ಪೋಸ್ಟ್‌ಗಳು

Robert Frost ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಆಮ್ಹರ್ಸ್ಟ್ ೧೯೧೮

 ಆಮ್ಹರ್ಸ್ಟ್ ೧೯೧೮ ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ನನ್ನ ಮುಖದ ಮೇಲೆ ಇಂದು ಧೂಳಿನ ಸಿಂಚನ ಆಗುವ ಕ್ಷಣದಲ್ಲಿ ಕಂಡಿತು ನನಗೊಂದು ಸ್ವಪ್ನ. ಮರುಕಳಿಸಿದ ಕನಸಿನಲ್ಲಿ ನಾನು ಕಂಡದ್ದು ಏನು - ಬಾಲಕನಾಗಿದ್ದೆ, ಆಟದಲ್ಲಿ ತೊಡಗಿದ್ದೆ ನಾನು. ವಿಚಿತ್ರವೆಂದರೆ ಅಂದಿಗಿಂತ ಹೆಚ್ಚೇನೂ ದುಃಖಿಯಾಗಿರುವಂತೆ ತೋರಲಿಲ್ಲ ನಾನು - ಎಲ್ಲವೂ ಯಥಾಪ್ರಕಾರ - ನಾನು  ದಾರಿಯಲ್ಲಿ ಸಾಕಷ್ಟು ಮುಂದೆ ಬಂದಿದ್ದೇನೆ ಆದರೂ  ಅದೇ ಕನಸು ಪುನರಾವರ್ತನೆ.

ಸ್ವೀಕೃತಿ

ಇಮೇಜ್
  ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ನೇಸರನು ತನ್ನ ಆಟ ಮುಗಿಸಿ, ದಣಿದು, ಮೋಡಗಳ ಮೇಲೆ  ಎಸೆದು ಕಿರಣಗಳನ್ನು, ಮುಳುಗಿದಾಗ ಕಡಲಲ್ಲಿ ಧಗಧಗಿಸುತ್ತ ನಿಸರ್ಗದ ಯಾವುದೇ ದನಿ ಮೇಲೇರದು, ಕೂಗಾಡದು ಇದು ಅಸಮಂಜಸವೆಂದು. ಹಕ್ಕಿಗಳಿಗಂತೂ ಗೊತ್ತಿರುವಂತಿದೆ ಆ- ಗಸದಲ್ಲಿ ಇದು ಕತ್ತಲಾಗುವ ಸಮಯವೆಂದು.  ಪಕ್ಷಿಯೊಂದು ಉಸುರುತ್ತಾ ಏನೋ ತನ್ನೆದೆಯಲ್ಲಿ ತನ್ನಷ್ಟಕ್ಕೆ ತಾನೇ ಆ- ಯಾಸದಲ್ಲಿ ಮುಚ್ಚುತ್ತದೆ ಭಾರವಾದ ಕಣ್ಣೆವೆಗಳನ್ನು; ದೂರದ ಹಸಿರು ತೋಪಿಗೆ ಹಾರಿ ದಿಕ್ಕೆಟ್ಟ ಮತ್ತೊಂದು ಅವಸರಿಸುತ್ತದೆ, ಬೀಸಿ ರೆಕ್ಕೆಗಳನ್ನು  ಕೊನೆಗೂ ಗುರುತಿಸಿ ತನ್ನ ಮರ ಸೇರಿ ಯೋ- ಚಿಸಬಹುದೇನೋ ಹೆಚ್ಚೆಂದರೆ ಉಲಿಯಬಹುದೇನೋ ನಸುವೇ: "ಕ್ಷೇಮ! ಈಗ ಕತ್ತಲಾಗಲಿ ಇರುಳು ನನ್ನ ಪಾಲಿಗೆ; ನಿಶೆಯು ಕಗ್ಗತ್ತಲಾಗಲಿ ನನ್ನ ಪಾಲಿಗೆ, ಎಷ್ಟೆಂದರೆ ಭವಿಷ್ಯ ಕಾ- ಣಿಸದಷ್ಟು. ಏನಾಗುತ್ತದೋ ಅದು ಆಗಲಿ" When the spent sun throws up its rays on cloud And goes down burning into the gulf below, No voice in nature is heard to cry aloud At what has happened. Birds, at least, must know It is the change to darkness in the sky. Murmuring something quiet in its breast, One bird begins to close a faded eye; Or overtaken too far from its nest, Hurrying l...

