ಪೋಸ್ಟ್‌ಗಳು

painting ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮೋನಾಲೀಸಾ ಸ್ವಗತ

ಇಮೇಜ್
  ಇದು ಪ್ರತಿದಿನದ ಹಾಡು ಇವರು ಬಂದು ನನ್ನನ್ನೇ ನೋಡುತ್ತಾ ನಿಲ್ಲುವುದು. ಏನಿದೆ ನನ್ನ ಮುಗುಳುನಗೆಯ ಹಿಂದೆ ಎಂದು ಚರ್ಚಿಸುವುದೇ ಒಂದು ಧಂಧೆ. ಲಿಯೋನಾರ್ಡೋ ಏನು ಅಡಗಿಸಿರಬಹುದು ಇವಳ ನಗೆಯಲ್ಲಿ ರಹಸ್ಯ ಸಂಕೇತ? ಎಂದು ಕೇಳುತ್ತಾನೆ  ದ ಡಾ ವಿಂಚಿ ಕೋಡ್ ಓದಿ  ಜಾಣನಾಗಿದ್ದಾನೆ ವಿಪರೀತ. ನನಗೆ ಸಾಕಾಗಿದೆ ಈ ನೂಕುನುಗ್ಗಲು ಮತ್ತು ಕಲಾವಿಮರ್ಶೆಯ ಮುಗ್ಗಲು. ಚಿತ್ರ ತೆಗೆಯುತ್ತದೆ ನನ್ನ ಕಣ್ಣಿನ ಹಿಂದೆ  ಅಡಗಿಸಿಟ್ಟ ಮೈಕ್ರೋಕ್ಯಾಮೆರಾ. ಎಲ್ಲ ಗಮನಿಸುತ್ತಾ ನಕ್ಕರೂ ನಗದಂತೆ  ನಗುವ ನನ್ನ ನಗೆ ಅಜರಾಮರ. ಚಿತ್ರ: ಜೆರಾರ್ಡ್ ಗ್ಲಕ್  ಚಿತಕವಿತೆ: ಸಿ. ಪಿ. ರವಿಕುಮಾರ್

ಕಲಾವಿದನ ಮಗಳು

ಇಮೇಜ್
ಮಗಳು ಕೇಳುತ್ತಾಳೆ ಚಿತ್ರಕಾರನನ್ನು ಅಪ್ಪಾ ರಂಗು ಮಾಡುವುದರಲ್ಲೇ ಹೋಯಿತು ಇಡೀ ಹಗಲು! ಯಾವ ಸೌಖ್ಯಕ್ಕಾಗಿ ನಿನ್ನ ಕಲೆ! ನಗದು ನಾಣ್ಯ ಎಂದೂ ಕಾಣೆ ನಿನ್ನ ಬಳಿ, ಸಿಗದು ಎಂದೂ ಪುರುಸೊತ್ತು ನಮಗಾಗಿ, ಬಿಗಿಹಿಡಿದ ಸೊಂಟದ ಪಟ್ಟಿ ಬಾಳ್ವೆ! ಬಿಗುಮಾನ ಅಷ್ಟೇ ಕಲಾವಿದರೆಂಬ ಹಣೆಪಟ್ಟಿ! ಸಿಗಲಿಲ್ಲ ಇದುವರೆಗೂ ಯಾವುದೇ ಸನ್ಮಾನ! ಜಗತ್ತು ಎಷ್ಟು ಮುಂದುವರೆದಿದೆ ಅಪ್ಪಾ ಈಗ ಸಿಕ್ಕುತ್ತದೆ ಚಿತ್ರ ಬರೆದುಕೊಡಲು ಆ್ಯಪ್ ಚಿಗರೆಯ ವೇಗದಲ್ಲಿ ಬಿಡಿಸಿಕೊಡುತ್ತದೆ  ಏಐ  ಮುಗುಳ್ನಗುವ ಮೋನಾ ಮಲ್ಲಿಗೆ ಮುಡಿದ ಚಿತ್ರ! ಈಗ ಕೂಡಲೇ ಬಿಡಿಸಿಕೊಡು ನೋಡೋಣ ಮಗಳೇ  ಬಾಗಿ  ಓದಲು ಕೂತ ಚಿತ್ರ, ಸಾಕು ಏಐ ರಗಳೆ!