಂದು ಮೈಕ್ ಮುಂದೆ ನಿಂತು ಮಾತಾಡಿದ್ದು ಸುಮಾರು 40 ನಿಮಿಷ. ಅಷ್ಟರಲ್ಲಿಯೇ ಅದೆಷ್ಟು ಹೊಸ ಮಾಹಿತಿಗಳನ್ನು ನಮ್ಮ ಜೊತೆ ಹಂಚಿಕೊಂಡರು! ಬೆಂಗಳೂ...

ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್ ತಾಣ - ಒಂದು ವಿಮರ್ಶಾತ್ಮಕ ನೋಟ

ಒಂದು ತಿಂಗಳ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ವೆಬ್ ತಾಣವನ್ನು ಒಂದಷ್ಟು ಸೂಕ್ಷ್ಮವಾಗಿ ಪರಿಶೀಲಿಸಿ ಒಂದು ವಿಮರ್ಶೆ ಬರೆದು ಅದರಲ್ಲಿರುವ ಲೋಪಗಳನ್ನು ಪಟ್ಟಿ ಮಾಡಿ ಪತ್ರ ಬರೆದೆ. ಒಂದು ತಿಂಗಳಿನ ನಂತರವೂ ಅಕಾಡೆಮಿಯಿಂದ ಉತ್ತರ ಬಂದಿಲ್ಲ. ವೆಬ್ ತಾಣ ಇನ್ನೂ ಹಾಗೇ ಇದೆ.  ನನ್ನ ಪತ್ರದ  ಉದ್ದೇಶ ಟೀಕೆ ಮಾಡುವುದಲ್ಲ.   ಆನ್ಲೈನ್  ಪ್ರಕಾಶನಕ್ಕೂ ಪುಸ್ತಕ ಮುದ್ರಣಕ್ಕೂ ಒಂದು ಮುಖ್ಯ ವ್ಯತ್ಯಾಸವೆಂದರೆ ಆನ್ಲೈನ್  ಕಡತಗಳನ್ನು ಯಾವಾಗ ಬೇಕಾದರೂ ಸುಲಭವಾಗಿ ತಿದ್ದಬಹುದು.  ಹೀಗಾಗಿ ಲೋಪದೋಷಗಳನ್ನು ಸುಲಭವಾಗಿ ಸರಿಪಡಿಸಿಕೊಳ್ಳಬಹುದು, ದೈನಂದಿನ ಆಗುಹೋಗುಗಳಿಗೆ ಬೇಗ ಪ್ರತಿಕ್ರಯಿಸಬಹುದು.  ಇದಕ್ಕಾಗಿ ಅವರು ಒಂದು ಪ್ರತ್ಯೇಕ ತಂಡವನ್ನು ಮೀಸಲಾಗಿಡಬೇಕು. ಕರ್ನಾಟಕ ಸಾಹಿತ್ಯ ಅಕಾಡೆಮಿಯಾಗಲಿ ಕನ್ನಡ ಸಾಹಿತ್ಯ ಪರಿಷತ್ತಾಗಲಿ ತಮ್ಮ ವೆಬ್ ತಾಣವನ್ನು ಈ ದೃಷ್ಟಿಯಿಂದ ನೋಡುತ್ತಿಲ್ಲ. ಪುಸ್ತಕದ ಒಂದು ಮುದ್ರಣವಾದ ನಂತರ  ಹೇಗೆ ಮರುಮುದ್ರಣವಾಗುವವರೆಗೆ ಅದರಲ್ಲಿ ತಿದ್ದುಪಡಿ ಮಾಡುವುದಿಲ್ಲವೋ ಈ ಸಂಸ್ಥೆಗಳು ತಮ್ಮ ವೆಬ್ ತಾಣಗಳನ್ನೂ ಹಾಗೇ ಪರಿಗಣಿಸುತ್ತಿವೆ. ನನ್ನ ವಿಮರ್ಶೆಯ ಉದ್ದೇಶ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸಲಹೆ ನೀಡುವುದೇ ಆಗಿದೆ. ನನ್ನ ಪತ್ರವನ್ನು ಅವರು ತಿಂಗಳಾದರೂ ಪ್ರತಿಕ್ರಯಿಸಿಲ್ಲ. ಹೀಗಾಗಿ ನನ್ನ ವಿಮರ್ಶೆಯನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದೇನೆ.    ಡಾ. ಸಿ...

