ಪೋಸ್ಟ್‌ಗಳು

ಜೂನ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕವಿತೆ

ವಿಯೋಗಿಯೇ ಆಗಿರಬೇಕು  ಮೊದಲ ಕವಿ  ವ್ಯಾಕುಲತೆಯಲ್ಲೇ ಹುಟ್ಟಿರಬಹುದು ಗೀತೆ  ನಯನಗಳಿಂದ ಹೊರಟು ಮೌನವಾಗಿ  ಅರಿವಿಲ್ಲದೇ ಹರಿದ ಧಾರೆಯೇ ಕವಿತೆ  - ಸುಮಿತ್ರಾನಂದನ್ ಪಂತ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

ನರನಾಗಿ ಏಕೆ ನಿರಾಸೆ, ಮನವು ಅಧೀರ?

ಇಮೇಜ್
ಮೂಲ ಹಿಂದಿ ಕವಿತೆ: ಮೈಥಿಲೀಶರಣ ಗುಪ್ತ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ನರನಾಗಿ ಏಕೆ ನಿರಾಸೆ, ಮನವು ಅಧೀರ?  ಯಾವುದೇ ಕಾರ್ಯದಲ್ಲಿ ತೊಡಗಿಸು ನಿನ್ನುಸಿರು ಜಗತ್ತಿನಲ್ಲಿದ್ದು ಗಳಿಸು ಒಳ್ಳೆಯ ಹೆಸರು ನಿನ್ನ ಜನ್ಮಕ್ಕೂ ಇರುವುದೊಂದು ಅರ್ಥ: ಏನೆಂದು ತಿಳಿದುಕೋ, ಮಾಡದಿರು ವ್ಯರ್ಥ ಹೇಗಾದರೂ ಉಪಯೋಗವಾಗಲಿ ಶರೀರ  ನರನಾಗಿ ಏಕೆ ನಿರಾಸೆ, ಮನವು ಅಧೀರ?  ಸಾವರಿಸಿಕೋ ಸುಯೋಗ ಲುಪ್ತವಾಗುವ ಮೊದಲೇ!   ಸದುಪಾಯವು ಎಂದಾದರೂ ವ್ಯರ್ಥವಾಗಿದೆಯೇ? ಜಗವು ಸಹಕರಿಸೀತೆಂಬ ಸ್ವಪ್ನವನು ತೊರೆದು  ನೀನೇ ಮಾರ್ಗವನ್ನು ಮಾಡಿಕೋ ಕೊರೆದು  ಅಖಿಲೇಶ್ವರನು ಇದ್ದಾನೆ ನಿನಗೆ ಆಧಾರ!  ನರನಾಗಿ ಏಕೆ ನಿರಾಸೆ, ಮನವು ಅಧೀರ?  ನಿನಗೆ ಪ್ರಾಪ್ತವಾಗಿರುವಾಗ ಎಲ್ಲವೂ  ತತ್ತ್ವ ಎಲ್ಲಿ ಹೋಗಲು ಸಾಧ್ಯ ಹೇಳು ಆ ಸತ್ವ? ಮಾಡು ನಿನ್ನದೇ ತತ್ತ್ವಗಳ ಸುಧಾಪಾನ  ಎದ್ದು ಅಮೃತತ್ವದ ಕಡೆಗೆ ಇಡು ಹೆಜ್ಜೆಯನ್ನ  ದಾಟಿ ಬಾ ಮುಂದಕ್ಕೆ ಭವಕಾನನ ಘೋರ  ನರನಾಗಿ ಏಕೆ ನಿರಾಸೆ, ಮನವು ಅಧೀರ? ಆತ್ಮಗೌರವವನ್ನು ಮರೆಯದಿರು ಎಂದೂ  ನೆನಪಿರಲಿ  ಶಕ್ತಿಗಿನ್ನೂ ಬಂದಿಲ್ಲ ಕುಂದು, ಏನು ಕಳೆದರೂ ಕಳೆಯದಿರಲೆಂದೂ ಮಾನ  ಸತ್ತ ಮೇಲೂ ಜನರು ಮಾಡಬೇಕು ಗುಣಗಾನ  ಸಾಗಲಿ ಸಾಧನೆಯತ್ತ ನಿನ್ನ ಸಂಚಾರ  ನರನಾಗಿ ಏಕೆ ನಿರಾಸೆ, ಮನವು ಅಧೀರ? 

