ಪೋಸ್ಟ್‌ಗಳು

2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಲ್ಲಿ ಯಾರೂ ಮುಖ್ಯರಲ್ಲ

ಇಮೇಜ್
 ಸಿ ಪಿ ರವಿಕುಮಾರ್ ಇಲ್ಲಿ  ಯಾರೂ ಮುಖ್ಯರಲ್ಲ! ಯಾರೂ ಅಮುಖ್ಯರಲ್ಲ! ಯಾವುದೂ ಯ:ಕಶ್ಚಿತವಲ್ಲ! ಹೀಗೆ ಕುವೆಂಪು ಬರೆದಿದ್ದನ್ನು "ಇಲ್ಲಿ ಯಾರೂ ಮುಖ್ಯರಿಲ್ಲ, ಯಾರೂ ಅಮುಖ್ಯರಿಲ್ಲ, ಯಾವುದೂ ಯಃಕಶ್ಚಿತವಲ್ಲ" ಎಂದು ತಿದ್ದಿಕೊಂಡರೆ ಅದು ಟ್ವಿಟ್ಟರಿಗೆ ಅನ್ವಯವಾಗುತ್ತದೆ.  ನೋಡಿ, ಇಲಾನ್ ಮಸ್ಕ್ ಸುಮಾರು ನಲವತ್ತನಾಲ್ಕು ಬಿಲಿಯನ್ ಡಾಲರ್ ಕೊಟ್ಟು ಟ್ವಿಟ್ಟರನ್ನು ಕೊಂಡುಕೊಂಡರೂ ಅವರನ್ನು ಸೀಈಓ ಪದವಿಯಿಂದ ಕೆಳಗೆ ಇಳಿಸಿಯೇ ಬಿಟ್ಟರು. ಈಗ ಮುಂದಿನ ಸೀಈಓ ಯಾರು ಎಂಬುದಕ್ಕೆ ಎಲ್ಲರೂ ನಾಮುಂದು ತಾಮುಂದು ಎಂದು ನುಗ್ಗುತ್ತಿದ್ದಾರೆ. "ಇಲ್ಲಿ ಯಾರೂ ಅಮುಖ್ಯರಲ್ಲ" ಎಂದು ತಿಳಿದ ತಕ್ಷಣವೇ ನಾನೂ ಅರ್ಜಿ ಹಾಕಿದ್ದೇನೆ. ಇದನ್ನು ನಾನು ಎಷ್ಟೇ ಗುಟ್ಟಾಗಿ ಇಟ್ಟರೂ ಅವರಿಗೆ ಹೇಗೋ ಗೊತ್ತಾಗಿ ನನ್ನ ಫ್ರೆಂಡ್ಸ್ ವೆಂಕ, ಸೀನ ಮತ್ತು ನಾಣ ಕೂಡಾ ಅರ್ಜಿ ಕಳಿಸಿದ್ದಾರೆ. ಅರ್ಜಿ ಹಾಕುವುದು ಕೂಡಾ ಈಗ ಕಷ್ಟವಲ್ಲ. ಟ್ವೀಟ್ ಮಾಡಿ ಅಲ್ಲಿ ಅಟ್ ಇಲಾನ್ ಮಸ್ಕ್ ಅಂತ ಹಾಕಿಬಿಟ್ಟರೆ ಸಾಕು. ಇಲಾನ್ ಮಸ್ಕ್ ತಮಗೆ ಬಂದ ನಲವತ್ತನಾಲ್ಕು ಬಿಲಿಯನ್ ಅರ್ಜಿಗಳನ್ನು "ಇಲ್ಲಿ ಯಾವುದೂ ಯಃಕಶ್ಚಿತವಲ್ಲ" ಎಂದು ನೋಡುತ್ತಾ ದಿನವಿಡೀ ಕೂತಿರುತ್ತಾರೆ.  ಹೀಗಾಗಿ ಅವರು ತಮ್ಮ ಮಗು X Æ A-Xii ನೋಡಿಕೊಳ್ಳಲು ಏನೇನೂ ಸಹಾಯ ಮಾಡುತ್ತಿಲ್ಲ ಎಂದು ಅವರ ಹೆಂಡತಿ ಟ್ವೀಟ್ ಮಾಡಿದ್ದಾರೆ. ಇಲ್ಲಿ ಯಾವುದಕ್ಕೂ ಮೊದಲಿಲ್ಲ! ಯಾವುದಕ್ಕೂ ತುದಿಯಿಲ್ಲ! ಯಾವುದೂ ಎಲ್ಲ

ಮಿದುಳು ತಿನ್ನುವ ಅಮೀಬಾ

ಇಮೇಜ್
 ಸಿ ಪಿ ರವಿಕುಮಾರ್ "ಕೇಳಿದಿರಾ? ಇನ್ನೊಂದು ಆಘಾತಕರ ಸುದ್ದಿ!" ಎಂದು ಮಿಸೆಸ್ ಶಾಂತಾ ಏದುಸಿರು ಬಿಡುತ್ತಾ ಮನೆಯನ್ನು ಪ್ರವೇಶಿಸಿದಾಗ ಮಿಸೆಸ್ ತಾರಾ ಅವರೆಕಾಯಿ ಬಿಡಿಸುತ್ತಾ ಕೂತಿದ್ದರು.  "ಏನಾಯ್ತು? ಈರುಳ್ಳಿ ಬೆಲೆ ಮತ್ತೆ ಹಂಡ್ರೆಡ್ ದಾಟಿತಾ?" ಎಂದು ಮಿಸೆಸ್ ತಾರಾ ಆತಂಕದಿಂದ ಕೇಳಿದರು. ಅಂದು ಈರುಳ್ಳಿ ಸಾಂಬಾರ್ ಮಾಡುವುದು ಎಂದು ತೀರ್ಮಾನ ಮಾಡಿದ್ದರಲ್ಲ? "ಇಲ್ಲಾ ಇಲ್ಲಾ ಈರುಳ್ಳಿ ಈಸ್ ಓಕೆ. ಪ್ರಾಬ್ಲಂ ಬಂದಿರೋದು ಅಮೀಬಾ ಇಂದ" "ಯಾರು ಅಮೀಬಾ ಅಂದರೆ? ಕಸ್ತೂರಿಬಾ ವಿನೋಬಾ ಕೇಳಿದೀನಿ. ಅಮೀಬಾ ಯಾರು, ಅಮೀರ್ ಖಾನ್ ಹೆಂಡ್ತಿ ಏನ್ರೀ?" "ಅಯ್ಯೋ ನೀವು ಬಯಾಲಜಿ ಓದಲಿಲ್ವಾ ತಾರಾ? ಅಮೀಬಾ, ದ ಸಿಂಗಲ್ ಸೆಲ್ಯುಲರ್ ಆರ್ಗಾನಿಸಂ." "ಓಹ್ ಹೌದಲ್ವಾ! ಈಗ ನೆನಪಿಗೆ ಬರ್ತಾ ಇದೆ. ಅದೇನೋ ನ್ಯೂಕ್ಲಿಯಸ್, ಪ್ಲಾಸ್ಮಾ ಅಂತ ಏನೋ ಚಿತ್ರ ಬರೆದು ಲೇಬಲ್ ಮಾಡಿದ್ದು." "ಪ್ಲಾಸ್ಮಾ ಅಲ್ಲ, ಸೈಟೋಪ್ಲಾಸಂ. ಅಯ್ಯೋ ಅದಿರಲಿ, ಸುದ್ದಿ ಕೇಳಿ. ಸೌತ್ ಕೊರಿಯಾದಲ್ಲಿ ಒಂದು ಭಯಂಕರ ಅಮೀಬಾ ಕಾಣಿಸಿಕೊಂಡಿದೆ ಕಣ್ರೀ." "ಅಯ್ಯ, ಈ ಕೊರೊನಾಗಿಂತಲೂ ಏನ್ರೀ? ನೀವು ಸುಮ್ಮನೆ ಹೆದರ್ತೀರಿ. ಮೊದಲು ಆ ಮಾಸ್ಕ್ ತೆಗೀರಿ. ಕಾಫಿ ಕೊಡ್ತೀನಿ." ಕಾಫಿ ಹೀರುತ್ತಾ ಮಿಸೆಸ್ ಶಾಂತಾ "ಸೌತ್ ಕೊರಿಯಾದಲ್ಲಿ ಈ ಅಮೀಬಾ ಸಿಕ್ಕಿದೆಯಂತೆ ಕಣ್ರೀ. ಅದು ಬ್ರೇನ್ ತಿಂದುಬಿಡತ್ತಂತೆ!&quo

ನಿನ್ನ ಗುರುತು

ಇಮೇಜ್
 ನಿನ್ನ ಗುರುತು ಮೂಲ : ಎರಿನ್ ಹ್ಯಾನ್ಸನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಿನ್ನ ವ್ಯಾಖ್ಯಾನವಾಗದು ನಿನ್ನ ವಯೋಮಾನ ಅಥವಾ ನೀ ತೊಟ್ಟ ಬಟ್ಟೆಗಳ ಅಳತೆ  ನೀನಲ್ಲ ನಿನ್ನ ತಲೆಗೂದಲಿನ ಬಣ್ಣ  ಅಥವಾ ತೂಕದ ಯಂತ್ರ ತೋರುವ ಸಂಖ್ಯೆ. "ನೀನು" ಎನ್ನಲಾಗದು ನಿನ್ನ ಹೆಸರನ್ನು ನೀನಲ್ಲ ನಿನ್ನ ಕೆನ್ನೆಯಲ್ಲಿ ಬೀಳುವ ಗುಳಿ ನೀನೆಂದರೆ ನೀನು ಓದುವ ಪುಸ್ತಕ ಮತ್ತು ನಿತ್ಯವೂ ನೀನು ಬಳಸುವ ಪದಾವಳಿ. ಬೆಳಗಿನ ನಿನ್ನ ಗೊಗ್ಗರು ಧ್ವನಿ ನಿನ್ನ ಗುರುತು ನಿನ್ನ ಪರಿಚಯ ನೀನು ಮರೆಮಾಚುವ ನಗೆಮುಗುಳು ನೀನು ನಿನ್ನ ನಗೆಯಲ್ಲಿರುವ ಮಧುರ ಧಾತು ನೀನೇ ನೀನು ಸುರಿಸಿದ ಕಣ್ಣೀರ ಹನಿಗಳು ಒಬ್ಬನೇ ಇದ್ದಾಗ ಹಾಡಿಕೊಳ್ಳುವೆಯಲ್ಲ, ಗಟ್ಟಿ ದನಿಯಲ್ಲಿ, ಆ ಹಾಡು ನೀನು. ನೀನಲೆದಾಡಿದ ಗುಡ್ಡಗಾಡುಗಳು ನೀನು ಮನೆಯೆಂಬ ಹೆಸರಿಟ್ಟ ಗೂಡು ನೀನು. ನಿನ್ನ ನಂಬಿಕೆಗಳು ನೀನು ನಿನ್ನ ಆತ್ಮೀಯರು ನೀನು ನಿನ್ನ ಕೋಣೆಯ ತೂಗುಚಿತ್ರಗಳು ನೀನು ನಿನ್ನಾಸೆ, ಕನಸು, ಆಕಾಂಕ್ಷೆ ನೀನು. ನಿನ್ನನ್ನು ನೀನಾಗಿಸಿದೆ ಎಷ್ಟೊಂದು ಚೆಲುವು ಎಂಬುದನ್ನು ನೀನು ಹೋದಂತಿದೆ ಮರೆತು. ನೀನಲ್ಲದ ವಸ್ತುಗಳಲ್ಲಿ ಯಾವಾಗ ನೀನು ಹುಡುಕಿಕೊಳ್ಳತೊಡಗಿದೆಯೋ ನಿನ್ನ ಗುರುತು.