ಅಯ್ಯೋ ವ್ಯಾಕರಣ ಕ್ಯಾಕರನಾ?

ಇಮೇಜ್
(ಒಂದು ಹರಟೆ) ಸಿ ಪಿ ರವಿಕುಮಾರ್  ಈಚೆಗೆ ಮಿತ್ರರೊಬ್ಬರು ಹಂಚಿಕೊಂಡ ಫೇಸ್ ಬುಕ್ ಚಿತ್ರಪಟದಲ್ಲಿದ್ದ ಬ್ಯಾನರಿನಲ್ಲಿ ಅರಸೀಕೆರೆ ಅನ್ನುವುದನ್ನು ARSIKERE ಅಂತ ಬರೆದಿದ್ದರು. ಅರಸಿಯ+ಕೆರೆ ಎನ್ನುವ ಪ್ರತ್ಯಯವುಳ್ಳ ಸಮಾಸಪದ ಅರಸೀಕೆರೆ . ARASIKERE ಎಂದು ಬರೆಯುವುದೇ ಸರಿ ಎಂದು ನಾನು ಕಾಮೆಂಟ್ ಹಾಕೋಣವೇ ಎಂದು ಯೋಚಿಸಿದೆ.  ಈನಡುವೆ "ಅಯ್ಯೋ ವ್ಯಾಕರಣ ಕ್ಯಾಕರನಾ?" ಎನ್ನುವ ಹಾಗೆ ಭಾಷೆಯನ್ನು ಬಳಸುತ್ತಿರುವವರಿಗೆ ನಾನು ಕಾಗುಣಿತ ದೋಷಗಳ ಬಗ್ಗೆ ಹೇಳಿದರೆ ಖಂಡಿತ ನನಗೆ ಸಾಕಷ್ಟು ಡಿಸ್ಲೈಕ್ ಬರುತ್ತವೆ ಎಂದು ಸುಮ್ಮನಾದೆ. ಅರಸೀಕೆರೆಯನ್ನು ಅರಸಿಕೆರೆ ಎಂದು ಬರೆಯುವುದು ಕೂಡಾ ಸರಿಯಲ್ಲವೆಂದು ನನ್ನ ಅಭಿಪ್ರಾಯ - ಹಾಗೆ ಬರೆದಾಗ ಜನ ಅರ+ಸಿಕೆರೆ ಎನ್ನಲು ಪ್ರಾರಂಭಿಸುವುದು ಖಂಡಿತ! ಅಂದಹಾಗೆ ಅರಸೀಕೆರೆಯಲ್ಲಿ ಕೆರೆ ಇದೆಯೇ, ಆ ಕೆರೆ ಯಾವ ಅರಸಿಯದು, ಇವೆಲ್ಲಾ ತಿಳಿದುಕೊಳ್ಳಲು ಯೋಗ್ಯವಾದ ವಿಷಯಗಳು! ಗೊತ್ತಿದ್ದರೆ ತಿಳಿಸಿ. ಬೆಂಗಳೂರಿನಲ್ಲೂ ಅರಕೆರೆ ಇದೆ. ಎಷ್ಟೋ ಜನ ಕನ್ನಡಿಗರಿಗೇ ಅರಕೆರೆ ಎಂದರೆ ಅರಸನ+ಕೆರೆ ಎನ್ನುವುದು ಗೊತ್ತಿಲ್ಲ. ಹಿಂದೆ ಅರಸ-ಅರಸಿಯರು ತಮಗಾಗಿ ಕೆರೆಗಳನ್ನು ಕಟ್ಟಿಸಿಕೊಂಡು ಸಾಮಾನ್ಯರಿಗೆ ಬಾವಿಗಳನ್ನು ತೋಡುತ್ತಿದ್ದರು ಎಂದು ಕಾಣುತ್ತದೆ. "ಕೆರೆಯಂ ಕಟ್ಟಿಸು ಬಾವಿಯಂ ಸವೆಸು" ಎನ್ನುವಾಗ "ಸ್ವಂತಕ್ಕಾಗಿ ಕೆರೆ ಕಟ್ಟಿಸಿಕೋ, ಜನರಿಗಾಗಿ ಬಾವಿಯನ್ನು ಸವೆಸು" ಎಂಬ ನ...