ಹಿಮದ ಕಣ

ಇಮೇಜ್
 ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕಾಲಿಂದ ಕೆದರಿ ಕೆಳಗೆ ಬೀಳಿಸಿದಾಗ ನನ್ನ ಮೇಲೆ ಕಾಗೆಯೊಂದು ಹೆಮ್ಲಾಕ್ ಮರದ ಮೇಲಿದ್ದ ಹಿಮಕಣ ಬದಲಾಯಿತು ನನ್ನ ಹೃದಯದ ಭಾವನೆ ಸ್ವಲ್ಪವಾದರೂ ಮತ್ತು ಭಾಗಶಃ ಉಳಿಸಿತು ನಾನು ಬೇಸರದಲ್ಲಿ ಕಳೆದುಕೊಂಡಿದ್ದ ದಿನ

ನನ್ನ ನವೆಂಬರ್ ಅತಿಥಿ

ಇಮೇಜ್
  ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಅತಿಥಿಯಾಗಿ ತಂಗಿರುವಾಗ ನನ್ನೊಂದಿಗೆ ನನ್ನ ಶೋಕ ಅವಳಿಗೆ ಆಪ್ಯಾಯವಾದದ್ದು ಚಳಿಗಾಲದ ಮಳೆ ಎಂಥ ಸುಂದರ ದಿನಗಳು, ಭೂಮಿಯ ನಾಕ ಎನ್ನುತ್ತ ಓಡಾಡಿ ತೊಯ್ದ ನೆಲದ ಮೇಲೆ ನೋಡುತ್ತ ನಿಲ್ಲುವಳು ಬೋಳು ಮರವನ್ನು ತದೇಕ. ನನಗೆ ಇರಗೊಡದು ಅವಳ ಸಂತೋಷ. ನನ್ನ ಕೆಲಸ ಅವಳ ಮಾತು ಕೇಳುವುದೇ. ಹಕ್ಕಿಗಳು ಹೋದದ್ದಕ್ಕೆ ಇವಳಿಗೆ ಹರ್ಷ ಮಂಜು ಬಿದ್ದಾಗ ತನ್ನ ಬೂದಿ ಬಣ್ಣದ ಮೇಲುದೆ ಹೊಳೆಯವುದು ಬೆಳ್ಳಿಯಂತೆ ಎಂದು ಇವಳ ಉಲ್ಲಾಸ. ಬರಿದಾಗಿ ಬೋಳಾಗಿ ನಿಂತಿರುವ ಮರಗಳು ಬಣ್ಣ ಮಾಸಿದ ಭೂಮಿ, ಭಾರವಾದ ಆಕಾಶ ಇವುಗಳಲ್ಲಿವಳು ಸೌಂದರ್ಯ ಕಾಣುವಳು ನಿನ್ನ ಕಣ್ಣಿಗೆ ಕಾಣದೇ ಈ ಚೆಲ್ವು ಲವಲೇಶ, ಹಾಗೇಕೆಂದು ನನ್ನನ್ನು ಮತ್ತೆಮತ್ತೆ ಕೇಳುವಳು. ಹಿಮಪಾತವಾಗುವುದಕ್ಕೂ ಮುನ್ನ, ಬರಿ ಶೂನ್ಯ  ತುಂಬಿರುವ ನವೆಂಬರ್ ಮಾಸದ ದಿನಗಳನ್ನು ನಾನು ನೆನ್ನೆ ಮೊನ್ನೆ ಕಲಿತೆನೇ ಪ್ರೀತಿಸುವುದನ್ನ? ವ್ಯರ್ಥ ಅವಳಿಗೆ ಹೇಳುವುದು ಅದನ್ನು. ಅವಳ ಹೊಗಳಿಕೆಯೇ ಅವುಗಳಿಗೆ ಚೆನ್ನ.

