ಪೋಸ್ಟ್‌ಗಳು

ಜೂನ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮ ಆಸ್ತಿಯ ಬೆಲೆ

ಇಮೇಜ್
ಸಿ ಪಿ ರವಿಕುಮಾರ್  ಜೂ ನ್ 6 "ಕನ್ನಡದ ಆಸ್ತಿ" ಎಂದೇ ಪ್ರಸಿದ್ಧರಾದ ದಿವಂಗತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ.  ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದು "ಚಿಕವೀರ ರಾಜೇಂದ್ರ" ಕಾದಂಬರಿಗಾದರೂ ಅವರು ತಮ್ಮ ಸಣ್ಣ ಕತೆಗಳಿಗಾಗಿ ಪ್ರಸಿದ್ಧರು.  ನಾನು ಹತ್ತನೇ ತರಗತಿ ಓದುತ್ತಿದ್ದಾಗ ನಮಗೆ ಅವರ ಕತೆ "ನಿಜಗಲ್ಲಿನ ರಾಣಿ" ಪಾಠವಾಗಿತ್ತು.  ಇದೊಂದು ಐತಿಹಾಸಿಕ ಕತೆ. ಕತೆಯಲ್ಲಿ ಬರುವ ರಾಮರಸ ನಾಯಕ, ಲಕುಮವ್ವೆ, ಗಿರಿಜವ್ವೆ, ಕಸ್ತೂರಿ - ಈ ಪಾತ್ರಗಳು ಎಂದಿಗೂ ನೆನಪಿನಲ್ಲಿ ಉಳಿಯುವಂಥವು. ಈ ಕತೆಯನ್ನು ನಾನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದು ನನ್ನ ಬ್ಲಾಗ್ ನಲ್ಲಿ ಲಭ್ಯವಾಗಿದೆ ( ಇಲ್ಲಿ ಓದಿ ). ಮಾಸ್ತಿ ಅವರನ್ನು ಭೇಟಿ ಮಾಡಿದ ಸುಸಂದರ್ಭ ನನ್ನ ಜೀವನದಲ್ಲೂ ಬಂದಿತ್ತು! ನಾನು ನವಕರ್ನಾಟಕ ಪಬ್ಲಿಕೇಷನ್ಸ್ ಅವರು ಹೊರತಂದ ವಿಶ್ವಕಥಾಕೋಶ ಎಂಬ ದೊಡ್ಡ ಪ್ರಾಜೆಕ್ಟ್ ನಲ್ಲಿ "ಕಾಡಿನಲ್ಲಿ ಬೆಳದಿಂಗಳು" ಎಂಬ ವಿಯೆಟ್ನಾಮ್ ಕಥೆಗಳ ಸಂಕಲನವನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಈ ಪ್ರಾಜೆಕ್ಟ್ ನನಗೆ ಕೊಟ್ಟವರು ದಿವಂಗತ ನಿರಂಜನ. ಆಗ ನಾನು ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತಿದ ಹೊಸದು. "ಕುರಿ" ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ವಿಷಯ ನಿರಂಜನ ಅವರಿಗೆ ತಿಳಿದಿತ್ತು. ಹೀಗಾಗಿ ಅವರಿಗೆ ನಾನು ಈ ಕೆಲಸ ಮಾಡಬಲ್ಲೆ ಎಂಬ ವಿಶ್ವಾಸ ಬಂದಿ

