ಪೋಸ್ಟ್‌ಗಳು

Roald Dahl ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಡಿಯಲು ತಂದ ಕುರಿ - ಭಾಗ 4

ಇಮೇಜ್
ಕದಿಯಲು ತಂದ ಕುರಿ - ಭಾಗ ೪  (ಮೂರನೇ ಭಾಗವನ್ನು ಇಲ್ಲಿ ಓದಿ ) ಮೂಲ ಇಂಗ್ಲಿಷ್ ಕತೆ - ರೊಆಲ್ಡ್ ಡಾಲ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್   ಕೆ ಲವೇ ನಿಮಿಷಗಳಲ್ಲಿ ಒಂದು ಕಾರು ಅವಳ ಮನೆಯ ಮುಂದೆ ಬಂದು ನಿಂತಿತು. ಅವಳು ಬಾಗಿಲು ತೆರೆದಾಗ ಇಬ್ಬರು ಸಮವಸ್ತ್ರಧಾರಿ ಪೊಲೀಸರು ಒಳಗೆ ಬಂದರು. ಅವರಿಬ್ಬರನ್ನೂ ಅವಳು ಬಲ್ಲಳು. ಹೆಚ್ಚೂ ಕಡಿಮೆ ಆ ತಾಲ್ಲೂಕಿನ ಎಲ್ಲಾ ಪೊಲೀಸರೂ ಅವಳಿಗೆ ಪರಿಚಿತರು. ಅವರು ಒಳಗೆ ಬರುತ್ತಲೇ ಅವಳು ಕುರ್ಚಿಯಲ್ಲಿ ಕುಸಿದು ಕುಳಿತಳು. ಅವರಿಬ್ಬರೂ ಹೆಣದ ಮುಂದೆ ಬಾಗಿ ನೋಡುತ್ತಿದ್ದರು. ಕೆಲವು ಕ್ಷಣಗಳ ನಂತರ ಅವಳೂ ಅಲ್ಲಿಗೆ ಬಂದಳು. "ಸತ್ತುಹೋದನೇ?" ಎಂದು ಅವಳು ಕೂಗಿಕೊಂಡಳು. "ನಿಸ್ಸಂದೇಹವಾಗಿ. ಇಲ್ಲಿ ಏನಾಯಿತು?" ಅವಳು ಕತೆಯನ್ನು ಒಪ್ಪಿಸಿದಳು. ತಾನು ಕಿರಾಣಿ ಅಂಗಡಿಗೆ ಹೋಗಿದ್ದು, ಅಲ್ಲಿಂದ ಬಂದಾಗ ಗಂಡನ ದೇಹವನ್ನು ಈ ಸ್ಥಿತಿಯಲ್ಲಿ ನೋಡಿದ್ದು ಇದೆಲ್ಲವನ್ನೂ ಹೇಳುವಾಗ ಅವಳು ಅಳುತ್ತಿದ್ದಳು. ಅವಳು ಮಾತಾಡುತ್ತಿರುವಾಗಲೇ ನೂನನ್ ಎಂಬ ಒಬ್ಬ ಪೋಲೀಸ್ ಅಧಿಕಾರಿ ಪ್ಯಾಟ್ರಿಕ್ ನ ತಲೆಯ ಕೆಳಗೆ ಮಡುಗಟ್ಟಿದ ರಕ್ತವನ್ನು ಗಮನಿಸಿ ಅದನ್ನು ತನ್ನ ಸಹೋದ್ಯೋಗಿ ಒಮೇಲಿಗೆ ತೋರಿಸಿದ. ಒಮೇಲಿ ತಕ್ಷಣ ಮೇಲೆದ್ದು ಟೆಲಿಫೋನ್ ಕಡೆ ಧಾವಿಸಿದ. ಸ್ವಲ್ಪ ಹೊತ್ತಿನಲ್ಲೇ ಇನ್ನಷ್ಟು ಜನ ಪೊಲೀಸರು ಅವಳ ಮನೆಗೆ ಬಂದರು. ಮೊದಲು ಒಬ್ಬ ಡಾಕ್ಟರ್. ಅನಂತರ ಇಬ್ಬರು ಪತ್ತೇದಾರರು. ಅವರಲ...

