ಪೋಸ್ಟ್‌ಗಳು

Translation of a poem ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಲಾಟ್ ಮಹಾಶಯನ ಹೆಂಡತಿ

ಇಮೇಜ್
ಮೂಲ: ಆನಾ ಅಹ್ಮತೋವಾ  (ರಷ್ಯಾ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಕಪ್ಪು ಪರ್ವತದ ಮೇಲೆ ಕಡುಕಷ್ಟದ ದಾರಿಯಲ್ಲಿ  ಅವನು ಹೊರಟಿದ್ದ ದೇವಸೇವಕರನ್ನು ಹಿಂಬಾಲಿಸಿ.  ನಿಯತ್ತಿನ ಮನುಷ್ಯ; ಆದರವನ ಹೆಂಡತಿಗೆ ಯಾಕೋ "ಹಿಂತಿರುಗಿ ನೋಡೆಂದು" ಒಳದನಿಯ ಕಸಿವಿಸಿ.  "ನೋಡು ಸೊಡೋಮ್ ನಗರದ ಕೆಂಪು ಮೀನಾರಗಳು,  ಅಗೋ ನೀನು ಹಾಡುತ್ತಿದ್ದ ಸಭಾಮೈದಾನ.  ನಿನ್ನ ಮನೆಯ ಕಿಟಕಿಗಳು ಕಾಣುತ್ತಿವೆ ಇನ್ನೂ,  ಈ ಮನೆಯಲ್ಲೇ ಅಲ್ಲವೇ ಹಡೆದದ್ದು ನಿನ್ನೆಲ್ಲ ಮಕ್ಕಳನ್ನ?"  ಒಮ್ಮೆ ಹಿಂದಿರುಗಿ ನೋಡಿಯೇ ಬಿಟ್ಟಳು! ಕೂಡಲೇ ದೇಹದಲ್ಲಿ  ಎದ್ದಿತು ನೋವು, ಕಡಿಮೆಯಾಗಿತ್ತು ಕಚ್ಚಿದಂತೆ ಚೇಳು. ಹೊಲೆದುಕೊಂಡು ಕಣ್ಣು, ಉಪ್ಪಿನ ಹೊರೆಯಾಯ್ತು ದೇಹ, ನಿಂತಲ್ಲೇ ಮರಗಟ್ಟಿದವು ಅವಳ ಕಾಲು.  ಈ ಹೆಂಗಸಿಗಾಗಿ ಯಾರು ಅಳುವರು ಹೇಳಿ?  ತೀರಾ ಯಃಕಶ್ಚಿತ್ ಅನಿಸುವುದಲ್ಲವೇ ಅವಳ ಸಂಗತಿ? ನನ್ನ ಹೃದಯದಲ್ಲಂತೂ ಅವಳಿಗೆ ಸದಾ ಇರುವುದು ಸ್ಥಾನ, ತಿರುಗಿದ್ದಕ್ಕೆ ಪಡೆದಳಲ್ಲ ಸಾವಿನ ದುರ್ಗತಿ! ಆನಾ ಅಹ್ಮತೋವಾ ರಷ್ಯಾ ದೇಶದ ಪ್ರಸಿದ್ಧ ಕವಯಿತ್ರಿ. ಪ್ರಸ್ತುತ ಕವಿತೆಯಲ್ಲಿ ಬೈಬಲ್ ಗ್ರಂಥದಲ್ಲಿ ಬರುವ ಒಂದು ಕಥೆಯ ಉಲ್ಲೇಖವಿದೆ. ಲಾಟ್ಸ್ ಎಂಬುವನು ಸೊಡೋಮ್ ನಗರದ ನಿವಾಸಿ. ಆ ನಗರದ ನಿವಾಸಿಗಳೆಲ್ಲರೂ ಪಾಪಕ್ಕೆ ಮುಡಿಪಾದವರು; ಇವನೊಬ್ಬನೇ ಸದಾಚಾರಿ. ಒಮ್ಮೆ ಇವನ ಮನೆಗೆ ಇಬ್ಬರು ಅಪ್ಸರೆಯರ...