ಕೃಷ್ಣಪಕ್ಷದ ಚಂದ್ರ

ಇಮೇಜ್
ಮೂಲ ಹಿಂದಿ ಕವಿತೆ - ಕೇದಾರನಾಥ್ ಸಿಂಗ್ ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಕಾರಾಗೃಹದಲ್ಲಿ ತೂಗುಬಿಟ್ಟ  ಚಿಮಣಿದೀಪದ ಹಾಗೆ  ಚಂದ್ರ ತೂಗಿಬಿದ್ದಾಗ  ಮರದ ಬೆತ್ತಲು ರೆಂಬೆಗೆ ನಾವು   ಅರ್ಥಾತ್ ಭೂಮಿಯ ಮೇಲಿನ ಸಕಲ ಸೆರೆವಾಸಿಗಳು ಸಂಭ್ರಮಿಸುತ್ತಿದ್ದೇವೆ  ಸರಿ, ಒಂದಾದರೂ ಅಂಥದ್ದು ಇದೆಯಲ್ಲಪ್ಪ  ನೋಡಿಕೊಳ್ಳಲು ನಮ್ಮ ಚೆಹರೆಗಳು ಪರಸ್ಪರ  Translation of a Hindi poem by Kedarnath Singh (c) 2014, C.P. Ravikumar

ಹೊಸದಿನದೊಂದಿಗೆ

ಇಮೇಜ್
ಕವಿತೆ ಓದುವ ಮುನ್ನ .... ಈ ಸಲದ ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀ ಕೇದಾರನಾಥ್ ಸಿಂಗ್ (೧೯೨೪-) ಹಿಂದಿಯ ಪ್ರಮುಖ ಕವಿ, ಸಾಹಿತ್ಯ ವಿಮರ್ಶಕ ಮತ್ತು ಪ್ರಬಂಧಕಾರ. ಅವರ ಒಂದು ಕವಿತೆಯ ಕನ್ನಡ ಭಾಷಾಂತರವನ್ನು ಓದಿ. ಪ್ರತಿದಿನವೂ ನಮ್ಮ ಬಾಳಿನಲ್ಲಿ ಒಂದು ಹೊಸಪುಟವನ್ನು ತೆರೆಯುತ್ತದೆ. ಅದನ್ನು "ಪ್ರೇಮದ ಪುಟ" ಎಂದು ಕವಿ ಸ್ವಾಗತಿಸುತ್ತಾನೆ. ಹಿಂದೆ ಹೀಗೇ ಪ್ರಾರಂಭವಾದ ಎಷ್ಟೋ ಪುಟಗಳಲ್ಲಿ ಕಹಿನೆನಪುಗಳು ದಾಖಲಾಗಿರಬಹುದು.  ಆದರೇನು? ಕವಿ ಆಶಾವಾದಿ - ಇಂದಿನ ಪುಟವು ಅಂತಹ ಅನಿಷ್ಟವಾದ ಪುಟಗಳ ನಡುವೆ ಹುದುಗಿಸಿಟ್ಟ ನವಿಲುಗರಿಯಂತೆ ಮೂಡಲಿ ಎಂಬುದು ಅವನ ಆಸೆ!  ಮೂಲ ಹಿಂದಿ ಕವಿತೆ - ಕೇದಾರನಾಥ್ ಸಿಂಗ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಹೊಸದಿನದೊಂದಿಗೆ  ನಮ್ಮ ಪ್ರೀತಿಯ  ಮತ್ತೊಂದು ಖಾಲೀಪುಟ ಮಗುಚಿದೆ  ಓ ಬೆಳಗೇ, ಇದರ ಮೇಲೆ ಎಲ್ಲಾದರೂ  ನಿನ್ನ ಹೆಸರನ್ನು ಬರೆದುಹೋಗಬಾರದೆ? ಅನೇಕ ಅನಿಷ್ಟ ಪುಟಗಳ ನಡುವೆ  ಅದನ್ನೂ ಇಟ್ಟುಬಿಡುತ್ತೇನೆ.  ಬೀಸಿದ ಗಾಳಿ    ಏಕಾಏಕಿ ಕೆದರಿದಾಗ ಒಳಗೆ ನವಿಲುಗರಿಯಂತೆ  ಬಚ್ಚಿಟ್ಟ ಆ ಹೆಸರನ್ನು  ಓದಿಕೊಳ್ಳುತ್ತೇನೆ ಪ್ರತಿಸಲವೂ  Kannada Translation of a Hindi poem by Kedarnath Singh (c) 2014, C.P. Ravikumar