ಮಾಗಿ

ಇಮೇಜ್
 (ಜ್ಯಾಕ್ ಸೊರೆನ್ಸನ್ ಅವರ ತೈಲವರ್ಣ ಚಿತ್ರಕ್ಕೆ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ) ಮಾಗಿ ಕಷ್ಟದಲ್ಲಿ ಕಳೆಯುತ್ತಿದೆ ಚಳಿಗಾಲ ಇಷ್ಟೆತ್ತರ ಹಿಮ ಗುಡಿಸದಿದ್ದರೆ ದಿನಾ ಗಟ್ಟಿ ಮಂಜಿನಗಡ್ಡೆಯಾಗಿ ಜಾರಿಕೆ ಕೆಲಸ ಹುಡುಕಿ ಹೊರಟ ಮನೆಯೊಡೆಯ ವಲಸೆ ಹೊರಟುಹೋದನೋ ಎಂಬ ಭಯ ಬಲವಂತದ ನಗು ನೆರೆಯವರಿಗೆ ತೋರಿಕೆ ಮಕ್ಕಳು ಕೇಳುತ್ತಾರೆ ಅಪ್ಪ ಬರುವುದು ಎಂದು ಬಿಕ್ಕಳಿಸಿ ಮರೆಯಲ್ಲಿ ಕಣ್ಣಂಚಿನ ಬಿಂದು ಸಕ್ಕರೆಯ ನಗೆ ನಕ್ಕು ಅನ್ನುವಳು : ಹಬ್ಬಕ್ಕೆ ಹಬ್ಬಕ್ಕೆ ಸಿಹಿ ಮಾಡಲೇ ಬೇಕಲ್ಲ ಮಕ್ಕಳಿಗಾಗಿ ಮಬ್ಬುಗತ್ತಲೆಯಲ್ಲೆದ್ದು ಒಲೆ ಹಚ್ಚಿ ದೀಪ ಬೆಳಗಿ ಎಬ್ಬಿಸಲು ಹೋದಾಗ ಕೇಳುತ್ತದೆ ನಗೆಕೇಕೆ ಇಣುಕಿ ನೋಡಿದ ಕಣ್ಣು ಅರಳುತ್ತದೆ ಒಮ್ಮೆಲೇ ಕೆನೆಯುತ್ತಿದೆ ಮನೆಗೆ ಹಿಂದಿರುಗಿದ ಕುದುರೆ - ಕೊನೆಗೂ ಬೆಳಕಾಗಿದೆ ಹೊರಗೆ  ನಿಶ್ಶಂಕೆ. ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಯುಕ್ರೇನಿನಲ್ಲಿ ಕ್ರಿಸ್ಮಸ್ ೨೦೨೨

ಇಮೇಜ್
 ( ಐವಾನ್ ಯರ್ಚಕ್ (ಯುಕ್ರೇನ್) ಅವರ ಕ್ರಿಸ್ಮಸ್ ೨೦೨೨ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏಐ) ಯುದ್ಧಕಾಲದ ಆಕಾಶದಲ್ಲಿ ಹೊಳೆಯುವುದು ತಾರೆಯಲ್ಲ ಬಿದ್ದ ಕ್ಷಿಪಣಿಗೆ ಇಂಥದ್ದೆಂಬ ಯಾವ ಗುರಿಯಿಲ್ಲ ಸದ್ದಾದರೆ ಈಗೀಗ ಬೆಚ್ಚುತ್ತಿಲ್ಲ ಮಕ್ಕಳು; ಹೆದರುವರು ಶುದ್ಧ ಶಾಂತಿಯು ನೆಲೆಸಿದಾಗ, ನಡುಗದೆ ಇದ್ದಾಗ ಬಂಕರು. ಚಳಿಯಲ್ಲಿ ನಡುಗುತ್ತಾ ಅಮ್ಮನ ಬಳಿ ಕೂತ ಮಗು ಕೇಳುವುದು ಕ್ರಿಸ್ಮಸ್ ಯಾವಾಗ ಎಂದು; ಪಾಳು ನಗರದ ನಡುವೆ ವಿಲಕ್ಷಣ ವಿಷಲ್ ಕೂಗು, ಬೀಳುತ್ತಿದೆ ಎಲ್ಲೋ ಭದ್ರ ಕಟ್ಟಡ ಇನ್ನೊಂದು. ಇಂದು ನಡೆದಿದೆ ನೆಲಮಾಳಿಗೆಯಲ್ಲಿ ಒಂದು ಪವಾಡ ಅಂಧಕಾರದ ನಡುವೆ ಹಚ್ಚಿಟ್ಟ ಹಾಗೊಂದು ದೀವಿಗೆ ಬಂದಿದೆ ಧರೆಗೊಂದು  ಮಗು, ನುಡಿದಂತೆ ಪ್ರವಾದ - ನಂದಿದ್ದ ಹಣತೆ ಮತ್ತೊಮ್ಮೆ ಹತ್ತಿಕೊಂಡಂತೆ ಕಾವಿಗೆ. ಪ್ರಶ್ನೆ ಕೇಳಿದ ಮಗುವಿನ ತಲೆ ನೇವರಿಸಿ ತಾಯಿ ಕ್ರಿಸ್ಮಸ್ ಬರುತ್ತದೆ ಮಗು, ಭರವಸೆಯಿಂದ ಕಾಯಿ. ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಮಂಜಪ್ಪನ ಕೋಳಿ

ಇಮೇಜ್
(ರಾಜಕುಮಾರ್ ಸ್ಥಬತಿ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ಕೊಟ್ಟಿರುವ ಚಿತ್ರ ಬರೆದಿದ್ದು ಏಐ) ಮೂಳೆ ಕೊರೆಯುವ ಚಳಿಗಾಲದ ರಾತ್ರಿ  ಮಂಜಪ್ಪ ತೊಟ್ಟು ತನ್ನ ಹಸಿರು ಟೋಪಿ ನಿದ್ದೆ ಬಾರದೆ ಎದ್ದು ಕೊಟ್ಟಿಗೆಗೆ ಬಂದು ನೋಡುವನು ಕೋಳಿ ಮಲಗಿದೆಯೇ ಎಂದು ಪ್ರೀತಿಯಿಂದ ಸಾಕಿದ್ದಾನೆ ಹಾಕಿ ಕಾಳು ನೀರು ಇನ್ನೇನು ತಿಂಗಳು ಕಳೆದರೆ ಮಾರಮ್ಮನ ತೇರು ಮೊಟ್ಟೆ ಇಟ್ಟು ಮರಿ ಮಾಡುವ ತನ್ನ ಧನಮೂಲ ಸಮೀಪಿಸುತ್ತಿದೆ ಮಾರಮ್ಮನಿಗೆ ಒಪ್ಪಿಸುವ ಕಾಲ ಇಲ್ಲ ಎನ್ನಲಾಗದು ಊರಲ್ಲಿ ಎಲ್ಲರಿಗೂ ಸರತಿ ಬಂದಾಗ ಕೋಳಿ ಒಪ್ಪಿಸುವುದೇ ರೀತಿ ಕೈಗೆತ್ತಿಕೊಂಡಾಗ ಕೋಳಿಯನ್ನು ಕಂದನ ಹಾಗೆ ಮಂಜಪ್ಪನ ಕಣ್ಣು ಮಂಜಾದದ್ದು ಯಾಕೆ ಹೀಗೇ ಎತ್ತಿಕೊಳ್ಳುತ್ತಿದ್ದ ಮಗಳ ನೆನಪಾಗಿ ಮತ್ತಷ್ಟು ಕ್ರೂರ ಎನಿಸುತ್ತದೆ ಮಾಗಿ ಮಾತು ಬಾರದ ಮೌನಿ, ಮನೆಗೆಲಸದಲ್ಲಿ ಜಾಣಿ ಹೆಗಲಿನ ಮೇಲೆ ಹೊತ್ತು ಬೆಳೆಸಿದ ರಾಣಿ ಜಾತ್ರೆಯಲ್ಲೇ ನಡೆದಿದ್ದಲ್ಲವೇ ಅವಳ ಮದುವೆ ಹರಕೆ ಹೊತ್ತಿದ್ದ ಮಾರಮ್ಮನಿಗೆ ಕೋಳಿ ಕೊಡುವೆ ಅವನ ಕಣ್ಣಂಚಲ್ಲಿ ನೆನಪು ತರಿಸುತ್ತದೆ ತೇವ ತಬ್ಬಿಕೊಳ್ಳುವನು ತನ್ನದೆಂಬ ಏಕೈಕ ಜೀವ ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಯುದ್ಧದ ನೆನಪು

 ನಾನಾಗ ದೆಹಲಿ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ. ಒಮ್ಮೆಲೇ ಬಾಂಗ್ಲಾದೇಶದ ವಿಮೋಚನೆಗಾಗಿ ಯುದ್ಧಘೋಷಣೆಯಾಯಿತು.  ಯಾರಿಗೂ ಈ ಕುರಿತು ಸುಳಿವೂ ಇರಲಿಲ್ಲ. ಯುದ್ಧಘೋಷಣೆಯಾದ ಸಂದರ್ಭವನ್ನು ನಾನು ಮರೆಯಲಾರೆ. ನಮ್ಮ ತಂದೆ ಸ್ಥಳೀಯ ಪತ್ರಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಮರ್ಶೆ, ಪುಸ್ತಕ ಪರಿಚಯ, ವ್ಯಕ್ತಿ ಪರಿಚಯ ಇವುಗಳನ್ನು ಬರೆಯುತ್ತಿದ್ದರು. ಕನ್ನಡದ ಅನೇಕಾನೇಕ ಕಲಾವಿದರು, ಲೇಖಕರು ಮತ್ತು ಪರಿಣಾಮಿ ವ್ಯಕ್ತಿಗಳನ್ನು ಕುರಿತು ಅವರು ದ ಹಿಂದೂಸ್ತಾನ್ ಟೈಮ್ಸ್, ದ ಈವನಿಂಗ್ ನ್ಯೂಸ್, ದ ಇಂಡಿಯನ್ ಎಕ್ಸ್ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ವಿಪುಲವಾಗಿ ಬರೆದರು. ಅವರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿತ್ತು. ಕೆಲವು ಕಾರ್ಯಕ್ರಮಗಳಿಗೆ ನಮ್ಮನ್ನೂ ಕರೆದುಕೊಂಡುಹೋಗುತ್ತಿದ್ದರು. ಇಂಥದೇ ಒಂದು ಸಂದರ್ಭ. ಅವತ್ತು ಪೂರಬ್ ಔರ್ ಪಶ್ಚಿಮ್ ಎಂಬ ಹಿಂದಿ ಚಿತ್ರದ ಸ್ಕ್ರೀನಿಂಗ್ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಸಿನಿಮಾ ಸ್ಕ್ರೀನಿಂಗ್ ಆದ ಕಾರಣ ನಾನು ಮತ್ತು ನನ್ನ ಅಣ್ಣ ಮರುಮಾತಿಲ್ಲದೆ ನಮ್ಮ ತಾಯಿತಂದೆಯರೊಂದಿಗೆ ಹೋಗಲು ಒಪ್ಪಿದೆವು.  ಬೇರೆ ಸಂಗೀತ, ನ್ಯತ್ಯ ಕಾರ್ಯ ಕ್ರಮಗಳಿಗೆ ಹೋಗಲು ನಾವು ಮೂಗು ಮುರಿಯುತ್ತಿದ್ದೆವು.  ಹೀಗಾಗಿ ಅನೇಕ ಅದ್ಭುತ ಕಲಾವಿದರ ಕಾರ್ಯಕ್ರಮಗಳನ್ನು ನೋಡುವ ಅವಕಾಶದಿಂದ ತಪ್ಪಿಸಿಕೊಂಡ ನನ್ನ ಪೆದ್ದುತನಕ್ಕೆ ಈಗಲೂ ಬೇಸರವಾಗುತ್ತದೆ.  ದೆಹಲಿಯ ಚಳಿಗಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗ

ಕೊನೆಯ ಎಲೆ

ಇಮೇಜ್
 ಕೊನೆಯ ಎಲೆ ಹೊರಗೆ ಹಿಮಪಾತ, ಕೆಟ್ಟ ಚಳಿ ; ಬೆಳಗಿನಲ್ಲೂ ಹಾಕಿದ ಪರದೆ. ಮಲಗಿದಲ್ಲೇ ನಿಟ್ಟಿಸುವನು ಬರಿದೇ  ಕಿಟಕಿಯ ಹೊರಗೆ ಹಬ್ಬಿದ ಬಳ್ಳಿ ರೋಗಿಯು ಕಲಾವಿದ; ಅವನ ಕಣ್ಣು ಕಾಣುವುದು ಬಳ್ಳಿಯಲ್ಲಿ ಬದುಕಿನ ಸಂಕೇತ; ಮೊನ್ನೆ ಬೀಸಿದ ಝಂಝಾವಾತ ಅಲ್ಲಾಡಿಸಿದೆ ನಿರ್ಬಲ ಬಳ್ಳಿಯನ್ನು. ಉದುರಿಹೋದವು ಬಹುಮಟ್ಟಿಗೆ ಎಲೆ ತನ್ನ ಬಾಳಿನ ವರ್ಷಗಳು ಉದುರಿದಂತೆ; ಬಾರಿಸುತ್ತಿದೆ ಅಪಾಯದ ಗಂಟೆ ಬತ್ತಿ ಹೋಗುತ್ತಿದೆ ಬಾಳ ಬಳ್ಳಿಯಲ್ಲಿ ಸೆಲೆ. ಕಲಾವಿದ ಮಲಗಿದ್ದಾನೆ, ತಪಿಸುವ ಜ್ವರದಲ್ಲಿ; ಬಡಬಡಿಸುತ್ತಾನೆ ಕನವರಿಕೆಯಲ್ಲಿ ಕೊನೆಯ ಎಲೆ ಉದುರಿಸಿದಾಗ ಬಳ್ಳಿ ವಿಲೀನವಾಗುವುದು ಪ್ರಾಣ ಕಾಲ ನಿರಂತರದಲ್ಲಿ...  ಹಣೆಯ ಮೇಲೆ ತಣ್ಣೀರು ಪಟ್ಟಿ ಇಟ್ಟು ಅವನ ಶಿಷ್ಯೆ ಹೊದ್ದಿಸುತ್ತಾಳೆ ಬೆಚ್ಚನೆ ಹೊದಿಕೆ; ಏನೂ ಆಗದು ಬಳ್ಳಿಗೆ, ಯಾತಕ್ಕೆ ಹೆದರಿಕೆ! ಎಂದು ಶಾಂತ ಸ್ವರದಲ್ಲಿ ಆಶ್ವಾಸನೆ ಕೊಟ್ಟು. ಬಣ್ಣ ಕುಂಚಗಳನ್ನು ಹೊತ್ತು ಕಿಟಕಿಯ ಹೊರಗಡೆ  ಚಜ್ಜದ ಮೇಲೆ ಹತ್ತಿ ಹಿಮವಂತ ಕುಳಿರ್ಗಾಳಿಯ ರಾತ್ರಿ ಬೆಳಕು ಬೀರುವ ಲಾಂದ್ರದ ದುರ್ಬಲ ಬತ್ತಿ: ಬಿಡಿಸುತ್ತಾಳೆ ಹಸಿರೆಲೆ ಉದುರಿದ ಎಲೆ ಇದ್ದೆಡೆ. ಬೆಳಕು ಹರಿದಾಗ ಕಲಾವಿದನು ಮೆಲ್ಲನೆ ತೆರೆದು ಕಣ್ಣು ಹರಿಸುತ್ತಾನೆ ಕಿಟಕಿಯ ಕಡೆಗೆ ದೃಷ್ಟಿ: ಉಳಿದುಕೊಂಡಿದೆ ಇನ್ನೂ! ಹಿಮವೃಷ್ಟಿ ವಿನಾಶಗೊಳಿಸಲಿಲ್ಲ ಬಳ್ಳಿಯ ಕೊನೆಯ ಹಸಿರನ್ನು! ಹಾಸಿಗೆಯಲ್ಲಿ ಮೆಲ್ಲನೆ ಮೇಲೆದ್ದು ಕುಳಿತ, ಜ್ವರ ಬಿಟ್ಟಿತ್ತು, ಮೈಯಲ್ಲಿ ಲವಲವಿಕೆಯಿತ್ತು. ಕಣ್ಣ