ಪೂಜೆ (ಕಥನ ಕವನ)

ಇಮೇಜ್
ಮೂಲ - ರವೀಂದ್ರನಾಥ ಠಾಕುರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಆಗಮಿಸಿದನು ರಾಜ ತನ್ನ ಒಡ್ಡೋಲಗದೊಂದಿಗೆ  ಬೀಗುತ್ತಾ ಒಳಗೊಳಗೇ ತನ್ನ ಅಪ್ರತಿಮ ಸಾಧನೆಗೆ ದೇಗುಲದ ಮುಂದೆ ನಿಂತು ನೋಡಿದನು ಕಣ್ತುಂಬಾ ಬಾಗಿಲ ಮೇಲೆ ಕೆತ್ತಿರುವ ಚಿತ್ತಾರದ ಬಿಂಬ ಮೇಲ್ಗಡೆಗೆ ಹರಿಸಿದನು ಅರಸ ಕಣ್ ದೃಷ್ಟಿ ಮೇಘ ಉದುರಿಸಿದಂತೆ ಸ್ವರ್ಣಪುಷ್ಪವೃಷ್ಟಿ ಝಗಝಗಿಸಿ ಕನಕಲೇಪಿತ ಮೇಲ್ಛಾವಣಿಯ ಕುಂಭ ನಗೆಮುಗುಳಿನೊಳು ಬೆರೆತು ಸಾಧನೆಯ ಜಂಬ ಬಾಗಿಸದೆ ತಲೆಯನ್ನು ಒಳಹೊಕ್ಕ ನೃಪತಿ ಸಾಗುವಾನಿಯ ಮಹಾದ್ವಾರವನು ದಾಟಿ ಆಘ್ರಾಣಿಸಿದ ಕಣ್ಮುಚ್ಚಿ ತೇಲಿಬಂದ ಸುಗಂಧ ನಾಗಚಂಪಕ,ಮಲ್ಲಿಗೆ, ಪನ್ನೀರೆಲೆ, ಶ್ರೀಗಂಧ ಜಾಗಟೆ, ನಾದಸ್ವರ, ಇನಿದನಿಯ ಘಂಟಾರವ ರಾಗಬದ್ಧವಾಗಿ ಹಾಡುತ್ತಿದ್ದಾರೆ   ಯಾರೋ ದೇವೀಸ್ತವ ಭೋಗಕ್ಕೆ ಸಿದ್ಧವಾಗಿವೆ ಬಗೆಬಗೆಯ ಪಕ್ವಾನ್ನ ಹೂಗಳು ಹಣ್ಣುಗಳಿಂದ ತುಂಬಿ ತುಳುಕುತ್ತಿವೆ ಹರಿವಾಣ... ಆಗ ದೇಗುಲದ ಪಾರುಪತ್ತೆಗಾರನು ಬಂದು ಮೊಗದಲ್ಲಿ ಚಿಂತೆಯ ಹೊತ್ತು ಬಿನ್ನೈಸಿದನು ಇಂತು ಪ್ರಮಾದವಾಗಿದೆ ಪ್ರಭೂ! ನೀಡಬೇಕು ಕ್ಷಮೆ! ಸಮಾಧಾನ ಚಿತ್ತದಿಂದ ಕೇಳಬೇಕು ಒಮ್ಮೆ... ಪ್ರಧಾನ ಅರ್ಚಕರು ಬಂದಿಲ್ಲ ಪೂಜಾರ್ಪಣೆಗೆ! ವಿಧಿಯಾಟವೆನ್ನುತ್ತ ಮೇಲ್ವಿಚಾರಕ ಕೈಯಿಟ್ಟ ಹಣೆಗೆ ನರೋತ್ತಮದಾಸರ ಆರೋಗ್ಯ ಸರಿಯಾಗಿದೆ ತಾನೇ? ಧರಣೀಂದ್ರನು ಕೂಡಲೇ ಕೇಳಿದನು ಪ್ರಶ್ನೆ ಸ್ವಸ್ಥರಾಗೇ ಕಂ...