ನಿನ್ನದೇ ನಿರೀಕ್ಷೆ

ಇಮೇಜ್
ಸಿ ಪಿ ರವಿಕುಮಾರ್  ಖಾ ಮೋಶಿ (ಮೌನ) ಹಿಂದಿ ಚಿತ್ರ ಒಂದು ದುರಂತ ಕಥೆಯನ್ನು ಹೇಳುತ್ತದೆ. ಚಿತ್ರದ ನಾಯಕ (ರಾಜೇಶ್ ಖನ್ನಾ) ಒಬ್ಬ ಭಗ್ನ ಪ್ರೇಮಿ; ಕವಿ. ಮುರಿದ ಪ್ರೇಮದ ಕಾರಣ ಅವನ ಮನಸ್ಸು ವಿಕಲ್ಪವಾಗುತ್ತದೆ. ಅವನನ್ನು ಮನೋವಿಕಾರಗಳ ಆಸ್ಪತ್ರೆಗೆ ಕರೆದು ತರುತ್ತಾರೆ. ಅಲ್ಲಿ ಒಬ್ಬ ನರ್ಸ್ (ವಹೀದಾ ರೆಹಮಾನ್) ಅವನ ಶುಶ್ರೂಷೆಗೆ ನೇಮಕಗೊಳ್ಳುತ್ತಾಳೆ. ಡಾಕ್ಟರ್ ನಡೆಸುತ್ತಿರುವ ಚಿಕಿತ್ಸೆಯಲ್ಲಿ  ಅವಳಿಗೆ ವಿಶೇಷವಾದ  ಪಾತ್ರ ಕೊಡಲಾಗುತ್ತದೆ. ರೋಗಿಯೊಂದಿಗೆ ಪ್ರೇಮವನ್ನು ನಟಿಸಿ ಅವನನ್ನು ಗುಣ ಮಾಡುವ ಹೊರೆ ಅವಳದು. ಹಿಂದೊಮ್ಮೆ ಇದೇ ರೀತಿಯ ಪ್ರಯೋಗದಲ್ಲಿ ಭಾಗಿಯಾದ ನರ್ಸ್ ಈ ನಟನೆಯು ತನ್ನ ಮನಸ್ಸಿನ  ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದನ್ನು ಬಲ್ಲವಳು. ಆದರೆ ಬೇರೆ ದಾರಿಯಿಲ್ಲದೆ ಮತ್ತೊಮ್ಮೆ ಪ್ರೇಮವನ್ನು ಅಭಿನಯಿಸಲು ಒಪ್ಪುತ್ತಾಳೆ.  ಪ್ರೇಮವನ್ನು ನಟಿಸುತ್ತಾ ಅವಳು ನಾಯಕನಲ್ಲಿ ನಿಜವಾಗಿ ಅನುರಕ್ತಳಾಗುತ್ತಾಳೆ. ನಾಯಕ ಗುಣಮುಖನಾಗಿ ಒಂದು ದಿನ ಹೊರಟು ನಿಲ್ಲುತ್ತಾನೆ. ನಾಯಕಿಯ ಮನಸ್ಸಿನ ಮೇಲೆ ಇದು ಆಘಾತ ಉಂಟು ಮಾಡುತ್ತದೆ. ಅವಳು ಸ್ವಯಂ ಮನೋವಿಕಾರಕ್ಕೆ ಗುರಿಯಾಗುತ್ತಾಳೆ. ಈ ದುರಂತ ನಾಯಕಿಯ ಪಾತ್ರದಲ್ಲಿ ವಹೀದಾ ರೆಹಮಾನ್ ಅಭಿನಯ ಮನೋಜ್ಞವಾಗಿದೆ. ಚಿತ್ರಕ್ಕೆ ಒಪ್ಪುವ ಗಂಭೀರ ಶೈಲಿಯ ಸಂಗೀತವನ್ನು ಹೇಮಂತ್ ಕುಮಾರ್ ನೀಡಿದ್ದಾರೆ. ಅವರೇ ಹಾಡಿರುವ ಹಾಡು "ತುಮ್ ಪುಕಾರ್ ಲೋ! ತುಮ್ಹಾರಾ ಇಂತೆಜಾರ್ ಹೈ ..." ಬಹಳ ಜನಪ್ರಿ

ಕನ್ನಡ ಪಾಠಗಳೇಕೆ ನೀರಸವಾಗಿರುತ್ತವೆ?

