ಪೋಸ್ಟ್‌ಗಳು

ಅಕ್ಟೋಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೀಪಾವಳಿ ಮೈನಸ್ ಪಟಾಕಿ

ಇಮೇಜ್
"ಪಟಾಕಿ ಇಲ್ಲದೆ ದೀಪಾವಳಿ ಸಾಧ್ಯವೇ ಇಲ್ಲ," ಎಂದು ಸ್ನೇಹಿತರು ವಾದಿಸಿದರು. "ನಮ್ಮ ಸಂಪ್ರದಾಯಗಳನ್ನು ನಾವು ಯಾಕೆ ಬಿಡಬೇಕು? ಮಾಲಿನ್ಯ ಉಂಟಾಗುತ್ತದೆ ಎನ್ನುವ ಹೆದರಿಕೆ ಇದ್ದರೆ ನಾವು ಮೋಟಾರ್ ಕಾರ್ ಯಾಕೆ ಓಡಿಸಬೇಕು?" ನನ್ನ ಸ್ನೇಹಿತರು ನಾನು ಬಲ್ಲ ಮೇಧಾವಿಗಳಲ್ಲಿ ಒಬ್ಬರು.  ಅವರು ಫೇಸ್ ಬುಕ್ ಮೇಲೆ ನನ್ನ ಬರಹಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದರು. ಪಟಾಕಿಯಿಂದ ಏನೇನು ಅನರ್ಥಗಳಾಗುತ್ತವೆ ಎನ್ನುವುದನ್ನು ನಾನು ಪಟ್ಟಿ ಮಾಡಿದ್ದೆ - ಬಾಲಕಾರ್ಮಿಕರನ್ನು ಪಟಾಕಿ ಮಾಡಲು ಬಳಸಲಾಗುತ್ತದೆ ಎನ್ನುವುದು ಈಗ ಸರ್ವವಿದಿತ  ಈಗಾಗಲೇ ವಾಯುಮಾಲಿನ್ಯದಿಂದ ದುಸ್ತರವಾದ ನಗರಜೀವನ - ಆಸ್ತಮಾ ಮೊದಲಾದ ಕಾಯಿಲೆಗಳಿಂದ ನರಳುವ ಜನ  ಪಟಾಕಿ ಸುಡಲು ಹೋಗಿ ಅಪಘಾತಗಳಿಗೆ ತುತ್ತಾದ ಜನ  ಪಟಾಕಿ ಸದ್ದಿಗೆ ಶ್ರವಣಶಕ್ತಿ  ಕಳೆದುಕೊಂಡವರು  ಪಟಾಕಿ ಸದ್ದಿಗೆ ಕಂಗಾಲಾಗುವ ಎಳೆಯ ಮಕ್ಕಳು, ಸಾಕುಪ್ರಾಣಿಗಳು  ಇವೆಲ್ಲಾ ಹಾಗಿರಲಿ, ನಮ್ಮ ಸಂಪ್ರದಾಯ ನಮಗೆ ಮುಖ್ಯ ಎನ್ನುವವರಿಗೆ ಕೆಲವು ಪ್ರಶ್ನೆಗಳ ಮೂಲಕವೇ ಉತ್ತರಿಸಬೇಕಾಗುತ್ತಿದೆ.  ಪಟಾಕಿ ದೀಪಾವಳಿಯ ಸಂಪ್ರದಾಯ ಎಂದು ಎಲ್ಲಿ ಹೇಳಿದೆ? ದೀಪಾವಳಿ ಎನ್ನುವ ಶಬ್ದದಲ್ಲಿ ದೀಪಗಳ ಸಾಲಿದೆ. ರಾಮನು ಅಯೋಧ್ಯೆಗೆ ಮರಳಿದಾಗ ಅಮಾವಾಸ್ಯೆಯ ದಿನವಾದ್ದರಿಂದ ನಗರದ ಜನ ದೀಪಗಳ ಸಾಲನ್ನು ಹಚ್ಚಿಟ್ಟು ರಾಮನಿಗೆ ಸ್ವಾಗತ ಕೋರಿದರು ಎನ್ನುವ ಕಥೆ ಇದೆ.  ಅಮಾವಾಸ್ಯೆಯ ದಿನ ಹುಟ್ಟಿದ ಲಕ್ಷ್ಮಿ ಬ