ಸ್ನೇಹಿತ

ಇಮೇಜ್
ಮೂಲ: ಹೆಕ್ಟರ್ ರೋಜಾಸ್ ಹೆರಾಜೋ (ಸ್ಪಾನಿಷ್ ಭಾಷೆ, ಕೊಲಂಬಿಯಾ ರಾಷ್ಟ್ರ) ಇಂಗ್ಲಿಷ್ ಭಾಷೆಗೆ: ನಿಕೋಲಾಸ್ ಸೂಸ್ಕುನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ನನ್ನ ಕಡೆಗೆ ಅವನು ಒಮ್ಮೆಲೇ ನೋಡಿದ  ಎಲ್ಲರಿಗಿಂತ ಹೆಚ್ಚು ಏಕಾಂತದಲ್ಲಿ.  ಅವನು ನನ್ನ ಕಡೆ ನೋಡಿದ ತನ್ನ ಕಣ್ಣುಗಳಿಂದ, ತನ್ನ ಮೂಳೆಗಳಿಂದ, ಪಾದರಕ್ಷೆಗಳೊಳಗಿನ ತನ್ನ ಬರಿಪಾದಗಳಿಂದ.  ನನಗೆ ತಡೆದುಕೊಳ್ಳಲಾಗಲಿಲ್ಲ.  (ನಾವು ತಡೆಯಲಾರೆವು  ನಮ್ಮ ಆಳಕ್ಕೆ ಇಣುಕುವ ಯಾವುದನ್ನೂ.) ಅವನ ಹಿಂದೆ ಇತ್ತು ಸ್ವರ್ಗ  ಅಲ್ಲಿದ್ದರು ರಾಕ್ಷಸರು,  ಕೊತಕೊತ ಕುಡಿಯುವ ಎಣ್ಣೆಯ ಕೊಪ್ಪರಿಗೆ ಮತ್ತು ಸಾಬೂನಿನ ಗುಳ್ಳೆಗಳನ್ನು ಊದುತ್ತಿರುವ ದೇವಪಿತ.  ಈ ಕಡೆ ಇತ್ತು ಕಂಪ್ಯೂಟರ್ ಮೇಜು, ಫರ್ನಿಚರ್ ಸಾಮಾನು, ಕೋಣೆಯ ಮತ್ತೆಲ್ಲಾ ಸಾಕ್ಷಿಗಳು.  ಸ್ನೇಹಿತನು ಕುಳಿತಿದ್ದ ಪುಟ್ಟ ಕುರ್ಚಿಯ ಮೇಲೆ,  ನನ್ನ ಕಡೆ ನೋಡುತ್ತಾ, ಕುಳಿತುಕೊಂಡು, ಉಸಿರಾಡುತ್ತಾ.  ಕವಿತೆಯ ಸ್ವಾರಸ್ಯ: ಇಲ್ಲಿ ಕವಿತೆಯ ನಾಯಕನಿಗೆ ಕಾಣುವ ಸ್ನೇಹಿತ ಬೇರೊಬ್ಬನೇ ಆಗಿರಬೇಕಾಗಿಲ್ಲ. ಸ್ವತಃ ನಾಯಕನೇ ಆಗಿರಬಹುದು ಎಂಬ ಸುಳಿವಿನೊಂದಿಗೆ ಕವಿತೆಯನ್ನು ಮತ್ತೊಮ್ಮೆ ಓದಿ. ಕಂಪ್ಯೂಟರ್ ತೆರೆಯ ಹಿಂದೆ ಕಾಣುತ್ತಿರುವ "ಸ್ವರ್ಗ"ದಲ್ಲಿ  ನರಕವಾಸಿಗಳಾದ ರಾಕ್ಷಸರು, ಎಣ್ಣೆಯ ಕೊಪ್ಪರಿಗೆ ಇವೆಲ್ಲಾ ಯಾಕಿವೆ? ...

