ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಾಘಾ - ಒಂದು ನೆನಪು

ಇಮೇಜ್
ಶೂನ್ಯರೇಖೆಯ ನೆನಪು ಸಿ ಪಿ ರವಿಕುಮಾರ್ ಕೆ ಲವು ವರ್ಷಗಳ ಹಿಂದೆ ನಾನು ವಾಘಾ ಬಾರ್ಡರ್ ನೋಡಲು ಹೋಗಿದ್ದೆ.  ಅಮೃತಸರಕ್ಕೆ ಹೋದವರು ಅಲ್ಲಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಬಾರ್ಡರ್ ನೋಡಲು ಹೋಗುವುದು ಸಾಮಾನ್ಯ.  ಅಮೃತಸರದಲ್ಲಿ ಸಿಖ್ ಧರ್ಮದ ಅನುಯಾಯಿಗಳ ಪವಿತ್ರಸ್ಥಾನವಾದ ಸ್ವರ್ಣ ಮಂದಿರವಲ್ಲದೆ ಜಲಿಯಾನ್ ವಾಲಾ ಬಾಗ್ ಕೂಡಾ ಇದೆ. ಇಂದು  ಜಲಿಯಾನ್ ವಾಲಾ ಬಾಗ್ಅನ್ನು  ಇಂದು ಒಂದು ಪ್ರೇಕ್ಷಣೀಯ ಸ್ಥಾನವಾಗಿ ಮಾರ್ಪಡಿಸಲಾಗಿದೆ.  ಈ ಉದ್ಯಾನವನದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಒಂದು ದುರಂತ ನಡೆದುಹೋಯಿತು. ಸ್ವರಾಜ್ಯ ಕುರಿತು ಭಾಷಣ ಕೇಳಲು ಬಂದಿದ್ದ ಸಹಸ್ರಾರು ಜನ ತಮ್ಮ ಪಾಡಿಗೆ ಶಾಂತಿಯಿಂದ ಸಭೆಯಲ್ಲಿ ಕುಳಿತಿದ್ದಾಗ ಜೆನೆರಲ್ ಡಯರ್ ಎಂಬ ಬ್ರಿಟಿಷ್ ಅಧಿಕಾರಿ ಐವತ್ತು ಸೈನಿಕರೊಂದಿಗೆ ಅಲ್ಲಿ ಬಂದ. ಸ್ವರಾಜ್ಯದ ಕೂಗು ಬಲವಾಗುತ್ತಲೇ ಇದ್ದ ಕಾಲದಲ್ಲಿ  ಬ್ರಿಟಿಷ್ ಆಳ್ವಿಕೆಗೆ ಅಧೈರ್ಯ ಉಂಟಾಗಿದ್ದು ಆಶ್ಚರ್ಯವೇನಲ್ಲ. ಅವರ ಆಳ್ವಿಕೆಯ ವಿರುದ್ಧ ನಡೆಯುತ್ತಲೇ ಇದ್ದ ಪ್ರತಿಭಟನೆಗಳು, ದಂಗೆಗಳು ಅವರನ್ನು ಕಂಗೆಡಿಸಿದ್ದವು. ಡಯರ್ ತಾಳ್ಮೆ ಕಳೆದುಕೊಂಡು ತನ್ನ ಸೈನಿಕರಿಗೆ ಗೋಲೀಬಾರು ಮಾಡಲು ಆದೇಶ ನೀಡಿದ. ಗುಂಡಿಗೆ ಬಲಿಯಾದವರು ಒಂದು ಕಡೆಯಾದರೆ  ಜನ ಹೆದರಿ ಓಡುವಾಗ ಕಾಲ್ತುಳಿತಕ್ಕೆ ಸಿಕ್ಕು ಸತ್ತವರು ಒಂದು ಕಡೆ.  ಉದ್ಯಾನವನದಲ್ಲಿರುವ ದೊಡ್ಡ ಬಾವಿಗೆ ಎಷ್ಟೋ ಜನ ಆತ್ಮರಕ್ಷಣೆಗಾಗಿ ಹಾರಿ ಪ್ರಾಣ ಕಳೆದುಕೊಂಡರು. ಇಂದಿಗೂ ಆ ಬಾವಿ

