ಸಿ.ಪಿ. ರವಿಕುಮಾರ್ ನೆಲಮಂಗಲದ ರೈತ ಬಂದಿದ್ದಾನೆ ಬೆಂಗಳೂರಿಗೆ ಜಮೀನು ಕುರಿತಾದ ವ್ಯಾಜ್ಯ ಪರಿಹಾರಕ್ಕಾಗಿ ಬಂದಿದ್ದಾನೆ ವ್ಯಾಜ್ಯಗಳ ನಗರಿಗೆ ಅವನ ತಾಯಿಯೂ ಬಂದಿದ್ದಾಳೆ ಜೊತೆ ಎಂಬತ್ತು ದಾಟಿದರೂ ದಾಟಲು ಹೆದರುತ್ತಾಳೆ ಬೆಂಗಳೂರಿನ ರಸ್ತೆ ನೋಡೋ ಬಿದ್ದಿವೆ ಬಾಳೇಹಣ್ಣಿನ ಸಿಪ್ಪೆ ಬಿಸಾಡಿ ಹೋಗಿದ್ದಾರೆ ಎತ್ತಿಕೊಡು ಆಕಳಿಗೆ ಮೇಯುತ್ತಿದೆ ಪ್ಲಾಸ್ಟಿಕ್ ತಿಪ್ಪೆ ಸುಮ್ಮನಿರಕ್ಕ ನಿನಗೇನು ಗೊತ್ತು ಇದು ನಗರ, ಇಲ್ಲೇ ಬೇರೆ ಥರ, ನಡಿ ನಿನಗೆ ಕೊಡಿಸುತ್ತೇನೆ ನೀನು ತಿಂದಿಲ್ಲ ಯಾವತ್ತೂ ಗೋಬಿ ಮಂಚೂರಿ ಉಪ್ಪುಸಿಹಿಕಾರ ಘಮಘಮ ಪರಿಮಳದ ಗಾಳಿ ಉಸಿರಾಡಿದಾಗ ಮಣ್ಣಿನ ಧೂಳಿ ಹೊಕ್ಕವು ಎದೆಯೊಳಗೆ ಜೊತೆಗೆ ವಾಹನಗಳ ಹೊಗೆ ಬಂತು ಗಾಳಿಯಲ್ಲಿ ತೇಲಿ ಎಷ್ಟಂತೆ ಕೇಳು ಮೊದಲು ಎಂದು ಅಜ್ಜಿ ಪಿಸುಗುಟ್ಟಿದಳು ತಂದಿದೀನಿ ಡಬ್ಬಿಯಲ್ಲಿ ಉಪ್ಪಿಟ್ಟು ಹಾಕಿದ್ದೆ ಕಣೋ ಬೇಕಾದಷ್ಟು ನಮ್ಮ ಹೊಲದ ಅವರೆಕಾಳು ಅಮ್ಮಾ, ಸುಮ್ಮನಿರು ದಯವಿಟ್ಟು ದಿನಾ ಇದ್ದಿದ್ದೇ ನಿನ್ನ ಉಪ್ಪಿಟ್ಟು ತಿನ್ನೋಣ ಏನಾದರೂ ಬೇರೆ ಇವತ್ತು ಇಲ್ಲೂ ಉಪ್ಪಿಟ್ಟು ತಿಂದರೇನು ಬಂತು ಎಷ್ಟಿದ್ದೀತು ಬೆಲೆ ಐವತ್ತು ಅರವತ್ತು ವಿಪರೀತ ಜನ ಗಲ್ಲಾಪೆಟ್ಟಿಗೆ ಹತ್ತಿರ ಪ್ರಶ್ನೆಗೆ ಯಾರೂ ಕೊಡವಲ್ಲರು ಉತ್ತರ ನೆಲದ ಮೇಲೇ ಕೂತಳು ಅಜ್ಜಿ ಘಮಘಮಾ ಉಪ್ಪೇರಿ, ಬಟಾಟೆ ಬಜ್ಜಿ ಎಲ್ಲಾ ನೋಡುತ್ತಾ ಏನೇನು ಥರಥರ ಬಂತು ಮಗನ ಸರತಿ ಕಾದು ಕಾದು ಕಣ್ಣಿನಲ್ಲೇ ಕೇಳ...