ಪೋಸ್ಟ್‌ಗಳು

ಇಂಗ್ಲಿಷ್ ಕವಿತೆಯ ಭಾಷಾಂತರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಆತ್ಮೋನ್ನತಿ

ಇಮೇಜ್
ಮೂಲ ಇಂಗ್ಲಿಷ್ ಸಾನೆಟ್: ಜಾನ್ ಕೀಟ್ಸ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಆವರಿಸುವ ಕತ್ತಲಿನಿಂದ ಬೆಳ್ಳಕ್ಕಿಯೊಂದು ಹೇಗೆ ಮೇಲೆದ್ದು ಸಾಗುವುದೋ ಪೂರ್ವದ ಬೆಳಕಿನ ಕಡೆಗೆ ನಿಷ್ಕಲ್ಮಶ ಆನಂದದ ವಿನಾ ಬೇರೇನನ್ನೂ ನೂಕವೋ ರೆಕ್ಕೆ ಹಾಗೇ ನಿನ್ನ ಆತ್ಮವೂ ಹಾರುವುದು ಮೇಲಣ ರಾಜಾಧಿಪತ್ಯಕ್ಕೆ ಎಲ್ಲಿ ಶಾಂತಿಯು ಶಾಶ್ವತವೋ ಮತ್ತು ನಿರಂತರವೋ ಪ್ರೀತಿ ಎಲ್ಲಿ ಸುಖಾತ್ಮಗಳು ಧರಿಸಿ ಪ್ರಭಾವಳಿಯ ಮುಕುಟ  ಅನುಪಮ ವೇಷಭೂಷಣ ತೊಟ್ಟು ಅಮೃತ ಹೀರುತ್ತಾ, ಪುಣ್ಯಾತ್ಮಗಳಿಗೆ ಮಾತ್ರ ಸಿಕ್ಕುವುದು ಈ ರೀತಿ, ಅಲ್ಲಿ ನಿನ್ನಾತ್ಮವು ಪಡೆವುದು ಅಮರತ್ವದ ಉನ್ನತಿ. ಹಿನ್ನೆಲೆಯಲ್ಲಿ ದೈವೀಕ ಸಂಗೀತ ಮೊಳಗೆ ತುಂಬಿಕೊಳ್ಳುವುದು ಮಹದಾನಂದ ಆತ್ಮದೊಳಗೆ. ಅಥವಾ ಆಸೆಯೊಂದು ನಿನ್ನಾತ್ಮದಲ್ಲಿ ಆಗ ಪಡೆದೀತು ಅಂಕುರ ಸರ್ವಶಕ್ತ ಪಿತನ ಕೆಲಸಗಳನ್ನು ಮಾಡಬೇಕೆಂಬ ಕಾತುರ. ಕಂಡುಕೊಳ್ಳಬೇಕು  ಯಾವುದು ತರವೆಂಬ ಪ್ರಶ್ನೆಗೆ ಉತ್ತರ  ಮತ್ತು ಏಕೆ ಹೆದರಬೇಕು ದುಃಖಗಳು ಬಂದಾಗ ಹತ್ತಿರ?

ಯಾವೊಬ್ಬ ಮಾನವನೂ ದ್ವೀಪವಲ್ಲ

ಇಮೇಜ್
ಮೂಲ ಇಂಗ್ಲಿಷ್ ಕವಿತೆ - ಜಾನ್ ಡನ್  ಅನುವಾದ - ಸಿ. ಪಿ. ರವಿಕುಮಾರ್  ಯಾವೊಬ್ಬ ಮಾನವನೂ ದ್ವೀಪವಲ್ಲ  ಯಾರೊಬ್ಬನೂ ತಾನೇ ಪೂರ್ಣನಾಗ.    ಪ್ರತಿಯೊಂದೂ ಭೂಖಂಡದ ಅಂಶ, ಮೂಲವೊಂದರ ಪುಟ್ಟ ಭಾಗ.  ಕಿನಾರೆಯಿಂದ ಒಂದೇ ಒಂದು ಭೂಮಿಯ ಚೂರು  ಕೊಚ್ಚಿ  ಕೊಂಡೊಯ್ದರೆ    ಕಡಲು   ಉಂಟಾಗುವುದು ಅಷ್ಟೇ  ಚ್ಯುತಿ ಮೂಲಭೂಖಂಡಕ್ಕೆ  ಕಳೆದುಕೊಂಡಂತೆ ಇಡೀ ಭೂಶಿರವನ್ನು ಒಡಲು; ಕಳೆದು ಹೋದರೆ ಹೇಗಿದ್ದೀತು   ನಿನ್ನ ಗೆಳೆಯನಿಗೋ ನಿನಗೋ  ಸೇರಿದ ಜಹಗೀರು.  ಪ್ರತಿಯೊಬ್ಬ ಮಾನವನ ಸಾವೂ  ಕುಂದಿಸುತ್ತದೆ ನನ್ನನ್ನು  ಏಕೆಂದರೆ  ನಾನು ಮಾನವತೆಯ ಅಂಗ.   ಪ್ರಶ್ನಿಸದಿರು  ಯಾರಿಗಾಗಿ ಬಾಜಿಸುತ್ತಿದೆ ಗಂಟೆ  ಎಂದು!  ಬಾಜಿಸುತ್ತಿದೆ  ನಿನಗಾಗಿ   ಮೃದಂಗ. 