ನೆರವಿಗಿರುತಿರಲು ಜಾನಕಿನಾಥ

ಇಮೇಜ್
(ತುಲಸೀದಾಸರ ರಚನೆಯ ಅನುವಾದ) "ಜಾನಕಿನಾಥ ಸಹಾಯ ಕರೇ..." ಎಂದು ಪ್ರಾರಂಭವಾಗುವ ತುಲಸೀದಾಸರ ಈ ರಚನೆಯನ್ನು ಅನೇಕ ಹಾಡುಗಾರರು ಹಾಡಿದ್ದಾರೆ.  ಈ ಜನಪ್ರಿಯ ರಚನೆಯ ಅನುವಾದವನ್ನು ಕೆಳಗೆ ಪ್ರಯತ್ನಿಸಿದ್ದೇನೆ.  ಶ್ರೀರಾಮನ ಪರಮಭಕ್ತರಾಗಿದ್ದ ತುಲಸೀದಾಸರು ತಮ್ಮ ಸುಲಲಿತ ಶೈಲಿಯಲ್ಲಿ ರಾಮನನ್ನು ಸ್ತುತಿಸಿದ್ದಾರೆ. ಯಾರ ನೆರವಿಗೆ ಸಾಕ್ಷಾತ್ ಶ್ರೀರಾಮನೇ ಇದ್ದಾನೋ ಅವನಿಗೆ ಯಾರೂ ಏನೂ ಮಾಡಲಾರರು ಎಂಬುದು ಕವಿಯ ಸಂದೇಶ. ಗ್ರಹಣಕಾಲದಲ್ಲಿ ರಾಹು-ಕೇತುಗಳಿಗೆ ಹೆದರುವ ಜನರಿಗೆ ಈ ರಚನೆ ಸಾಂತ್ವನ ನೀಡಬಹುದು.  ನೆರವಿಗಿರುತಿರಲು ಜಾನಕಿನಾಥ  ಬರದು ನಿನ್ನ ಬಳಿ ಯಾವ ವಿಪತ್ತು ।। ತರುವರು ಶುಭಫಲ  ರವಿ ಶಶಿ ಮಂಗಳ,  ಗುರು ಭೃಗುಸುತ  ಬುಧ ವರಗಳನಿತ್ತು । ಇರದು ಗಮ್ಯತೆಯು ರಾಹುಕೇತುವಿಗೆ, ಸರಿವನು ಶನಿ ಹೆಜ್ಜೆಯ ಹಿಂದಿಟ್ಟು ।। ದುರುಳ ದುಶ್ಶಾಸನ ವಿಮಲ ದ್ರೌಪದಿಯ ಸೀರೆಯನೆಳೆಯಲು ಸಾಹಸಪಟ್ಟು । ಪೊರೆಯಲು ಕರುಣಾನಿಧಿ ಬರಲಿಲ್ಲವೇ ಹರಿದು ಮೋಡ ಬರುವಂತೆ  ಸವಿತೃ ।। ಯಾರ ಪರವೋ ಕರುಣಾನಿಧಿ ಜಗದೊಳು ತೆರೆವುದು ಅವರಿಗೆ ಭಾಗ್ಯಜಗತ್ತು । ಎರಗುವೆ ತುಲಸೀದಾಸ ರಘುವರನ ಸುಖದಾಯಿ ಚರಣಕೆ ಯಾವತ್ತೂ  ।। ಮೂಲ ರಚನೆ: जानकी नाथ सहाय करें जब कौन बिगाड़ करे नर तेरो ॥ सुरज मंगल सोम भृगु सुत बुध और गुरु वरदायक तेरो । राहु केतु की नाहिं गम्यता संग शनीचर होत हुचेरो ॥ दुष्ट दु:शासन विमल द्रौपदी चीर उतार कुमंत

