ರೂಮಿಯ ಮೂರು ರಚನೆಗಳು
ಮೂಲ: ಮೌಲಾನಾ ಜಲಾಲುದ್ದೀನ್ ರೂಮಿ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ (1) ಕಲ್ಲಾಗಿ ಸತ್ತವನು ಹುಲ್ಲಾಗಿ ಮೇಲೆದ್ದೆ ಹುಲ್ಲಾಗಿ ಸತ್ತವನು ಎದ್ದೆ ಹುಲ್ಲೆಯಾಗಿ ಹುಲ್ಲೆಯಾಗಿ ಸತ್ತವನು ಪಡೆದಿರುವೆ ಮಾನವ ಜನ್ಮ ಏತರ ಭಯ? ಸಾವಿನಿಂದ ನನಗೇನಾಗಿದೆ ನಷ್ಟ? (2) ಒಡೆಯನನ್ನು ಕಾಣದೆ ಸವೆಸಿದ ಜೀವನವು ಮೈಮರೆತ ನಿದ್ರೆ ಅಥವಾ ಭಿನ್ನ ರೂಪದಲ್ಲಿ ಸಾವು ನಿನ್ನನ್ನು ಕಲುಷಿತಗೊಳಿಸುವ ನೀರು ವಿಷವಾಗಿದೆ ನಿನ್ನನ್ನು ಶುದ್ಧಗೊಳಿಸುವ ವಿಷವಾಗಿದೆ ನೀರು (3) ಉದ್ಧಾರವಾಯಿತು ನಿನ್ನ ಅನುರಾಗಾಮೃತ ಹೀರಿದ ಆತ್ಮ ಉದಾತ್ತ ಸ್ಥಿತಿಗೇರಿಸಿದೆ ಆ ಜೀವಸಲಿಲ ಬಳಿಬಂದ ಸಾವು ಯಾವಾಗ ಮೂಸಿತೋ ನಿನ್ನ ಸೌರಭ ನನ್ನಿಂದ ಏನೂ ಅಪೇಕ್ಷೆ ಪಡುವುದಿಲ್ಲ