ಪೋಸ್ಟ್‌ಗಳು

Sudarshan Faakir ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಎಲೆ ಮದರಂಗಿ ನಿನ್ನ ಕಡುಗೆಂಪು ರಕ್ತ

ಇಮೇಜ್
ಮೂಲ ಗಜಲ್... ಸುದರ್ಶನ್ ಫಾಕಿರ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಪ್ರತ್ಯಕ್ಷ ಜನರಲ್ಲಿ ಹುಡುಕುತ್ತ ದೋಷ ಅದೃಶ್ಯ ದೇವರಿಗೆ ನಿತ್ಯ ಹುಡುಕಾಟ ಉಡುಗೊರೆ ಎನ್ನುವರು ಬದುಕನ್ನು ಕೆಲವರು ಕಠಿಣ ಸಜೆಯಂತೆ ಎಂಬುದಿನ್ನೊಂದು ನೋಟ ಉದ್ದಗೊಳಿಸುತ್ತದೆ ಬದುಕನ್ನು ಅಷ್ಟೇ ಮದ್ದೆಂಬ ಹೆಸರೊಂದು ತಪ್ಪು ಸಂಕೇತ ಚೆಲುವೆ ಅಂಗೈ ಮೇಲೆ ಬಿಡಿಸುತ್ತಿದೆ ಚಿತ್ರ ಎಲೆ ಮದರಂಗಿ ನಿನ್ನ ಕಡುಗೆಂಪು ರಕ್ತ

ನಾನಿನ್ನೂ ಜೀವಂತವಾಗಿರುವೆ

ಇಮೇಜ್
ಮೂಲ ಉರ್ದೂ ... ಸುದರ್ಶನ್ ಫಾಕಿರ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ನೀಡಿರಿ ಕಷ್ಟಗಳಿಗೆ ಆಹ್ವಾನ ನಾನಿನ್ನೂ ಜೀವಂತವಾಗಿರುವೆ ಮಾಡಿಕೊಡಿ ನನಗೆ ಮನದಟ್ಟು, ನಾನಿನ್ನೂ ಜೀವಂತವಾಗಿರುವೆ ನಿಲ್ಲುವುದು ನನ್ನ ಪ್ರಾಣವೂ ನಾನು ನಿಲ್ಲುವೆನೋ ಯಾವಾಗ ತಳ್ಳಿಬಿಡಿ ಗುರಿಯನ್ನು ದೂರ, ನಾನಿನ್ನೂ ಜೀವಂತವಾಗಿರುವೆ ರೂಢಿಯಾಗಿದೆ ನನಗೆ ಈಗ ನಂಜು ಹೀರುವುದು ಜನರೇ ನೀಡಿ ಬೇರಾವುದೋ ಮದ್ದು, ನಾನು ಜೀವಂತವಾಗಿರುವೆ ನಡೆವ ದಾರಿಯ ಮೇಲೆ ನನಗೆ ಉಂಟಾಗುತ್ತಿದೆ ಒಲವು ಚದುರಿಸಿ ಜನಜಂಗುಳಿಯನ್ನು, ನಾನಿನ್ನೂ ಜೀವಂತವಾಗಿರುವೆ