ವಚನ ನ ಜಾಯೇ

ಇಮೇಜ್
ಸಿ ಪಿ ರವಿಕುಮಾರ್   ನಾನು ಸಭಾಗೃಹದ ಸುತ್ತ ಕಣ್ಣು ಹಾಯಿಸಿದೆ. ಸೇರಿದ ಸುಮಾರು ಐವತ್ತು ಮಂದಿ ಜನರಲ್ಲಿ ಬಹುತೇಕರು ವಯಸ್ಸಾದವರೇ. ಇದನ್ನೇ ಮುಂದೆ ಭಾಷಣಕಾರರು ಕೂಡಾ ಬೊಟ್ಟು ಮಾಡಿ ತೋರಿಸಿದರು. ಸಂದರ್ಭ: ಸಂವಾದ ಟ್ರಸ್ಟ್ ನಡೆಸಿದ ಕಾರ್ಯಕ್ರಮದಲ್ಲಿ ಪ್ರೊ| ಓ.ಎಲ್. ನಾಗಭೂಷಣಸ್ವಾಮಿ ಅವರ ಉಪನ್ಯಾಸ. ವಿಷಯ: ಇಂದು ವಚನಗಳು ಪ್ರಸ್ತುತವೇ? ಕಾರ್ಯಕ್ರಮದ ಕೊನೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳಲ್ಲಿ ಬಳಕೆಯಾದ ಕನ್ನಡ ಪದಗಳ ನಿಘಂಟನ್ನು ತಯಾರಿಸಿ ಅವುಗಳಿಗೆ ವ್ಯಾಖ್ಯಾನ ಬರೆಯುವ ಕೆಲಸ ಆಗಬೇಕೆಂಬ ಮಾತು ಬಂತು. ಅದನ್ನು ಯಾರು ಮಾಡಬೇಕೆಂಬ ಜಿಜ್ಞಾಸೆಗೆ ಭಾಷಣಕಾರರು ಉತ್ತರಿಸುತ್ತಾ ವಿಷಾದದಿಂದ "ಈ ಕೆಲಸವನ್ನು ಯಾರೂ ಮಾಡಲಾರರು" ಎಂಬ ಅನುಮಾನ ವ್ಯಕ್ತಪಡಿಸಿದರು.  ಕಾರ್ಯಕ್ರಮಕ್ಕೆ ಬಂದವರೆಲ್ಲಾ ಐವತ್ತರ ಗಡಿ ದಾಟಿದವರೆಂಬುದನ್ನು ಆಗಲೇ ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದು. ಇದು ಬಹುತೇಕ ಇಂದಿನ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ನಾವು ನೋಡಬಹುದಾದ ವಿಷಯವೇ. ವಚನಗಳನ್ನು ಆನ್ ಲೈನ್ ಸಂಗ್ರಹಿಸಿ ಅವುಗಳನ್ನು ಹುಡುಕುವ ಸಾಮರ್ಥ್ಯವನ್ನು ಇಂದು ಸೃಷ್ಟಿಸಲಾಗಿದೆ. ಇದರಿಂದ ಸಂಶೋಧಕರಿಗೆ ಉಪಯೋಗವಾಗಿದೆಯೇ ಎಂಬುದನ್ನು  ಪ್ರೊ| ನಾಗಭೂಷಣಸ್ವಾಮಿ ಪ್ರಶ್ನಿಸುತ್ತಾ "ಒಂದು ಕಾಲದಲ್ಲಿ ವಚನಗಳು ಸಿಕ್ಕುವುದೇ ಕಷ್ಟವಾಗಿತ್ತು. ಒಂದು ಪದವನ್ನು 25,000 ವಚನಗಳಲ್ಲಿ ಹುಡುಕುವುದು ದುಸ್ಸಾಧ್ಯವಾಗಿತ್ತು. ಇಂದು ಅದನ್ನು ಸೆಕೆಂಡುಗಳಲ್ಲಿ ಮಾಡ...

