ನೆರವಿಗಿರುತಿರಲು ಜಾನಕಿನಾಥ
(ತುಲಸೀದಾಸರ ರಚನೆಯ ಅನುವಾದ) "ಜಾನಕಿನಾಥ ಸಹಾಯ ಕರೇ..." ಎಂದು ಪ್ರಾರಂಭವಾಗುವ ತುಲಸೀದಾಸರ ಈ ರಚನೆಯನ್ನು ಅನೇಕ ಹಾಡುಗಾರರು ಹಾಡಿದ್ದಾರೆ. ಈ ಜನಪ್ರಿಯ ರಚನೆಯ ಅನುವಾದವನ್ನು ಕೆಳಗೆ ಪ್ರಯತ್ನಿಸಿದ್ದೇನೆ. ಶ್ರೀರಾಮನ ಪರಮಭಕ್ತರಾಗಿದ್ದ ತುಲಸೀದಾಸರು ತಮ್ಮ ಸುಲಲಿತ ಶೈಲಿಯಲ್ಲಿ ರಾಮನನ್ನು ಸ್ತುತಿಸಿದ್ದಾರೆ. ಯಾರ ನೆರವಿಗೆ ಸಾಕ್ಷಾತ್ ಶ್ರೀರಾಮನೇ ಇದ್ದಾನೋ ಅವನಿಗೆ ಯಾರೂ ಏನೂ ಮಾಡಲಾರರು ಎಂಬುದು ಕವಿಯ ಸಂದೇಶ. ಗ್ರಹಣಕಾಲದಲ್ಲಿ ರಾಹು-ಕೇತುಗಳಿಗೆ ಹೆದರುವ ಜನರಿಗೆ ಈ ರಚನೆ ಸಾಂತ್ವನ ನೀಡಬಹುದು. ನೆರವಿಗಿರುತಿರಲು ಜಾನಕಿನಾಥ ಬರದು ನಿನ್ನ ಬಳಿ ಯಾವ ವಿಪತ್ತು ।। ತರುವರು ಶುಭಫಲ ರವಿ ಶಶಿ ಮಂಗಳ, ಗುರು ಭೃಗುಸುತ ಬುಧ ವರಗಳನಿತ್ತು । ಇರದು ಗಮ್ಯತೆಯು ರಾಹುಕೇತುವಿಗೆ, ಸರಿವನು ಶನಿ ಹೆಜ್ಜೆಯ ಹಿಂದಿಟ್ಟು ।। ದುರುಳ ದುಶ್ಶಾಸನ ವಿಮಲ ದ್ರೌಪದಿಯ ಸೀರೆಯನೆಳೆಯಲು ಸಾಹಸಪಟ್ಟು । ಪೊರೆಯಲು ಕರುಣಾನಿಧಿ ಬರಲಿಲ್ಲವೇ ಹರಿದು ಮೋಡ ಬರುವಂತೆ ಸವಿತೃ ।। ಯಾರ ಪರವೋ ಕರುಣಾನಿಧಿ ಜಗದೊಳು ತೆರೆವುದು ಅವರಿಗೆ ಭಾಗ್ಯಜಗತ್ತು । ಎರಗುವೆ ತುಲಸೀದಾಸ ರಘುವರನ ಸುಖದಾಯಿ ಚರಣಕೆ ಯಾವತ್ತೂ ।। ಮೂಲ ರಚನೆ: जानकी नाथ सहाय करें जब कौन बिगाड़ करे नर तेरो ॥ सुरज मंगल सोम भृगु सुत बुध और गुरु वरदायक तेरो । र...