ಕಡಿಯಲು ತಂದ ಕುರಿ - ಭಾಗ 3

ಇಮೇಜ್
ಕಡಿಯಲು ತಂದ ಕುರಿ - ಭಾಗ ೩ (ಎರಡನೇ ಭಾಗವನ್ನು ಇಲ್ಲಿ ಓದಿ ) ಇ ನ್ನೂ ಆರು ಗಂಟೆ ಆಗಿರಲಿಲ್ಲ.  ಆದ್ದರಿಂದ ಕಿರಾಣಿ ಅಂಗಡಿಯ ದೀಪ ಉರಿಯುತ್ತಿತ್ತು.  "ಹಲೋ ಸ್ಯಾಮ್!" ಅವಳು ಅಂಗಡಿಯವನತ್ತ ಮುಗುಳ್ನಗೆ ಬೀರಿದಳು.  "ಶುಭ ಸಂಜೆ, ಶ್ರೀಮತಿ ಮಲೋನಿ! ಹೇಗಿದ್ದೀರಿ?" "ನನಗೆ ಒಂದಷ್ಟು ಆಲೂಗೆಡ್ಡೆ ಬೇಕಾಗಿತ್ತು, ಸ್ಯಾಮ್. ಹಾಗೇ ಒಂದು ಕ್ಯಾನ್ ಬಟಾಣಿ." ಅಂಗಡಿಯಾತ ಹಿಂದೆ ತಿರುಗಿ ಬಟಾಣಿ ಇಡುವ ಕಪಾಟಿಗೆ ಕೈ ಹಾಕಿದ.  "ಇವತ್ತು ಪ್ಯಾಟ್ರಿಕ್ ಸುಸ್ತಾಗಿದೆ, ಹೊರಗಡೆ ಹೋಗೋದು ಬೇಡ, ಮನೆಯಲ್ಲೇ ಊಟ ಮಾಡೋಣ ಅಂದ. ನಾವು ಪ್ರತಿ ಗುರುವಾರ ಸಂಜೆ ಊಟಕ್ಕೆ ಹೊರಗಡೆ ಹೋಗುವುದು ರೂಢಿ. ಇವತ್ತು ಇದ್ದಕ್ಕಿದ್ದ ಹಾಗೇ ಅವನು ಪ್ಲಾನ್ ಬದಲಾಯಿಸಿದರೆ ಮನೆಯಲ್ಲಿ ತರಕಾರಿ ಇರುತ್ತೆ ಅನ್ನೋದೇನು ಖಾತರಿ?" "ಮಾಂಸ ಏನಾದರೂ ಬೇಕಾಗಿತ್ತೆ, ಶ್ರೀಮತಿ ಮಲೋನಿ?" "ಇಲ್ಲ, ಬೇಡ. ಫ್ರೀಜರ್ ನಲ್ಲಿ  ಒಂದು ಭೇಷಾದ ಕುರಿ ಕಾಲು ಇದೆ."  "ಓಹ್." "ಅದನ್ನ ಫ್ರೀಜರ್ ನಿಂದ ತೆಗೆದ ತಕ್ಷಣ ಬೇಯಿಸಬಹುದೋ ಇಲ್ಲವೋ ನನಗೆ ಗೊತ್ತಿಲ್ಲ. ನಿಮಗೆ ಗೊತ್ತೇ?" "ನನಗೇನೋ ಅಂತಹ  ವ್ಯತ್ಯಾಸವಾಗೋದಿಲ್ಲ ಅನ್ನಿಸುತ್ತೆ.  ನಿಮಗೆ ಈ ಇಡಾಹೋ ಆಲೂಗೆಡ್ಡೆ ಕೊಡಲೇ?" "ಹೂಂ. ಎರಡು ಸಾಕು." "ಇನ್ನೇನಾದರೂ? ಊಟದ ನಂತರ ಏನಾದರೂ ಸಿಹಿ?...

