ಪೋಸ್ಟ್‌ಗಳು

ಕುವೆಂಪು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕವಿಶೈಲದಲ್ಲೊಂದು ಸಂಜೆ

ಇಮೇಜ್
ಕೂಗಲು ಮೇಲೊಂದು ಒಂಟಿ ಬೆಳ್ಳಕ್ಕಿ ಮುಗಿಲಲ್ಲಿ ರಾಗವದಾವುದೋ ಕೇಳುವುದು ಕವಿಮನಕ್ಕೆ!     ಮಾಗಿಯ ಚಳಿಯಲ್ಲಿ ಕಾವ್ಯಸೃಷ್ಟಿಯ ಕಠಿಣ ತ್ಯಾಗಗಳ ತಪದಲ್ಲಿ ತೊಡಗಿದ್ದ  ರಸಋಷಿಗೆ! ರಾಗಿ-ಬತ್ತದ ಪೈರಿನ ಹಸಿರು ಪತ್ತಲವನ್ನುಟ್ಟು ಮೇಘಗಳ ಕರಿನೇರಳೆ ಬಣ್ಣದ ರವಿಕೆಯಂ ತೊಟ್ಟು ಹೂಗಳ ಚೆಲುವಿನಿಂ  ಕಂಗೊಳಿಸುವ  ಮಲೆನಾಡಿತಿ    ಜಾಗ ನೀಡಿದ್ದಾಳೆ ತನ್ನ ಮಡಿಲಲ್ಲಿ, ಕವಿಶೈಲದಲ್ಲಿ! ಈಗ ಕೇಳುವುದು ಕ್ರೌಂಚಪಕ್ಷಿಗಳ ಹರ್ಷಕಲರವ ಈಗ ಕೇಳುವುದು ನಿಷಾದನ ಬಾಣಕ್ಕೆ ಅಸು- ನೀಗಿದ ಜೊತೆಗಾತಿಗೆ ಮರುಗುವ ಒಂಟಿ ಆರ್ತನಾದ! ರಾಘವನ ಅಂತರಂಗದ ವ್ಯಥೆಯು ಕೇಳುವುದು .. ಓಗೊಡುವುದು ಎಲ್ಲಿಂದಲೋ ಸೀತೆಯ ದುಃಖವೃಷ್ಟಿ ಸಾಗುವುದು ದುಃಖದ ದೋಣಿಯಲ್ಲಿ ಕಾವ್ಯಸೃಷ್ಟಿ   - ಸಿ. ಪಿ. ರವಿಕುಮಾರ್  (c) ೨೦೧೭ 

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಇಮೇಜ್
ಸಿ. ಪಿ. ರವಿಕುಮಾರ್  ಕರ್ನಾಟಕ ನಾಡಗೀತೆಯನ್ನು ಹಾಡುವವರಿಗೆ/ಕೇಳುವವರಿಗೆ  ಅದರ ಅರ್ಥ ತಿಳಿಯದೇ ಇದ್ದರೆ ಈ ಬ್ಲಾಗ್ ಬರಹವನ್ನು ಅವರು ಓದಬಹುದು. ಆದಷ್ಟೂ ಸರಳವಾಗಿ ಕವಿತೆಯ ಸಾರವನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ.   ಈ ವಿಶಿಷ್ಟ ಕವಿತೆಯಲ್ಲಿ  ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ.  ಇದನ್ನು ಅವರು ರಚಿಸಿದ್ದು ತಮ್ಮ ಹದಿಹರೆಯದಲ್ಲಿ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲಿ ಸ್ತುತಿಸುವ ನಾಡಗೀತೆಯನ್ನು ಮತ್ತೊಮ್ಮೆ ಕೇಳಿ. ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ! ಇಲ್ಲಿ ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲ...

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಇಮೇಜ್
ಸಿ ಪಿ ರವಿಕುಮಾರ್  "ಬಾರಿಸು ಕನ್ನಡ ಡಿಂಡಿಮವ" ಎನ್ನುವುದು ಕನ್ನಡ ಪ್ರಚಾರಗೀತೆ ಎನ್ನುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕವಿತೆಯನ್ನು ಪೂರ್ಣವಾಗಿ ಓದಿದರೆ ಅದು ಕುವೆಂಪು ಅವರು ಕನ್ನಡಿಗರ ಜಾಯಮಾನಕ್ಕೆ ನೊಂದು, ಬದಲಾವಣೆಗಾಗಿ ಪ್ರಾರ್ಥನಾರೂಪದಲ್ಲಿ  ಬರೆದ ಪದ್ಯ ಎಂಬ ತಿಳುವಳಿಕೆ ಮೂಡುತ್ತದೆ. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ! ಕರ್ನಾಟಕದ ಹೃದಯ ಮಿಡಿಯಬೇಕಾದದ್ದು ಕನ್ನಡಕ್ಕೆ. ಆದರೆ ಅಲ್ಲಿ ಬೇರೆ ಭಾಷೆಗಳ ಮಿಡಿತವೇ ಹೆಚ್ಚು. ಕುವೆಂಪು ಅವರ ಕಾಲದಲ್ಲೂ ಇದು ಹಾಗೇ ಇತ್ತು, ಈಗಲೂ ಹಾಗೇ ಇದೆ!    ಹೇಗೆ ಶಿವ ತನಗೆ ಸಹಜವಾದ ಡಿಂಡಿಮ ಬಾರಿಸಬೇಕೋ ಹಾಗೇ ಕರ್ನಾಟಕದ ಹೃದಯ-ಶಿವ ಕನ್ನಡವೆಂಬ ಡಿಂಡಿಮ ಬಾರಿಸಬೇಕು ಎಂಬುದು ಕವಿಯ ನೊಂದ ಮನದ ಮೊರೆ. "ಬಾರಿಸು ಕನ್ನಡ ಡಿಂಡಿಮವ "ಎಂಬಲ್ಲಿ "ಕನ್ನಡ" ಶಬ್ದಕ್ಕೆ ಒತ್ತು.  ಸತ್ತಂತಿಹರನು ಬಡಿದೆಚ್ಚರಿಸು! ಕಚ್ಚಾಡುವರನು ಕೂಡಿಸಿ ಒಲಿಸು! ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು! ಒಟ್ಟಿಗೆ ಬಾಳುವ ತೆರದಲಿ ಹರಸು! ಕನ್ನಡ ಜನರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು  ಕುವೆಂಪು ಮನಗಂಡಿದ್ದರು. ಏಕೀಕರಣದ ಸಮಯದಲ್ಲಿ ಕೂಡಾ ಒಡಕು ಧ್ವನಿಗಳಿದ್ದವು.  "ಅಖಂಡ ಕರ್ನಾಟಕ" ಪದ್ಯದಲ್ಲಿ ಇಂಥ ಒಡಕು ಧ್ವನಿಗಳನ್ನು ಎತ್ತುವ ಜನನಾಯಕರ ಬಗ್ಗೆ ಕುವೆಂಪು "ಮುಚ್ಚು ಬಾಯಿ" ಎಂಬ ರೀತಿಯಲ್ಲಿ ಗುಡುಗಿದ್ದಾರೆ. ಆದರೆ ...