ಕನ್ನಡ ಡಿಂಡಿಮ

ಇಮೇಜ್
ಬೆಂಗಳೂರಿನಲ್ಲಿ ನಡೆದ ಕೆಲವು ಘಟನೆಗಳು. ಘಟನೆ ಒಂದು. ಸ್ಥಳ - ಕ್ಷೌರದ ಅಂಗಡಿ. ಈಗ ಅದನ್ನು ಯಾರೂ ಈ ಹೆಸರಿನಿಂದ ಕರೆಯುವುದಿಲ್ಲ. "ಸಲೂನ್", "ಹೇರ್ ಡ್ರೆಸಿಂಗ್ ಸಲೂನ್", ಇತ್ಯಾದಿ ಹೆಸರುಗಳಿಂದ ಕರೆಯುವುದು ರೂಢಿಯಾಗಿದೆ. ಮಾತಾಡುವಾಗ ಕೆಲವರು "ಬಾರ್ಬರ್ ಶಾಪ್" ಅಂತಲೂ ಕರೆಯಬಹುದು.  ನಾನು ನನ್ನ ತಲೆಯನ್ನು ಬಾರ್ಬರನಿಗೆ ಒಪ್ಪಿಸಿ ಕುಳಿತಿದ್ದೇನೆ.  ಗಿರಾಕಿಗಳು ಕಾಯಲು ಕೂಡುವ ಬೆಂಚಿನ ಮೇಲೆ ಒಬ್ಬ ಪುಟ್ಟ ಹುಡುಗ ತಾಯಿಯ ಜೊತೆ ಕುಳಿತಿದ್ದಾನೆ. ಪುಟ್ಟ ಹುಡುಗನ ತಮ್ಮ ತಾಯಿಯ ತೊಡೆಯ ಮೇಲೆ ಕುಳಿತಿದ್ದಾನೆ. ಬೆಂಚ್ ಮೇಲೆ ಕುಳಿತ ಹುಡುಗ ಅರಳು ಹುರಿದ ಹಾಗೆ ತಮ್ಮ ಮತ್ತು ತಾಯಿಯ ಜೊತೆ ಕನ್ನಡದಲ್ಲಿ ಹರಟೆ ಹೊಡೆಯುತ್ತಿದ್ದಾನೆ. ಅವನ ಭಾಷೆ ಕೇಳಲು ನಿಜಕ್ಕೂ ಚೆನ್ನಾಗಿದೆ.  ಅವನು ಹೇಳಿದ್ದಕ್ಕೆಲ್ಲಾ ಅವನ ತಾಯಿ ಮುರುಕಲು ಇಂಗ್ಲಿಷ್ ನಲ್ಲಿ ಉತ್ತರ ಕೊಡುತ್ತಿದ್ದಾಳೆ. ಈಕೆ ಬಾಬ್ ಕಟ್ ಮಾಡಿಸಿಕೊಂಡಿರುವುದನ್ನು ನಾನು ಕನ್ನಡಿಯಲ್ಲಿ ಗಮನಿಸುತ್ತೇನೆ. ಘಟನೆ ಎರಡು. ಒಂದು ಕಾಲೇಜಿನಲ್ಲಿ ನನ್ನನ್ನು ಮೀಟಿಂಗ್ ಗಾಗಿ ಕರೆದಿದ್ದಾರೆ. ಗೇಟ್ ನಲ್ಲಿ ಆರಕ್ಷಕ ಸಿಪಾಯಿ (ಸೆಕ್ಯೂರಿಟಿ ಗಾರ್ಡ್) ನಮ್ಮ ಕಾರನ್ನು ಒಂದು ಕ್ಷಣ ನಿಲ್ಲಿಸಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾನೆ. ನನ್ನನ್ನು ಕರೆದುಕೊಂಡು ಹೋದ ಡ್ರೈವರ್ ಗೆ ಇದು ಗೊತ್ತಿದೆ - ಅವನು ಅದನ್ನು ತಿಳಿಸುತ್ತಾನೆ. (ಟ್ಯಾಕ್ಸಿ ಡ್ರೈವರ್ ಕನ್ನಡ ಬಲ್ಲವನು ...