ಕುಡಿದುಬಿಡು ನೋವ ಮದಿರೆ

ಇಮೇಜ್
ಮೂಲ ಹಿಂದಿ: ರಾಮ್ ಸನೇಹೀ ಲಾಲ್ ಶರ್ಮಾ "ಯಾಯಾವರ್" ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಮುಗಿಲು ಮಾತ್ರವೇ! ಕಣ್ಣಿಗಾಗಿ  ಕೊಂಡುಕೋ ಒಂದಷ್ಟು ಮಧ್ಯಾಹ್ನ ಬದುಕುತ್ತ ಬದುಕುತ್ತ ಸಾಯುವರು ಎಲ್ಲರೂ  ನೀನು ಸಾಯುತ್ತ ಬಾಳು ಬದುಕನ್ನ | ದಣಿವು ಒಂದು ಕಡಲಾಗಿ  ಚೇತನವು  ಮುಳುಗಿದಂತೆ ಅನಿಸಿದರೆ  ಹೃದಯವೆಂಬ ಮದಿರಾಲಯದಲ್ಲಿ  ಕುಡಿದುಬಿಡು ನೋವ ಮದಿರೆ |   

ಮಂದಹಾಸಗಳ ಸಂತೆ

ಇಮೇಜ್
ಮೂಲ ಹಿಂದಿ: ಗೋಪಾಲ್ ದಾಸ್ "ನೀರಜ್" ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಪ್ರೀತಿಸುವುದೇ ಆದರೆ, ಪಥಿಕ, ಪ್ರೀತಿಸು ಯೋಚಿಸಿ, ತಿಳಿದು  ಬೆಳ್ಳಿಯ ನಾಡಿದು, ಇಲ್ಲಿ ದೊರೆಗಳೇ ಸುಳ್ಳು ಹೇಳಬಹುದು  ನಿನ್ನ ನೋವು ನಿಟ್ಟುಸಿರು ಕೇಳಲೂ ಯಾರಿಗಿಲ್ಲಿ  ಪುರುಸೊತ್ತು? ಬೀಸಿ ನಿನಗೆ ತಂಗಾಳಿ ಸಂತೈಸೆ ಬರುವರಾರೆಲ್ಲವನು ಬಿಟ್ಟು? ಮರುಭೂಮಿಯಲ್ಲಿ ಬಿಳಿಮೋಡವಾಗಿ ಹುಡುಕುತಿರುವೆ ಯಾರನ್ನು? ನಿನ್ನ ಕಡೆಗೆ ವ್ಯಾಕುಲತೆಯಿಂದ ನೋಡುವುದು ಯಾರ ಕಣ್ಣು? ಇಲ್ಲಿ ನಡೆದಿಹುದು ಹೂಗಳ ಮೇಳ,  ಮಂದಹಾಸಗಳ ಸಂತೆ  ಒಣಗಿಹೋದ ಕಂಬನಿಯ ಮಾಲೆ ಕೊಳ್ಳುವವರು ಯಾರಂತೆ? ಪ್ರೀತಿಸುವುದೇ ಆದರೆ, ಪಥಿಕ, ಪ್ರೀತಿಸು ಯೋಚಿಸಿ, ತಿಳಿದು!

