ಪೋಸ್ಟ್‌ಗಳು

Copyright ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕೆಲಸ ಮತ್ತು ಹೆಸರು

ಇಮೇಜ್
  ಕಬೀರನ ಒಂದು ದ್ವಿಪದಿಯಲ್ಲಿ ಅವನು ಹೀಗೆ ಹೇಳಿದ್ದಾನೆ. ಎಲ್ಲಿ ಹೆಸರಿದೆಯೋ ಅಲ್ಲಿ ಕೆಲಸವಿಲ್ಲ, ಎಲ್ಲಿ ಕೆಲಸವಿದೆಯೋ ಅಲ್ಲಿಲ್ಲ ಹೆಸರು ಎಂದೂ ಸೇರವು ಒಂದೇ ಸ್ಥಳದಲ್ಲಿ ತಿಂಗಳು ಮತ್ತು  ನೇಸರು ಬೇಂದ್ರೆ ಅವರ "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಎಂಬ ಸಾಲುಗಳು ನಿಮಗೆ ನೆನಪಾಗಿರಬಹುದು. ಸೂರ್ಯ ಮತ್ತು ಚಂದ್ರ ಒಂದು ಕಡೆ  ಹೇಗೆ ಸೇರುವುದಿಲ್ಲವೋ ಹಾಗೇ ಕೆಲಸ ಮತ್ತು ಹೆಸರು ಎಂದೂ ಒಂದೇ ಕಡೆ ಸೇರುವುದಿಲ್ಲ ಎನ್ನುವುದು ಕಬೀರನ ದ್ವಿಪದಿಯ ಸಾರಾಂಶ.  ಕೆಲಸ ಯಾರದೋ ಆದರೂ ಹೆಸರು ತೆಗೆದುಕೊಳ್ಳುವವರು ಬೇರೆ ಎಂಬ ವಿಷಯವನ್ನು ನೀವು ಪ್ರತಿನಿತ್ಯ ನೋಡುತ್ತೀರಿ.  ಯಾರೋ ಕಷ್ಟ ಪಟ್ಟು ಬರೆದದ್ದನ್ನು ಅನಾಯಾಸವಾಗಿ ಕಾಪಿ ಮಾಡಿ ತಮ್ಮ ಹೆಸರು ಹಾಕಿಕೊಳ್ಳುವುದು ಈಗ ಬಹಳ ಸಾಧಾರಣವಾಗಿದೆ.  ಇದಕ್ಕೆ ಪ್ಲೇಜಿಯರಿಸಮ್ ಎಂಬ ಒಂದು ಇಸಂ ಪದವಿದೆ.   ಆಲೆಕ್ಸ್ ಹೇಯ್ಲಿ ಎಂಬ ಅಮೆರಿಕನ್ ಮೂಲದ ಲೇಖಕ ರೂಟ್ಸ್  ಎಂಬ ಕಾದಂಬರಿ ಬರೆದ. ಕಪ್ಪು ಅಮೆರಿಕನ್ ಜನರ ಬೇರುಗಳನ್ನು ಶೋಧಿಸುವ ಈ ಕಾದಂಬರಿಯ ಸಂಕ್ಷಿಪ್ತ ರೂಪ ಬಹಳ ಹಿಂದೆ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಪ್ರಕಟಿಸಿತು. ಆಗ ಅದನ್ನು ಓದಿ ಈ ಜನಾಂಗದವರು ಒಳಗಾದ ಶೋಷಣೆ ಕುರಿತು ನನ್ನ ಕಣ್ಣು ತೆರೆಯಿತು. ಮುಂದೆ ಈ ಕಾದಂಬರಿಯಲ್ಲಿ ಹೆರಾಲ್ಡ್ ಕೊರ್ಲಾಂಡರ್ ಎಂಬ ಲೇಖಕನ ದ ಆಫ್ರಿಕನ್ ಕೃತಿಯಿಂದ ಭಾಗಗಳನ್ನು ಕದಿಯಲಾಗಿದೆ ಎಂಬ ಆಪಾದನೆ...