ಶಮ್ಮಿ ಕಪೂರ್ ನೆನಪು

ಇಮೇಜ್
ಇವತ್ತು ವಿಜಯದಶಮಿಯ ದಿವಸ ಹಿಂದಿ ಚಿತ್ರನಟ ದಿ| ಶಮ್ಮಿ ಕಪೂರ್ ಅವರ ಜನ್ಮ ದಿನ ಅಂತ ಯಾರೋ ನೆನಪಿಸಿದರು. ಶಮ್ಮಿ ಅನ್ನುವ ಹೆಸರಿಗೂ ಶಮೀ ಪತ್ರೆಯ ಹೆಸರಿಗೂ ಸಂಬಂಧವಿರಬಹುದೇ?  ಅದಿರಲಿ ವಿಜಯ ದಶಮೀ ಎಂಬುದು "ವಿಜಯದ ಶಮೀ" ಆಗಿರಬಹುದೇ ಎಂದೆಲ್ಲಾ ನನ್ನ ಮನವೆಂಬ ಮರ್ಕಟ ಆಲೋಚಿಸುತ್ತಿದೆ. ಅದು ಹಾಗಿರಲಿ! ಶಮ್ಮಿ ಕಪೂರ್ ತಮ್ಮ ಕಾಲದ ಸ್ಟೈಲ್ ಕಿಂಗ್.  ಶಮ್ಮಿ ಕಪೂರ್ ಅಂದರೆ ನೆನಪಾಗುವುದು ಅವರ ನೃತ್ಯಗಳು ಮತ್ತು ಅವರ ಚಿತ್ರದಲ್ಲಿ ಮಹಮ್ಮದ್ ರಫಿ ಹಾಡಿದ ಹಾಡುಗಳು.  ಅಣ್ಣ ರಾಜ್ ಕಪೂರ್  ಆಗಲೇ ಪ್ರಸಿದ್ಧರಾಗಿದ್ದಾಗ ಅವರಿಗಿಂತ ಭಿನ್ನವಾಗಿ ನಟಿಸದೇ ಇದ್ದರೆ ಶಮ್ಮಿ ಕಪೂರ್ ಅವರಿಗೆ ತಮ್ಮದೇ ಸ್ಥಾನ ಸಿಕ್ಕುತ್ತಿರಲಿಲ್ಲ. ಶಮ್ಮಿ ಕಪೂರ್ ತಮ್ಮ ಆಂಗಿಕ ಚೇಷ್ಟೆ, ಹಾಸ್ಯ, ವಿದೇಶೀ ನೃತ್ಯಗಳು   ಇವುಗಳಿಂದ  ಭಿನ್ನವಾಗಿ ಕಂಡರು.  ಆದರೆ ಅವುಗಳನ್ನು ಕುರಿತು ನಾನು ಬರೆಯುವುದಿಲ್ಲ. ಎಂಬತ್ತರ ದಶಕದಲ್ಲಿ ಪ್ರತಿ ಭಾನುವಾರ ಬೈಬಲ್ ಆಧಾರಿತ ಒಂದು ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. "ಟವರ್ ಆಫ್ ಬೇಬೆಲ್" ಕಥೆಯನ್ನು ನೋಡಿದ್ದು ನನಗೆ ನೆನಪಿದೆ. ಇದರಲ್ಲಿ ಶಮ್ಮಿ ಕಪೂರ್ ನಟಿಸಿದ್ದರು.  ಅತ್ಯಂತ ಎತ್ತರದ ಒಂದು ಮೀನಾರವನ್ನು ನಿರ್ಮಿಸಲು ನಿಮ್ರೋಡ್ ಎಂಬ  ಒಬ್ಬ ರಾಜನ ನಿರ್ದೇಶನದಲ್ಲಿ ಹೀಬ್ರೂ ಜನರು ತೊಡಗುತ್ತಾರೆ.  ನೀಮ್ರೋಡ್ ಒಬ್ಬ ದುಷ್ಟ ರಾಜ, ದುರಹಂಕಾರಿ.  ತನ್ನ ಅಹಂಕಾರ ಮೆರೆಯಲು ರಾಜ ಮೀನಾರದ ಎತ್ತರ