ಕಾರ್ಲಾಸ್

ಇಮೇಜ್
ಮೂಲ ಚೈನೀಸ್ ಕವಿತೆ: ಯಾವೋ ಫೆಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಅವರು ಜೀವನದ ಜಂಜಡಗಳಿಂದ ಜರ್ಝರಿತರಾಗಿದ್ದರು, ಬಹುಮಟ್ಟಿಗೆ ಈಗ ಅವನು ಆsನಾಳ ತಲೆಯನ್ನು ಅದುಮಿ ಹಿಡಿದಾಗಲೇ  ಸಾಧ್ಯವಾಗುತ್ತದೆ ಅವನಿಗೆ ಪಿಸುಗುಟ್ಟುವುದು  ಮೆಲ್ಲಗೆ: ಪ್ರೇಮ ಮತ್ತು ಸಾವಿನ ಬಗ್ಗೆ,  ಸಾವೆಂಬುದು ಪ್ರೇಮದ ಉತ್ತುಂಗ ಶಿಖರವೋ, ಸ್ವರ್ಗದ ಸೋಪಾನವೋ ಎಂಬಹಾಗೆ.   ಒದ್ದೆಯಾದ ಮುದುರಿದ ಚಾದರಗಳು  ಅಲೆಗಳಂತೆ, ಹುಚ್ಚೆದ್ದ ಗಾಳಿಯಂತೆ ತೋರುತ್ತವೆ.  ಜೋಡಿಯು ತೇಲುತ್ತಾ ಸಾಗುತ್ತದೆ ಮುಂದೆ, ಹಾರುತ್ತದೆ ಮೇಲೆ,  ಇಷ್ಟಾಗಿ ಭೂಮಿಯ ಮೇಲೇ ಇದ್ದರೂ  ಎರಡೂ ಅಂತ್ಯಗಳ ಕೊನೆ.  ಕವಿತೆಯನ್ನು ಕುರಿತು: ಈ ಕವಿತೆಯ ಕಾರ್ಲಾಸ್ ಮತ್ತು ಆsನಾ ಯಾರೆಂಬ ವಿವರಗಳು ಮುಖ್ಯವಲ್ಲ. ಅವರು ಜೀವನದ ಒತ್ತಡಗಳಿಗೆ ಮಣಿದು ಆತ್ಮಹತ್ಯೆಗೆ ಶರಣಾದ ಪತಿ-ಪತ್ನಿಯಾಗಿರಬಹುದು. ಅಥವಾ ಅವಳನ್ನು ಕೊಂದು ಕಾರ್ಲಾಸ್ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು. ಕೊನೆಯ ಗಳಿಗೆಯಲ್ಲಿ ಅವಳ ತಲೆಯನ್ನು ಅದುಮಿ ಹಿಡಿದಾಗಲೇ ಕಾರ್ಲಾಸ್ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಲು ಸಾಧ್ಯವಾಗುವುದು ಎಂಬ ಸಾಲನ್ನು ಓದಿದಾಗ ಅವರಿಬ್ಬರೂ ಪರಸ್ಪರ ದ್ವೇಷಿಸುತ್ತಿದ್ದರೇ ಎಂಬ ಅನುಮಾನ ಕೂಡಾ ಬರುತ್ತದೆ.  ಕೆಲವೇ ಸಾಲುಗಳಲ್ಲಿ ಒಂದು ಚಿತ್ರವನ್ನು ಬಿಡಿಸಿಕೊಡುವ ಕವಿತೆ ತುಂಬಾ ಪರಿಣಾಮಕಾರಿಯಾಗಿದೆ.  ಕೊನೆಯ ಸಾಲಿನಲ್ಲಿ ಬರುವ "ಎರಡೂ ಅಂತ್ಯಗಳ ಕೊನೆ"

ಹೂವಿನ ಸಂಕೋಲೆ

ಇಮೇಜ್
ಮೂಲ ಇಂಗ್ಲಿಷ್ ಕವಿತೆ : ಜಾನ್ ಕೀಟ್ಸ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಕವಿತಾಸ್ವಾದನೆ: ಇಪ್ಪತ್ತಾರರ ಎಳೆಯ ವಯಸ್ಸಿನಲ್ಲೇ ಕಾಲವಾದ ಜಾನ್ ಕೀಟ್ಸ್ ಇಂಗ್ಲಿಷ್ ಭಾಷೆಯ ಪ್ರಮುಖ ಕವಿಗಳಲ್ಲಿ ಒಬ್ಬ. ಅವನು 64 ಸಾನೆಟ್ ಗಳನ್ನು ರಚಿಸಿದ್ದಾನೆ. ಅವನ ಸಮಕಾಲೀನ ವಿಮರ್ಶಕರು ಅವನ ಕಾವ್ಯವನ್ನು ಕಟುವಾಗಿ ವಿಮರ್ಶಿಸುತ್ತಿದ್ದರು. ಅಂದು ಸಾನೆಟ್ ಕಾವ್ಯಪ್ರಕಾರವನ್ನು ವಿಮರ್ಶಕರು ಕಡೆಗಣ್ಣಿನಿಂದ ನೋಡುತ್ತಿದ್ದರು. ಹಿಂದೊಮ್ಮೆ ಷೇಕ್ಸ್ ಪಿಯರ್ ಬಳಸಿದ ಈ ಕಾವ್ಯಪ್ರಕಾರವು ಜಾನ್ ಕೀಟ್ಸ್ ಗೆ ಆಪ್ಯಾಯವಾದದ್ದು. ವಿಮರ್ಶಕರ ಅಸಡ್ಡೆಯ ಬಗ್ಗೆ ಅವನಿಗೆ ತುಂಬಾ ಕೋಪ-ತಾಪಗಳಿದ್ದವು. ತನ್ನ ಕಾವ್ಯಕ್ಕೆ ಸಿಕ್ಕಿದ ಕಟುವಾದ ವಿಮರ್ಶೆಯೇ  ಅವನನ್ನು ಸಾವಿಗೆ ದೂಡಿತು ಎಂದು ಕೆಲವರು ನಂಬಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಅವನು ತನಗೆ ಇಷ್ಟವಾದ ಕಾವ್ಯಪ್ರಕಾರವಾದ ಸಾನೆಟ್ ಕುರಿತು ಬರೆದಿದ್ದಾನೆ. ಇಲ್ಲಿ ಬರುವ ಆಂಡ್ರೋಮೀಡಾ ಎಂಬ ಚೆಲುವೆಯ ಉಲ್ಲೇಖ ಗ್ರೀಕ್ ಪುರಾಣದಿಂದ ಆಯ್ದುಕೊಂಡದ್ದು. ಇವಳ ತಾಯಿಯು ತನ್ನ ಮಗಳ ಸೌಂದರ್ಯ ಜಲಕನ್ಯೆಯರ ಸೌಂದರ್ಯವನ್ನೂ ಮೀರಿದ್ದು ಎಂದು ಕೊಚ್ಚಿಕೊಂಡಾಗ ಕುಪಿತಗೊಂಡ ಸಮುದ್ರದೇವತೆ ಪೊಸೈಡನ್ ಜಲರಾಕ್ಷಸರನ್ನು ಕಳಿಸಿ ತಾಯಿ ಮತ್ತು ಮಗಳನ್ನು ಬಂಧಿಸುತ್ತಾನೆ. ಚೆಲುವೆ ಆಂಡ್ರೋಮೀಡಾಳನ್ನು ಜಲದೇವತೆಗೆ ಬಲಿ ನೀಡುವ ಉದ್ದೇಶದಿಂದ ಬಂಡೆಗೆ ಬಿಗಿದು ಕಟ್ಟಲಾಗುತ್ತದೆ. ಪರ್ಸಿಯಸ್ ಎಂಬ ದೇವತೆ ಅವಳನ್ನು ರಕ್ಷಿಸುತ್ತಾನ