ಇಮೇಜ್
ಡಾ. ಸಿ ಪಿ ರವಿಕುಮಾರ್  ನಾನು ಹೈಸ್ಕೂಲಿನಲ್ಲಿ ಮತ್ತು ಪ್ರಿ-ಯೂನಿವರ್ಸಿಟಿಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿತೆ. ನಮಗೆ ಹೈಸ್ಕೂಲಿನ ಕನ್ನಡ ಪಠ್ಯಗಳಲ್ಲಿ ಡೀಟೇಲ್ಡ್ ಮತ್ತು ನಾನ್  ಡೀಟೇಲ್ಡ್ ಎಂಬ ಪ್ರಭೇದಗಳಿದ್ದವು. ಅವುಗಳನ್ನು ಹಾಗೆ ಯಾಕೆ ಕರೆಯುತ್ತಿದ್ದರೋ!  ಡೀಟೇಲ್ಡ್ ಪಠ್ಯದಲ್ಲಿ ಕನ್ನಡ ಕತೆಗಳು, ಲೇಖನಗಳು, ಜೀವನಚರಿತ್ರೆಯ ಆಯ್ದ ಭಾಗಗಳು, ಹಳಗನ್ನಡ ಕಾವ್ಯದಿಂದ ಆಯ್ದ ಭಾಗಗಳು, ಹೊಸಗನ್ನಡ  ಕವಿತೆಗಳು ಇವೆಲ್ಲಾ ಇರುತ್ತಿದ್ದವು. ನಾನ್ ಡೀಟೇಲ್ಡ್ ಕನ್ನಡ ಪಠ್ಯಕ್ಕೆ ಗೊತ್ತಾಗಿದ್ದ  ಒಂದು  ಪುಸ್ತಕವನ್ನು ಬಹುಮಟ್ಟಿಗೆ ವಿದ್ಯಾರ್ಥಿಯೇ ಓದಿಕೊಳ್ಳಬೇಕಾಗಿತ್ತು.  ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದು ಈ ಪುಸ್ತಕಗಳ ಉದ್ದೇಶ. ನಾನ್ ಡೀಟೇಲ್ಡ್ ಪಠ್ಯಗಳು  ನಾನು ಓದಿದ ನಾನ್ ಡೀಟೇಲ್ಡ್ ಪಠ್ಯಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದ್ದೇನೆ - ಒಂಬತ್ತನೇ ತರಗತಿ - ಗಾಂಧೀಜಿಯ ಜೀವನ ಚರಿತ್ರೆ  ಹತ್ತನೇ ತರಗತಿ - ಸರ್ ಎಂ ವಿ ಅವರ ಜೀವನ ಚರಿತ್ರೆ  ಪಿ ಯು ಸಿ - ೧ - "ನಾ ಕಂಡ ಜರ್ಮನಿ" ಎಂಬ ಪ್ರವಾಸಕಥನ ಮತ್ತು ಭಾಸ ಕಥಾ ಮಂಜರಿ ಪಿ ಯು ಸಿ - ೨ - ಟಾಲ್ಸ್ಟಾಯ್ ಅವರ ಜೀವನ ಚರಿತ್ರೆ ಮತ್ತು "ಬನದ ಮಕ್ಕಳು" ಕಾದಂಬರಿ  ಮೇಲೆ ಹೇಳಿದ ಪುಸ್ತಕಗಳಲ್ಲಿ ನಮಗೆ ಆಸಕ್ತಿ ಹುಟ್ಟಿಸಿದ ಪುಸ್ತಕ "ಬನದ ಮಕ್ಕಳು." ಇದು Children of the New Forest ಎಂಬ ಇಂಗ್ಲಿಷ್ ಕಾದಂಬರಿಯ ಅನು