ಚೌಚೌಪದಿ - 3

ಇಮೇಜ್

ಚೌಚೌಪದಿ - 2

ಇಮೇಜ್
ಸಿ ಪಿ ರವಿಕುಮಾರ್ 

ಕುವೆಂಪು ಅವರ ವೀಣಾವಂದನೆ

ಇಮೇಜ್
ಸಿ ಪಿ ರವಿಕುಮಾರ್  ಕುವೆಂಪು ಅವರ ಶ್ರೀರಾಮಾಯಣದರ್ಶನಂ ಪ್ರಾರಂಭದಲ್ಲಿ ಬರುವ ಸರಸ್ವತೀ ವಂದನೆಯನ್ನು ಕೆಳಗೆ ಕೊಟ್ಟಿದ್ದೇನೆ, ಓದಿ. ಮಹಾಕಾವ್ಯದ ರಚನೆಗೆ ಮುಂಚೆ ಕವಿಗಳು ಸರಸ್ವತಿಯನ್ನು, ಗಣೇಶನನ್ನು ಪ್ರಾರ್ಥಿಸುವುದು ಒಂದು ಸಂಪ್ರದಾಯ. ಮಹಾಕಾವ್ಯ ರಚಿಸಲು ಅನೇಕ ವರ್ಷಗಳೇ ಬೇಕಾಗಬಹುದು. ಈ ಅವಧಿಯಲ್ಲಿ ಕಾವ್ಯಸ್ಫೂರ್ತಿ ನಿರಂತರವಾಗಿ ಹರಿಯಬೇಕು. ಬೇರೆ ಯಾವ ಕಾರಣಕ್ಕಾಗಿಯೂ ಕಾವ್ಯರಚನೆಯಲ್ಲಿ ಬಾಧೆಯಾಗಬಾರದು. ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ ತ್ರೈಭುವನ ಸಮ್ಮೋಹಿನಿಯೆ, ಕವನ ಕಮನೀಯೆ! ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್ ! ನಾರಣಪ್ಪಂಗಂತೆ ರನ್ನಂಗೆ ಮೇಣ್ ಪಂಪರಿಗೆ, ನಾಗವರ್ಮಗೆ ರಾಘವಾಂಕಗೆ ಲಕುಮಿಪತಿಗೆ, ವಾಲ್ಮೀಕಿ ವ್ಯಾಸರಿಗೆ ಹೋಮರಗೆ ಮಿಲ್ಟನಗೆ ದಾಂತೆ ಮೊದಲಹ ಮಹಾಕವಿಗಳಿಗೆ ನೀನೊಸೆದು                      ೧೦ ಕೃಪೆಗೈದ ವೈದ್ಯುತಪ್ರತಿಭೆಯಂ, ಹೇ ದೇವಿ, ಕಲ್ಪನಾಶಕ್ತಿಯಂ ವಾಙ್ಮಂತ್ರದುಕ್ತಿಯಂ ಆಯುರಾರೋಗ್ಯಮಂ ಶಾಂತಿ ಸೌಭಾಗ್ಯಮಂ ದಯಪಾಲಿಸೌ ನಿನ್ನ ಕನ್ನಡ ಕಂದನೀತಂಗೆ, ಸುರುಳಿಗುರುಳಂದಮೆಸೆವಾತ್ಮಸೌಂದರ್ಯಮಂ ಮುಡಿಪನರ್ಚಿಸಿ ಮಣಿಯುವೀ ಕವಿ ಕುವೆಂಪುವಿಗೆ ! ಕುವೆಂಪು ಅವರ ಪ್ರಾರ್ಥನೆ ಸ್ವಲ್ಪ ವಿಭಿನ್ನವಾಗಿದೆ! ಇಲ್ಲಿ ಕವಿ ಸರಸ್