ಅಗೆದದ್ದು

ಇಮೇಜ್
#ಚಿತ್ರಕವಿತೆ ಈ ಕವಿತೆಗೆ ಸ್ಫೂರ್ತಿ ನೀಡಿದ್ದು ಆಲ್ಫ್ರೆಡೋ ರಾಡ್ರಿಗ್ಸ್ ಅವರ ಚಿತ್ರ. ಮೇಲೆ ತೋರಿಸಿದ ಚಿತ್ರ ಬರೆದುಕೊಟ್ಟಿದ್ದು ಏಐ. (https://www.reddit.com/r/Art/comments/asygu6/a_miner_frustration_alfredo_rodriguez_oil_on/l ಋಷಿಯಂತೆ ಕಾಣುವ ಈ ಗಡ್ಡಧಾರಿ ಹುಡುಕುತ್ತಿರುವುದು ಏನೆಂದು ಗೊತ್ತಾ? -- ಎಲ್ಲಿಂದ ಬಂದೆವು ನಾವು, ಹೋಗುವೆವು ಎಲ್ಲಿಗೆ, ಏನು ಸಾವಿನ ಅರ್ಥ, ಯಾವುದು ಜೀವನಮಂತ್ರ, ಇದೆಲ್ಲ ಪ್ರಶ್ನೆಗಳಿಗೆ ಉತ್ತರವನ್ನಲ್ಲ: ಕಾಡುವುದಿಲ್ಲ ಇವನನ್ನು ಈ ಪ್ರಶ್ನೆಗಹನ; ಮರಳಲ್ಲಿ ಮಿರುಗಿ ಮಿಂಚುವ ಕಣದಲ್ಲಿ ಇವನ ಕಣ್ಣರಸುವುದು ಮಾರೀಚನ ಚಿನ್ನ. ಅಗೆಯುತ್ತಾನೆ, ಬಾಚುತ್ತಾನೆ, ಜರಡಿ ಹಿಡಿಯುತ್ತಾನೆ, ಜಾಲಾಡುತ್ತಾನೆ ಮಣ್ಣು, ಮೈಯೆಲ್ಲಾ ಕಣ್ಣು. ಮಂಜಾಗುತ್ತಿರುವ ದೃಷ್ಟಿಯಲ್ಲೇ ಹುಡುಕುತ್ತಾನೆ ಕೆಸರಾದ ಕೈಯಲ್ಲಿ ಕಸವರದ ಹೊನ್ನು. ಪ್ರಶ್ನೆ ಕೇಳುವುದಲ್ಲ ಇವನ ಆಶಯ, ಏನಿದ್ದರೂ ಬದುಕು. ಹೆಚ್ಚು ಪ್ರಶ್ನಿಸಿದರೆ ಸುಮ್ಮನಾಗಿಸುವುದು ಸೊಂಟದ ಬಂದೂಕು  ಚಿತ್ರ: ಆಲ್ಫ್ರೆಡೋ ರಾಡ್ರಿಗ್ಸ್ (ಮೆಹಿಕೋ) ಕವಿತೆ: ಸಿ. ಪಿ.. ರವಿಕುಮಾರ್

ಏನಾದರೂ ಬೀರುತ್ತಿರು ತಮ್ಮ

ಇಮೇಜ್
  ಬೀರಬಲ್ ಎಂಬ ಹೆಸರಿನಲ್ಲಿ ಕೆಲವರಿಗೆ ಬಲ ಎಂಬುದು ದೊಡ್ಡದಾಗಿ ಕಂಡರೆ ಕೆಲವರಿಗೆ ಬೀರ್ ಎಂಬುದು  ದೊಡ್ಡದಾಗಿ ಕೇಳಿಸಿ ಅದರ ಹೀರಬಲ್ಲ ಸೋದರ ಬಿಯರ್ ನೆನಪಾಗಿ  ಅದಮ್ಯ ಬಾಯಾರಿಕೆ ಸೃಷ್ಟಿಸುತ್ತದೆ. ಬೀರು ಎಂಬುದು ಕನ್ನಡ ಪದವೇ. ಸಂಕ್ರಾಂತಿಯ ದಿನ ಎಳ್ಳುಬೀರುವ ನಾರಿಯರನ್ನೂ ಮತ್ತು ಕ್ರಾಂತಿಯ ವಿಭ್ರಾಂತಿಯಲ್ಲಿ ಕಲ್ಲು ಬೀರುವ ಬೀದಿಮಾರಿಯರನ್ನೂ ನೀವು ನೋಡಿಯೇ ಇರುತ್ತೀರಿ.  ಎಳ್ಳು ಮತ್ತು ಕಲ್ಲು ಅಲ್ಲದೆ ಬೀರಬಲ್ (beerable, adj.) ವಸ್ತುಗಳು ಬಹಳ ಇವೆ. ಗಂಡುಬೀರಿ,ಹಲ್ಲುಬೀರಿ (ರ) ಇತ್ಯಾದಿಗಳು ನಿಮಗೆ ಪರಿಚಿತವಾದ ಜನರೇ. ಬೀರ ಎಂಬುದು ವೀರ ಎಂಬ ಪದದ ಇನ್ನೊಂದು ರೂಪ. ವೀರಬಲ ಎಂಬುದೇ ಬೀರಬಲ್ ಆಗಿದೆ ಎಂದಾದರೆ ಹಲ್ಲುಬೀರ ಎಂದರೆ ಯಾರು? ಹಲ್ಲನ್ನೇ ಆಯುಧವಾಗಿ ಬಳಸುವ ವೀರನೆ?  ನೇಗಿಲನ್ನು ಆಯುಧವಾಗಿ ಬಳಸಿಕೊಂಡ ಬಲರಾಮ ಹೇಗೆ ಹಲಾಯುದನೋ ಹಾಗೆ ಹಲ್ಲಿನಿಂದ ಕಚ್ಚುವವನು ಹಲ್ಲಾಯುಧ.  ಇನ್ನು ಗಂಡುಬೀರಿ ಎಂದರೆ ಗಂಡಿನಂತೆ ವೀರಯುದ್ಧ ಮಾಡಿದವಳೇ ಗಂಡುಬೀರಿ ಎಂದು ಅರ್ಥೈಸುವುದು ರೂಢಿ. ಇಂದಿನ ಮಹಿಳಾ ವಿಮೋಚನಾ ಯುಗದಲ್ಲಿ ಇದನ್ನು ಹೇಳುವುದು ಕಷ್ಟ. ಗಂಡಿನಂತೆ ವೀರ ಯುದ್ಧ ಮಾಡುವುದು ಎಂಬುದನ್ನು ಕೇಳುತ್ತಲೇ ಎಷ್ಟೋ ಜನ ವಿಮೋಚಕಿಯರು ವೀರಗಚ್ಚೆ ಹಾಕಿ ಯುದ್ಧಕ್ಕೆ ಸನ್ನದ್ಧರಾಗುವರು.    ನಗೆ ಬೀರುವುದು ಎಂಬ ಪ್ರಯೋಗವೂ ಸಾಮಾನ್ಯ.  ಆದರೆ ನಗೆಬೀರ ಎಂಬ ಪ್ರಯೋಗವನ್ನು ನಾನೆಂದೂ ಕೇಳಿಲ್ಲ.  ಜೋಕಿಗೆ ನಗಬಲ್ಲ ವೀರರೇ ನಗೆವೀರರು ಎಂದಾದರೆ ಇಂಥ ನಗ

ಮಕ್ಕಳ ದಿನ

ಇಮೇಜ್
ಮಕ್ಕಳಿದ್ದವರನ್ನು ಕೇಳಿ ಮಕ್ಕಳ ದಿನ ಯಾವುದೆಂದು ಹುಟ್ಟಿದಾಗ ಅತ್ತರೂ  ಕಣ್ಣಲ್ಲಿ ಮುತ್ತು ತುಂಬಿಕೊಳ್ಳುವ ತಾಯಿ ಎಂದೂ ಹಾಡದ ತಂದೆಯೂ ಕಲಿತು ಹಳ್ಳುಳ್ಳಾಯಿ ಸೀತವಾದರೆ ಕೆಮ್ಮಾದರೆ ರಾತ್ರಿ ಇಡೀ ಜಾಗರಣೆ  ಹೆಗಲಮೇಲೆ ಹೊತ್ತು ರಥಯಾತ್ರೆ ವಿಜೃಂಭಣೆ ರಾತ್ರಿ ಕುಸುಕುಸು ಸದ್ದು ನಿದ್ದೆಯಲ್ಲೇ ಎದ್ದು ಒದ್ದೆಯಾಗಿದೆಯೇ ಬೇಕಾಗಿದೆಯೇ ಹಾಲು ಹೊಟ್ಟೆನೋವೇ ಏನೋ ತಿಳಿಯದೆ ಕಂಗಾಲು ತಾರಮ್ಮಯ್ಯ ಎಂದಾಗ ನಕ್ಕರೆ ಬೀಗಿ ತೂಗಿ ತೂಗಿ ಮಲಗದ ಮಗುವಿಗೆ ರೇಗಿ ಹೆಜ್ಜೆ ಇಟ್ಟರೆ ಸಂಭ್ರಮ ಅಪ್ಪ ಅಮ್ಮ ಎಂದರೆ ವಿಭ್ರಮ ಮೊದಲ ದಿನ ಸ್ಕೂಲಲ್ಲಿ ಹೋ ಎಂದು ಅತ್ತಾಗ ಅಳದಿದ್ದರೂ ಕರುಳು ಕಿತ್ತಂತೆ ಇತ್ತಾಗ  ಎಷ್ಟು ಬೆಳೆಯಿತು ಎಂದು ಹಾಕುತ್ತಾ ಗೀಟು ಏಳು ಏಳು ಶಾಲೆಗೆ ಹೊತ್ತಾಯಿತು ಶಾಲೆಯಲ್ಲಿ ಸಂಭ್ರಮದ ಆನುವಲ್ ಡೇ  ಹಿಂದಿನ ಸಾಲಿನಲ್ಲಿ ಡ್ಯಾನ್ಸ್ ಮಾಡುವ ಮಗು ನಮ್ಮದೇ ಒಂದು ಎರಡು ಶಿಶುಗೀತೆ ಹಾಡು ಮೂರು ನಾಕು ಮಗ್ಗಿ ಉರು ಹಾಕು ಏಳು ಎಂಟು ಆಲ್ಜೀಬ್ರಾ ನಂಟು ಒಂಬತ್ತು ಹತ್ತು ಮೀಸೆ ಬಂದಿತ್ತು ಎನ್ನುತ್ತಾ ಕಳೆಯುತ್ತಾರಲ್ಲ ದಿನವೆಲ್ಲಾ  ಒಂದರ ನಂತರ ಒಂದು ಕೇಳಿ ಅವರನ್ನು ಮಕ್ಕಳ ದಿನ ಯಾವುದೆಂದು ಸಿ ಪಿ ರವಿಕುಮಾರ್ #ಕವಿತಾಸ್ಫೂರ್ತಿ

ಮೊಳಕಾಲ್ಮೂರು!!