ಚಿನ್ನದ ಕಣ

ಇಮೇಜ್
ಮೂಲ - ರಾಬರ್ಟ್ ಫ್ರಾಸ್ಟ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಧೂಳೋ ಧೂಳು ಹಾರಾಡುತ್ತದೆ ಊರೊಳಗೆ ನೆಲಕ್ಕೆ ಔಕಿದ ಹೊರತು ಅದನ್ನು ಕಡಲಿನ ಹಬೆ ನನ್ನಂಥ ಮಕ್ಕಳ ಕಿವಿಗೆ ಆಗಾಗ ಬೀಳುತ್ತಿತ್ತು ನುಡಿ: ಈ ಧೂಳಿನಲ್ಲಿ ಸೇರಿದೆ ಒಂದಿಷ್ಟು ಬಂಗಾರದ ಹುಡಿ ಮುಗಿಲೆತ್ತರ ಎದ್ದ ಧೂಳು ಸಂಜೆಯ ಹೊತ್ತು ದೈವ ಸಾಕ್ಷಾತ್ಕಾರದಂತೆ ತೋರುತ್ತಿತ್ತು ದೊಡ್ಡವರು ನನಗೆ ಹೇಳಿದರು, ಮರಿ, ಇದರಲ್ಲಿ ಬೆರೆತಿದೆ ಬಂಗಾರದ ಹುಡಿ ಹೀಗಿತ್ತು ಜೀವನ ಗೋಲ್ಡನ್ ಗೇಟಿನಲ್ಲಿ ಧೂಳಿತ್ತು ಉಂಡದ್ದರಲ್ಲಿ ಕುಡಿದದ್ದರಲ್ಲಿ ನನ್ನಂಥ ಮಕ್ಕಳಿಗೆ ಎಲ್ಲರೂ ಹೇಳುತ್ತಿದ್ದ ಮಾತು ನಮ್ಮ ಪಾಲಿನ ಚಿನ್ನದ ಕಣವನ್ನು ನಾವು ತಿನ್ನಬೇಕು ಕವಿತೆಯ ಸ್ವಾರಸ್ಯ: ಇದನ್ನು ಬರೆದ ರಾಬರ್ಟ್ ಫ್ರಾಸ್ಟ್ ಒಬ್ಬ ಪ್ರಸಿದ್ಧ ಅಮೇರಿಕನ್ ಕವಿ. ಯೌವ್ವನದಲ್ಲಿ ಇವನು ತನ್ನ ಅಜ್ಜ ಬಳುವಳಿಯಾಗಿ ಕೊಟ್ಟ ಹೊಲದಲ್ಲಿ ಒಂಬತ್ತು ವರ್ಷ ದುಡಿದ. ಆದರೆ ಈ ಕೆಲಸದಲ್ಲಿ ಅವನಿಗೆ ಸಿಕ್ಕಿದ್ದು ವೈಫಲ್ಯ ಮತ್ತು ನಿರಾಶೆ.  ಮುಂದೆ ಅವನು ಹೊಟ್ಟೆ ಪಾಡಿಗಾಗಿ ಇಂಗ್ಲಿಷ್ ಅಧ್ಯಾಪಕನಾಗಿ ದುಡಿದ. ರೈತನಾಗಿ ದುಡಿಯುವ ಅವಧಿಯಲ್ಲಿ ಅವನ ಮನಸ್ಸಿನಲ್ಲಿ ಈ ಕವಿತೆ ಹುಟ್ಟಿರಬಹುದು. ಕವಿತೆಯಲ್ಲಿ ಬರುವ ಗೋಲ್ಡನ್ ಗೇಟ್ (ಸೇತುವೆ) ಇರುವುದು ಕ್ಯಾಲಿಫಾರ್ನಿಯಾ ರಾಜ್ಯದಲ್ಲಿ. ಈ ರಾಜ್ಯದಲ್ಲಿ ಒಮ್ಮೆ ಚಿನ್ನದ ಗಟ್ಟಿಗಳು ದೊರೆಯುತ್ತಿದ್ದವು  ಎಂದು ಎಲ್ಲೆಡೆಯಿಂದ ಜನ ಅಲ್ಲಿಗೆ ವಲಸೆ ಬಂದರು. ರಾಬರ್ಟ್ ಫ...