ಮೃದುವಾಗಿಡು ಹೆಜ್ಜೆ

ಇಮೇಜ್
ಮೂಲ: ಡಬ್ಲ್ಯೂ ಬಿ ಯೇಟ್ಸ್ ಕನ್ನಡ ಅನುವಾದ : ಸಿ.ಪಿ. ರವಿಕುಮಾರ್ ಇದ್ದಿದ್ದರೆ ನನ್ನ ಬಳಿ ಸ್ವರ್ಗಲೋಕದ ಕಸೂತಿಯ ಬಟ್ಟೆಬರೆ, ಅದ್ದಿತೆಗೆದವು ಹೊಂಬಣ್ಣ ಮತ್ತು ಬೆಳ್ಳಿಬಣ್ಣಗಳಲ್ಲಿ, ಶುದ್ಧ ನೀಲಿಯಾದರೂ ಸರಿ, ತಿಳಿಯೋ ಗಾಢವೋ, ಮಧ್ಯರಾತ್ರಿಯ ಕಪ್ಪು ರೇಷ್ಮೆಯೋ ದಿವಸದ ಧವಲವರ್ಣವೋ, ಉದ್ದಕ್ಕೂ ಹಾಸುತ್ತಿದ್ದೆ ನೀನು ನಡೆದುಬರುವ ಹಾದಿಯಲ್ಲಿ! ನಿರ್ಧನ ನಾನು! ಏನಿದೆ ನನ್ನಲ್ಲಿ ಕನಸುಗಳ ವಿನಾ? ಹೊದ್ದ ಕನಸುಗಳನ್ನೇ ಹಾಸಿದ್ದೇನೆ ನಿನ್ನ ಕಾಲುಗಳ ಅಡಿಯಲ್ಲಿ ಮೃದುವಾಗಿಡು ಹೆಜ್ಜೆ, ನನ್ನ ಕನಸುಗಳ ಮೇಲ್ನಡೆವೆ, ನೆನಪಿರಲಿ

ಶಿಷ್ಯ (ಕವಿತೆ)

ಇಮೇಜ್
ಮೂಲ: ಆಸ್ಕರ್ ವೈಲ್ಡ್ ಅನುವಾದ: ಸಿ.ಪಿ. ರವಿಕುಮಾರ್ ನಾರ್ಸಿಸಸ್ ಸತ್ತಾಗ ಅವನ ಅಚ್ಚುಮೆಚ್ಚಿನ ಸಿಹಿನೀರಿನ ಕೊಳ ಉಪ್ಪು ಕಣ್ಣೀರಿನ ಮಡುವಾಗಿಹೋಯ್ತು. ಕೇಳಿದಾಗ ಈ ಸಂಗತಿ ಗಿರಿಕಿನ್ನರಿಯರು ಹಾರಿ ಬಂದು ನಿಜಕ್ಕೂ ಸಿಹಿನೀರಿನ ಕೊಳ ಉಪ್ಪು ಕಣ್ಣೀರ ಮಡುವಾಗಿದ್ದು ಕಂಡು ಸಂತೈಸಿದರು ತಮ್ಮ ನೀಳ ಹಸಿರುಕೇಶವನ್ನು ಇಳಿಬಿಟ್ಟು ಕೊಳದೊಳಗೆ. ನಿನ್ನ ದುಃಖ ನನಗೆ ಅರ್ಥವಾಗುತ್ತದೆ! ನಾರ್ಸಿಸಸ್‌ನಂಥ ಚೆಲುವನಿರಲಿಲ್ಲ ಬೇರೊಬ್ಬ! ಕುತೂಹಲದಿಂದ ಕೇಳಿತು ಕೊಳ: ನಾರ್ಸಿಸಸ್ ಚೆಲುವನಾಗಿದ್ದನೇ? ನಿನಗಿಂತಲೂ ಚೆನ್ನಾಗಿ ಬಲ್ಲವರಾರು ಈ ವಿಷಯ? ನಿನ್ನ ಮೊಗದ ಕನ್ನಡಿಯಲ್ಲಿ ಅವನು ನೋಡಿಕೊಳ್ಳುತ್ತಿರಲಿಲ್ಲವೇ ತನ್ನ ಮುಖ! ಕೊಳವು ಉತ್ತರಿಸಿತು: ಹೌದೇ! ಅವನು ಬಾಗಿ ನೋಡಿದಾಗ ಅವನ ಕಣ್ಣಲ್ಲಿ ನಾನು ನನ್ನ ಸೌಂದರ್ಯವನ್ನು ನೋಡಿ ಹಿಗ್ಗುತ್ತಿದ್ದೆ.