ಓಟದ ಹಿಂದೆ ಮುಂದೆ

ಇಮೇಜ್
ಸಿ ಪಿ ರವಿಕುಮಾರ್  ನೆನ್ನೆ ಹೀಗಾಯಿತು ಮನೆಯಿಂದ ಹೊರಟಾಗ ಕಣ್ಣಿಗೆ ಬಿದ್ದ ಬೆಳ್ಳಗಿನ ಯೂನಿಫಾರ್ಮ್ ಹಾಕಿಕೊಂಡು ಹೊರಟಿದ್ದ ಹುಡುಗ ಇಂಥ ಹುಡುಗರು ಹತ್ತಾರು ಜನ ಆದರೆ ಇವನು ಕಣ್ಣು ಸೆಳೆದದ್ದೇಕೆ? ಕಣ್ಣಿಗೆ ಕನ್ನಡಕ ಗಂಭೀರ ಮುಖ ಸ್ವಲ್ಪ ಸ್ಥೂಲ ಶರೀರ ಕಾಲು ಎಳೆಯುತ್ತಾ ಹಾಕುತ್ತಾನೆ ನಾನು ಹಲೋ ಎಂದೆ ಮುಗುಳ್ನಕ್ಕೆ ಅವನು ಗಂಭೀರವಾಗಿ ಹಲೋ ಅಂದ ಅವನ ಮುಂದೆಯೇ ಓಡುತ್ತಾ ಹೋದರು ಇಬ್ಬರು ಹುಡುಗರು ನಾನೂ ಅವನನ್ನು ಹಾದು ಹೊರಟೆ ಕಾರ್ಯದ ಅವಸರ ನನಗೂ ಇತ್ತು ಅಪರಾಧಿ ಭಾವನೆ ನನ್ನನು ಕಾಡಿತು ತನ್ನ ಮುಂದೆಯೇ ಓಡಿ ಹೋದ ಹುಡುಗರು ತನ್ನನ್ನು ಹಾದು ಹೋಗುವವರೇ ಎಲ್ಲರೂ ಹೇಗೆ ಅನ್ನಿಸಿರಬಹುದು ಅವನಿಗೆ! ಎಷ್ಟು ನೋವಾಗಿರಬಹುದು ಮನಸ್ಸಿಗೆ! ಹೀಗೆ ಯೋಚಿಸಿ ನನ್ನಲ್ಲಿ ಹುಟ್ಟಿತು ಮರುಕ ನನ್ನ ಹಿಂದೆ ಯಾರೋ ಓಡಿ ಬರುವ ಸದ್ದು ಕೇಳಿ ಹಿಂದಕ್ಕೆ ತಿರುಗಿದೆ ಕಷ್ಟ ಪಟ್ಟು ಓಡಿ ಬರುತ್ತಿದ್ದಾನೆ ಅವನು ಶಾಲೆಯ ಬಸ್ ಹೊರಟು ಹೋಗುವುದೆಂಬ ದಿಗಿಲು "ಹುಷಾರು! ಹುಷಾರು!" ಎಂದು ಉದ್ಗರಿಸಿದೆ ನಾನು ಅವನು ಹೆದರಿದ ಓಟ ನಿಲ್ಲಿಸಿ ನಡೆಯತೊಡಗಿದ ಯಾರೋ ಬಯ್ಯುವುದು ಕೇಳಿಸಿತು ಅವನ ತಾಯಿ ಇರಬೇಕು "ಯಾಕೆ ಇಷ್ಟು ನಿಧಾನವಾಗಿ ನಡೆಯುತ್ತಿದ್ದೀ?" ತನ್ನ ಮಗನ ಬಗ್ಗೆ ಮರುಕವೇ ಇಲ್ಲವೇ ತಾಯಿಗೆ! ಎಂದು ತಾಪವಾಯಿತು ಮನಸ್ಸಿಗೆ ಆ ಮಗುವಿನ ಅಳಲು ನನಗೇ ಬಂದಂತೆ ನಂತರ  ಹೊಳೆಯಿತು ನನಗೆ ತಡವಾಗ