ಕನ್ನಡ ಪಾಠಗಳೇಕೆ ನೀರಸವಾಗಿರುತ್ತವೆ?

ಇಮೇಜ್
ಡಾ. ಸಿ ಪಿ ರವಿಕುಮಾರ್  ನಾನು ಹೈಸ್ಕೂಲಿನಲ್ಲಿ ಮತ್ತು ಪ್ರಿ-ಯೂನಿವರ್ಸಿಟಿಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿತೆ. ನಮಗೆ ಹೈಸ್ಕೂಲಿನ ಕನ್ನಡ ಪಠ್ಯಗಳಲ್ಲಿ ಡೀಟೇಲ್ಡ್ ಮತ್ತು ನಾನ್  ಡೀಟೇಲ್ಡ್ ಎಂಬ ಪ್ರಭೇದಗಳಿದ್ದವು. ಅವುಗಳನ್ನು ಹಾಗೆ ಯಾಕೆ ಕರೆಯುತ್ತಿದ್ದರೋ!  ಡೀಟೇಲ್ಡ್ ಪಠ್ಯದಲ್ಲಿ ಕನ್ನಡ ಕತೆಗಳು, ಲೇಖನಗಳು, ಜೀವನಚರಿತ್ರೆಯ ಆಯ್ದ ಭಾಗಗಳು, ಹಳಗನ್ನಡ ಕಾವ್ಯದಿಂದ ಆಯ್ದ ಭಾಗಗಳು, ಹೊಸಗನ್ನಡ  ಕವಿತೆಗಳು ಇವೆಲ್ಲಾ ಇರುತ್ತಿದ್ದವು. ನಾನ್ ಡೀಟೇಲ್ಡ್ ಕನ್ನಡ ಪಠ್ಯಕ್ಕೆ ಗೊತ್ತಾಗಿದ್ದ  ಒಂದು  ಪುಸ್ತಕವನ್ನು ಬಹುಮಟ್ಟಿಗೆ ವಿದ್ಯಾರ್ಥಿಯೇ ಓದಿಕೊಳ್ಳಬೇಕಾಗಿತ್ತು.  ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದು ಈ ಪುಸ್ತಕಗಳ ಉದ್ದೇಶ. ನಾನ್ ಡೀಟೇಲ್ಡ್ ಪಠ್ಯಗಳು  ನಾನು ಓದಿದ ನಾನ್ ಡೀಟೇಲ್ಡ್ ಪಠ್ಯಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದ್ದೇನೆ - ಒಂಬತ್ತನೇ ತರಗತಿ - ಗಾಂಧೀಜಿಯ ಜೀವನ ಚರಿತ್ರೆ  ಹತ್ತನೇ ತರಗತಿ - ಸರ್ ಎಂ ವಿ ಅವರ ಜೀವನ ಚರಿತ್ರೆ  ಪಿ ಯು ಸಿ - ೧ - "ನಾ ಕಂಡ ಜರ್ಮನಿ" ಎಂಬ ಪ್ರವಾಸಕಥನ ಮತ್ತು ಭಾಸ ಕಥಾ ಮಂಜರಿ ಪಿ ಯು ಸಿ - ೨ - ಟಾಲ್ಸ್ಟಾಯ್ ಅವರ ಜೀವನ ಚರಿತ್ರೆ ಮತ್ತು "ಬನದ ಮಕ್ಕಳು" ಕಾದಂಬರಿ  ಮೇಲೆ ಹೇಳಿದ ಪುಸ್ತಕಗಳಲ್ಲಿ ನಮಗೆ ಆಸಕ್ತಿ ಹುಟ್ಟಿಸಿದ ಪುಸ್ತಕ "ಬನದ ಮಕ್ಕಳು...