ಕಡಿಯಲು ತಂದ ಕುರಿ - ಭಾಗ 2

ಇಮೇಜ್
ಮೂಲ ಇಂಗ್ಲಿಷ್ ಕಥೆ - ರೊಆಲ್ಡ್ ಡಾಲ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್ (ಮೊದಲ ಬಾಗವನ್ನು ಇಲ್ಲಿ ಓದಿ ) " ನೋ ಡು, ಸಮಾಚಾರ ಹೀಗೆ. ನೀನು ಈ ಸ್ಥಿತಿಯಲ್ಲಿ ಇರೋವಾಗ ಇದನ್ನು ಹೇಳುವುದು ಸರಿಯಲ್ಲ ಅಂತ ಒಪ್ಪುತ್ತೇನೆ. ಆದರೆ ಬೇರೆ ವಿಧಿಯಿಲ್ಲ. ನೀನು ಯೋಚನೆ ಮಾಡಬೇಡ. ನಿನಗೆ ಹಣಕ್ಕೆ ತೊಂದರೆ ಆಗದೆ ಇರೋಹಾಗೆ ನೋಡಿಕೋತೇನೆ. ಇಲ್ಲದ ರಗಳೆ ಬೇಡ. ನೀನು ರಗಳೆ ತೆಗೆಯೋದಿಲ್ಲ ಅಂದುಕೊಂಡಿದ್ದೇನೆ. ತೆಗೆದರೆ ನನ್ನ ಕೆಲಸಕ್ಕೆ ತೊಂದರೆ ಆಗುತ್ತೆ." ತಾನು ಕೇಳುತ್ತಿರುವುದು ಯಾವುದೂ ನಿಜವಲ್ಲ ಎಂದು ಸಾರಾಸಗಟಾಗಿ ತಳ್ಳಿಬಿಡುವುದು ಅವಳ ಮೊದಲ ಪ್ರತಿಕ್ರಿಯೆಯಾಗಿತ್ತು. ಅವನು ಮಾತೇ ಆಡಿಲ್ಲ, ಎಲ್ಲವನ್ನೂ ನಾನೇ ಕಲ್ಪಿಸಿಕೊಂಡಿದ್ದೇನೆ. ಏನೂ ಆಗಿಲ್ಲ ಎಂಬಂತೆ ತನ್ನ ಪಾಡಿಗೆ ಕೆಲಸ ಮುಂದುವರೆಸಿದರೆ ಎಚ್ಚೆತ್ತಾಗ ನಿಜಕ್ಕೂ ಏನೂ ನಡೆದಿಲ್ಲ ಎಂದು ಗೊತ್ತಾಗುತ್ತದೆ. "ನಾನು ಊಟಕ್ಕೆ ಅಣಿ ಮಾಡುತ್ತೇನೆ," ಎಂದು ಬಹಳ ಕಷ್ಟ ಪಟ್ಟು ಪಿಸುಗುಟ್ಟುವ ದನಿಯಲ್ಲಿ ನುಡಿದು ಅವಳು ಮೇಲೆದ್ದಳು. ಈ ಸಲ ಅವನು ತಡೆಯಲಿಲ್ಲ. ಅವಳು ನಡೆದಾಗ ತನ್ನ ಹೆಜ್ಜೆ ನೆಲಕ್ಕೆ ತಾಕುತ್ತಲೇ ಇಲ್ಲ ಎಂದು ಭಾಸವಾಯಿತು. ವಾಕರಿಕೆಯ ಹೊರತಾಗಿ ಅವಳಿಗೆ ಯಾವ ಅನುಭವವೂ ಆಗುತ್ತಿರಲಿಲ್ಲ. ಯಾಂತ್ರಿಕವಾಗಿ ನೆಲಮಾಳಿಗೆಗೆ ಹೋದಳು. ಸ್ವಿಚ್ ಒತ್ತಿದಳು. ಫ್ರೀಜರ್ ನ ಬಾಗಿಲು ತೆರೆದು ಕೈಗೆ ಸಿಕ್ಕದ್ದನ್ನು ಎಳೆದುಕೊಂಡಳು. ತನ್ನ ಕೈಗೆ ಬಂದದ್ದೇ...