ನಡುರಾತ್ರಿಯ ಪರಿಚಯ

ಇಮೇಜ್
ಕವಿತೆ ಓದುವ ಮುನ್ನ: ರಾಬರ್ಟ್ ಫ್ರಾಸ್ಟ್ ಒಬ್ಬ ಪ್ರಮುಖ ಅಮೆರಿಕನ್ ಕವಿ.  ಈ ಸಾನೆಟ್ಟಿನಲ್ಲಿ ಅವನು ಒಂದು ಘಟನೆಯ ಚಿತ್ರಣವನ್ನು ನೀಡಿದ್ದಾನೆ. ಘಟನೆಯ ವಿವರಗಳು ಸ್ಪಷ್ಟವಾಗಿಲ್ಲ. ಮಳೆ ಬೀಳುತ್ತಿರುವ ಒಂದು ರಾತ್ರಿ. ಯಾವುದೋ ಕಾರಣಕ್ಕಾಗಿ ನಾಯಕ ಮನೆಯಿಂದ ಹೊರಗೆ ಹೊರಟು ಬಂದಿದ್ದಾನೆ.  ಮನೆಯಲ್ಲಿ ನಡೆದ ಯಾವುದೋ ಅಹಿತಕರ ಘಟನೆಯಿಂದ ಅವನ ಮನಸ್ಸು ಪ್ರಕ್ಷುಬ್ಧವಾಗಿರಬಹುದು. ಹೀಗೆ ಹೊರಟುಬಂದವನು ಬಹಳ ದೂರದವರೆಗೂ ಮಳೆಯಲ್ಲೇ ನಡೆದು ನಗರದ ತುದಿಯವರೆಗೂ ಹೋಗಿನಿಂತಿದ್ದಾನೆ. ಕಾವಲುಗಾರ ಇವನನ್ನು ಅನುಮಾನದ ದೃಷ್ಟಿಯಿಂದ ನೋಡಿದಾಗ ಸರೀಕನಾದ ಇವನಿಗೆ ಏನೂ ತೋಚದೆ ಮುಖ ಕೆಳಗೆ ಹಾಕಿದ್ದಾನೆ. ತನ್ನ ಹೆಜ್ಜೆಯ ಸಪ್ಪಳ ತನಗೇ ಅಸಹನೀಯವೆನ್ನಿಸಿ ಸ್ವಲ್ಪಹೊತ್ತು ಸುಮ್ಮನೆ ನಿಂತುಬಿಡುತ್ತಾನೆ.   ನಗರದ ಅತ್ಯಂತ ದುಃಖದ ಬೀದಿಗಳ ಮೂಲಕ ಹಾದುಹೋಗುವಾಗ ಅವನಿಗೆ ತನ್ನ ದುಃಖ ಅಂಥ ದೊಡ್ಡದೇನೂ ಅಲ್ಲ ಎನ್ನಿಸಿರಬಹುದು. ದೂರದಲ್ಲೆಲ್ಲೋ ಅವನಿಗೆ ಒಂದು ಕರೆ ಕೇಳುತ್ತದೆ. ಅವನಿಗೆ ವಿದಾಯ ಹೇಳಲು ಹೊರಟ ಕರೆಯಲ್ಲ; ಅವನನ್ನು ಮರಳಿ ಬಾ ಎಂದು ಕೂಗುವ ಕರೆಯೂ ಅಲ್ಲ. ದೂರದಲ್ಲಿ ಅವನಿಗೆ ಗಡಿಯಾರದ ಗೋಪುರ ಕಾಣುತ್ತದೆ. ಬಹುಶಃ ಅವನಿಗೆ ಕೇಳಿದ ಕರೆಯು ಈ ಗಡಿಯಾರದ ಗಂಟೆಯೇ ಇದ್ದರೂ ಇರಬಹುದು. "ಮನೆಗೆ ಮರಳು" ಎಂದು ಅದು ಹೇಳುತ್ತಿದೆಯೇ? "ಇಲ್ಲ, ಹೊರಡು" ಎಂದು ಅದು ಹೇಳುತ್ತಿದೆಯೇ? ಇದು ಯಾವುದೂ ಅಲ್ಲ. ಸರಿಯಾದ ಕಾಲ ಎನ್ನುವುದು ತನ್...