2020

ಎರಡು ಸಾವಿರದ ಇಪ್ಪತ್ತು  ಪಾಪ ಬೇಜಾರು ಮಾಡಿಕೊಂಡಿತ್ತು ಜನ ಬೈತಾರೆ ನನ್ನ, ಮಾಡಿಕೋತಾರೆ ಸಿಟ್ಟು ತಾವು ಮಾಡಿದ್ದನ್ನ ಪೂರ್ತಿ ಮರೆತೇಬಿಟ್ಟು ಗೋಡೆಯ ಮೇಲೆ ದೊಡ್ಡಕ್ಷರದಲ್ಲಿ ಬರೆದಿತ್ತು ತಂದುಕೊಳ್ಳುತ್ತೀರಿ ನಿಮಗೆ ನೀವೇ ವಿಪತ್ತು ಕೇಳಿದಿರಾ ಕಿವಿಗೊಟ್ಟು? ಬಾಚಿಕೊಳ್ಳುವುದರಲ್ಲಿ ಸಂಪತ್ತು ನಿಮ್ಮ ಧ್ಯಾನವೆಲ್ಲಾ ಇತ್ತು ನವನವೋನ್ಮೇಷ ಮದಿರೆಯ ಮತ್ತು ಪೂರ್ತಿ ಆವರಿಸಿತ್ತು ಹೇಗಿತ್ತು ಅಂದರೆ ನಿಮ್ಮ ಗಮ್ಮತ್ತು ಭೂಮಿಯ ಯಕೃತ್ತು ಮುಕ್ಕಾಲುಭಾಗ ಕೆಟ್ಟುಹೋಗಿತ್ತು ನನ್ನ ತಲೆಗೇಕೆ ಕಟ್ಟುವಿರಿ ನಿಮ್ಮ ಸ್ವತ್ತು ಅನುಭವಿಸಿ ನೀವು ಗಳಿಸಿದ ಸಂಪತ್ತು ಎಂದು ಇನ್ನೇನೇನೋ ಹೇಳುತ್ತಿತ್ತು ಅಷ್ಟರಲ್ಲಿ ಹಗಲ್ಗನಸು ಮುರಿದು ಬಿತ್ತು ಎಚ್ಚರವಾಗಿತ್ತು ಎನ್ನಲು ಯಾಕೋ ಹಿಂದೇಟು ಸಿ.ಪಿ. ರವಿಕುಮಾರ್

ಮಧ್ಯಾಹ್ನದ ಮಳೆ (ಮಕ್ಕಳ ಪದ್ಯ)

ಇಮೇಜ್
ಕತ್ತಲಾಗುತಿದೆ ನಡುಮಧ್ಯಾಹ್ನ ಸೂರ್ಯನೆಲ್ಲಿ ಹೋದನು ಹೇಳಮ್ಮಾ ಮೋಡಗಳಿವು ಬಂದವು ಎಲ್ಲಿಂದ? ಒಮ್ಮೆಲೇ ಸೂರ್ಯನಿಗೇತಕೆ ಬಂಧ! ಬ್ರೇಕಿಂಗ್ ನ್ಯೂಸ್ ಬರುತಿದೆಯೇನಮ್ಮಾ ಹಚ್ಚು ಟಿವಿ ಹಚ್ಚು! ನಡೆಯುತ್ತಿದೆಯೇನಮ್ಮಾ ಯುದ್ಧ? ಏನದು ಬಾನೊಳು ಗುಡುಗುಡು ಶಬ್ದ! ನೋಡಮ್ಮಾ ಈ ರೊಯ್ಯನೆ ಗಾಳಿ ನುಗ್ಗುವ ಹಾಗೆ ಸೊಕ್ಕಿದ ಗೂಳಿ ಗುಟುರು ಹಾಕಿ ಬರುತಿದೆ ಸನ್ನದ್ಧ! ಮುಚ್ಚು ಕದವ ಮುಚ್ಚು! ಧೋ ಧೋ ಮಳೆ  ಸುರಿಯುತ್ತಿದೆ ಹೇಗೆ ಮರಗಳೆಲ್ಲ ಉಯ್ಯಾಲೆಯ ಹಾಗೆ ತೂಗಾಡುತ್ತಿವೆ ಅತ್ತಿಂದಿತ್ತ! ಗಿಡಗಳು ಬಾಗಿವೆ ಸೊಟ್ಟಂಪಟ್ಟ! ಕಾಣದು ಏನೂ ಕಿಟಕಿಯ ಹೊರಗೆ, ಎಲ್ಲಿ ದೀಪ ಸ್ವಿಚ್ಚು! ಕೊನೆಗೂ ನಿಂತಿತು ಮಳೆ ಸುರಿಸುರಿದು ಶುಭ್ರಾಕಾಶವು ಬರಿದೋ ಬರಿದು ಶಾಂತವಾಗಿಹವು ಗಿಡಮರಬಳ್ಳಿ ಸೂರ್ಯ ನಗುತಿಹನು ಆಗಸದಲ್ಲಿ ಏಳು ಬಣ್ಣಗಳ ಕಮಾನು ತೆರೆದು! ಹೊರಡುವೆ, ಆಟದ ಹೊತ್ತು! ಸಿ. ಪಿ. ರವಿಕುಮಾರ್