ಇಮೇಜ್
  ಯಾವ ಊರಿನ ಹೆಸರು ಕೇಳಿರದೇ ಇದ್ದರೂ ಮೊಳಕಾಲ್ಮೂರು ಹೆಸರನ್ನು ಎಲ್ಲರೂ ಕೇಳಿರುತ್ತಾರೆ. ಊರಿನ ಹೆಸರು ಅಂಥದ್ದು. ನೆನಪಿನಲ್ಲಿ ಉಳಿಯುವಂಥದ್ದು.  ಈ ಊರಿನ ಹೆಸರು ಅದು ಹೇಗೆ ಬಂತೋ! ಮೊಳಕಾಲಮ್ ಪ್ಲಸ್ ಊರು ಈಕ್ವಲ್ಸ್ ಮೊಳಕಾಲ್ಮೂರು ಎಂದು ಅದೇ ಊರಿನ ಒಬ್ಬರು ಅಂಕಣಕಾರರು ಹೇಳಿದರು. ಅವರು ಬರೆಯುವ ಕಾಲಂ ಅಳೆದರೆ ಒಂದು ಮೊಳ ಕರೆಕ್ಟಾಗಿ ಇರುತ್ತಿತ್ತು.  ಸಂತೆಗೆ ಒಂದು ಮೊಳ ನೇದಂತೆ ಎಂಬ ವಾಕ್ಯದಿಂದ ಪ್ರೇರಿತರಾಗಿ ಅವರು ಬರೆಯುತ್ತಿರಬಹುದು. ಮೊಳ ಕಾಲಂ ಊರು ಎಂಬ ಅವರ ವಿವರಣೆ ನನಗಂತೂ ಪಥ್ಯವಾಗಲಿಲ್ಲ. "ನೋಡಿ, ಈ ಊರು ಬಹಳ ಹಳೆಯದು. ಅದಕ್ಕೆ ಹಿಂದಿನಿಂದಲೂ ಇದೇ ಹೆಸರಿದೆ. ನೀವು ಕಾಲಂ ಬರೀತಿರೋದು ಒಂದು ಆರು ತಿಂಗಳಿಂದ, ಅಷ್ಟೇ." ಎಂದು ನಾನು ವಾದಿಸಿದೆ. ಇದರಿಂದ ಅವರು ಕೋಪಗೊಂಡು ನನ್ನ ಫೇಸ್ಬುಕ್ ಅಂಚೆಗಳಿಗೆ ಲೈಕ್ ಹಾಕುವುದನ್ನು ಬಿಟ್ಟರು. ಬಹುಶಃ ನನ್ನನ್ನು ಅಗೆಳೆಯ (unfriend) ಮಾಡಿರಲೂ ಬಹುದು. ಅದೇ ಧೈರ್ಯದ ಮೇಲೆ ಅವರ ಬಗ್ಗೆ ಬರೆಯುತ್ತಿರುವೆ.  ರಿಸರ್ಚ್ ಇಲ್ಲದೆ ಏನನ್ನೂ ಒಪ್ಪದ ಯುಗ ಇದು. ಹಾಗಾಗಿ ಹೆಸರಿನ ಒಗಟು ಬಿಡಿಸಲು ವಿಕಿಪೀಡಿಯ ನೋಡಿದೆ. ಮೊಳಕಾಲ್ಮೂರು ಹೆಸರಿಗೆ ತಕ್ಕಂತೆ ಕನ್ನಡದಲ್ಲೇ ಮೂರು ಪುಟಗಳು ಸಿಕ್ಕವು. ಒಂದೊಂದೂ ಮೂರೂ ಕಾಲು ಮೊಳ ಇದೆಯಾ ಎಂದು ಅಳತೆ ಮಾಡಿ ನೋಡುವ ಇಚ್ಛೆಯಾದರೂ ನಾನು ಹಾಗೆ ಮೊಳ ಹಾಕುವುದನ್ನು ನೋಡಿ ಜನ ಏನು ತಿಳಿದಾರೋ ಎಂದು ಸುಮ್ಮನಾದೆ. ಒಂದು ವಿಕಿಪೀಡಿಯ ಪುಟದಲ್ಲಿ ಮುರಿದ ಮೊಳಕಾ

ಗುಬ್ಬಚ್ಚಿಗೆ

ಇಮೇಜ್
 ಎಲ್ಲಿ ಕಾಣಲೇ ಇಲ್ಲವಲ್ಲ ಬಹಳ ದಿನ ಎಲ್ಲಿ ಹಾರಲು ಪ್ರೇರೇಪಿಸಿತು ಮನ! ಒಮ್ಮೊಮ್ಮೆಯಾದರೂ ಹಾಕುತ್ತಿರು ಸ್ವಂತಿ ಲೈಕ್ ಹಾಕಲಿ ಬಿಡಲಿ ಜನರು! ಏನಂತೀ? ಗೆಳೆಯರಾದ ಮೇಲೆ ಸ್ನೇಹ ಯಾಚಿಸಿ ಬಂದು ಕಾಣೆಯಾಗುವರಲ್ಲ ಕೆಲವು ಫೇಸ್ಬುಕ್ ಬಂಧು ಅವರಂತೆ ನೀನೂ ತಲೆ ಮರೆಸಿಕೊಂಡು ಹೋಗಿಬಿಟ್ಟೆಯೋ ಏನೋ ಮಾಡಿ ಅನ್ಫ್ರೆಂಡು! ಟ್ವೀಟ್ ಮಾಡುತ್ತಿರುವುದೆಲ್ಲ ಗೂಗೆ-ರಣಹದ್ದು ಎಂದು ನಿಲ್ಲಿಸಿಬಿಟ್ಟೆಯಾ ನಿನ್ನ ಚಿಲಿಪಿಲಿ ಸದ್ದು! ಯಾರೂ ಕಿವಿ ಮುಚ್ಚುವುದಿಲ್ಲ, ನಿನಗೇಕೆ ಚಿಂತೆ ಕಾದಿರಬಹುದು ನಿನ್ನುಲಿಗೇ, ಗದ್ದಲದ ಸಂತೆ! ಸಿ. ಪಿ. ರವಿಕುಮಾರ್ #ಕವಿತಾಸ್ಫೂರ್ತಿ

ಇಂಟರ್ನೆಟ್ ಉಗಮದಲ್ಲಿ ಸುದ್ದಿ ಗುಂಪುಗಳು

 ಇಂಟರ್ನೆಟ್ ಹೊಸದಾಗಿದ್ದಾಗ ಇಂದಿನ ಹಾಗೆ ಸಾಮಾಜಿಕ ತಾಣಗಳು ಇರಲಿಲ್ಲ. ಗೂಗಲ್ ಇವೆಲ್ಲ ಇನ್ನೂ ಬಂದಿರಲಿಲ್ಲ. ಯೂನಿಕ್ಸ್ ಬಳಕೆದಾರರಿಗೆ ರೀಡ್ ನ್ಯೂಸ್ ಎಂಬ ಒಂದು ತಂತ್ರಾಂಶ ಇತ್ತು. ಬಳಕೆದಾರರು ನ್ಯೂಸ್ ಗ್ರೂಪ್ಸ್ ಅಥವಾ ಸುದ್ದಿಗುಂಪುಗಳನ್ನು ಸೃಷ್ಟಿಸಿ ಅಲ್ಲಿ ತಮಗೆ ಇಷ್ಟವಾದ ಸಂಗತಿಗಳನ್ನು ಕುರಿತು ಹರಟೆ ಹೊಡೆಯಬಹುದಾಗಿತ್ತು. ಇವು ಇನ್ನೂ ಇವೆ. ಇಲ್ಲಿ ಜಾಹೀರಾತುಗಳ ಕಿರಿಕಿರಿ ಇಲ್ಲ. ಗಂಭೀರ ವಿಷಯಗಳ ಮೇಲೆ ಚರ್ಚೆ ಸಾಧ್ಯವಾಗಿತ್ತು. ಉದಾಹರಣೆಗೆ ಕಂಪ್ಯೂಟರ್ ಸೈನ್ಸ್ ವಿಷಯ ಕುರಿತಾದ ಸುದ್ದಿಗುಂಪಿನಲ್ಲಿ  ಗುಂಪಿಗೆ ಸೇರಿದ ಯಾರೇ ಬೇಕಾದರೂ ಪ್ರಶ್ನೆ ಕೇಳಬಹುದು.ಅದಕ್ಕೆ ಉಳಿದವರು ಉತ್ತರ ಹೇಳಬಹುದು. ಇಂದು ಕೋರಾ ಇದಕ್ಕೆ ಸಮೀಪದ್ದು. ವ್ಯತ್ಯಾಸ ಎಂದರೆ ಆಗ ಬಹಳ ಪ್ರಸಿದ್ಧ ಪ್ರಾಧ್ಯಾಪಕರು ಮತ್ತು ಸಂಶೋಧಕರು ಈ ಗುಂಪುಗಳಲ್ಲಿ ಭಾಗವಹಿಸುತ್ತಿದ್ದರು. ಭಾರತಕ್ಕೆ ಸಂಬಂಧಿಸಿದ ಒಂದು ನ್ಯೂಸ್ ಗ್ರೂಮ್ ಕೂಡಾ ಇತ್ತು. ಅದು ಈಗಲೂ ಅಸ್ತಿತ್ವದಲ್ಲಿ ಇರಬಹುದು. ಆದರೆ ಆಗ ಅದು ಬಹಳ ಸಕ್ರಿಯವಾಗಿತ್ತು. ಅಮೆರಿದಲ್ಲಿ ಓದುತ್ತಿದ್ದ ಬಹಳ ಮಂದಿ ಪಿಎಚ್.ಡಿ. ಮತ್ತು ಎಂ.ಎಸ್. ವಿದ್ಯಾರ್ಥಿಗಳು ಈ ಗುಂಪಿನಲ್ಲಿ ಚರ್ಚೆ ಮಾಡುತ್ತಿದ್ದರು. ನಾನು ಆಗ ಕ್ಯಾಲಫೋರ್ನಿಯಾದಲ್ಲಿ ವಿದ್ಯಾರ್ಥಿ. ಥೀಸಿಸ್ ಬರೆಯುವ ನಡುವೆ ನಾನು ಕೂಡಾ ಈ ಗುಂಪಿನಲ್ಲಿ ಸಕ್ರಿಯನಾಗಿದ್ದೆ. ಕನ್ನಡದ ನೂರಾರು ಕವಿತೆ ಮತ್ತು ಕತೆಗಳನ್ನು ಆಗ ಭಾಷಾಂತರಿಸಿ ಹಂಚಿದ್ದೇನೆ. ಭಾರತದಲ್ಲಿ ಆಗ ಎಲ್ಲರ

ಫೇನ್ ಮನ್ ಹೇಳಿದ ಕಥೆ

ಇಮೇಜ್
  ಆ ಹುಡುಗ ನನ್ನನ್ನು ಕೇಳಿದ ಸ್ವಲ್ಪ ಸೊಕ್ಕಿ, ಅಲ್ಲಿ ಬೊಡ್ಡೆಯ ಮೇಲೆ ಕೂತಿದೆಯಲ್ಲ ಹಕ್ಕಿ - ಅದರ ಹೆಸರೇನು ಗೊತ್ತಾ? ಊಹೂಂ ಗೊತ್ತಿಲ್ಲ ಎಂದೆ ಅನುಮಾನಿಸುತ್ತ. ಅದು ಕಂದು ಕತ್ತಿನ ಕಾಜಾಣ! ನಿಮ್ಮಪ್ಪ  ಏನೂ ಹೇಳಿಕೊಟ್ಟೇ ಇಲ್ಲ ,ವಿಜ್ಞಾನ! ನಾನು ನನ್ನಷ್ಟಕ್ಕೆ ನಕ್ಕೆ ಒಳಗೊಳಗೇ ಏಕೆಂದರೆ ಅಪ್ಪ ನನಗೆ ಕೊಟ್ಟಿದ್ದ ತಿಳಿವಳಿಕೆ ಏನೂ ತಿಳಿಸದು ನಮಗೆ ಹಕ್ಕಿಯ ಹೆಸರು ಅದೋ ಅಲ್ಲಿ ಹಕ್ಕಿ ಕಾಣುತ್ತಿದೆಯಲ್ಲ ನೋಡು ಕಂದು ಕತ್ತಿನ ಕಾಜಾಣ ಎನ್ನುವರು ಇಲ್ಲಿ ಹಾಲ್ಸೆನ್ಫ್ಲ್ಯೂಜೆಲ್ ಎನ್ನುವರು ಜರ್ಮನಿಯಲ್ಲಿ ಚೈನಾ ಭಾಷೆಯಲ್ಲಿ ಚಂಗ್ ಲಿಂಗ್ ಎನ್ನುವರು ಈ ಎಲ್ಲಾ ಹೆಸರು ತಿಳಿದುಕೊಂಡಿದ್ದರೂ ತಿಳಿಯದು ಹಕ್ಕಿಯ ವಿಷಯ ಒಂದು ಚೂರೂ ತಿಳಿಯುವುದು ಏನಿದ್ದರೂ ಹಕ್ಕಿಗೆ ಜನರಿಟ್ಟ ಹೆಸರು ಕಾಜಾಣ ಹಾಡುತ್ತದೆ, ಹಾರುವುದನ್ನು ಕಲಿಸುತ್ತದೆ ಮರಿಗೆ ಮೈಲುಗಟ್ಟಲೆ ಹಾರಿ ಬರುತ್ತದೆ ಬಂದಾಗ ಬೇಸಗೆ ಹೇಗೆ ಕಂಡು ಹಿಡಿಯುವುದೋ ದಾರಿ, ಕಾಜಾಣ - ಅರ್ಥೈಸಿಕೊಂಡಿಲ್ಲ ಯಾವ ಜಾಣ! ಇಟ್ಟ ಹೆಸರಿಗೂ ಮತ್ತು ವಾಸ್ತವಕ್ಕೂ ಅಂತರ ಇರುವುದನ್ನು ಅಪ್ಪ ಹೇಳಿಕೊಟ್ಟ ಈ ಥರ.