ಬೆಟ್ಟದ ಮೇಲೊಂದು ಮನೆ

ಇಮೇಜ್
ಕವಿತೆ ಓದುವ ಮುನ್ನ ...  ರಾಬರ್ಟ್ ಫ್ರಾಸ್ಟ್ ಈ ಕವಿತೆಯಲ್ಲಿ  ತಾನು ಕಂಡ ಒಂದು "ಬೆಟ್ಟದ ಮನೆ"ಯನ್ನು ಕುರಿತು ಬರೆದಿದ್ದಾನೆ. ಅಕ್ಕ ಮಹಾದೇವಿ "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ?" ಎಂದು ಪ್ರಶ್ನಿಸಿದಳು. ಫ್ರಾಸ್ಟ್ ಗೆ ಬೆಟ್ಟದ ಮೇಲೆ ಮನೆ ಮಾಡಿದವನನ್ನು ಕುರಿತು ಕುತೂಹಲವಿದೆ. ಅವನು ಬೆಟ್ಟದ ತುತ್ತ ತುದಿಯಲ್ಲಿ ಮನೆ ಮಾಡಿದ್ದೇಕೆ? ಬೆಟ್ಟದ ಮೇಲೆ ಹತ್ತಿಕೊಂಡು ಹೋಗುವ ಎದೆಗಾರಿಕೆ ಉಳ್ಳವನು ಕಾಡು ಮೃಗಗಳಿಗೆ ಹೆದರುತ್ತಿದ್ದನೆ? ಅವನ "ಒರಟು ಒರಟಾದ" ಆತ್ಮವನ್ನು ಕವಿ ಕಲ್ಪಿಸಿಕೊಳ್ಳುತ್ತಾನೆ. ಮನುಷ್ಯ ನೆಲಕ್ಕೆ ಹತ್ತಿರವಾಗಿ ಬದುಕುವವನು. ಭೂಮಿಯ ಕೊಡುಗೆಗಳೇ ಅವನಿಗೆ ಊಟ, ಉಡುಗೆಗಳು. ಇಷ್ಟಾದರೂ ಬೆಟ್ಟದ ಮೇಲೆ ಮನೆ ಮಾಡಿದವನ ಸಂತತಿ ಸ್ವಲ್ಪ ಭಿನ್ನವೇ ಇರಬಹುದು! ಅವನು ಮೃಗಗಳನ್ನು ಬೇಟೆಯಾಡಿ ಬದುಕಿರಬಹುದು. ಇಂಥ ಪರಾಕ್ರಮಿಯನ್ನೂ ಅಂಜಿಕೆಗಳು ಕಾಡಿದವೇ? ಅದಕ್ಕೇ ಅವನು ಮನೆ ಎಂಬ ಸುರಕ್ಷತೆಯನ್ನು ಬಯಸಿದನೆ? ಬೆಟ್ಟದ ಮೇಲೂ ಮನೆಯನ್ನು ಮಾಡಿದವನ ಸಂತತಿ ಈಗ ನಾಶವಾಗಿದೆ ಎನ್ನುವಾಗ ಕವಿತೆಯಲ್ಲಿ ನಿರಾಸೆ ಕುರುಹನ್ನು ಗುರುತಿಸಬಹುದು... ಮೂಲ ಇಂಗ್ಲಿಷ್ ಕವಿತೆ: ರಾಬರ್ಟ್ ಫ್ರಾಸ್ಟ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಮರಳಿನಂತೆ ತೋರುವುದಲ್ಲಿ ಸ್ವರ್ಣ ಗಗನ  ಮರಳುಭೂಮಿ ತೋರುವುದು ಸ್ವರ್ಣದಂತೆ  ಸುತ್ತಲೂ ಎಲ್ಲೂ  ಗೋಚರಿಸದು ಮನೆಮಾರು  ...