ಕಡಿಯಲು ತಂದ ಕುರಿ - ಭಾಗ 1

ಇಮೇಜ್
ಮೂಲ ಇಂಗ್ಲಿಷ್ ಕಥೆ - ರೊಆಲ್ಡ್ ಡಾಲ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಕೋ ಣೆ ಚೊಕ್ಕಟವಾಗಿತ್ತು. ಬೆಚ್ಚಗಿತ್ತು. ಪರದೆಗಳನ್ನು ಮುಚ್ಚಿ ಮೇಜುಗಳ ಮೇಲೆ ಎರಡು ವಿದ್ಯುತ್ ದೀಪಗಳನ್ನು ಹಚ್ಚಿಡಲಾಗಿತ್ತು. ಅವಳ ಮೇಜಿನ ಮೇಲೊಂದು ಮತ್ತು ಎದುರಿಗಿದ್ದ ಮೇಜಿನ ಮೇಲೆ ಇನ್ನೊಂದು. ಅವಳು ಕುಳಿತಿದ್ದ ಮೇಜಿನ ಪಕ್ಕದ ತೆರೆದ ಕಪಾಟಿನಲ್ಲಿ ಎರಡು ಉದ್ದನೆಯ ಗಾಜಿನ ಲೋಟಗಳು, ಸೋಡಾ ಮತ್ತು ವ್ಹಿಸ್ಕಿ ಇವುಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಒಂದು ಥರ್ಮಾಸ್ ನಲ್ಲಿ ಐಸ್ ಚೂರುಗಳಿದ್ದವು. ಮೇರಿ ಮಲೋನಿ ತನ್ನ ಗಂಡ ಕೆಲಸ ಮುಗಿಸಿಕೊಂಡು ಬರುವುದನ್ನೇ ಕಾಯುತ್ತಿದ್ದಳು. ಆಗಾಗ ಅವಳು ಗಡಿಯಾರದ ಮುಖ ನೋಡುವಳು. ಆದರೆ ಅವಳ ನೋಟದಲ್ಲಿ ಆತಂಕವಿಲ್ಲ. ಒಂದೊಂದು ನಿಮಿಷ ಕಳೆದಂತೆ ಮಿಲನದ ಘಳಿಗೆ ಹತ್ತಿರ ಬಂದಿತೆಂಬ ತೃಪ್ತಿಭಾವ ಅವಳ ಮುಖದಲ್ಲಿ ಮನೆಮಾಡಿತ್ತು. ಅವಳ ಎಲ್ಲಾ ಕೆಲಸಗಳಲ್ಲೂ ಮುಗುಳ್ನಗೆ ಸೂಸುತ್ತಿತ್ತು. ಸೂಜಿ ದಾರ ಹಿಡಿದು ಹೊಲೆಯುತ್ತ ಕುಳಿತವಳ ಬಾಗಿದ ಮುಖದಲ್ಲಿ ಒಂದು ನಿಗೂಢವಾದ ನೆಮ್ಮದಿಯಿತ್ತು. ಅವಳಿಗೆ ಈಗ ಆರು ತಿಂಗಳು ತುಂಬಿದೆ. ಹೀಗಾಗಿ ಅವಳ ಚರ್ಮದಿಂದ ಅಪೂರ್ವವಾದ ಕಾಂತಿ ಸೂಸುತ್ತಿದೆ. ಅವಳ ತುಟಿಗಳು ಮೃದುವಾಗಿವೆ. ಶಾಂತಿ ತುಂಬಿದ ಕಣ್ಣುಗಳು ಎಂದಿಗಿಂತ ಕಪ್ಪಾಗಿ, ದೊಡ್ಡದಾಗಿ ಕಾಣುತ್ತಿವೆ. ಗಡಿಯಾರ ಐದಕ್ಕೆ ಹತ್ತು ನಿಮಿಷವೆಂದು ನುಡಿದಾಗ ಅವಳು ಕಿವಿ ನೆಟ್ಟಗೆ ಮಾಡಿಕೊಂಡು ಆಲಿಸಿದಳು. ಕೆಲವೇ ನಿಮಿಷ...