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಇಮೇಜ್
ಸಿ ಪಿ ರವಿಕುಮಾರ್  "ಬಾರಿಸು ಕನ್ನಡ ಡಿಂಡಿಮವ" ಎನ್ನುವುದು ಕನ್ನಡ ಪ್ರಚಾರಗೀತೆ ಎನ್ನುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕವಿತೆಯನ್ನು ಪೂರ್ಣವಾಗಿ ಓದಿದರೆ ಅದು ಕುವೆಂಪು ಅವರು ಕನ್ನಡಿಗರ ಜಾಯಮಾನಕ್ಕೆ ನೊಂದು, ಬದಲಾವಣೆಗಾಗಿ ಪ್ರಾರ್ಥನಾರೂಪದಲ್ಲಿ  ಬರೆದ ಪದ್ಯ ಎಂಬ ತಿಳುವಳಿಕೆ ಮೂಡುತ್ತದೆ. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ! ಕರ್ನಾಟಕದ ಹೃದಯ ಮಿಡಿಯಬೇಕಾದದ್ದು ಕನ್ನಡಕ್ಕೆ. ಆದರೆ ಅಲ್ಲಿ ಬೇರೆ ಭಾಷೆಗಳ ಮಿಡಿತವೇ ಹೆಚ್ಚು. ಕುವೆಂಪು ಅವರ ಕಾಲದಲ್ಲೂ ಇದು ಹಾಗೇ ಇತ್ತು, ಈಗಲೂ ಹಾಗೇ ಇದೆ!    ಹೇಗೆ ಶಿವ ತನಗೆ ಸಹಜವಾದ ಡಿಂಡಿಮ ಬಾರಿಸಬೇಕೋ ಹಾಗೇ ಕರ್ನಾಟಕದ ಹೃದಯ-ಶಿವ ಕನ್ನಡವೆಂಬ ಡಿಂಡಿಮ ಬಾರಿಸಬೇಕು ಎಂಬುದು ಕವಿಯ ನೊಂದ ಮನದ ಮೊರೆ. "ಬಾರಿಸು ಕನ್ನಡ ಡಿಂಡಿಮವ "ಎಂಬಲ್ಲಿ "ಕನ್ನಡ" ಶಬ್ದಕ್ಕೆ ಒತ್ತು.  ಸತ್ತಂತಿಹರನು ಬಡಿದೆಚ್ಚರಿಸು! ಕಚ್ಚಾಡುವರನು ಕೂಡಿಸಿ ಒಲಿಸು! ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು! ಒಟ್ಟಿಗೆ ಬಾಳುವ ತೆರದಲಿ ಹರಸು! ಕನ್ನಡ ಜನರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು  ಕುವೆಂಪು ಮನಗಂಡಿದ್ದರು. ಏಕೀಕರಣದ ಸಮಯದಲ್ಲಿ ಕೂಡಾ ಒಡಕು ಧ್ವನಿಗಳಿದ್ದವು.  "ಅಖಂಡ ಕರ್ನಾಟಕ" ಪದ್ಯದಲ್ಲಿ ಇಂಥ ಒಡಕು ಧ್ವನಿಗಳನ್ನು ಎತ್ತುವ ಜನನಾಯಕರ ಬಗ್ಗೆ ಕುವೆಂಪು "ಮುಚ್ಚು ಬಾಯಿ" ಎಂಬ ರೀತಿಯಲ್ಲಿ ಗುಡುಗಿದ್ದಾರೆ. ಆದರೆ &q

ರವಿಕುಮಾರ್ ಚೌಪದಿ - 1 (ರಿಟರ್ನ್ ರಾಜಕೀಯ)