ಬೆಟ್ಟದ ಮೇಲೊಂದು ಮನೆ

ಇಮೇಜ್
ಕವಿತೆ ಓದುವ ಮುನ್ನ ...  ರಾಬರ್ಟ್ ಫ್ರಾಸ್ಟ್ ಈ ಕವಿತೆಯಲ್ಲಿ  ತಾನು ಕಂಡ ಒಂದು "ಬೆಟ್ಟದ ಮನೆ"ಯನ್ನು ಕುರಿತು ಬರೆದಿದ್ದಾನೆ. ಅಕ್ಕ ಮಹಾದೇವಿ "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ?" ಎಂದು ಪ್ರಶ್ನಿಸಿದಳು. ಫ್ರಾಸ್ಟ್ ಗೆ ಬೆಟ್ಟದ ಮೇಲೆ ಮನೆ ಮಾಡಿದವನನ್ನು ಕುರಿತು ಕುತೂಹಲವಿದೆ. ಅವನು ಬೆಟ್ಟದ ತುತ್ತ ತುದಿಯಲ್ಲಿ ಮನೆ ಮಾಡಿದ್ದೇಕೆ? ಬೆಟ್ಟದ ಮೇಲೆ ಹತ್ತಿಕೊಂಡು ಹೋಗುವ ಎದೆಗಾರಿಕೆ ಉಳ್ಳವನು ಕಾಡು ಮೃಗಗಳಿಗೆ ಹೆದರುತ್ತಿದ್ದನೆ? ಅವನ "ಒರಟು ಒರಟಾದ" ಆತ್ಮವನ್ನು ಕವಿ ಕಲ್ಪಿಸಿಕೊಳ್ಳುತ್ತಾನೆ. ಮನುಷ್ಯ ನೆಲಕ್ಕೆ ಹತ್ತಿರವಾಗಿ ಬದುಕುವವನು. ಭೂಮಿಯ ಕೊಡುಗೆಗಳೇ ಅವನಿಗೆ ಊಟ, ಉಡುಗೆಗಳು. ಇಷ್ಟಾದರೂ ಬೆಟ್ಟದ ಮೇಲೆ ಮನೆ ಮಾಡಿದವನ ಸಂತತಿ ಸ್ವಲ್ಪ ಭಿನ್ನವೇ ಇರಬಹುದು! ಅವನು ಮೃಗಗಳನ್ನು ಬೇಟೆಯಾಡಿ ಬದುಕಿರಬಹುದು. ಇಂಥ ಪರಾಕ್ರಮಿಯನ್ನೂ ಅಂಜಿಕೆಗಳು ಕಾಡಿದವೇ? ಅದಕ್ಕೇ ಅವನು ಮನೆ ಎಂಬ ಸುರಕ್ಷತೆಯನ್ನು ಬಯಸಿದನೆ? ಬೆಟ್ಟದ ಮೇಲೂ ಮನೆಯನ್ನು ಮಾಡಿದವನ ಸಂತತಿ ಈಗ ನಾಶವಾಗಿದೆ ಎನ್ನುವಾಗ ಕವಿತೆಯಲ್ಲಿ ನಿರಾಸೆ ಕುರುಹನ್ನು ಗುರುತಿಸಬಹುದು... ಮೂಲ ಇಂಗ್ಲಿಷ್ ಕವಿತೆ: ರಾಬರ್ಟ್ ಫ್ರಾಸ್ಟ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಮರಳಿನಂತೆ ತೋರುವುದಲ್ಲಿ ಸ್ವರ್ಣ ಗಗನ  ಮರಳುಭೂಮಿ ತೋರುವುದು ಸ್ವರ್ಣದಂತೆ  ಸುತ್ತಲೂ ಎಲ್ಲೂ  ಗೋಚರಿಸದು ಮನೆಮಾರು  ಎಲ್ಲಿ ನೋಡ