ನೆನಪುಗಳ ಹಕ್ಕುಸ್ವಾಮ್ಯ

ಇಮೇಜ್
- ಸಿ ಪಿ ರವಿಕುಮಾರ್  ಈಚೆಗೆ ಒಂದು ಕನ್ನಡ ಲೇಖನವನ್ನು ಯಾರೋ ಓದಲು ಕಳಿಸಿದರು. ಅದನ್ನು ಬರೆದ ಲೇಖಕರ ಬಗ್ಗೆ ನನಗೆ ಗೌರವವಿದೆ. ಅವರನ್ನು X ಎಂದು ಕರೆಯೋಣ. ಲೇಖನ ಓದುವಾಗ ಒಂದು ವಿಷಯ ನೆನಪಿಗೆ ಬಂತು. ಗೋಪಾಲಕೃಷ್ಣ ಅಡಿಗರ ಜನ್ಮದಿವಸದ ಸಂದರ್ಭದಲ್ಲಿ ಈ ಲೇಖಕರು ಒಂದು ಲೇಖನ ಬರೆದರು.  ಇದರಲ್ಲಿ ಅವರು ಅಡಿಗರು ಕನ್ನಡದ ಇನ್ನೊಬ್ಬ ಹೆಸರಾಂತ ಕವಿಗಳಾದ ನರಸಿಂಹಸ್ವಾಮಿ ಅವರ ಬಗ್ಗೆ ತಮಗೆ ಸ್ವಂತವಾಗಿ ಹೇಳಿದ್ದನ್ನು ಕುರಿತಾಗಿ ಬರೆದಿದ್ದರು.  ಲೇಖಕ X ಮಾಡಿದ್ದು ತಪ್ಪು ಎಂದೇ ನನ್ನ ಅನ್ನಿಸಿಕೆ.  ಅವರ ಲೇಖನದಲ್ಲಿರುವ ವಿಷಯ ತಿಳಿದುಕೊಂಡು ನಾವು ಯಾರೂ ಶ್ರೀಮಂತರಾಗಲಿಲ್ಲ, ತಿಳಿಯದಿದ್ದರೆ ನಾವು ಬಡವರೂ ಆಗುತ್ತಿರಲಿಲ್ಲ.  ಅಡಿಗರು ಬಹಿರಂಗವಾಗಿ ಹೇಳಬೇಕಾದ ವಿಷಯಗಳನ್ನು ಕುರಿತು ಬರೆದೇ ಇದ್ದಾರೆ. ಅವರ "ಪುಷ್ಪಕವಿಯ ಪರಾಕು" ಕವನವೇ ಇದೆ.  ಒಬ್ಬ ಕವಿಯ ಮನಸ್ಸಿನಲ್ಲಿ ನೂರಾರು ಭಾವನೆಗಳು ಏಳಬಹುದು. ಅವನ್ನೆಲ್ಲಾ ಅವನು ಬರೆದಿಡುವುದಿಲ್ಲ. ಹಾಗೆ ಅನಿಸಿದ್ದನ್ನೆಲ್ಲಾ ಬರೆದರೆ ಅವನು ಲೇಖಕನಾಗುವುದೂ ಇಲ್ಲ.  ಅವನ ಮನಸ್ಸಿನಲ್ಲಿದ್ದ ಒಂದು ಅಪಕ್ವ ಭಾವನೆ ಸಂಭಾಷಣೆಯಲ್ಲಿ  ತುಳುಕಿದರೆ ಅದನ್ನು ನೆನಪಿಟ್ಟುಕೊಂಡು ಜಗತ್ತಿಗೆ ಜಾಹೀರು ಮಾಡುವುದು ಕೂಡಾ ಸರಿಯಲ್ಲ.  ಲೇಖಕ X ಬೇರೆ ಯಾರಲ್ಲೂ ತಮ್ಮ ಮಾತನ್ನು ಪುನರಾವರ್ತಿಸುವುದಿಲ್ಲ ಎಂಬ ನಂಬಿಕೆ ಅಡಿಗರಿಗೆ ಇದ್ದರೆ ಅದು ಸುಳ್ಳಾಯಿತು. ತಮ್ಮ ನಿ...