ಮೂಲ: ನಿಕ್ ಫ್ಲಿನ್ (ಅಮೇರಿಕಾ ಸಂಯುಕ್ತ ರಾಷ್ಟ್ರ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಹತ್ತುವರ್ಷಕ್ಕಿಂತ ಚಿಕ್ಕಮಕ್ಕಳಿಗೆ ಗೊತ್ತಿರಕೂಡದು: ನಮ್ಮ ವಿಶ್ವ ಸದಾ ಹಿಗ್ಗುತ್ತಲೇ ಇರುತ್ತದೆ, ನಿರ್ವಾತದಲ್ಲಿ ಮುಖ ತೂರಿಸುವ ತಾರಾಗಣಗಳನ್ನು ಇಡಿಯಾಗಿ ಕಬಳಿಸುತ್ತವೆ ತಾರಾಗಣಗಳು, ಸೌರ ವ್ಯವಸ್ಥೆಗಳು ಕುಸಿಯುತ್ತವೆ, ಎಲ್ಲವೂ ನಡೆಯುತ್ತದೆ ನಿಶ್ಶಬ್ದ ಚಲನಚಿತ್ರದಲ್ಲಿ ನಡೆಯುವ ಹಾಗೆ, ಇತ್ಯಾದಿ. ಹತ್ತು ವರ್ಷವಾದಾಗ ನಾವಿನ್ನೂ ತುಳಿಯುತ್ತಿರುತ್ತೇವೆ ಕಾರ್ಟೂನ್ ಅನಿಮೇಶನ್ ನಿಯಮಗಳ ಕಲಿಕೆಯ ಹಾದಿ ಅಲ್ಲಿ ಯಾರೋ ಒಬ್ಬ ಬರೆದರೆ ಬಂಡೆಯ ಮೇಲೆ ಬಾಗಿಲ ಚಿತ್ರ ತೆರೆದು ಒಳಹೋಗಬಲ್ಲ ಅವನೊಬ್ಬ ಮಾತ್ರ. ಪ್ರಯತ್ನಿಸಿದರೆ ಬೇರೆ ಯಾರಾದರೂ ಬಂಡೆಗೆ ಡಿಕ್ಕಿ ಹೊಡೆದು ಚೂರುಚೂರು. ಹತ್ತು ವರ್ಷದ ಮಕ್ಕಳ ಪ್ರಪಂಚದಲ್ಲಿ ಇಷ್ಟು ಸಾಕು - ಹೊತ್ತಿ ಉರಿಯುವ ಮನೆಗಳು, ಫೇಲಾದ ಕಾರ್ ಬ್ರೇಕು, ಮುಳುಗುವ ಹಡಗುಗಳು, ಭೂಮಿಯ ಮೇಲೆ ಆಕ್ರಮಣ ನಡೆಸುವ ಅದೆಷ್ಟೋ ದುಷ್ಟ ಶಕ್ತಿ, ಇವರೇ ಅಲ್ಲಿ ನಾಯಕರು. ನುಗ್ಗಬಹುದು ಓಡುತ್ತಾ ಬಂದು ಹೊತ್ತಿ ಉರಿಯುವ ಮನೆಯೊಳಗೆ, ಪಾರಾಗಲು ದೋಣಿಗಳಿವೆ ಹಡಗುಗಳಲ್ಲಿ, ಧಾವಿಸುತ್ತವೆ ಟ್ರಕ್ಕುಗಳು, ಏಣಿಗಳನ್ನು ಹೊತ್ತು. ಮೇಲಿಂದ ನೆಗೆದರೆ ಹಿಡಿದುಕೊಳ್ಳ...