ಗಂಡಸರು

ಇಮೇಜ್
ಮೂಲ ಅಮೆರಿಕನ್ ಕವಿತೆ : ಮಾಯಾ ಆಂಜೆಲೋ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಎ ಳೆಯ ವಯಸ್ಸಿನಲ್ಲಿ ನಾನು ಪರದೆಯ ಮರೆಯಿಂದ ಇಣುಕಿ ನೋಡುತ್ತಿದ್ದೆ ಗಂಡಸರು ರಸ್ತೆಯ ಮೇಲೆ ಅಡ್ಡಾಡುವುದನ್ನು.  ಕುಡುಕರು,  ಮುದುಕರು,  ಮೆಣಸಿನ ಕಾಯಂತೆ ಖಾರ ಖಾರ ಯುವಕರು.  ನೋಡುತ್ತಿದ್ದೆ. ಈ ಗಂಡಸರು ಯಾವಾಗಲೂ  ಎಲ್ಲಾದರೂ ಹೋಗುತ್ತಲೇ ಇರುತ್ತಾರೆ.  ನನ್ನ ಇರವು ಅವರಿಗೆ ಗೊತ್ತು.  ಹದಿನೈದು ವರ್ಷ ಅಲ್ಲವೇ, ಅವರಿಗಾಗಿ ಹಾತೊರೆಯುತ್ತಿದ್ದ ವಯಸ್ಸು.  ನನ್ನ ಕಿಟಕಿಯ ಕೆಳಗೆ ನಿಲ್ಲುತ್ತಿದ್ದರು ಒಂದೆರಡು ಕ್ಷಣ - ಅವರ ಭುಜಗಳು  ಯುವತಿಯ ಸ್ತನಗಳ ಹಾಗೆ ಮೇಲೆದ್ದು ಅವರ ಹಿಂಭಾಗಕ್ಕೆ ಪಟಪಟ ತಾಗುವ  ಅವರ ಜಾಕೆಟ್ ಹಿಮ್ಮೈ.  ಗಂಡಸರು. ಒಮ್ಮೆ ನಿನ್ನನ್ನು ತಮ್ಮ ಅಂಗೈ ಮೇಲೆ  ಮೃದುವಾಗಿ ಹಿಡಿಯುತ್ತಾರೆ  ಜಗತ್ತಿನಲ್ಲಿ ಉಳಿದಿರುವ  ಕೊನೆಯ ಕೋಳಿಮೊಟ್ಟೆ ನೀನು ಎಂಬಂತೆ. ನಂತರ  ಬಿಗಿಯಾಗುತ್ತಾರೆ.  ಸ್ವಲ್ಪೇ ಸ್ವಲ್ಪ.  ಮೊದಲ ಹಿಡಿತ ಸುಖಕರವೇ.  ಕ್ಷಣಿಕ ಆಲಿಂಗನ.  ರಕ್ಷಿಸಿಕೊಳ್ಳಲು ನಿನಗೆ ಇಷ್ಟವೂ ಆಗದಷ್ಟು ಮೃದು.  ಆಗ ಮತ್ತಷ್ಟು.  ನೋವು ಪ್ರಾರಂಭವಾಗುವುದು ಆವಾಗಲೇ.   ಗಾಬರಿಗೆ ಹಾಕಿಕೊಳ್ಳುವೆ ಮುಗುಳ್ನಗುವಿನ ಮುಖವಾಡ.  ಗಾಳಿಯೇ ಮಾಯವಾದಾಗ  ನಿನ್ನ ಮಿದುಳು ಪಟ್ ಎಂದು ಭಯಂಕರವಾಗಿ ಸ್ಫೋಟಗೊಳ್ಳುತ್ತದೆ ಎರಡು ಕ್ಷಣ  ಬೆಂಕಿ ಕಡ್ಡಿಯ ತುದಿಯಂತೆ. ಸಂಪೂರ್ಣ ವಿಚ್ಛಿದ್ರವಾ