ನಾನು ತುಳಿಯದ ಹಾದಿ

ಇಮೇಜ್
ಮೂಲ ಇಂಗ್ಲಿಷ್ ಕವಿತೆ: ರಾಬರ್ಟ್ ಫ್ರಾಸ್ಟ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  (ಕವಿತೆ ಓದುವ ಮುನ್ನ ಒಂದು ಪೀಠಿಕೆ: ನಮ್ಮ ಮುಂದೆ ಎಷ್ಟೋ ಸಂದರ್ಭಗಳಲ್ಲಿ ಕವಲು ಹಾದಿಗಳು ಎದುರಾಗುತ್ತವೆ.  ಎರಡೂ ಕವಲುಗಳಲ್ಲಿ ಒಮ್ಮೆಲೇ ಸಂಚರಿಸಲು ಸಾಧ್ಯವೇ? ಇನ್ನೂ ನಮ್ಮನ್ನು ನಾವೇ ಕ್ಲೋನ್ ಮಾಡಿಕೊಳ್ಳುವ ತಂತ್ರಜ್ಞಾನ ಸಿದ್ಧವಾಗಿಲ್ಲ! ನಿರ್ವಾಹವಿಲ್ಲದೆ ಯಾವುದಾದರೊಂದು ಹಾದಿಯನ್ನು ಹಿಡಿಯಲೇ ಬೇಕು. ಹಾಗೆ ಹಿಡಿದ ಕವಲು ದಾರಿ ನಮಗೆ ಸಿದ್ಧಿಸದೆ ನಾವು ಬ್ಯಾಕ್ ಟ್ರ್ಯಾಕ್ ಮಾಡಬೇಕಾಗಬಹುದು. ಆಗ ಮತ್ತೆ ಅದೇ ಕವಲಿಗೆ ಹಿಂದಿರುಗಬಹುದು - ಇದರ ಪ್ರಾಬಬಿಲಿಟಿ ಬಹಳ ಕಡಿಮೆ! ನಾವು ಏನು ಆಗುತ್ತೇವೊ  ಅದು ನಮ್ಮ ನಿರ್ಧಾರಗಳ ಮೇಲೆ ಅವಲಂಬಿಸುತ್ತದೆ. ರಾಬರ್ಟ್ ಫ್ರಾಸ್ಟ್ ಕವಿ ತನ್ನ ಜೀವನದಲ್ಲಿ ಇಂಥ ಕವಲನ್ನು ಎದುರಿಸಿರಬಹುದು.  ಆಗ ಅವನು ನಿರ್ಧಾರ ಕೈಗೊಳ್ಳಲು ಯಾವ ಮಾನದಂಡವನ್ನು ಉಪಯೋಗಿಸಿದ? ಬೇರೆಯವರು ಹೆಚ್ಚಾಗಿ ಬಳಸದ ಹಾದಿಯಲ್ಲಿ ಹೋಗವುದೇ ಒಳ್ಳೆಯದೆಂಬ ಹ್ಯೂರಿಸ್ಟಿಕ್ ಬಳಸಿ ನಿರ್ಧಾರವನ್ನು ಕೈಗೊಂಡೆ ಎಂದು ಕವಿ ನಮಗೆ ಹೇಳುತ್ತಾನೆ. ಈ ನಿರ್ಧಾರ ತನ್ನ ಜೀವನಪಥದ ವಿನ್ಯಾಸವನ್ನು ಬದಲಿಸಿತು ಎಂಬ ನಿರ್ಧಾರಕ್ಕೆ ಕವಿ ಬರುತ್ತಾನೆ.  ನೀವೂ ನಿಮ್ಮ ನಿರ್ಧಾರಗಳನ್ನು ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ!  ರಾಬರ್ಟ್ ಫ್ರಾಸ್ಟ್ ಹೇಳುವುದನ್ನು ನೀವು ಒಪ್ಪುತ್ತೀರಾ?) ಕವಲಾಗಿದೆ ಕಾ...