ಪೋಸ್ಟ್‌ಗಳು

Dylan Thomas ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾವ್ಯಕಲೆಯ ಮೇಲೊಂದು ಟಿಪ್ಪಣಿ

ಇಮೇಜ್
ಮೂಲ: ಡೈಲಾನ್ ಥಾಮಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕನಸಿನಲ್ಲೂ ನಾನು ಎಣಿಸಿರಲಿಲ್ಲ: ಪುಸ್ತಕಗಳ ಹೊದ್ದಿಕೆಗಳ ನಡುವಣ ಜಗತ್ತಿನಲ್ಲಿ  ನಡೆಯುತ್ತಿರಬಹುದು ಏನೆಲ್ಲ, ಪದಗಳ ಉಷ್ಣ-ಶೈತ್ಯ ಬಿರುಗಾಳಿಗಳು, ಅದೆಂಥ ಪರಮಶಾಂತಿ, ಅದೆಂಥ ಗಟ್ಟಿಯಾದ ನಗು, ಇನ್ನೂ ಇಂಥವೇ ಮತ್ತು ಕಣ್ಣುಕುಕ್ಕುವ ಬೆಳಕು ಪುಟಗಳ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ, ಚೂರುಚೂರಾಗಿ ಪದ, ಪದ, ಮತ್ತು ಇನ್ನಷ್ಟು ಪದಗಳಾಗಿ ಪ್ರತಿಯೊಂದೂ ಪಡೆದುಕೊಂಡು ಅಮರತ್ವ ಬಾಳುತ್ತಾ ಅನಂತಕಾಲಕ್ಕೂ, ಪ್ರತಿಯೊಂದಕ್ಕೂ ತನ್ನದೇ ಆನಂದ, ವೈಭೋಗ,ವೈಚಿತ್ರ್ಯ,ಬೆಳಕು.