ಪೋಸ್ಟ್‌ಗಳು

fear ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಭಯ (ಅನುವಾದಿತ ಕವಿತೆ)

ಇಮೇಜ್
 ಭಯ ಮೂಲ: ಖಲೀಲ್ ಗಿಬ್ರಾನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಭಯದಿಂದ ಕಂಪಿಸುವುದಂತೆ ನದಿ ಸಮುದ್ರವನ್ನು ಪ್ರವೇಶಿಸುವ ಮೊದಲು. ತಾನು ಸಾಗಿ ಬಂದ ಹಾದಿಯತ್ತ ಹಾಯಿಸುತ್ತದೆ ಹೊರಳುನೋಟ ಪರ್ವತ ಶಿಖರಗಳಿಂದ ಧುಮುಕಿ ಸುತ್ತುತ್ತ ಕಾಡುಮೇಡುಗಳಲ್ಲಿ ಅದೆಷ್ಟು ಹಳ್ಳಿಗಳನ್ನು ದಾಟಿ  ಈಗ ನೋಡುತ್ತದೆ ತನ್ನೆದುರು ಆದಿ ಅಂತ್ಯವೇ ಗೋಚರಿಸದ ಸಿಂಧು ಪ್ರವೇಶಿಸಿದರೆ ಈ ಮಹಾಜಲಧಿಯನ್ನು ಅನಂತ ಕಾಲಕ್ಕೂ ಕಳೆದುಹೋಗುವ ಭೀತಿ ಆದರೆ ಬೇರಾವ ಮಾರ್ಗವೂ ಇಲ್ಲ ಹಾಕಲಾರದು ನದಿ ಹಿನ್ನಡೆ. ಹಿಂದಿರುಗಲಾರರು ಯಾರೂ. ಅಸ್ತಿತ್ವದಲ್ಲಿ ಹಿನ್ನಡೆ ಅಸಾಧ್ಯ. ನದಿಯು ಎದುರಿಸಲೇ ಬೇಕು ಸಾಗರವನ್ನು ಸೇರುವ ಅಪಾಯ: ಏಕೆಂದರೆ ಆಗಲೇ ಬಿಡುವುದು ಭಯ ಏಕೆಂದರೆ ಆಗಲೇ ನದಿಗೆ ಹೊಳೆಯುವುದು ಸಮುದ್ರದಲ್ಲಿ ತಾನು ಕಳೆದುಹೋಗಿಲ್ಲ ತಾನೇ ಸಮುದ್ರವಾಗಿರುವೆನೆಂಬ ತಿಳಿವು.