ತಂದೂರ್ ರೊಟ್ಟಿ

 ಹಾಸ್ಟಲ್ ವಾರ್ಡನ್ ಜವಾಬ್ದಾರಿಯನ್ನು ವಹಿಸಿಕೊಂಡು ನಾನು ವಾರ್ಡನ್ ಮನೆಯ ಗೃಹಪ್ರವೇಶ ಮಾಡಿ ಒಂದೆರಡು ವಾರಗಳಾಗಿದ್ದವು. ಗೃಹಪ್ರವೇಶ ಎಂದರೆ ಹಾಲು ಉಕ್ಕಿಸುವುದು, ಅಷ್ಟೇ. ಹಾಸ್ಟಲ್ ಕೆಲಸಗಳು ಹೇಗೆ ನಡೆಯುತ್ತವೆ ಎಂದು ಕ್ರಮೇಣವಾಗಿ ಅರ್ಥಮಾಡಿಕೊಳ್ಳುತ್ತಾ ಸಾಗುತ್ತಿದ್ದೆ. ಏನೂ ತೊಂದರೆಯಾಗದಿದ್ದರೆ ಅಷ್ಟೇ ಪುಣ್ಯ ಎಂಬ ಮನೋಭಾವನೆಯನ್ನು ನಾನು ತಳೆದಿದ್ದೆ. ನನಗೆ ಕೇಳಿಬರುತ್ತಿದ್ದ ದೂರುಗಳಲ್ಲಿ ಪ್ರಮುಖವಾದದ್ದು ಮೆಸ್ ಆಹಾರದ ಬಗ್ಗೆ. ಒಂದು ದಿನ ಸಂಜೆ ಒಬ್ಬ ಹುಡುಗ ತನ್ನ ಊಟದ ತಟ್ಟೆಯನ್ನೇ ಹಿಡಿದು ನಮ್ಮ ಮನೆಯ ಬಾಗಿಲು ಬಡಿದ. ಅವನ ಹಿಂದೆ ಇನ್ನಷ್ಟು ಜನ ಹುಡುಗರು ನಿಂತಿದ್ದರು. ಅಸಿಸ್ಟೆಂಟ್ ಮೆಸ್ ಸೂಪರ್ವೈಸರ್ ಬಿಷ್ಟ್  ಕೂಡಾ ಇದ್ದ. ನಾನು: ಏನಾಯಿತು? ತಟ್ಟೆ ಹಿಡಿದ ಹುಡುಗ: ಸರ್ ನೋಡಿ ನಿಮ್ಮ ಹಾಸ್ಟೆಲಿನಲ್ಲಿ ಕೊಡಲಾಗುತ್ತಿರುವ ರೋಟಿ ಹೇಗಿದೆ! ನಾನು: ಯಾಕೆ, ಏನಾಗಿದೆ? ತಹಿಹು: ಸರ್ ಇದು ತಿನ್ನಲು ಲಾಯಕ್ಕಾಗಿದೆಯೇ! ಅಡಿಯೆಲ್ಲ ಕಪ್ಪಾಗಿದೆ. ಎಷ್ಟು ದಪ್ಪ ಇದೆ. ಹಲ್ಲಿನಿಂದ ಕಚ್ಚಲೂ ಆಗದ ಹಾಗಿದೆ ... ನಾನು: ಏನು ಬಿಷ್ಟ್ ಜೀ, ನಿಮ್ಮ ಅಭಿಪ್ರಾಯ ಏನು? ಬಿಷ್ಟ್: ಸರ್, ನನ್ನ ಮಾತು ಕೇಳಿ. ಇವರು ಊಟಕ್ಕೆ ಬಂದಿದ್ದು ತಡವಾಗಿ. ಈಗ ನೋಡಿ ಗಂಟೆ ಎಂಟೂಮುಕ್ಕಾಲು ಚಳಿಗಾಲದಲ್ಲಿ ಏಳು ಗಂಟೆಗೇ ಡಿನ್ನರ್ ಪ್ರಾರಂಭ. ತಂದೂರಿ ರೋಟಿ ಬಿಸಿಯಾಗಿ ತಿಂದರೆ ತಾನೇ ಚೆನ್ನ! ನ್ಯಾಯವಾಗಿ ಇವರು ತಡವಾಗಿ ಬಂದವರು, ಮೆಸ್ ಮುಚ್ಚಿದ ಮೇಲೆ ಹಿಂಬದಿಯ ಬಾಗಿಲಿನ

ಹಾಲನು ಮಾರಲು.ಹೋಗುವ ಬಾರೇ ಬೇಗ ಸಖೀ

 ನಸುಕಿನಲ್ಲೇ ವಾರ್ಡನ್ ಮನೆಯ ಬಾಗಿಲನ್ನು ಯಾರೋ ಬಡಿದರು. ಆಗ ದೆಹಲಿಯಲ್ಲಿ ಚಳಿಗಾಲ. ದೆಹಲಿಯ ಚಳಿಯ ಪ್ರಕೋಪವನ್ನು ಅನುಭವಿಸಿದವರೇ ಬಲ್ಲರು. ಅದರಲ್ಲೂ ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಕಿರುಕುಳಕ್ಕೆ ಮತ್ತೊಂದು ಆಯಾಮ ಸಿಕ್ಕಂತೆ.  ಮಗಳು ಆಗಿನ್ನೂ ವರ್ಷ ತುಂಬಿದ ಮಗು. ಅವಳು ಮಗುವಾಗಿದ್ದಾಗಲೂ ರಾತ್ರಿ ಜಾಗರಣೆ ಮಾಡಿ ಬೆಳಗ್ಗೆ ನಿದ್ರಿಸುವ ಅಭ್ಯಾಸ ಮಾಡಿಕೊಂಡಿದ್ದಳು. ವಾರ್ಡನ್ ಜವಾಬ್ದಾರಿ ಸ್ವೀಕರಿಸುವ ಮುನ್ನ ನಾವು ಆಗ ವೈಶಾಲಿ ಅಪಾರ್ಟ್ಮೆಂಟ್ಸ್ ಎಂಬ ಸಮುಚ್ಚಯ ವಸತಿಯಲ್ಲಿದ್ದೆವು. ಆ ಮನೆಯಲ್ಲಿ  ಹಜಾರದಿಂದ ಒಳಕೋಣೆಯವರೆಗೂ ಉದ್ದದ ಓಣಿಯಂತಹ ದ್ವಾರವಿತ್ತು. ನನ್ನ ಹೆಂಡತಿ ಅದಕ್ಕೆ ಹೊಂದುವ ಕಾರ್ಪೆಟ್ ಮಾಡಿಸಿ ಹಾಕಿದ್ದಳು. ರಾತ್ರಿ ಹತ್ತು ಗಂಟೆಗೆ ಮಲಗುವ ಸಮಯವೆಂದರೆ ಮಗಳು ಅತ್ಯಂತ ಚೈತನ್ಯದಿಂದ ಆಡಲು ಸಿದ್ಧಳಾಗಿರುತ್ತಿದ್ದಳು! ಅವಳ ತಾಯಿಗೆ ಇಡೀ ದಿನ ಅವಳನ್ನು ನೋಡಿಕೊಂಡು ಸುಸ್ತಾಗಿಹೋಗಿರುತ್ತಿತ್ತು. ಆಟಕ್ಕೆ ನಾನೇ ಸಿಕ್ಕುತ್ತಿದ್ದೆ. ಒಂದು ಗಂಟೆ ಹಾಗೂ ಹೀಗೂ ಆಟದಲ್ಲಿ ಕಳೆಯುತ್ತಿತ್ತು. ಹನ್ನೊಂದು ಸಮೀಪಿಸಿದಾಗ ನನಗೂ ತೂಕಡಿಕೆ ಪ್ರಾರಂಭವಾಗುತ್ತಿತ್ತು. ಅವಳನ್ನು ಉದ್ದದ ಕಾರ್ಪೆಟ್ ಮೇಲೆ ಮಲಗಿಸುತ್ತಿದ್ದೆ. ಆಗ ಅವಳಿಗೆ ಒಂದು ಕಡೆಗೆ ಮಾತ್ರ ಬೋರಲಾಗಲು ಬರುತ್ತಿತ್ತು. ತೆಂಗಿನಕಾಯಂತೆ ಉರುಳುತ್ತಾ ಓಣಿಯ ಇನ್ನೊಂದು ತುದಿ ತಲುಪುವಳು. ಅಲ್ಲಿ ಕೋಣೆಯ ಬಾಗಿಲು ಸಿಕ್ಕುತ್ತಿತ್ತು. ಉರುಳುವುದು ಅಸಾಧ್ಯವೆಂದಾಗ ಅವಳು ಪ್ರತಿಭಟಿಸುತ್ತಿದ

ಭುವನೇಶ್ವರಿಯ ನೆನೆ ಮಾನಸವೆ!

ಇಮೇಜ್
  ಭುವನೇಶ್ವರಿ ನಮ್ಮ ರಾಜ್ಯೋತ್ಸವಕ್ಕೆ ಬಂದದ್ದು ನಿಮಗೆ ಗೊತ್ತೇ? ಹೌದು, ಸಾಕ್ಷಾತ್ ಭುವನೇಶ್ವರಿ!  ಇಲ್ಲ, ಭುವನೇಶ್ವರಿಯ ಕೈಯಲ್ಲಿ ಯಾವ ಆಯುಧಗಳೂ ಇರಲಿಲ್ಲ. ಹಳದಿ ಕೆಂಪು ಧ್ವಜವೂ ಇರಲಿಲ್ಲ.  ನಮಗೆಲ್ಲ ಸ್ವಲ್ಪ ನಿರಾಸೆ ಆಯಿತು. ಭುವನೇಶ್ವರಿಯ ಜೊತೆ ಸೆಲ್ಫೀ ತೊಗೊಂಡು ಸೋಷಿಯಲ್ ಮೀಡಿಯಾ ಮೇಲೆ ನಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಲ್ಲುವ  (ಅಲ್ಲ ಹೆಚ್ಚಿಸಿಕೊಳ್ಳುವ) "ಸೆಲ್ಫೀಷ್" ಮೋಟೋ ಹೊಂದಿದ್ದ ಸೆಲ್ಫೀಶ್ ಹಾಗೂ ಸೆಲ್ಫೀಷಿನಿಯರು ಸಪ್ಪೆ ಮುಖ ಹಾಕಿಕೊಂಡು ಕೂತರು. ಆದರೆ ಕೆಲವೇ ನಿಮಿಷಗಳಲ್ಲಿ  ಎಲ್ಲರ ಮೈಯಲ್ಲಿವಿದ್ಯುತ್ ಸಂಚಾರ ಆಯಿತು. ಇಲ್ಲ, ಯಾವ ಶಾರ್ಟ್ ಸರ್ಕ್ಯುಟ್ ಆಗಲಿಲ್ಲ! ಭುವನೇಶ್ವರಿಯ ಮಾತುಗಳಿಂದ ಎಲ್ಲರ ಮೈಯಲ್ಲಿ ವಿದ್ಯುತ್ ಸಂಚಾರ ಆಯಿತು, ಅಷ್ಟೇ. ಕಾಳಿಯನ್ನು ಪ್ರಾರ್ಥಿಸಿದ ತೆನಾಲಿ ಅವಳನ್ನು ನೋಡಿ ನಕ್ಕನಂತೆ. ಕುಪಿತಗೊಂಡ ಕಾಳಿ ಇವನು ನಕ್ಕಿದ್ದಕ್ಕೆ ಏನು ಕಾರಣ ಎಂದು ಕೇಳಿದಳು. "ತಾಯಿ! ನನಗೆ  ಇರುವುದು ಒಂದು ಮುಖ, ಆದರೂ ನೆಗಡಿ ಬಂದಾಗ ಎಷ್ಟು ಕಷ್ಟ ಪಡುತ್ತೇನೆ! ನಿನಗೆ ಅಷ್ಟೊಂದು ಮುಖಗಳು! ನಿನಗೆ ನೆಗಡಿ ಆದರೆ ನೀನೆಷ್ಟು ಫಜೀತಿ ಪಡುತ್ತೀ ಎಂದು ನೆನೆದು ನಗು ಬಂತು!" ಎಂಬ ಉತ್ತರ ಕೇಳಿ ಕಾಳಿಗೂ ನಗುಬಂತು. (ತೆನಾಲಿಗೆ  #ನಗುಬಂತಾ ಎಂದು ಟ್ಯಾಗ್ ಮಾಡುವ ಕಷ್ಟ ಎಂದೂ ಬರಲಿಲ್ಲ.)  ಕಾಳಿಯು ಅವನಿಗೆ ವಿಕಟಕವಿ ಎಂಬ ಬಿರುದು ಕೊಟ್ಟಳು. ವಿಕಟಕವಿ ಎಂಬುದು ಕನ್ನಡದಲ್ಲಿ ಪ್ಯಾಲಿನ್ಡ್ರೋಮವೆಂಬುದು ವ