ಇಮೇಜ್
ಸಿ ಪಿ ರವಿಕುಮಾರ್ 

ವನಸುಮ - ಡಿವಿಜಿ ಅವರ ಕವಿತೆ

ಇಮೇಜ್
ಸಿ ಪಿ ರವಿಕುಮಾರ್ ಡಿವಿಜಿ ಅವರ "ವನಸುಮ" ನಾನು ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ನಮಗೆ ಪ್ರಾರ್ಥನಾಗೀತೆಯಾಗಿತ್ತು. ನಾನು ಮಾಧ್ಯಮಿಕ ಶಾಲೆ ಓದಿದ್ದು ದೆಹಲಿ ಕನ್ನಡ ಶಾಲೆಯಲ್ಲಿ.  ಅಲ್ಲಿ ಕನ್ನಡ ವಿದ್ಯಾರ್ಥಿಗಳು ನೂರಕ್ಕೆ ಒಬ್ಬರೋ ಇಬ್ಬರೋ. ಉಳಿದವರು ಹಿಂದಿ ಅಥವಾ ಪಂಜಾಬಿ ಮಾತಾಡುವ ಮಕ್ಕಳು. ಅವರಿಗೆ ಈ ಪ್ರಾರ್ಥನಾಗೀತೆ ಕಬ್ಬಿಣದ ಕಡಲೆಯಾಗಿತ್ತು. ನಮಗೂ ಆವಾಗ ಈ ಕವಿತೆ ಅರ್ಥವಾಗಿದ್ದು ಅಷ್ಟರಲ್ಲೇ ಇದೆ! "ವನಸುಮದೋಲೆನ್ನ ಜೀ| ವನವು ವಿಕಸಿಸುವಂತೆ ..." ಎನ್ನುವ ಸಾಲನ್ನು "ಜೀ" ಎನ್ನುವ ಕಡೆ ಕತ್ತರಿಸಿರುವುದು ಪ್ರಾಸಕ್ಕಾಗಿ ಎನ್ನುವ ಸರಳ ವಿಷಯ ನಮಗೆ ಗೊತ್ತಿರಲಿಲ್ಲ. ಪ್ರಾರ್ಥನೆಯನ್ನು ನಮ್ಮ ನೋಟ್ ಪುಸ್ತಕಗಳ ಹಿಂದೆ ಹಿಂದಿಯಲ್ಲಿ ಮುದ್ರಿಸಲಾಗಿತ್ತು.  ಇದನ್ನು ಓದಿಕೊಂಡು ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಕಲಿತುಕೊಳ್ಳಬೇಕಾಗಿತ್ತು! ಅಬ್ಬಾ, ಎಂಥ ಶಿಕ್ಷೆ! ಪಾಪ, ಹಿಂದಿ ಮಾತಾಡುವ ಮಕ್ಕಳು "ವನಸುಮದೊಲೆನ್ನ ಜೀ" ಎನ್ನುವುದನ್ನು ಸಂಬೋಧನೆ ಎಂದುಕೊಂಡು ಹಾಗೇ ಹೇಳುತ್ತಿದ್ದರು!! ಕವಿತೆ ನನಗೆ ಅರ್ಥವಾದಾಗ ಅದೆಷ್ಟು ಸರಳಸುಂದರವಾಗಿದೆ ಎನ್ನಿಸಿತು. ನನಗೆ ಇಂದಿಗೂ ಇದು ಪ್ರಿಯವಾದ ಕವಿತೆ. ಇದರ ಭಾವಾರ್ಥವನ್ನು ಬರೆಯುವ ಮೂಲಕ ನನ್ನ ಮಾಧ್ಯಮಿಕ ಶಾಲೆಯ ತಪ್ಪುಗಳನ್ನು ದೇವರು ನನ್ನನ್ನು ಮನ್ನಿಸಲಿ ಎಂದು ಕೇಳಿಕೊಳ್ಳುತ್ತಿದ್ದೇನೆ!!