ಒಟ್ಟಿನಲ್ಲಿ

ಇಮೇಜ್
ಮೂಲ: ಮಾರ್ಕೋ ವೆಸೋವಿಚ್ (ಬಾಸ್ನಿಯಾ ದೇಶ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಹಿನ್ನೆಲೆ: ಬಾಸ್ನಿಯಾ ದೇಶದ ರಾಜಧಾನಿ ಸರಯೇವೋ ನಗರದಲ್ಲಿ ಕವಿ ಮಾರ್ಕೋ ವೆಸೋವಿಎಚ್  (1945-) ವಾಸವಾಗಿದ್ದಾರೆ.  1992ರಲ್ಲಿ ಯುಗೋಸ್ಲಾವಿಯಾ ಸಂಯುಕ್ತ ರಾಷ್ಟ್ರದಿಂದ ಬಾಸ್ನಿಯಾ ಮುಕ್ತಿ ಘೋಷಿಸಿಕೊಂಡಿತು. ಆಗ  ಮೂರು ವರ್ಷಗಳ ಕಾಲ ನಿರಂತರ ಯುದ್ಧ ನಡೆಯಿತು. ಯುಗೋಸ್ಲಾವಿಯಾದ ಭಾಗವೇ ಆಗಿರಬೇಕು ಎಂದು ಬಯಸುವವರು ಮತ್ತು ಅದು ಮುಕ್ತ ದೇಶವಾಗಿರಬೇಕೆಂದು ಬಯಸುವವರ ನಡುವೆ ನಡೆದ ಯುದ್ಧದಲ್ಲಿ ಸಾಕಷ್ಟು ಹಿಂಸಾಚಾರ ನಡೆಯಿತು.  "ಸಂಜಾತಿ ಪರಿಶುದ್ಧಿ" ಎಂಬ ಹೆಸರಿನಲ್ಲಿ ಸಾವಿರಾರು ಬಾಸ್ನಿಯಾ ವಾಸಿಗಳ ಕೊಲೆ ನಡೆಯಿತು. ಮಾರ್ಕೋ ವೆಸೋವಿಎಚ್ ಈ ಮೂರೂ ವರ್ಷಗಳ ಕಾಲ ಸರಯೇವೋ ನಗರದಲ್ಲೇ ಇದ್ದು ಲೇಖನಗಳ ಮೂಲಕ "ಸಂಜಾತಿ ಪರಿಶುದ್ಧಿ"ಯ ವಿರುದ್ಧ ಮತ್ತು ಸಂಜಾತಿ ವೈವಿಧ್ಯದ ಪರವಾಗಿ ಬರೆದ ಲೇಖಕ. ಪ್ರಸ್ತುತ ಕವಿತೆಯನ್ನು ಈ ಹಿನ್ನೆಲೆಯಲ್ಲಿ ನೋಡಿ. ಕವಿತೆಯ ಪ್ರಾರಂಭದಲ್ಲಿ ಸ್ಮಶಾನದ ಉಲ್ಲೇಖವಿದೆ. ಬಹುಶಃ ಒಬ್ಬ ಬಾಸ್ನಿಯನ್ ಯೋಧನನ್ನು ದಫನದ ಉಲ್ಲೇಖವಿರಬಹುದು.  ಬಾರ್ಲಿಯ ತೆನೆಗಳು ಮತ್ತೆ ಬಲಿಯುತ್ತವೆ ಎಂಬ ಸಾಲಿನಲ್ಲಿ ಮನುಷ್ಯನ ಪುನರ್ಜನ್ಮದ ಬಗ್ಗೆ ಕವಿ ಹೇಳುತ್ತಿರಬಹುದು. ಆಗಿನ್ನೂ ಬಾಸ್ನಿಯಾ ದೇಶಕ್ಕೆ ಯಾವುದೇ ಚರಿತ್ರೆ ಇರಲಿಲ್ಲ.   ಆಕಾಶದ ಉಲ್ಲೇಖ ಇಲ್ಲಿ ಬಂದಿರುವುದಕ್ಕೆ ಬಹುಶಃ ಸತ್ತ ಯೋಧನ ಆತ್ಮವು ಆಕಾಶ...