ಸೋಪ್ ಆಪರಾ

ಇಮೇಜ್
  ಸೋಪ್ ಆಪರಾ ಎನ್ನುವ ಪದ ಯಾಕೆ ನೆನಪಿಗೆ ಬಂತು ಅಂದರೆ ಸ್ನೇಹಿತರು ಒಬ್ಬರು ಫೇಸ್ಬುಕ್ ಮೇಲೆ ಹಂಚಿಕೊಂಡ ಚಿತ್ರ ನೋಡಿ.  ಮಳೆ ಪ್ರವಾಹ ಮನೆಗೆ ನುಗ್ಗಿ ರೂಮಿನಲ್ಲಿ ಮೊಳಕಾಲುಮಟ್ಟ ಸೇರಿದೆ. ಇಷ್ಟಾದರೂ ಮನೆಯವರು ಕುರ್ಚಿಗಳಲ್ಲಿ ಆಸೀನರಾಗಿ ಸೀರಿಯಲ್ ನೋಡುತ್ತಿದ್ದಾರೆ.  ಈ ಸೀರಿಯಲ್ ಆಕರ್ಷಣೆ ಬರೀ ಭಾರತೀಯರಿಗೆ ಮಾತ್ರ ಎಂದು ಖಂಡಿತಾ ತಿಳಿಯಬೇಡಿ. ಅಮೆರಿಕನ್ ಮಹಿಳೆಯರೂ ಈ ಧಾರಾವಾಹಿಗಳಿಂದ ಅಷ್ಟೇ ಆಕರ್ಷಿತರು.  ಅಮೆರಿಕನ್ ಮನೆಗಳಲ್ಲಿ ನಿತ್ಯಚರಿ ಬೆಳಗ್ಗೆ ಬಹಳ ಬೇಗ ಪ್ರಾರಂಭವಾಗುತ್ತದೆ. ಶಾಲೆಗೆ ಹೋಗುವ ಮಕ್ಕಳು ಮತ್ತು ಕೆಲಸಕ್ಕೆ ಹೋಗುವ ಗಂಡ ಎಲ್ಲರಿಗೂ ಬೆಳಗಿನ ಉಪಾಹಾರ ತಯಾರಿಸಿ ಡಬ್ಬಿಗಳಲ್ಲಿ ಊಟ ತುಂಬಿಸಿ ಗಂಡನನ್ನು ಚುಂಬಿಸಿ ಐ ಲವ್ ಯು ಎಂದು ಬೈಬೈ ಹೇಳಿ (ಇದು ಅಲ್ಲಿಯ ನಿಯಮ) ಉಸ್ ಎಂದು ಸೋಫಾ ಮೇಲೆ ಕುಸಿದ ಗೃಹಿಣಿ ಮುಂದೆ ಹೊತ್ತು ಕಳೆಯುವುದು ಹೇಗೆ? ಕೆಲಸವನ್ನು ಔಟ್ ಸೋರ್ಸ್ ಮಾಡುವ ಪದ್ಧತಿ ಇಲ್ಲಿ ಬಹಳ ಹಿಂದಿನಿಂದಲೇ ಬಂದಿದೆ. . ಬಟ್ಟೆಗಳನ್ನು ವಾಷಿಂಗ್ ಮಶೀನಿಗೆ ಹಾಕಿದರೆ ಮೂವತ್ತು ನಿಮಿಷಗಳಲ್ಲಿ ಒಗೆದು ಪೂರೈಸುತ್ತದೆ.  ಹಿಂಡಿದ ಬಟ್ಟೆಗಳನ್ನು ಡ್ರೈಯರ್ ಯಂತ್ರಕ್ಕೆ ಸಾಗಿಸಿದರೆ ನಲವತ್ತು ನಿಮಿಷಗಳಲ್ಲಿ ಬಟ್ಟೆಗಳು ಮಡಿಸಲು ಸಿದ್ಧ.   ಐರನ್ ಬೇಡದ ಬಟ್ಟೆಗಳನ್ನು ಮಡಿಸಿಟ್ಟರೆ ಸಾಕು. ಉಳಿದ ಬಟ್ಟೆಗಳನ್ನು ಇಸ್ತ್ರಿ ಮಾಡಲೇಬೇಕೆಂದರೆ ನಾನಾ ಬಗೆಯ ತಂತ್ರಜ್ಞಾನಗಳಿವೆ.  ಗಂಡನು ಬಟ್ಟೆ ಧರಿಸಿದ್ದಾಗ ಸ್ಟೀಮ್ ಐರನ್ ಮೂಲಕ ಗರಿಮುರಿ

ಯಾರು ಕಿವಿ ಮುಚ್ಚಿದರೂ!

ಇಮೇಜ್
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ! ಈ ಸಾಲನ್ನು ಬರೆದ ಕವಿ ಶ್ರೋತೃಗಳಿಗೆ ಬಹಳ ಅನ್ಯಾಯ ಮಾಡಿದ್ದಾರೆ.  "ಎದೆ ತುಂಬಿ ಹಾಡುವೆನು" ಭಾವಗೀತೆಗೆ ಈಗ ಐವತ್ತರ ಸಂಭ್ರಮ ಇರಬಹುದು. ಎಂ. ಎಸ್. ಐ.ಎಲ್. ಗೀತೆಗಳು ಎಂಬ ರೇಡಿಯೋ ಕಾರ್ಯಕ್ರಮದಲ್ಲಿ ಇದು ಮೊದಲು ಪ್ರಸಾರವಾಯಿತು. ಮೈಸೂರು ಅನಂತಸ್ವಾಮಿ ಅವರು ಈ ಕಾರ್ಯಕ್ರಮಕ್ಕೆ ಅನೇಕ ಭಾವಗೀತೆಗಳನ್ನು ಧ್ವನಿಮುದ್ರಿಸಿದರು.  ಆದರೆ ಈ ಗೀತೆ ಮಾತ್ರ ಅತ್ಯಂತ ಜನಪ್ರಿಯವಾಗಿದ್ದಕ್ಕೆ ಕಾರಣ ಮೇಲಿನ ಸಾಲಿನಲ್ಲೇ ಇದೆ. ಗಾಯಕಿ ಬಹಳ ಹೈ ಪಿಚ್ನಲ್ಲಿ ಹಾಡುತ್ತಿದ್ದಾಗ ಶ್ರೋತೃಗಳು  ಕಿವಿ ಮುಚ್ಚಿದರೂ ಐ ಕಾಂಟ್ ಕೇರ್ ಲೆಸ್ ಎನ್ನುವ ಭಾವದಿಂದ ಗೀತೆಯನ್ನು ಕಂಪ್ಲೀಟ್ ಮಾಡಿಯೇ ಬಿಡುವ ಗಾಯಕಿಯರು ಈ ಗೀತೆಗೆ ಅಪಾರ ಜನಪ್ರಿಯತೆ ತಂದುಕೊಟ್ಟರು. ಆಗ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎದೆ ತುಂಬಿ ಹಾಡುವೆನು! ಭಾವಗೀತೆ ಸ್ಪರ್ಧೆಯಲ್ಲಿ ಮೂವತ್ತು ಜನ ಭಾಗವಹಿಸಿದರೆ ಕನಿಷ್ಠ ಹತ್ತು ಜನ ಎದೆ ತುಂಬಿ ಹಾಡಿ ಶ್ರೋತೃಗಳ ಕಿವಿ ತುಂಬುತ್ತಿದ್ದರು.  ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ! ಇದೇನು ಅಂಥ ಹೆಮ್ಮೆಯ ವಿಷಯವೇ ಹೇಳಿ! ನಿಮ್ಮ ಮಿತ್ರರ ಮೇಲೆ ನಿಮಗೆ ಕೋಪ ಬಂದಿದೆಯೇ? ಅವರ ಮೂರು ವರ್ಷದ ಮಗುವಿಗೆ ಡ್ರಮ್ಸ್ ಉಡುಗೊರೆ ಕೊಡಿ. ಅದು ಪರಮಸಂತೋಷದಿಂದ ಇಡೀ ದಿನವೆಲ್ಲಾ ಡಿಂಡಿಮ ಡಂಡಮ ಬಾರಿಸುತ್ತದೆ. ನಿಮ್ಮ ಮಿತ್ರರು ಕಿವಿಯಲ್ಲಿ ಹತ್ತಿ ಇಟ್ಟುಕೊಂಡರೇನು, ಬೆಟ್ಟು ಇಟ್ಟುಕೊಂಡರೇನು! ಯಾರು ಕಿವಿ ಮುಚ್ಚಿದರೂ

ಜಯಾ ಬಚ್ಚನ್ ಕೋ ಗುಸ್ಸಾ ಕ್ಯೋನ್ ಆತಾ.ಹೈ

ಇಮೇಜ್
  ಶಾಪಿಂಗ್ ಮಾಲಿನ ಮೇಲಿನ ಶಾಪಿಂಗ್ ಮಾಲಿಗೆ ಹೋಗಿ ಬಂದಿರಬಹುದಾದ ಕಾರಣ ಜಯಾ ಅವರು ಶಾಪದ ಮೇಲೆ ಶಾಪ ಹಾಕುತ್ತಿದ್ದಾರೆ. ಹಿಂದೊಮ್ಮೆ ಅವರ ಪತಿ ಅಮಿತಾಭ್ ಬಚ್ಚನ್ ಆಂಗ್ರಿ ಯಂಗ್ ಮ್ಯಾನ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಆಗ ಜಯಾ ಬಚ್ಚನ್ ಅವರಿಗೆ ಕ್ತೈಯಿಂಗ್ ಯಂಗ್ ವುಮನ್ ಎಂಬ ಹೆಸರನ್ನು ಯಾರೂ ಕೊಡಲಿಲ್ಲ ಎಂದು ಆಕೆಗೆ ಸಹಜವಾಗಿ ಕೋಪ ಬಂತು. ಎಲ್ಲ ಸಿನಿಮಾಗಳಲ್ಲೂ ಆಕೆ ಅಳುವುದು ಸಾಮಾನ್ಯವಾಗಿತ್ತು.  ಈ ಕೋಪವೇ ಈಗ ಭುಗಿಲ್ ಎಂದು ಮೇಲೆದ್ದು ಆಕೆ ಆಂಗ್ರಿ ಓಲ್ಡ್ ವುಮನ್ ಉಪಾಧಿ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.  ಎಲ್ಲರ ಮೇಲೂ ಕೋಪ. ಕಭೀ ಜ್ಯಾದಾ ಕಭೀ ಕಮ್.  ಕೆಲವು ತಿಂಗಳ ಕೆಳಗೆ ಪಾರ್ಲಿಮೆಂಟಲ್ಲಿ ಕೋಪಿಸಿಕೊಂಡು ಶಾಪ ಹಾಕಿದ್ದು ಬಹಳ ಚರ್ಚೆಗೆ ಕಾರಣವಾಯಿತು. ಈಗ ಫೋಟೋ ತೊಗೊಳ್ಳುವ ಪಾಪರಾಟ್ಜಿಗೆ ಶಾಪ ಹಾಕಿದ್ದಾರೆ ಎಂದು ಪಾಪ ಅವರೆಲ್ಲ ಕೋಪಗೊಂಡು ಸೇಡು ತೀರಿಸಿಕೊಳ್ಳುವ ಪಣ ತೊಟ್ಟಿದ್ದಾರೆ.  ಈಗ ಯಾರು ಬೇಕಾದರೂ ಪತ್ರಕರ್ತರಾಗಬಹುದು. ಹಿಂದೊಮ್ಮೆ ಫೋಟೋ ತೆಗೆಯಲು ಫೋಟೋಗ್ರಾಫರ್ ಬೇಕಿತ್ತು. ಬರೆಯಲು ಟೈಪ್ ರೈಟರ್ ಬೇಕಿತ್ತು. ಅಚ್ಚು ಮಾಡಲು ಪತ್ರಿಕೆ ಬೇಕಿತ್ತು. ಈಗ ಮೊಬೈಲ್ ಇದ್ದರೆ ಇವು ಎಲ್ಲವೂ  ಬೆರಳ ತುದಿಯಲ್ಲೇ.  "ಅಯ್ಯೋ, ಇದು ಇದ್ದರೆ ಸಾಕೇ? ಬರೆಯೋಕ್ಕೆ ಬರಬೇಡವೆ?" ಎಂದು ಕೇಳಿದರೆ ನೀವು ಬಹಳ ಹಳೇ ಕಾಲದವರು. ಬರೆಯಲು ಈಗ ಏನೇನೂ ಕಷ್ಟವಿಲ್ಲ. ಗೂಗಲ್ ಹುಡುಕಾಡಿದರೆ ಹಳೆಯ ಫೋಟೋ ಸಿಕ್ಕೀತು. ಅದನ

