ಪೋಸ್ಟ್‌ಗಳು

Amrita Preetam ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಂಬರದ ಪವಿತ್ರ ಬಿಂದಿಗೆ

ಮೂಲ ಕವಿತೆ - ಅಮೃತಾ ಪ್ರೀತಂ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಆಶಾ ಭೋಂಸ್ಲೆ ಹಾಡಿರುವ ಈ ಗೀತೆಯ ರಚನೆ ಅಮೃತಾ ಪ್ರೀತಂ ಅವರದ್ದು. "ಕಾದಂಬರಿ" ಎಂಬ ಚಿತ್ರದಲ್ಲಿ ಇದನ್ನು ಬಳಸಲಾಗಿದೆ. ಅಮೃತಾ ಪಂಜಾಬೀ  ಹಾಗೂ ಹಿಂದಿ ಭಾಷೆಗಳ  ಪ್ರಸಿದ್ಧ ಲೇಖಕಿ. ಕಾದಂಬರಿ, ಸಣ್ಣಕಥೆ, ಕವಿತೆ -ಈ ಎಲ್ಲಾ ಪ್ರಕಾರಗಳಲ್ಲೂ ಅವರು ಯಶಸ್ವಿಯಾಗಿ ಪ್ರಯೋಗ ಮಾಡಿದವರು. ಈಚೆಗೆ ಯಶಸ್ವೀ ಪ್ರದರ್ಶನಗಳನ್ನು ಕಂಡ "ತುಮ್ಹಾರೀ ಅಮೃತಾ" ನಾಟಕವು ಅಮೃತಾ ಪ್ರೀತಂ ಮತ್ತು ಕವಿ ಸಾಹಿರ್ ಲುಧಿಯಾನ್ವಿ ಅವರ ಫಲಿಸದ ಪ್ರೇಮವನ್ನು ಕುರಿತದ್ದು.   ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ಜೀವನದರ್ಶನವನ್ನು ಸರಳ-ಸುಂದರವಾದ ಭಾಷೆಯಲ್ಲಿ ಹಿಡಿದುಕೊಟ್ಟಿದ್ದಾರೆ.  ದೇವರ ಪ್ರೀತಿಯನ್ನು ಪ್ರತಿನಿತ್ಯ ಅನುಭವಿಸುತ್ತಿರುತ್ತೇವೆ - ಇಷ್ಟಾದರೂ ನಾವು ಪಾಪದ ಮಾತುಗಳನ್ನೇ ಆಡುತ್ತಿರುತ್ತೇವೆ! ನಾವು ಬದುಕಿರುವುದು ಕೂಡಾ ಸಾಲದ ಮೇಲೆ - ಸಾವಿನಿಂದ ಸಾಲವಾಗಿ ಪಡೆದುಕೊಂಡ ಸಮಯವೇ ನಮ್ಮ ಆಯಸ್ಸು. ಇಷ್ಟಾದರೂ ನಮ್ಮ ಅಹಂಕಾರವೆಷ್ಟು!  "ನಮ್ಮದು" ಎಂದು ನಾವು ಹೇಳಿಕೊಳ್ಳುವುದು ಇಲ್ಲಿ ಏನಿದೆ? ಎಲ್ಲವೂ ಭಗವಂತನ ಸ್ವತ್ತು.  ಕೆರೆಯ ನೀರನು ಕೆರೆಗೆ ಚೆಲ್ಲಿದರೂ "ಇದೆಲ್ಲಾ ನಮ್ಮ ಔದಾರ್ಯ" ಎಂಬ ಠೇಂಕಾರದಿಂದ ಮೆರೆಯುವವರು ನಾವು!  ...  ಚಿತ್ರದಲ್ಲಿ ಬಳಸಿದಾಗ ಈ ಕವಿತೆಯಲ್ಲಿ ಒಂದು ದ್ವಂದ್ವಾರ್ಥವೂ ಹೊಮ್ಮುತ್...