ನನ್ನ ಗೆಳೆಯ

ಇಮೇಜ್
ಮೂಲ: ವಿಲಿಯಮ್ ಆಗ್ಯುದೆಲೋ (ಕೊಲಂಬಿಯಾ ದೇಶ, ದಕ್ಷಿಣ ಅಮೆರಿಕಾ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಹಿನ್ನೆಲೆ: ಮಾದಕವಸ್ತುಗಳನ್ನು ರಫ್ತು ಮಾಡುವ ಧಂದೆಯೇ  ದೊಡ್ಡದಾಗಿರುವ ಕೊಲಂಬಿಯಾ ರಾಷ್ಟ್ರದಲ್ಲಿ "ಡ್ರಗ್ ಲಾರ್ಡ್" ಗಳದ್ದೇ ರಾಜ್ಯ. ಇಂಥ ಕಡೆ ನಡೆದ ಒಂದು ಮಾನವೀಯ ದುರಂತವನ್ನು ಈ ಕವಿತೆ ಹೇಳುತ್ತದೆ. ಹುಟ್ಟಾ ಕೃಷಿಕನಾದ ಒಬ್ಬ ಸಾಮಾನ್ಯ ರೈತನ ಜೀವನ ಹೇಗೆ ಬದಲಾಗಿಹೋಯಿತು ಎಂಬುದರ ಉಲ್ಲೇಖ ಈ ಕವಿತೆಯಲ್ಲಿದೆ.  ಟೊಮಾಸ್ ಆರ್ಗ್ವೆಲ್ಲೋ ಸ್ಯಾಂಡೋವಾಲ್, ಅಧ್ಯಕ್ಷರ ಸೋದರಳಿಯ, ನೋಡಲು ಒಳ್ಳೆ ಪುರಾತನ ಗ್ರೀಕ್ ಮೂರ್ತಿಯ ಹಾಗಿದ್ದಾನೆ, ಮನೆಯ ಬಾಗಿಲಷ್ಟೇ ಎತ್ತರ, ಎದೆಯ ಮೇಲೆ ಹೊರೆ ರೋಮ, ತೊಟ್ಟ ಒಣಹುಲ್ಲಿನ  ಟೊಪ್ಪಿಗೆಯ ಕೆಳಗೆ ಹೊಂಬಣ್ಣದ ಹೆಲ್ಮೆಟ್,  ಗದ್ದದ ತುಂಬಾ ಹರಡಿದ ಬೆಳ್ಳಿಬಣ್ಣದ ಒತ್ತಾದ ಗಡ್ಡ, ಬೆಕ್ಕಿನ ಕಣ್ಣುಗಳಲ್ಲಿಲ್ಲ ಕಿಂಚಿತ್ತೂ ಭಯ. ಇವನ ಪಳಗಿದ ಕಣ್ಣು ನೋಡಿದ ಕೂಡಲೇ  ಲೆಕ್ಕ ಹಾಕುತ್ತದೆ ಆಕಳಿನ ಪೃಷ್ಠದ ಅಗಲ.  ಹುಲ್ಲಿನಲ್ಲಿ ಗುರುತಿಸುತ್ತಾನೆ ಜಿಂಕೆಯ ಹೆಜ್ಜೆ , ಅದು ಎಳೆಹುಲ್ಲಿಗೆ ಬಾಯಿ ಹಾಕಿದ ಸ್ಥಾನ, ಆರ್ಮಾಡಿಯೋ ವಾಸಿಸುವ ಗುಹೆ, ಶಾಡ್ ಮೀನಿನ ಸಂಚಾರವನ್ನು ದೂರದಿಂದಲೇ ಗುರುತಿಸಬಲ್ಲ,  ರೈಫಲ್ ಹಿಡಿದ ರೀತಿಯಿಂದಲೇ  ಗುರಿ ಹೇಳಬಲ್ಲ, ಮಚ್ಚಿನ ಹೊಡೆತವನ್ನು ವಿಮರ್ಶಿಸಬಲ್ಲ. ಹೆಣ್ಣು ಕುದುರೆಮರಿಯ ಕಾಲು ನೀವುತ್ತ...