ಬೆಂಗಳೂರಲ್ಲಿ ಹ್ಯಾಲೋವೀನ್

 ಕೆಲವು ವರ್ಷಗಳ ಹಿಂದೆ ಹ್ಯಾಲೋವೀನ್ ಸಂಜೆ ನಾನು ಮನೆಯಲ್ಲಿ ಒಬ್ಬನೇ ಇದ್ದಾಗ ಕರೆಗಂಟೆ ಬಾಜಿಸಿತು. ತೆರೆದರೆ ಅಲ್ಲೊಬ್ಬಳು ಮರಿ ಮಾಯಾವಿನಿ ಮತ್ತು ಮರಿ ಡ್ರಾಕುಲಾ ನಿಂತಿದ್ದರು. ಟ್ರಿಕ್ ಆರ್ ಟ್ರೀಟ್ ಎಂದು ಬಾಯಲ್ಲಿ ಹೇಳಿದರೂ ಟ್ರೀಟ್ ಪಡೆದುಕೊಳ್ಳಲು ಕೈಯಲ್ಲಿ ಹಿಡಿದಿದ್ದ ಡಬ್ಬವನ್ನು ಮುಂದೆ ಮಾಡಿದರು. ಓಹೋ! ಭಾರತದಲ್ಲಿ ಹೀಗೆ ಟ್ರಿಕ್ ಆರ್ ಟ್ರೀಟ್ ಅಂತ ಬರುವುದು ಯಾವಾಗಿನಿಂದ ಪ್ರಾರಂಭವಾಯಿತು ಎಂದು ಯೋಚಿಸಲು ನನಗೆ ಸಮಯವಿರಲಿಲ್ಲ. ಮಾಯಾವಿನಿ ಮತ್ತು ಡ್ರಾಕುಲಾಗೆ ಅರ್ಜೆಂಟಾಗಿ ಏನಾದರೂ ಟ್ರೀಟ್ ಹೊಂದಿಸಲೇ ಬೇಕಾಗಿತ್ತು.  ಏನಾದರೂ ಟ್ರಿಕ್ ತೋರಿಸಿಬಿಡಲಾ ಎಂದರೆ ಅಂಥ ಹೇಳಿಕೊಳ್ಳುವಂಥ ಟ್ರಿಕ್ ನನಗೇನೂ ಬರದು. ನಾನು ಅವರಿಗೆ ಜೋಕ್ ಏನಾದರೂ ಹೇಳಿ ನಗುಬಂತಾ ಎಂದು ಕೇಳಿಬಿಡೋಣವೇ ಎಂದು ಚಿಂತಿಸಿದೆ. ನನ್ನ ಮಕ್ಕಳು ಇಂಥದಕ್ಕೆ ಹೇಗೆ ಪ್ರತಿಕ್ರಿಯಿಸಬಹುದೆಂದು ಯೋಚಿಸಿದಾಗ ಅಂಥ ಸಾಹಸಕ್ಕೆ ಕೈ ಹಾಕದಿರುವುದೇ ಮೇಲೆಂದು ಅಡಿಗೆಮನೆಗೆ ನುಗ್ಗಿ ಹುಡುಕಿದೆ. ನಮ್ಮ ಮನೆಯಲ್ಲಿ ಚಾಕೊಲೇಟ್ ಇಟ್ಟುಕೊಳ್ಳುವುದಿಲ್ಲ. ಬಿಸ್ಕೆಟ್ ನೀಡೋಣವೆಂದರೆ ಯಃಕಶ್ಚಿತ್ ಮಾರಿ ಬಿಸ್ಕೆಟ್ಟಿಗೆ ಯಾವ ಮಾಯಾವಿನಿಯೂ ಯಾಮಾರಿ ಹೋಗುವುದಿಲ್ಲವೆಂದು ತೋರಿತು.  ಸೇಬಿನ ಹಣ್ಣು ಕಣ್ಣಿಗೆ ಬಿತ್ತು.  ಸ್ನೋವೈಟ್ ಎಂಬ ರಾಜಕುಮಾರಿಗೆ ಹಿಂದೊಮ್ಮೆ ಮಾಯಾವಿನಿ ಮಲತಾಯಿ ಸೇಬನ್ನು ಕೊಟ್ಟಿದ್ದು ನೆನಪಾಗಿ ಯುರೇಕಾ ಎಂದು ಕೂಗುತ್ತಾ ಹೊರಗೆ ಬಂದೆ. ಅಂಕಲ್ ನನ್ನ ಹೆಸರು ರೇಖಾ ಅಲ್ಲ, ಅದು ನ

ಭಾರತ ರಾಷ್ಟ್ರಪುರುಷ

 ಮೂಲ ಕವಿತೆ: ಅಟಲ್ ಬಿಹಾರಿ ವಾಜಪೇಯಿ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಭೂಮಿಯ ಒಂದು ಖಂಡವಲ್ಲ ಭಾರತ, ಜೀವಂತ ರಾಷ್ಟ್ರಪುರುಷ ಹಿಮಾಲಯವು ಮಸ್ತಕ, ಕಾಶ್ಮೀರವು ಮುಕುಟ, ಪಂಜಾಬ್ ಮತ್ತು ಬಂಗಾಳ ವಿಶಾಲ ಭುಜದ್ವಯಗಳು ಪೂರ್ವ ಪಶ್ಚಿಮದ ಘಟ್ಟಗಳು ವಿಶಾಲ ತೊಡೆಗಳು ಕನ್ಯಾಕುಮಾರಿ ಈ ಪುರುಷನ ಪಾದಗಳು ಸಾಗರವೇ ಮುಂದಾಗುತ್ತದೆ ತೊಳೆಯಲು ಕಾಲು. ಇಂದು ಚಂದನದ ಭೂಮಿ, ಅಭಿನಂದನದ ಭೂಮಿ. ಇದು ತರ್ಪಣದ ಭೂಮಿ, ಇದು ಅರ್ಪಣದ ಭೂಮಿ. ಇಲ್ಲಿಯ ಒಂದೊಂದು ಕಲ್ಲೂ ಶಂಕರ, ಒಂದೊಂದು ಜಲಬಿಂದುವೂ ಗಂಗಾಜಲ. ನಾವು ಬದುಕಿದರೂ ಇದಕ್ಕಾಗಿ ಸತ್ತರೂ ಇದಕ್ಕಾಗಿ.

ನೀ ಕೊಡೆ ನಾ ಬಿಡೆ

ಇಮೇಜ್
 ನೀ ಕೊಡೆ ನಾ ಬಿಡೆ ಕೊಡೆ ಎಂಬ ಪದ ಹೇಗೆ ಸೃಷ್ಟಿಯಾಗಿರಬಹುದು ಎಂದು ಯೋಚಿಸಿದಾಗ ಉತ್ತರ ಹೊಳೆದೇ ಬಿಡ್ತು. ಮನೆಗೆ ಬಂದ ಅತಿಥಿ ಮಳೆ ಬರುತ್ತಿದೆ ಎಂಬ ಕಾರಣದಿಂದ  ಹೊರಡುವ ಸೂಚನೆಯೇ ಇಲ್ಲ. ಆತಿಥೇಯನ ಹೆಂಡತಿ ಬಿಸಿ ಬೋಂಡಾ, ಕಾಫಿ ಎಲ್ಲ ಮಾಡಿಕೊಟ್ಟದ್ದಾಯಿತು. ಹಾಳಾದ ಜಿಟಿಜಿಟಿ ಮಳೆಯೋ ಟಿವಿ ಧಾರಾವಾಹಿಯ ಹಾಗೆ ನಿಲ್ಲುತ್ತಲೇ ಇಲ್ಲ.  ಆಕೆ ಗಂಡನನ್ನು ಕರೆದು "ಅವರಿಗೆ ಛತ್ರಿ ಕೊಟ್ಟು ಕಳಿಸಿ" ಎಂದಳು. "ನಾ ಕೊಡೆ" ಎಂದು ಗಂಡ ಹಠ ಹಿಡಿದ. ಅವನಿಗೆ ಕಾಶೀಯಾತೆಯ ಸಮಯದಲ್ಲಿ ಮಾವನು ತಲೆಯ ಮೇಲೆ ಹಿಡಿದ ಛತ್ರಿ.  "ನೋಡಪ್ಪಾ ಈ ಛತ್ರಿ ಕೆಲಸ ಮಾಡಿದ್ದಕ್ಕೆ ಕ್ಷಮಿಸು!" ಎಂದು ಅವರು ಹಾಸ್ಯ ಮಾಡಿ ಆಶೀರ್ವದಿಸಿ ಕೊಟ್ಟ ಛತ್ರಿ. ಅದನ್ನು ಹಾಗೆಲ್ಲ ಬೇರೆಯವರಿಗೆ ಕೊಡಲಾಗದು.  ಆಕೆ "ಛತ್ರಿ ಕೊಟ್ಟು ಕಳಿಸಿ" ಎಂದೂ ಇವನು "ಛತ್ರಿ ಕೊಡೆ" ಎಂದೂ ವಾಗ್ವಾದ ಮಾಡುತ್ತಿರುವಾಗ ಅತಿಥಿಗೆ ಅದು ಕೇಳಿಸಿ ಅವನು ಅಲ್ಲಿಂದ  ಹೊರಟು ನಿಂತ ಪ್ರಸಂಗ "ಛತ್ರಿ = ಕೊಡೆ" ಎಂಬ ಸಮೀಕರಣವನ್ನು ಹುಟ್ಟುಹಾಕಿತು.  ಕೊಡೆಯು ಎಷ್ಟು ಪ್ರಮುಖ ಸ್ಥಾನ ವಹಿಸಿತ್ತು ಗೊತ್ತೇ? ಮಹಾರಾಜನಿಗೆ ಬಿಳಿ ಬಣ್ಣದ ಕೊಡೆ ಹಿಡಿಯುತ್ತಿದ್ದರಂತೆ. ಇದನ್ನು ಬೆಳ್ಗೊಡೆ ಅಥವಾ ಶ್ವೇತಛತ್ರ ಎಂದು ಕರೆಯುತ್ತಿದ್ದರು. ಸಾಮಾನ್ಯರು ಬಿಳಿ ಬಣ್ಣದ ಛತ್ರಿ ಬಳಸುವುದು ನಿಷೇಧವಾಗಿತ್ತು. ಕರಿ ಬಣ್ಣದ ಛತ್ರಿ ಅಥವಾ ಕರ್ಗೊಡೆ ಹೀಗೆ ರೂಢಿಗೆ ಬ

ಖಂಡಿತ ಖಡಾಖಂಡಿತ

ಇಮೇಜ್
ಖಂಡಿತ ಎಂದರೆ ಯಾವುದನ್ನು ಖಂಡಗಳಲ್ಲಿ ವಿಭಜಿಸಲಾಗಿದೆಯೋ ಅದು.  ಅವರು ಖಂಡಿತವಾದಿ ಎಂದರೆ ಅವರ ಮಾತು ಏಕ್ ಮಾರ್ ದೋ ಟುಕಡಾ  ರೀತಿಯದು ಎಂದೇ ಅರ್ಥ.  ವಾದ ಮಂಡನೆ ಮಾಡುವವರು ಕೆಲವರು. ವಾದವನ್ನು ಖಂಡನೆ ಮಾಡುವವರು ಹಲವರು.  ಇಂಥವರನ್ನು ಟಿವಿ ವಾದವಿವಾದ ಕಾರ್ಯಕ್ರಮಗಳಲ್ಲಿ ಪ್ರತಿದಿನ ನೋಡಿ ನಮಗೆ ಈಗ ಅಭ್ಯಾಸ ಆಗಿಹೋಗಿದೆ.  ಮಂಡನೆ ಮಾಡುವ ಮುಂಚೆಯೇ ಖಂಡನೆ ಮಾಡುವವರು, ವಾದಗಳ ಮುಂಡನ ಮಾಡುವವರು, ಪ್ರತಿವಾದಿಗಳನ್ನು ಚಂಡಾಡುವವರು,  ಭಂಡ ವಾದಗಳನ್ನು ಮಾಡುವವರು, ಚಂಡಿ ಹಿಡಿದು ಕೂಡುವವರು, ಹೀಗೆ ವಾದಿಗಳಲ್ಲಿ ಅನೇಕಾನೇಕ ಪ್ರಕಾರಗಳು. ಕೆಲವರಂತೂ ಡಿಬೇಟಿಗೆ ದಬ್ಬೇಟು ತಿನ್ನಲೆಂದೇ ಬರುತ್ತಾರೆ ಎನ್ನುವ ಅನುಮಾನ ನನಗೆ ಬರುತ್ತದೆ. ಇಂಥವರನ್ನು ಕರೆಸಿ ಎಲ್ಲರ ಎದುರು ಮುಂಡನ ಮಾಡಿಸಿ ಮನರಂಜನೆ ನೀಡುವುದು ಟಿವಿ ಆಂಕರ್ ಉದ್ದೇಶ.   ಸರಿ, ಖಂಡಿತ ಎಂದರೇನು ಎಂದು ನಿಮಗೆ ಖಂಡಿತಾ ಅರ್ಥವಾಗಿದೆಯಲ್ಲ, "ಖಡಾಖಂಡಿತ" ಎಂದರೆ ಏನು ಅರ್ಥವೋ! ಖಡಾ ಎಂದರೆ  ಹಿಂದಿಯಲ್ಲಿ ನಿಂತಿರುವ ಎಂದು ಅರ್ಥ.  ಖಡಕ್ ಚಾಯ್ ಎಂದರೆ ಯಾವ ಚಹಾ ಬಟ್ಟಲಲ್ಲಿ ಚಮಚ ನಿಲ್ಲಬಲ್ಲದೋ ಅಂತಹ ಸ್ಟ್ರಾಂಗ್ ಚಹಾ. ಲಕ್ಕಿ ರೆಸ್ಟೋರಾಂ ಎಂಬಲ್ಲಿ ನಾನು ಹಿಂದೆ ಕುಡಿಯುತ್ತಿದ್ದ ಚಾಯ್ ಇಂಥದ್ದು. ಇಂಥ ಧಾಬಾ ಶೈಲಿಯ ಖಾನಾವಳಿಗಳಲ್ಲಿ ಬೆಳಗ್ಗೆ ಚಹಾ ಪಾತ್ರೆಗೆ ಸೊಪ್ಪು ಹಾಕಿದರೆ ಅದು ಇಡೀ ದಿನ ಕುದಿಯುತ್ತದೆ. ಚಹಾ ಬಣ್ಣ ಸ್ವಲ್ಪ ಪೇಲವ ಎನ್ನಿಸಿದರೆ ಮೇಲೆ ಇನ್ನೂ ಒಂದಿಷ್ಟು ಸೊಪ್