ಕನ್ನಡಂ ಕತ್ತರಿಯಲ್ತೆ!

ಸಿ ಪಿ ರವಿಕುಮಾರ್ " ಅ ಯ್ಯೋ ಕನ್ನಡಂ ಕತ್ತರಿಯಲ್ತೆ ಅಲ್ಲ! ಕನ್ನಡಂ ಕತ್ತುರಿಯಲ್ತೆ !" ಎಂದು ನಾನು ನಗುತ್ತಾ ಅರವಿಂದನನ್ನು ತಿದ್ದಿದ್ದು ನೆನಪಿದೆ. "ಕತ್ತುರಿ ಅಂದರೆ ಕಸ್ತೂರಿ. ಅಲ್ತೆ ಅಂದರೆ ಅಲ್ಲವೇ ಅನ್ನೋ ಅರ್ಥ. ಕನ್ನಡದ ಸುಗಂಧ ಕಸ್ತೂರಿಯ ಹಾಗೆ ಅಲ್ಲವೇ ಅಂತ ಮನೋರಮೆ  ಮುದ್ದಣನಿಗೆ ಚಾಲೆಂಜ್  ಮಾಡುತ್ತಿದ್ದಾಳೆ!" ದುರದೃಷ್ಟವಶಾತ್ ಕಸ್ತೂರಿ ಕನ್ನಡಕ್ಕೆ ಕತ್ತರಿ ಬಿದ್ದಿದೆ. ಅಥವಾ ಹಾಗೆಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಪೋಷಕರು ಯಾವ ಭಾಷೆಯನ್ನು ಮಕ್ಕಳಿಗೆ ಕಲಿಯಲು ಇಚ್ಛಿಸುತ್ತಾರೋ ಮಗು ಅದೇ ಭಾಷೆಯಲ್ಲಿ ಕಲಿಯಬೇಕು - ಯಾವುದೇ ಕಡ್ಡಾಯವನ್ನು ಹೇರುವ ಹಕ್ಕು ಸ್ಥಳೀಯ ಸರ್ಕಾರಕ್ಕೆ ಇಲ್ಲ. ನಮ್ಮ ನಾಡಿನ ಮೊದಲ ರಾಷ್ಟ್ರಕವಿ ಎಂಬ ಬಿರುದು ಪಡೆದಿದ್ದ ಮಂಜೇಶ್ವರ ಗೋವಿಂದ ಪೈ ಕನ್ನಡಿಗರನ್ನು ಕಸ್ತೂರಿ ಮೃಗಕ್ಕೆ ಹೋಲಿಸಿದರು. ಕಸ್ತೂರಿ ಮೃಗವು ತನ್ನ ಮೈಯಿಂದ ಹೊಮ್ಮುವ ಸುವಾಸನೆಯ ಗುಟ್ಟನ್ನು ತಿಳಿಯದೆ ಸುಗಂಧವು ಎಲ್ಲಿಂದ ಬರುತ್ತಿದೆ ಎಂದು ಹುಡುಕುತ್ತಲೇ ಇರುತ್ತದೆಯಂತೆ! "ಕನ್ನಡವೇ ಸತ್ಯ! ಕನ್ನಡವೇ ನಿತ್ಯ! ಅನ್ಯವೆನಲದೆ ಮಿಥ್ಯ!" ಎಂದ ಕುವೆಂಪು ಕನ್ನಡದ ಡಿಂಡಿಮವನ್ನು ಬಾರಿಸಲು ಕರೆ ಕೊಟ್ಟರು. ಅವರು ಈಗ ಇದ್ದಿದ್ದರೆ ಹೇಗೆ ಪ್ರತಿಕ್ರಿಯೆ ತೋರುತ್ತಿದ್ದರೋ! ಕನ್ನಡಿಗರ ನಿರಭಿಮಾನವನ್ನು ಕುರಿತು ಈಗಾಗಲೇ ಸಾಕಷ್ಟ...