ಶಾಂತಿ

ಇಮೇಜ್
ಕವಿತಾಸ್ವಾದನೆ: ಬೇಕೆಂದರೆ ಮೊದಲು ಕವಿತೆಯನ್ನು ಓದಿ ಆನಂತರ ಈ ಟಿಪ್ಪಣಿಯನ್ನು ಓದಿ.  ಡಯಾನಾ ಆನ್ಫಿಮಿಯಾಡಿ ಜಾರ್ಜಿಯಾ ದೇಶದ ಕವಯಿತ್ರಿ.  ಈ ಕವಿತೆಯನ್ನು ಎರಡು ಸ್ತರಗಳಲ್ಲಿ ನೋಡಬಹುದು.  ಮೊದಲನೆಯದು ವ್ಯಕ್ತಿಗತ ಸ್ತರ. ನಮ್ಮ ಬದುಕಿನಲ್ಲಿ ಶಾಂತಿಯನ್ನು ನಾವು ಅನುಭವಿಸಬೇಕಾದರೂ ನೋವು ಮತ್ತು ಭೀತಿಗಳ ನಡುವೆಯೇ ಎಂಬುದು ಒಂದು ಧ್ವನಿ. ನಾಳೆ ಏನಾಗುತ್ತದೋ ಎಂಬ ಭೀತಿಯಲ್ಲೇ ಇಂದು ಎಲ್ಲರೂ ಬದುಕುತ್ತಿದ್ದೇವೆ. ಇನ್ನೊಂದು ಸ್ತರದಲ್ಲಿಯೂ ಕವಿತೆಯನ್ನು ನೋಡಬಹುದು. ಇದಕ್ಕಾಗಿ ಜಾರ್ಜಿಯಾ ದೇಶದ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು. ಟರ್ಕಿ, ಆರ್ಮೀನಿಯಾ, ರಷ್ಯಾ ಇವುಗಳನ್ನು ಹೊಂದಿಕೊಂಡಿದೆ ಜಾರ್ಜಿಯಾ.  ಹಿಂದೊಮ್ಮೆ ರಷ್ಯಾ ದೇಶದೊಂದಿಗೆ ಯುದ್ಧದಲ್ಲಿ ಪಾಲ್ಗೊಂಡಿದ್ದ ಜಾರ್ಜಿಯಾಗೆ ಸದಾ ರಷ್ಯಾ ದೇಶದ ಭಯ ಕಾಡುತ್ತಲೇ ಇರುತ್ತದೆ.  ಪೂರ್ವ ಯೂರೋಪಿನಲ್ಲಿದ್ದರೂ ಪಾಶ್ಚಿಮಾತ್ಯ ದೇಶಗಳ ಧೋರಣೆಯನ್ನು ಒಪ್ಪಿಕೊಂಡ ಜಾರ್ಜಿಯಾ ದೇಶದ ಶಾಂತಿಯನ್ನು ಕುರಿತೂ ಲೇಖಕಿ ಬರೆದಿರಬಹುದು.  ಶಾಂತಿ  ಮೂಲ: ಡಯಾನಾ ಆನ್ಫಿಮಿಯಾಡಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಶಾಂತಿ ಎಂಬ ಪದವನ್ನು ನನಗೆ ನಾನೇ  ಹೇಗೆ ಒಗ್ಗಿಸಿಕೊಂಡೆ ಎಂಬುದೇ ಒಂದು ಸೋಜಿಗ ನನಗೆ.  ಕೈಗವಸಿನ ಹಾಗೆ ಎಳೆದುಕೊಂಡೆ ನನ್ನತ್ತ.  ಸ್ಕಾರ್ಫ್ ಹಾಗೆ ಹೊದ್ದು ಸರಿಪಡಿಸಿಕೊಂಡೆ.  ನನ್ನ ಹಾ...

