ಪೋಸ್ಟ್‌ಗಳು

Hostel ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಾರ್ಡನ್ ಕಥನ

ಇಮೇಜ್
ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು. ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾಕ್ಟರ್ ...

ಬಾಗಿಲು ಮತ್ತು ಗವಾಕ್ಷಿ - ಒಂದು ನೆನಪು

ಸಿ. ಪಿ. ರವಿಕುಮಾರ್  ನಾನು ದೆಹಲಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದಾಗ ಮೂರು ವರ್ಷ ಹಾಸ್ಟೆಲ್ ವಾರ್ಡನ್ ಕೆಲಸವನ್ನು ನನಗೆ ಕೊಟ್ಟರು (ಹೇರಿದರು!). ಆಗ ನಡೆದ ಘಟನೆ. ಕೇರ್ ಟೇಕರ್ : ಸರ್ ಜೀ, ಒಬ್ಬ ಹುಡುಗ ಇದ್ದಾನೆ. ಅವನು ನಮ್ಮ ಹಾಸ್ಟೆಲ್ ನಲ್ಲಿ ನ್ಯಾಯಬಾಹಿರ ರೀತಿಯಲ್ಲಿ ಉಳಿದಿದ್ದಾನೆ. ನಾನು: ಅದು ಹೇಗೆ ಸಾಧ್ಯ? ಯಾರು ಅವನು? ಕೇಟೇ: ಅವನು ಅನೇಕ ಸಲ ಫೇಲ್ ಆದ ವಿದ್ಯಾರ್ಥಿ. ಅವನು ಐಐಟಿಯಲ್ಲಿ ಇರಲೇ ಬಾರದು. ಅವನು ಫೀಜ್ ಕೂಡಾ ಕಟ್ಟಿಲ್ಲ. ನಾನು: ಮತ್ತೆ? ಕೇಟೇ: ಅವನು ತನ್ನ ಸ್ನೇಹಿತರ ರೂಮುಗಳಲ್ಲಿ ಹೇಗೋ ಬಂದಿರುತ್ತಾನೆ. ನಾನು: ನೀವು ಅವನನ್ನು ಕರೆದುಕೊಂಡು ಬನ್ನಿ, ನಾನು ಮಾತಾಡುತ್ತೇನೆ. ಕೇಟೇ: ಸರ್ ಜೀ, ಅವನು ನಮ್ಮ ಕೈಗೆ ಸಿಕ್ಕರೆ ತಾನೇ? ನಾನು: ಹಾಗೆಂದರೆ ಏನ್ರೀ? ಕೇಟೇ: ಸರ್, ಅವನು ದಿನಕ್ಕೊಂದು ರೂಮಿನಲ್ಲಿ ಇರುತ್ತಾನೆ. ಅರ್ಧ ರಾತ್ರಿ ಎಲ್ಲೋ ಇದ್ದು ಬೆಳಗಿನ ಜಾವ ಯಾವುದೋ ಮಾಯದಲ್ಲಿ ಹಾಸ್ಟೆಲಿಗೆ ಬರುತ್ತಾನೆ. ಇಲ್ಲಿ ಮಲಗಿದ್ದು ಯಾವುದೋ ಮಾಯದಲ್ಲಿ ಮಧ್ಯಾಹ್ನ ಪರಾರಿ ಆಗುತ್ತಾನೆ. ಕೇಟೇ: ಅವನ ಸ್ನೇಹಿತರು ಯಾರು? ಅವರನ್ನು ಕಳಿಸಿ. ಕೇಟೇ: ಸರ್ ಜೀ, ಅವರು ಅವನಿಗೆ ರೂಂ ಕೊಟ್ಟ ವಿಷಯ ಒಪ್ಪಿಕೊಳ್ಳುವುದಿಲ್ಲ. ಹೇಗೆ ಹಿಡಿಯೋದು? ಯಾರನ್ನ ಕರೆಯೋದು? ನಾನು: ಒಳ್ಳೇ ಫಜೀತಿ ಆಯಿತಲ್ಲ. ಅವನ ವಿರುದ್ಧ ಕಂಪ್ಲೇಂಟ್ ತಂದಿದ್ದೀರಿ. ಅವನು ಇಲ್ಲಿ ಇರುತ್ತಾನೆ ಅನ್ನೋದಕ್ಕೆ ಏನಾದರೂ ಪುರಾವೆ ಬೇಕಲ್ಲ....