ಆರತಿಗೊಂದು ಕನ್ನಡ, ಕೀರುತಿಗೊಂದು ಇಂಗ್ಲಿಷ್

ಇಮೇಜ್
ಡಾ. ಸಿ. ಪಿ. ರವಿಕುಮಾರ್ ನ ಮ್ಮ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಇಟ್ಟುಕೊಂಡಿದ್ದೆವು. ಈ ವರ್ಷ ಕನ್ನಡ ಚರ್ಚಾಸ್ಪರ್ಧೆ ಇಟ್ಟುಕೊಳ್ಳಿ ಎಂಬ ಸಲಹೆ ಕೊಟ್ಟವನು ನಾನೇ. ಕಾರ್ಯಕ್ರಮದ ಆಯೋಜಕರು ನನ್ನ ಮಾತನ್ನು ಕೇಳಿಕೊಂಡು ಪ್ರಕಟಣೆಯನ್ನು ಹೊರಡಿಸಿದರು. ಸ್ಪರ್ಧೆಯ ದಿವಸ ಹತ್ತಿರ ಬಂದಂತೆ ಮುಖ್ಯ ಆಯೋಜಕ ನನ್ನನ್ನು ಕಾಣಲು ಬಂದ. ಸ್ವಲ್ಪ ಗಾಬರಿಯಾಗಿದ್ದ. "ಸರ್, ಸ್ಪರ್ಧೆಗೆ ಕೇವಲ ಆರು ಜನ ಮಾತ್ರ ಹೆಸರು ಬರೆಸಿದ್ದಾರೆ!" ಎಂದ. "ಅದನ್ನು ಹಾಗೆ ಹೇಳಬೇಡಿ, ಮೂರ್ತಿ! ಸ್ಪರ್ಧೆಗೆ ಆರು ಜನ ಹೆಸರು ಬರೆಸಿಬಿಟ್ಟಿದ್ದಾರೆ ಸರ್! ಅಂತ ಉತ್ಸಾಹದಿಂದ ಹೇಳಿ. ಇದು ರೆಕಾರ್ಡ್ ಕಣ್ರೀ!" ಎಂದೆ. ಇಬ್ಬರೂ ನಕ್ಕೆವು. ಕಾಲೇಜುಗಳಲ್ಲಿ ಕನ್ನಡ ಪಾಠ ಹೇಳಿಕೊಡುವ ಪ್ರಾಧ್ಯಾಪಕರನ್ನು ತೀರ್ಪುಗಾರರನ್ನಾಗಿ ಕರೆಯಬೇಕು ಎಂಬ ತೀರ್ಮಾನವಾಯಿತು. ಸ್ಪರ್ಧೆಯ ದಿನವೂ ಬಂತು. "ಸರ್, ನನಗೆ ಯಾವ ಕನ್ನಡ ಪ್ರಾಧ್ಯಾಪಕರೂ ಗೊತ್ತಿಲ್ಲ; ನಾನು ಪ್ರಯತ್ನ ಪಟ್ಟ ಕಡೆ ಫಲ ಸಿಕ್ಕುವ ಭರವಸೆ ಇಲ್ಲ. ನೀವೇ ತೀರ್ಪುಗಾರರಾಗಬೇಕು" ಎಂದು ಮೂರ್ತಿ ತೀರ್ಪು ನುಡಿದ.  ಮಾಡಿದ್ದುಣ್ಣೋ ಎಂದು ಮನಸ್ಸಿನಲ್ಲೇ ಅಂದುಕೊಂಡು ಒಪ್ಪಿಕೊಂಡೆ. ಮತ್ತೊಬ್ಬ ತೀರ್ಪುಗಾರರನ್ನಾಗಿ ನನ್ನ ಸಹೋದ್ಯೋಗಿ ರಾವ್ ಅವರನ್ನು ಒಪ್ಪಿಸಿದೆ. ಸ್ಪರ್ಧೆಯ ವಿಷಯವನ್ನು ನಾನೇ ಕೊಟ್ಟಿದ್ದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ತಾನೇ! ಪ್ರಜಾವಾಣಿಯಲ...

