ಪೋಸ್ಟ್‌ಗಳು

Mirror ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕನ್ನಡಿ

ಇಮೇಜ್
ಮೂಲ ಅಮೇರಿಕನ್ ಕವಿತೆ -  ಸಿಲ್ವಿಯಾ ಪ್ಲಾತ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್   ನಾ ನು ಬೆಳ್ಳಿ, ನಾನು ಕರಾರುವಾಕ್ಕು, ನನಗಿಲ್ಲ ಯಾವ ಪೂರ್ವಾಗ್ರಹ ನನ್ನ ಕಣ್ಣಿಗೆ ಕಂಡಿದ್ದೆಲ್ಲಾ ಕೂಡಲೇ ಹಾಗೇ ಇಡಿಇಡಿಯಾಗಿ ಸ್ವಾಹಾ ಒಲವಿನ ಒಗ್ಗರಣೆಯಿಲ್ಲ, ದ್ವೇಷದ ಉಪ್ಪುಕಾರವಿಲ್ಲ. ಸತ್ಯ ಹೇಳುತ್ತೇನೆ ಅಷ್ಟೇ, ನಾನು ಕ್ರೂರಿಯೇನಲ್ಲ, ಯಾವುದೋ ಕ್ಷುದ್ರ ದೇವತೆಯ ನಾಲ್ಕು ಮೂಲೆಯ ಕಣ್ಣು. ದಿನದ ಬಹುಭಾಗ ಧ್ಯಾನಿಸುತ್ತೇನೆ ಮುಂದಿರುವ ಗೋಡೆಯನ್ನು. ಅದು ನಸುಗೆಂಪು, ಮೇಲೆ ಕಲೆಗಳು; ನೋಡುತ್ತಾ ಅದೆಷ್ಟು ಕಾಲ ಕಳೆದಿರುವೇನೋ, ಈಗದು ಹೊಕ್ಕಿದೆ ನನ್ನ ಅಂತರಾಳ; ಮೇಲಿಂದಮೇಲೆ ನಮ್ಮ ನಡುವೆ ಹಾಯುತ್ತವೆ ಮುಖಗಳು, ಕತ್ತಲು. ನಾನೊಂದು ಕೊಳವಾಗುತ್ತೇನೆ. ನನ್ನೊಳಗೆ ಇಣುಕುತ್ತಾಳೆ ಒಬ್ಬ ಹೆಣ್ಣು, ತಾನು ನಿಜವಾಗಿ ಯಾರೆಂದು ಹುಡುಕುತ್ತಾಳೆ ನನ್ನೊಳಗೆ ತಿಂಗಳ ಬೆಳಕು ಮೇಣದ ಬತ್ತಿಗಳು ಸುಳ್ಳುಹೇಳುತ್ತವೆ ಅವಳಿಗೆ ನನ್ನತ್ತ ನೋಡಿದರೆ ಸಿಕ್ಕುವುದು ಸಾಚಾ ಪ್ರತಿಫಲ ಅವಳು ಬಿಕ್ಕಳಿಸಿ ಮುಖ ಮುಚ್ಚಿ ಉದುರಿಸುವಳು ದೃಗ್ ಜಲ. ನಾನವಳಿಗೆ ಬೇಕು; ಬರುತ್ತಾಳೆ ನನ್ನತ್ತ ಮತ್ತೆ ಮತ್ತೆ. ಕತ್ತಲು ಹರಿದಾಗ ಅವಳ ಮುಖವೇ ಕಾಣುವುದು ಪ್ರತಿಬೆಳಗ್ಗೆ. ಇವಳು ನನ್ನಲ್ಲಿ ಮುಳುಗಿಸಿದ್ದಾಳೆ ಒಬ್ಬ ಯುವತಿಯನ್ನು; ಒಬ್ಬ ಮುದುಕಿ ಪ್ರತಿನಿತ್ಯ ನನ್ನೊಳಗಿನಿಂದ ಮೇಲೇಳುತ್ತಾಳೆ ಭಯಾನಕ ಮೀನಿನಂತೆ ...