ಕಗ್ಗ ಮತ್ತು ಫೇಸ್ ಬುಕ್ ಬಳಕೆದಾರ -1

ಸಿ ಪಿ ರವಿಕುಮಾರ್ ಡಿವಿಜಿ ಅವರ ಪುಣ್ಯತಿಥಿಯನ್ನು ಯಾರೋ ನೆನಪಿಸಿದರು. ಅವರ ಒಂದು ಕಗ್ಗ ನೆನಪಿಗೆ ಬಂತು. ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ | ಹಿತವಿರಲಿ ವಚನದಲಿ, ಋತವ ಬಿಡದಿರಲಿ || ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ | ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ | ಫೇಸ್ ಬುಕ್ ಬಳಕೆದಾರರು  ಡಿವಿಜಿ ಅವರ ಹಿತವಚನವನ್ನು ಹೀಗೆ ಅರ್ಥೈಸಿಕೊಳ್ಳಬಹುದು ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ - ಓದುವಾಗ ನಗು ಬಂದರೆ ಅದು ನಿಮ್ಮ ಮುಖದ ಮೇಲೆ ಮಾತ್ರ ಇರಲಿ, LOL ಇತ್ಯಾದಿ ಬೇಡ!  ಜೋರಾಗಿ ನಕ್ಕರೆ ಟೀಚರ್ ಅಥವಾ ಅಪ್ಪ-ಅಮ್ಮ ಬಂದು ನಿನ್ನ ಮೊಬೈಲ್ ಕಿತ್ತುಕೊಳ್ಳುವುದು ಖಂಡಿತ. ಹಿತವಿರಲಿ ವಚನದಲಿ, ಋತವ ಬಿಡದಿರಲಿ - ನಿಮ್ಮ ಕಾಮೆಂಟ್ ಹಿತವಾಗಿರಲಿ, ಆದರೆ ತೀರಾ ಸುಳ್ಳು ಹೇಳಬೇಡ.  ಮಿತ್ರನ  ಪ್ರೊಫೈಲ್ ಚಿತ್ರ ತೀರಾ ಕೆಟ್ಟದಾಗಿದ್ದರೂ ಲೈಕ್ ಒತ್ತುವ ಕಾರಣವಿಲ್ಲ! ಸ್ನೇಹಿತನ ಜೋಕ್ ತೀರಾ ಕಳಪೆಯದಾಗಿದ್ದರೂ ಅದಕ್ಕೆ ವಾವ್, ಸೂಪರ್ ಇತ್ಯಾದಿ ಕಾಮೆಂಟ್ ಹಾಕಬೇಡ! ಮಿತವಿರಲಿ ಮನಸಿನುದ್ವೇಗದಲಿ, ಹೋಗದಲಿ, ಅತಿ ಬೇಡವೇಲ್ಲಿಯುಂ - ಕಾಮೆಂಟ್ ಹಾಕುವಾಗ ಮನಸ್ಸಿನಲ್ಲಿ ಉದ್ವೇಗ ಬೇಡ! ಜಗಳವಾದೀತು! ನಿನ್ನ ಸ್ನೇಹಿತರು ಬೇರೆ ಪಕ್ಷದವರಾಗಿದ್ದರೆ ಅವರು ನಿನಗೆ ಇಷ್ಟವಾದ ಪಕ್ಷವನ್ನು ತೆಗಳಿ ಬರೆಯುತ್ತಾರೆ ಅನ್ನುವುದನ್ನು ನೆನಪಿಡು. ಯುದ್ಧದಲ್ಲಿ ತೊಡಗಬೇಡ!   ಹಾಗೂ ಅತಿ ಭೋಗ ಬೇಡ - 3000 ರೂಪಾಯಿ ಕೊಟ್ಟು ಹತ್ತು ಜನರ

