ಪುಸ್ತಕ
ಮೂಲ ಕವಿತೆ: ಎಮಿಲಿ ಡಿಕಿನ್ಸನ್ ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ ಕೊಂಡೊಯ್ಯಲು ಕಾಣದ ಕಡಲಾಚೆಯ ನಾಡಿಗೆ ಬೇರಾವ ಹಡಗೂ ಇಲ್ಲ ಹೊತ್ತಿಗೆಯನ್ನು ಮೀರಿ ಜಿಗಿಯುತ್ತ ಸಾಗುವ ಕವಿತೆಯ ಸಾಲಿಗೂ ಮೀರಿ ಮತ್ತೊಂದಿಲ್ಲ ಕುದುರೆ ಸವಾರಿ ಕಡುಬಡವರಿಗೂ ಕೈಗೆಟಕುವ ಪ್ರಯಾಣ! ಯಾವುದೇ ಸುಂಕವನ್ನೂ ಬೇಡದ ಪಥ! ನಿದರ್ಶನದಂತಿದೆ ಮಿತವ್ಯಯವೆಂಬುದಕ್ಕೆ ಆತ್ಮವನ್ನು ಹೊತ್ತು ಮುನ್ನುಗ್ಗುವ ರಥ! There is no frigate like a book To take us lands away, Nor any coursers like a page Of prancing poetry. This traverse may the poorest take Without oppress of toll; How frugal is the chariot That bears a human soul! Emily Dickinson