ಪದಗಳ ಹುಟ್ಟು ಮತ್ತು ಗುಟ್ಟು (ಹರಟೆ)

ಇಮೇಜ್
ಸಿ. ಪಿ. ರವಿಕುಮಾರ್  ನನ್ನ ಫೇಸ್ ಬುಕ್ ಮಿತ್ರರಾದ ಭರತ್ ಕುಮಾರ್ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಕನ್ನಡ ಪದಗಳ ಮೂಲವನ್ನು ವಿಶ್ಲೇಷಿಸಿ ಬರೆಯಲು ಒಂದು ಫೇಸ್ ಬುಕ್ ಪುಟವನ್ನು ಹೊರತಂದಿದ್ದಾರೆ:  https://www.facebook.com/padaguttu ಇಂಗ್ಲಿಷ್ ಭಾಷೆಯಲ್ಲಿ ಪದಗಳ ಹುಟ್ಟು ಹೇಗಾಗಿದೆ ಎಂಬುದನ್ನು ಕುರಿತು ಹಲವು ಪುಸ್ತಕಗಳಿವೆ. ಜೀ ಆರ್ ಈ ಪರೀಕ್ಷೆಗೆ (ಗ್ರಾಜುಯೇಟ್ ರೆಕಾರ್ಡ್ ಎಕ್ಸಾಮಿನೇಷನ್)  ಕುಳಿತುಕೊಳ್ಳುವ ವಿದ್ಯಾರ್ಥಿಗಳೆಲ್ಲರೂ ಈ ಪುಸ್ತಕಗಳನ್ನು ಬಹಳ ಭಯ-ಭಕ್ತಿಗಳೊಂದಿಗೆ ಓದುವುದನ್ನು ಕಾಣಬಹುದು. ನಾನೂ ಓದಿದೆ! ಉತ್ತರ ಅಮೆರಿಕಾಗೆ ಉನ್ನತ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳು ಅನಂತರ ಈ ಮಟ್ಟದ ಇಂಗ್ಲಿಷ್ ಬಳಸುವುದು ಅಷ್ಟರಲ್ಲೇ ಇದೆ! ನನ್ನ ಕೆಲವು ವಿದ್ಯಾರ್ಥಿಗಳು ಜೀ ಆರ್ ಈ ಪರೀಕ್ಷೆಯಲ್ಲಿ ಅತ್ಯದ್ಭುತ ವಿಜಯ ಸಾಧಿಸಿದವರು ತಮ್ಮ ಪ್ರಾಜೆಕ್ಟ್ ರಿಪೋರ್ಟ್ ಬರೆಯುವಾಗ ಬರೀ ತಪ್ಪು ಬರೆದು ನನ್ನ ಕೆಂಪು ಮಸಿಯ ಲೇಖನಿಗೆ ಸಾಕಷ್ಟು ಕೆಲಸ ಕೊಟ್ಟಿದ್ದಾರೆ. ಅದು ಹಾಗಿರಲಿ! ನಾನು ಇಂಥ ಒಂದು ಪುಸ್ತಕ ಓದುವಾಗ ಜಗರ್ನಾಟ್   (juggernaut)      ಎಂಬ ಇಂಗ್ಲಿಷ್ ಪದದ ಮೂಲ ಜಗನ್ನಾಥ ಎಂಬುದನ್ನು ತಿಳಿದು ಉತ್ಸಾಹಿತನಾಗಿದ್ದು ನನಗೆ ನೆನಪಿದೆ.  ಒರಿಸ್ಸಾದಲ್ಲಿರುವ ಪುರಿ ಜಗನ್ನಾಥನ ತೇರನ್ನು ಎಳೆಯುವಾಗ ಅದನ್ನು ನಿಗ್ರಹಿಸುವುದ...