ಗಾಂಧೀಜಿ, ಭಗವದ್ಗೀತೆ ಮತ್ತು ಬ್ರಾಹ್ಮಣರು

ಇಮೇಜ್
ಸಿ ಪಿ ರವಿಕುಮಾರ್     ಭಗವದ್ಗೀತೆಯನ್ನು ಕುರಿತು ವಿವಾದಿತ ವ್ಯಕ್ತಿ ಶ್ರೀ ಕೆ. ಎಸ್. ಭಗವಾನ್ ಆಗಾಗ ಹೇಳಿಕೆಗಳನ್ನು ಕೊಡುವುದನ್ನು ನಾವು ಕೇಳುತ್ತೇವೆ. ಹಾಗೇ ಬ್ರಾಹ್ಮಣವರ್ಗವನ್ನು ಕುರಿತು ಅವರು ಮತ್ತು ಇನ್ನೂ ಅನೇಕ ಸಾಹಿತಿಗಳು ಆಕ್ರೋಶ ವ್ಯಕ್ತ ಪಡಿಸುವುದನ್ನೂ ಪತ್ರಿಕೆಗಳಲ್ಲಿ ಆಗಾಗ ಓದುತ್ತೇವೆ.  ಭಗವದ್ಗೀತೆಯನ್ನು ಕುರಿತು ಮತ್ತು ಬ್ರಾಹ್ಮಣ್ಯವನ್ನು ಕುರಿತು ಗಾಂಧೀಜಿ ಏನು ಹೇಳುತ್ತಿದ್ದರು? ಇದನ್ನು ತಿಳಿಯುವ ಕುತೂಹಲದಿಂದ ನಾನು http://www.mkgandhi.org/ ವೆಬ್ ತಾಣದಲ್ಲಿ ಹುಡುಕಿದೆ. ಗಾಂಧೀಜಿಯವರ ಬರವಣಿಗೆಗಳಿಂದ ಆಯ್ದ ಭಾಗಗಳನ್ನು ಅವರು ಅಚ್ಚುಕಟ್ಟಾಗಿ ವಿಂಗಡಿಸಿದ್ದಾರೆ.  ಈ ಎರಡೂ ವಿವಾದಿತ ವಿಷಯಗಳನ್ನು ಕುರಿತ ಗಾಂಧೀಜಿಯವರ ಮಾತುಗಳನ್ನು ನಾನು ಅನುವಾದಿಸಿ ಕೆಳಗೆ ಕೊಡುತ್ತಿದ್ದೇನೆ.  ಇದನ್ನು ಓದುತ್ತಿದ್ದಾಗ   ಕೆ. ಎಸ್. ಭಗವಾನ್ ನಂಥವರು ಗಾಂಧೀಜಿಯ ಕಾಲದಲ್ಲೂ ಇದ್ದಿರಬಹುದು ಎನ್ನಿಸಿತು; ಮುಂದೆಯೂ ಇರುತ್ತಾರೆ. ಅವರಿಗೆ ಗಾಂಧೀಜಿಯ ಮಾತುಗಳು ಬೆಳಕು ನೀಡಲೆಂದು ಹಾರೈಸುತ್ತೇನೆ! ಭಗವದ್ಗೀತೆ ಕುರಿತು ಗಾಂಧಿ  ಭಗವದ್ಗೀತೆಯು ನಂಬಿಕೆ ಇಲ್ಲದವರಿಗೆ ಅಲ್ಲವೇ ಅಲ್ಲ (T-೨-೩೧೨) ಭಗವದ್ಗೀತೆಯು ಬೆಳಕು ಮತ್ತು ಕತ್ತಲೆಗಳ ಶಕ್ತಿಗಳನ್ನು ಪ್ರತ್ಯೇಕಗೊಳಿಸಿ  ನೋಡುತ್ತದೆ ಮತ್ತು ಅವುಗಳ ನಡುವಿನ ಅಸಾಂಗತ್ಯವನ್ನು ತೋರಿಸುತ್ತದೆ (MM-೯೪)  ಗೀತೆಯು ಒಂದು ಸೂತ್ರವಲ್ಲ, ಅದೊಂದು ಮಹಾನ್ ಧಾರ್ಮಿಕ ಕವಿತೆ  (T-೨-೩