ಕರುಣೆ

ಇಮೇಜ್
ಮೂಲ - ಶೇಕ್ಸ್‌ಪಿಯರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  (ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ನ್ಯಾಯಾಧೀಶನ ವೇಷದಲ್ಲಿ ಪೋರ್ಷಿಯಾ ಮಾಡುವ ಭಾಷಣ) ಕರುಣೆಯು ಲುಪ್ತವಾಗಿಹೋಗಿಲ್ಲ.   ಅದು ಮೆಲ್ಲಮೆಲ್ಲನೆ ಉದುರುತ್ತದೆ ನೆಲಕ್ಕೆ  ಮೇಲಿನ ಸ್ವರ್ಗದಿಂದ.   ಅದರ ಲಾಭ ದ್ವಿಗುಣ.  ಪಡೆದುಕೊಂಡವನಿಗೆ ಲಾಭ ಸಿಕ್ಕುವುದು ಸಹಜ, ಕರುಣೆ ತೋರಿದವನಿಗೂ ಲಭಿಸುತ್ತದೆ ಅದರ ಆಶೀರ್ವಾದ.  ಬಲಗಳಲ್ಲಿ ಅತಿದೊಡ್ಡ ಬಲವೇ ಕರುಣೆ.  ಸಿಂಹಾಸನದ ಮೇಲೆ ಕುಳಿತ ರಾಜನಿಗೆ  ಕರುಣೆಯೇ ಕಿರೀಟಕ್ಕಿಂತಲೂ ಹೆಚ್ಚು ಶೋಭಿಸುವ ಸಿಂಗಾರ.  ಅವನ ಖಡ್ಗ  ತತ್ಕಾಲದ ಅಧಿಕಾರದ ಸಂಕೇತ, ಜನರಲ್ಲಿ ಬೆರಗು ಹುಟ್ಟಿಸುವುದಷ್ಟೇ ಅದರ ಗುಣ, ಖಡ್ಗವನ್ನು ಕಂಡು ಹೆದರಿ ನಡುಗುತ್ತಾರೆ ಜನ.    ಕರುಣೆಯ ಸ್ಥಾನ ಖಡ್ಗಕ್ಕಿಂತ ಎಷ್ಟೋ ಮೇಲು, ಅದು ನೆಲೆಸುವುದು ರಾಜನ ಹೃದಯಸಿಂಹಾಸನದಲ್ಲಿ. ಸ್ವಯಂ ದೇವತೆಗಳ ಬಳಿ ಇರುವ ಆಭರಣ. ಭೂಮಿಯ ಮೇಲೆ ನಡೆದ ಕರುಣಾಪೂರ್ಣ ನ್ಯಾಯದಾನಕ್ಕೆ  ಸಿಕ್ಕುತ್ತದೆ ದೈವತ್ವದ ಮೆರುಗು.  ಹೀಗಾಗಿ, ಓ ವರ್ತಕ! ನ್ಯಾಯ ನಿನ್ನ ಪರವಾಗಿದ್ದರೂ  ಯೋಚಿಸಿ ನೋಡು. ಈ ನ್ಯಾಯದಿಂದ ಯಾರದೂ ಉದ್ಧಾರವಿಲ್ಲ. ನಾವು ನಿನ್ನಲ್ಲಿ ಬೇಡುವುದು ಕರುಣೆ. ನಾನು ಇಷ್ಟು ಮಾತಾಡಿದ್ದು  ನೀನು ಕೋರಿದ ಶಿಕ್ಷೆಯನ್ನು ಒಂದಷ್ಟು ಮೆತ್ತಗಾಗಿಸಲು, ನೀನು ಕೋರಿದ್ದನ್ನು ಅಕ...

ಪುಸ್ತಕ

ಇಮೇಜ್
ಮೂಲ ಕವಿತೆ: ಎಮಿಲಿ ಡಿಕಿನ್ಸನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಕೊಂಡೊಯ್ಯಲು ಕಾಣದ ಕಡಲಾಚೆಯ ನಾಡಿಗೆ ಬೇರಾವ ಹಡಗೂ ಇಲ್ಲ ಹೊತ್ತಿಗೆಯನ್ನು ಮೀರಿ  ಜಿಗಿಯುತ್ತ ಸಾಗುವ ಕವಿತೆಯ ಸಾಲಿಗೂ ಮೀರಿ  ಮತ್ತೊಂದಿಲ್ಲ ಕುದುರೆ ಸವಾರಿ  ಕಡುಬಡವರಿಗೂ ಕೈಗೆಟಕುವ ಪ್ರಯಾಣ! ಯಾವುದೇ ಸುಂಕವನ್ನೂ ಬೇಡದ ಪಥ! ನಿದರ್ಶನದಂತಿದೆ  ಮಿತವ್ಯಯವೆಂಬುದಕ್ಕೆ  ಆತ್ಮವನ್ನು ಹೊತ್ತು ಮುನ್ನುಗ್ಗುವ ರಥ! There is no frigate like a book To take us lands away, Nor any coursers like a page Of prancing poetry. This traverse may the poorest take Without oppress of toll; How frugal is the chariot That bears a human soul!  Emily Dickinson