ಪೋಸ್ಟ್‌ಗಳು

Madan Mohan ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಪೂರ್ಣ ಆಸೆಗಳ ಕಳಂಕ ತೊಳೆವ ಪ್ರೇಮವೆ!

ಇಮೇಜ್
ಸಿ ಪಿ ರವಿಕುಮಾರ್   ಮದನ್ ಮೋಹನ್ ಸಂಗೀತ ನಿರ್ದೇಶನದಲ್ಲಿ ಮೂಡಿದ ಅನೇಕ ಉತ್ತಮ ಗಜಲ್ ಗಳಲ್ಲಿ "ಯೂಂನ್ ಹಸರತೋಂನ್ ಕೆ ದಾಗ್ ಮುಹಬ್ಬತ್ ಮೇಂನ್ ಧೋಲಿಯೇ ..." ಬಹಳ ಜನಪ್ರಿಯವಾದುದು. ಲತಾ ಮಂಗೇಶ್ಕರ್ ಹಾಡಿರುವ ಗೀತೆಯನ್ನು ಅದಾಲತ್ (ನ್ಯಾಯಾಲಯ) ಎಂಬ ಚಿತ್ರದಲ್ಲಿ ಬಳಸಲಾಗಿದೆ. ಒಬ್ಬ ವೇಶ್ಯೆಯ ಪಾತ್ರದಲ್ಲಿ ನರ್ಗಿಸ್ ಅಭಿನಯಿಸಿದ್ದಾರೆ. ಸಮಾಜದ ಅನ್ಯಾಯದಿಂದ ವೇಶ್ಯಾವೃತ್ತಿಗೆ ಬಂದು ಬಿದ್ದ ಹೆಣ್ಣಿನ ನೋವನ್ನು ಗೀತಕಾರ ರಾಜೇಂದ್ರಕೃಷ್ಣ ಈ ಗಜಲ್ ನಲ್ಲಿ ಬಹಳ ಕಲಾತ್ಮಕವಾಗಿ ಬಿಂಬಿಸಿದ್ದಾರೆ. ಮೂಲ ಚಿತ್ರಗೀತೆಯನ್ನು ಯೂ ಟ್ಯೂಬ್ ನಲ್ಲಿ ನೀವು ಕೇಳಬಹುದು .ಉರ್ದೂ ಸಾಹಿತ್ಯದಲ್ಲಿ ಗಜಲ್ ಬಹಳ ವಿಶಿಷ್ಟವಾದ ಕಾವ್ಯರೂಪ. ಎರಡೆರಡು ಸಾಲುಗಳ ಮೂರು-ನಾಲ್ಕು ಪದ್ಯಗಳಲ್ಲಿ ಮನಸ್ಸಿನ ಸೂಕ್ಷ್ಮವಾದ ಭಾವನೆಗಳನ್ನು ಹೇಳುವ ಕಲೆ ಗಜಲ್ ಕವಿಗೆ ಸಿದ್ಧಿಸಿರಬೇಕು. ಹಿಂದಿ ಚಿತ್ರಗಳಲ್ಲಿ ಪ್ರಸಿದ್ಧ ಉರ್ದೂ ಕವಿಗಳ ಗಜಲ್ ಗಳನ್ನು ಗೀತೆಗಳನ್ನಾಗಿ ಬಳಸಿಕೊಂಡಿರುವುದು ವಿಶೇಷ. ಪ್ರಸ್ತುತ ಗಜಲ್ ಒಂದು ಹೆಣ್ಣಿನ ವ್ಯಸನವನ್ನು ಕುರಿತು ಹೇಳುತ್ತದೆ. ಇವಳು ತನ್ನ ಇಚ್ಛೆಗೆ ವಿರುದ್ಧವಾಗಿ ವೇಶ್ಯಾವೃತ್ತಿಗೆ ಇಳಿಯಬೇಕಾಗಿದೆ. ಅವಳಲ್ಲಿ ಪ್ರೇಮವನ್ನು ಹುಡುಕಿಕೊಂಡು ಬರುವ ಅನೇಕರಿದ್ದಾರೆ. ಅವಳ ಪ್ರೇಮವೆನ್ನುವುದು ಅವರ ಅಪೂರ್ಣ ಆಸೆಗಳನ್ನು ತೊಳೆಯುವ ಒಂದು ಸಾಧನ ಮಾತ್ರ. ಇದನ್ನು ಅವಳು ಬೇರಾರಿಗೂ ಹೇಳಲಾರಳು. ತನ್ನ ಮಾತ್ರಕ್ಕೆ ಸ್ವಗತವನ್ನ...