ಒಬ್ಬಂಟಿ

ಇಮೇಜ್
ಕವಿತೆ ಓದುವ ಮುನ್ನ  ಮಾಯಾ ಆಂಜೆಲೋ ಒಬ್ಬ ಕಪ್ಪು ಅಮೇರಿಕನ್ ಲೇಖಕಿ. ಎಂಬತ್ತಾರು ವರ್ಷಗಳ ತುಂಬು ಜೀವನ ನಡೆಸಿ ಮೇ ೨೮, ೨೦೧೪ ನಿಧನರಾದರು. ಐವತ್ತು ವರ್ಷಗಳು ದಾಟಿದ ತಮ್ಮ ಸಾಹಿತ್ಯಕ ವ್ಯವಸಾಯದಲ್ಲಿ ಅವರು ಕಾದಂಬರಿ, ಕವಿತೆ, ಪ್ರಬಂಧ, ಆತ್ಮಚರಿತ್ರೆ - ಈ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಅದ್ಭುತವಾದ ಸಾಧನೆಗಳನ್ನು ಮಾಡಿದರು. ಅವರು ಮಾಡಿಲ್ಲದೇ ಇರುವ ಕೆಲಸವೇ ಇಲ್ಲ ಎನ್ನುವಂತಿದೆ ಅವರ ಜೀವನಚರಿತ್ರೆ! ಅಡಿಗೆಯವಳು, ವೇಶ್ಯೆ, ನೈಟ್ ಕ್ಲಬ್ ನರ್ತಕಿ, ಪತ್ರಕರ್ತೆ, ನಾಟಕಗಳ ನಿರ್ದೇಶಕಿ/ನಿರ್ಮಾಪಕಿ,  ಪ್ರಾಧ್ಯಾಪಕಿ ... ಅರವತ್ತರ ದಶಕದಲ್ಲಿ ಅಮೆರಿಕಾದಲ್ಲಿ ನಡೆದ ಸಾರ್ವಜನಿಕ ಹಕ್ಕುಗಳಿಗಾಗಿ ಹೋರಾಟದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡರು. ಕಪ್ಪು ಅಮೇರಿಕನ್ ಜನರ ನೋವುಗಳನ್ನು ಅವರು ತಮ್ಮ ಬರಹಗಳಲ್ಲಿ ಪ್ರತಿಧ್ವನಿಸಿದರು.      ಪ್ರಸ್ತುತ "ಒಬ್ಬಂಟಿ" ಕವಿತೆಯಲ್ಲಿ ಒಬ್ಬಂಟಿಯಾಗಿರುವ ಒಬ್ಬ ಕಪ್ಪು ಅಮೇರಿಕನ್ ಹೆಣ್ಣಿನ ಮನಸ್ಸಿನಲ್ಲಿ ಎದ್ದ ಭಾವನೆಗಳ ಚಿತ್ರವಿದೆ.  ಬಹುಶಃ ತಮ್ಮ ಯೌವ್ವನದಲ್ಲಿ ಅನುಭವಿಸಿದ ಕಷ್ಟಗಳು ಕವಯಿತ್ರಿಗೆ ನೆನಪಾಗಿರಬಹುದು. ಈ ಹೆಣ್ಣು ಒಬ್ಬ ನೈಟ್ ಕ್ಲಬ್ ನರ್ತಕಿಯೋ ಅಥವಾ ವೇಶ್ಯೆಯೋ ಆಗಿರಬಹುದು. ಅಥವಾ ತನ್ನ ಗಂಡನ ನಡತೆಯಿಂದ ಬೇಸತ್ತು ಅವನಿಂದ ಬೇರಾದ ಹೆಣ್ಣಾಗಿರಬಹುದು. ಜೀವನದ ಬೇರೆ ಕಷ್ಟಗಳು ಎಷ್ಟೇ ಇದ್ದರೂ ಒಂಟಿತನವನ್ನು ಸಹಿಸುವುದು ಅಸಾಧ್ಯ ಎನ್ನುವ ಭಾವನೆ ಕವಿತೆಯಲ್ಲಿ ವ್ಯಕ್ತವಾಗಿ