ತಾಯಿಹಕ್ಕಿ

ಇಮೇಜ್
ಮೂಲ ಇಂಗ್ಲಿಷ್ ಕವಿತೆ - ವಾಲ್ಟರ್ ಡಿ ಲ ಮೇರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದೊಂದು ಪುಟ್ಟ ಕಥನಕವನ.  ನಿಸರ್ಗದಲ್ಲಿ ಅದೆಷ್ಟೋ ರಹಸ್ಯಗಳಿವೆ. ಮನುಷ್ಯನಿಗೆ ಪ್ರತಿಯೊಂದರ ಬಗ್ಗೆಯೂ ಕುತೂಹಲ. ಆದರೆ ಪಶುಪಕ್ಷಿಗಳಿಗೂ ತಮ್ಮ ಗೌಪ್ಯತೆಎಂಬುದಿದೆ. ಅದರ ಗೆರೆ ದಾಟಿದಾಗ ಕವಿಗೆ ಆದ ಅನುಭವ ಈ ಕವಿತೆಯಲ್ಲಿ ದಾಖಲಾಗಿದೆ.   ತಂಪಾದ ಎಲೆಗಳಿಗೆ ಕೆನ್ನೆಯನ್ನೊತ್ತಿ  ಇಣುಕಿದಾಗ ಪೊದೆಯಲ್ಲಿ ಕಂಡೆ ಒಂದು ರಹಸ್ಯ  ಪೊದೆಮರೆಯ ಗೂಡಿನಲ್ಲಿದ್ದೊಂದು ಹಕ್ಕಿ  ಕಣ್ತೆರೆದು ಸುಮ್ಮನೇ ನೋಡಿತು ನನ್ನತ್ತ  ವಿನಮ್ರ  ನೋಟದಲ್ಲಿ   ಧೈರ್ಯವೂ ಇತ್ತು  ಎದ್ದೆದ್ದು ಬೀಳುತಿತ್ತು ಅದರ ಕಂದು ಬಿಸಿ ಎದೆ  ತೆರೆದುಕೊಂಡು ಒಮ್ಮೆಲೇ ಚೂರಿಯಂಥ ಕೊಕ್ಕು  ಕೂಗು ಬಾಣ ಬಿಟ್ಟಹಾಗೆ ಏರಿಸಿ ಬಿಲ್ಲಿನ ಹೆದೆ ನಸುಕಿನಲ್ಲಿ ಕೇಳುವಂಥ ಗುಬ್ಬಿಯ ಚಿಲಿಪಿಲಿಯಲ್ಲ ಸ್ಫುಟವಾದ , ಉತ್ಕಟ, ಕೆರಳಿದೊಂದು ಕೂಗು    ಶಾಂತಸಂಜೆಯಲ್ಲಿ ಕರಗುವ ಕೂಜನವಲ್ಲ  ಒಮ್ಮೆಲೇ ಝಳಪಿಸಿದ ಹರಿತ ಕತ್ತಿಯಲುಗು  ಕಾಣಿಸಿತು ಅದರಲ್ಲಿ  ಸಾಹಸದ ಕಣ್ಣೀರು   ಹತಾಶೆಯಲ್ಲಿ ಹುಟ್ಟಿದ ಹರ್ಷ, ವಿಜಯೋನ್ಮಾದ! ಪೆಚ್ಚಾಗಿ ಹಿಮ್ಮೆಟ್ಟಿದೆ ಕೂಡಲೇ ನಾನು  ಪೆದ್ದುನಗೆಯೊಂದೇ ಸಾಧ್ಯವಾದ ಸಂವಾದ ರಹಸ್ಯಗೂಡಿನಲ್ಲಿ ಮರಿಗಳ ಮೇಲೆ ಹರಡಿ ರೆಕ್ಕೆ  ತಾಯಿ ಹಕ್ಕಿ ಮುಂಬರಿಸಿತು ಸಂಸಾರದ ರಕ್ಷೆ  (c) ೨೦೧೭, ಸಿ. ಪಿ. ರವಿಕುಮಾರ್ 