ವೈವಾನುಗ್ರಹ

ಇಮೇಜ್
  ವೈವಾ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಲ್ಲ ಒಂದು ದಿವಸ ಎದುರಿಸಲೇಬೇಕಾದ ಅಗ್ನಿಪರೀಕ್ಷೆ.  ಮೌಖಿಕ ಪರೀಕ್ಷೆಗೆ ನಾವು ವೈವಾ ಎನ್ನುವುದು ರೂಢಿಯಾದರೂ ಇದರ ಮೂಲ ವೀವಾ ವೋಸಿ ಎಂಬುದು.  ಇಲ್ಲಿ ವೀವಾ ಎಂದರೆ ಜೀವಂತ ಎಂಬರ್ಥ. ನಾನು ಹುಡುಗನಾಗಿದ್ದಾಗ ವೀವಾ ಎಂಬ ಹಾರ್ಲಿಕ್ಸ್ ಮಾದರಿಯ ಪಾನೀಯ ಜನಪ್ರಿಯವಾಗಿತ್ತು.  ಲಾಸ್ ಏಂಜಲೀಸ್ ನಗರದಲ್ಲಿ ವೀವಾ ಲ ಪಾಸ್ತಾ ಎಂಬ ಪಾಸ್ತಾ ಖಾದ್ಯಾಲಯದಲ್ಲಿ ತಾಜಾ ಪಾಸ್ತಾ ಮಾಡಿಕೊಡುತ್ತಾರೆ ಎಂಬ ಹೆಗ್ಗಳಿಕೆ. ವೀವಾ ಎಂಬುದನ್ನು ಲೈವ್ ಎಂದು ಈ ನಡುವೆ ಭಾಷಾಂತರಿಸುವ ರೂಢಿ ಬಂದಿದೆ. ಉದಾಹರಣೆಗೆ  ಲೈವ್ ಟ್ರಾನ್ಸ್ಮಿಷನ್ ಎಂದರೆ ನೇರ ಜೀವಂತ ಪ್ರಸಾರ.  ಇನ್ನು ವೀವಾ ವೋಸಿ ಎಂಬಲ್ಲಿ ವೋಸಿ ಎಂದರೆ "ಓಸಿ" ಎಂದು ಖಂಡಿತಾ ಅಪಾರ್ಥ ಮಾಡಬೇಡಿ. ವೋಸಿ ಎಂದರೆ ವಾಯ್ಸ್ ಅಥವಾ ಧ್ವನಿ. ವೀವಾ ವೋಸಿ ಎಂದರೆ "ಜೀವಂತ ಧ್ವನಿಯಲ್ಲಿ" ಎಂಬ ಅರ್ಥ. ಪರೀಕ್ಷಕರ ಮುಂದೆ ಜೀವಂತವಾಗಿ ಕೂತು ಆತನ ಅಥವಾ ಆಕೆಯ ಜೀವಂತ ಧ್ವನಿಯಲ್ಲಿ ಕೇಳಲ್ಪಡುವ ಪ್ರಶ್ನೆಗಳಿಗೆ ಸಾಧ್ಯವಾದಷ್ಟೂ ಜೀವಂತವಾಗಿ ಉತ್ತರಿಸಿ ಜೀವ ಉಳಿಸಿಕೊಳ್ಳುವ ಪರೀಕ್ಷೆಗೆ ಈಗ ವೈವಾ ಎಂಬ ಹೆಸರು ಬಂದಿದೆ. ಕೆಲವರು ವೈವಾಹಿಕ ಎಂಬುದರ ಚುಟುಕು ರೂಪ ಇದೆಂದು ತಪ್ಪು ಕಲ್ಪನೆ ಹರಡಿರುವುದು ಖೇದನೀಯ. ವೈವಾಹಿಕ ಜೀವನದಲ್ಲಿ ಜೀವಂತವಾಗಿದ್ದು ಜೀವಂತ ಧ್ವನಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಹಿಕಪ್ ಇಲ್ಲದೆ ಉತ್ತರಿಸಿ ಜೀವ ಉಳಿಸಿಕೊಂಡವರು ಹೆಚ್ಚು ಜನರಿಲ

ಆರು ತಿಳಿಯರು ನಿನ್ನ ಆರಾ ಪರಾಕ್ರಮ!

ಇಮೇಜ್
  ಆರಾ ಎಂದರೆ ನಮ್ಮ ಸುತ್ತಲೂ ಇರುತ್ತದೆ ಎನ್ನಲಾಗುವ ಅಗೋಚರ ಪ್ರಭೆ.  ದೇವರ ಚಿತ್ರಗಳಲ್ಲಿ ಸುತ್ತಲೂ ಚಿನ್ನದ ಬಣ್ಣದಲ್ಲಿ ಹೊಮ್ಮುತ್ತಿರುವ ಪ್ರಭೆಯನ್ನು ಚಿತ್ರಿಸುವುದು ಸಾಮಾನ್ಯ. ಮನುಷ್ಯರಷ್ಟೇ ಅಲ್ಲ, ಇತರ ಪ್ರಾಣಿಗಳಿಗೂ ಮತ್ತು ನಿರ್ಜೀವ ವಸ್ತುಗಳಿಗೂ ಆರಾ ಇರುತ್ತದೆ ಎಂದು ನಂಬುತ್ತಾರೆ.  ನಾಡಿ ಪಂಡಿತರು ನಾಡಿ ಹಿಡಿದು ನೋಡಿ ಬಾಡಿಯನ್ನು ಏನು ಬಾಧಿಸುತ್ತಿದೆ ಎಂದು ಔಷಧ ಕೊಡುವಂತೆ ಕೆಲವರು ಆರಾ ನೋಡಿ ಔಷಧ ನೀಡುವುದು ಕೂಡಾ ಇದ್ದಾರಂತೆ.  ಆರಾಂಕುಶಮಿಟ್ಟೊಡಂ ಎಂದು ಕವಿಯೊಬ್ಬನು ಹೇಳಿದ್ದು ತನ್ನ ಆರಾಗೆ ಯಾರಾದರೂ ಕುಶದಿಂದ (ಹುಲ್ಲಿನ ಕಡ್ಡಿ) ಚುಚ್ಚಿದರೂ ತನಗೆ ಬನವಾಸಿಯ ಹುಲ್ಲು ಕಾಡು ಮೇಡು ಎಲ್ಲವೂ ನೆನಪಿಗೆ ಬರುತ್ತದೆ ಎಂದು. ಕೆಲವರಿಗೆ ಆರಾ ವಿಷಯ ಗೊತ್ತಿಲ್ಲ ನೋಡಿ, ಅವರು ಕವಿ ಆರು ಅಂಕುಶಗಳನ್ನು ಇಟ್ಟಾಗ ಬನವಾಸಿಯ ನೆನಪು ಮಾಡಿಕೊಳ್ಳುವನೆಂದು ತಪ್ಪಾಗಿ ಅರ್ಥೈಸಿಬಿಡುತ್ತಾರೆ.  ಆರು ಅಂಕುಶ ಯಾಕೆ ಬೇಕು ಹೇಳಿ? ಒಂದು ಅಂಕುಶ ಇಟ್ಟರೂ ಆನೆಯನ್ನು ಕಂಟ್ರೋಲ್ ಮಾಡಬಹುದು ಎಂದು ಇವರಿಗೆ ಹೇಳುವವರು ಆರು?  ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎಂಬ ಗಾದೆಯನ್ನು ಗಮನಿಸಿ. ಇಲ್ಲಿ ಕೂಡಾ ಆರಾ ಪ್ರಸ್ತಾಪ ಇದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವರು ತಮ್ಮ ಆರಾ ಹೆಚ್ಚಿಸಿಕೊಳ್ಳಲು ಫೋಟೋಶಾಪ್ ಇತ್ಯಾದಿ ಬಳಸಿದರೂ ಅವರ ಆರಾ ಹೆಚ್ಚಲಿಲ್ಲ.   ಸದ್ಯ ಆರಾ ತೀರಾ ಕಡಮೆಯಾಗಿ ಮೂರಾಬಟ್ಟೆ ಆಗಲಿಲ್ಲ ಎನ್ನುವುದು ಸಮಾಧಾನಕರ.  ಪ್ರ

ಹಾಲನು ಮಾರಲು ಹೋಗುವ ಬಾರೇ ಬೇಗ ಸಖೀ

 ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು. ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾಕ್ಟರ್ ಬಳಿ ಪದೇಪದೇ ಹೋಗುವುದ

ಕೆಲಸ ಮತ್ತು ಹೆಸರು

ಇಮೇಜ್
  ಕಬೀರನ ಒಂದು ದ್ವಿಪದಿಯಲ್ಲಿ ಅವನು ಹೀಗೆ ಹೇಳಿದ್ದಾನೆ. ಎಲ್ಲಿ ಹೆಸರಿದೆಯೋ ಅಲ್ಲಿ ಕೆಲಸವಿಲ್ಲ, ಎಲ್ಲಿ ಕೆಲಸವಿದೆಯೋ ಅಲ್ಲಿಲ್ಲ ಹೆಸರು ಎಂದೂ ಸೇರವು ಒಂದೇ ಸ್ಥಳದಲ್ಲಿ ತಿಂಗಳು ಮತ್ತು  ನೇಸರು ಬೇಂದ್ರೆ ಅವರ "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಎಂಬ ಸಾಲುಗಳು ನಿಮಗೆ ನೆನಪಾಗಿರಬಹುದು. ಸೂರ್ಯ ಮತ್ತು ಚಂದ್ರ ಒಂದು ಕಡೆ  ಹೇಗೆ ಸೇರುವುದಿಲ್ಲವೋ ಹಾಗೇ ಕೆಲಸ ಮತ್ತು ಹೆಸರು ಎಂದೂ ಒಂದೇ ಕಡೆ ಸೇರುವುದಿಲ್ಲ ಎನ್ನುವುದು ಕಬೀರನ ದ್ವಿಪದಿಯ ಸಾರಾಂಶ.  ಕೆಲಸ ಯಾರದೋ ಆದರೂ ಹೆಸರು ತೆಗೆದುಕೊಳ್ಳುವವರು ಬೇರೆ ಎಂಬ ವಿಷಯವನ್ನು ನೀವು ಪ್ರತಿನಿತ್ಯ ನೋಡುತ್ತೀರಿ.  ಯಾರೋ ಕಷ್ಟ ಪಟ್ಟು ಬರೆದದ್ದನ್ನು ಅನಾಯಾಸವಾಗಿ ಕಾಪಿ ಮಾಡಿ ತಮ್ಮ ಹೆಸರು ಹಾಕಿಕೊಳ್ಳುವುದು ಈಗ ಬಹಳ ಸಾಧಾರಣವಾಗಿದೆ.  ಇದಕ್ಕೆ ಪ್ಲೇಜಿಯರಿಸಮ್ ಎಂಬ ಒಂದು ಇಸಂ ಪದವಿದೆ.   ಆಲೆಕ್ಸ್ ಹೇಯ್ಲಿ ಎಂಬ ಅಮೆರಿಕನ್ ಮೂಲದ ಲೇಖಕ ರೂಟ್ಸ್  ಎಂಬ ಕಾದಂಬರಿ ಬರೆದ. ಕಪ್ಪು ಅಮೆರಿಕನ್ ಜನರ ಬೇರುಗಳನ್ನು ಶೋಧಿಸುವ ಈ ಕಾದಂಬರಿಯ ಸಂಕ್ಷಿಪ್ತ ರೂಪ ಬಹಳ ಹಿಂದೆ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಪ್ರಕಟಿಸಿತು. ಆಗ ಅದನ್ನು ಓದಿ ಈ ಜನಾಂಗದವರು ಒಳಗಾದ ಶೋಷಣೆ ಕುರಿತು ನನ್ನ ಕಣ್ಣು ತೆರೆಯಿತು. ಮುಂದೆ ಈ ಕಾದಂಬರಿಯಲ್ಲಿ ಹೆರಾಲ್ಡ್ ಕೊರ್ಲಾಂಡರ್ ಎಂಬ ಲೇಖಕನ ದ ಆಫ್ರಿಕನ್ ಕೃತಿಯಿಂದ ಭಾಗಗಳನ್ನು ಕದಿಯಲಾಗಿದೆ ಎಂಬ ಆಪಾದನೆ ಬಂತು.  ನ್ಯಾಯಾಂಗ ಕೇಸ್ ದಾಖಲಾಯಿತು. ಹ