ನಿನಗೆ ನಾನೇನನ್ನು ಕೊಡಲಿ ಪ್ರತಿಯಾಗಿ?

ಇಮೇಜ್
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಸಾನೆಟ್ 8  ಮೂಲ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದು ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ಅವರ  "ಸಾನೆಟ್ಸ್ ಫ್ರಂ ದ ಪೋರ್ಚುಗೀಸ್" ಸಂಗ್ರಹದ ಎಂಟನೇ ಸಾನೆಟ್.  ಇದಕ್ಕೆ ಹಿಂದಿನ ಸಾನೆಟ್ಟುಗಳ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು.  ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನಗೆ ಸಿಕ್ಕ ಪ್ರೇಮಕಾಣಿಕೆಯನ್ನು ಸ್ವೀಕರಿಸುತ್ತಾ ಅದಕ್ಕೆ ಪ್ರತಿಯಾಗಿ ತಾನೇನನ್ನು ಕೊಡಲೆಂದು ಚಿಂತಿಸುತ್ತಾಳೆ.  ನಿನಗೆ ನಾನೇನನ್ನು ಕೊಡಲಿ ನೀನಿತ್ತ ರಾಜೋಚಿತ  ಉಡುಗೊರೆಗಳ ಪ್ರತಿಯಾಗಿ? ತೆರೆದು ಹೃದಯದ ಕಪಾಟು  ಹಾಸಿರುವೆ ಹೊಳೆವ ಬಂಗಾರದ ತಾಟು, ಹರಡಿರುವೆ ಅದರೊಳಗೆ ನಿಷ್ಕಳಂಕ ರತ್ನಖಚಿತ  ಪ್ರೇಮಾಭರಣಗಳನ್ನು ನನ್ನಂತಹವಳಿಗಾಗಿ, ಬಿಗಿದು ಕೊರಳು   ಸ್ವೀಕರಿಸುವೆಯಾ ಎಂದು ಕೇಳುತ್ತಿರುವೆ! ಕಠಿಣ ಹೃದಯವೇ ನನ್ನದು? ಕೃತಘ್ನಳೇ ನಾನು? ಕೃಪಣ ಮನದವಳೇ ಪ್ರತಿಯಾಗಿ ಮರಳಿ ಏನನ್ನೂ ನೀಡದಿರಲು?   ಕೃಪಣತನವಲ್ಲ, ದಟ್ಟದಾರಿದ್ರ್ಯವೆನ್ನುವುದು ಮೇಲು, ಕೇಳು ಎಲ್ಲವನ್ನೂ ಬಲ್ಲ ದೈವವನ್ನು. ಆ ದೇವರಿಗೆ ಗೊತ್ತು, ನಿರಂತರ ಸುರಿಸಿ ಕಳೆದುಕೊಂಡಿರುವೆ ಹೃದಯದೆಲ್ಲ ಮುತ್ತು, ಮಾಸಿಹೋಗಿವೆ ಕಂಬನಿಯಲ್ಲಿ ಜೀವನದ ಬಣ್ಣಗಳು!   ಉಳಿದಿರುವ ಪೇಲವ ಬದುಕನ್ನು ನೀಡಲೇ ನಿನಗೆ ತಲೆದಿಂಬಾಗಿ? ಇಲ್ಲ, ಉಪಯೋಗವಾ