ಆಲ್ಬಂ

ಇಮೇಜ್
ಕಂಡಹಾರ್ ನಗರದಲ್ಲಿ ಹುಟ್ಟಿದ ಕವಿ ರೆಜಾ ಮೊಹಮ್ಮದಿ (1979-) ಇಂದಿನ ಪರ್ಷಿಯನ್ ಯುವಕವಿಗಳಲ್ಲಿ ಒಂದು ಪ್ರಮುಖ ಹೆಸರು. ಇರಾನ್ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಪಡೆದ ಮೊಹಮ್ಮದಿ ಪ್ರಸ್ತುತ ಕಾಬೂಲ್ ನಗರದಲ್ಲಿ ನೆಲೆಸಿದ್ದಾರೆ.  ಬಿಬಿಸಿ, ದ ಗಾರ್ಡಿಯನ್ ಮೊದಲಾದ ಮಾಧ್ಯಮಗಳಿಗೆ ಅವರು ಹವ್ಯಾಸಿ ವರದಿಗಾರರಾಗಿ ಬರೆಯುತ್ತಾರೆ.  ಈ ಕವಿತೆ ಮೊದಲ ನೋಟಕ್ಕೆ ಒಂದು ಪ್ರೇಮಕವಿತೆಯಂತೆ ತೋರುತ್ತದೆ. ಕವಿತೆಯನ್ನು ಹಾಗೂ ಅರ್ಥೈಸಿಕೊಳ್ಳಬಹುದು. ಆದರೆ ಇಲ್ಲಿ ಬರುವ ಸಖ ಮತ್ತು ಸಖಿ ಅಫ್ಘಾನಿಸ್ತಾನ್ ದೇಶವಾಸಿ ಮತ್ತು ಅಫ್ಘಾನಿಸ್ತಾನ್ ದೇಶ ಕೂಡಾ ಆಗಿರಬಹುದು. ಅಫ್ಘಾನಿಸ್ಥಾನವು ಮೊದಲು ರಷ್ಯಾ ಆನಂತರ ತನ್ನದೇ ದೇಶದ ಉಗ್ರರ ಕೈಯಲ್ಲಿ ಸಿಲುಕಿ ನಲುಗಿದ ದೇಶ.  ಇಂದು ಸ್ವತಂತ್ರ ದೇಶವೆಂಬ ಮೊಹರು ಹೊಂದಿದ್ದರೂ ಅಲ್ಲಿ ಉಗ್ರರ ಕೈವಾಡ ಇಂದಿಗೂ ಗಾಢವಾಗಿದೆ.   ಅನೇಕ ಲೇಖಕರು ಅಫ್ಘಾನಿಸ್ತಾನದ ದುರದೃಷ್ಟದ ಕಥೆಯನ್ನು ಕುರಿತು ಬರೆದಿದ್ದಾರೆ.  ಆಲ್ಬಂ ಮೂಲ:  ರೆಜಾ ಮೊಹಮ್ಮದಿ  (ಅಫ್ಘಾನಿಸ್ತಾನ್)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಚಿತ್ರದಲ್ಲಿ ನಿನ್ನ ಕೈ ನಿನ್ನ ಕೇಶಗಳಲ್ಲಿ ಆಡುತ್ತಿದೆ  ನಿನ್ನ ಕೇಶಗಳು ನಿನ್ನ ಮುಖದ ಮೇಲೆ ಆಡುತ್ತಿವೆ  ಮಧು ತುಂಬಿದ ಎರಡು ಬಟ್ಟಲುಗಳು ನಿನ್ನ ಕಣ್ಣುಗಳು  ಮಧುಪಾನ ಮಾಡಲು ನನ್ನೆದೆ ಹಾತೊರೆಯುತ್ತದ...

ಬಲೂನುಗಳು

ಇಮೇಜ್
ಮೂಲ ಕವಿತೆ: ಮೊಸ್ತಫಾ ಇಬ್ರಾಹಿಂ (ಈಜಿಪ್ಟ್)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ವಸ್ತು ಎಷ್ಟು ಗಟ್ಟಿಯಿದೆ ಎಂದು ಪರೀಕ್ಷಿಸಲು  ಕೆಲವೊಮ್ಮೆ ಅದನ್ನು ಮುರಿಯಬೇಕಾಗುತ್ತದೆ.  ನಮಗೆ ಅದು ಬೇಕಾದುದೋ ಎಂದು ಪರೀಕ್ಷಿಸಲು  ಕೆಲವೊಮ್ಮೆ ವಸ್ತುವನ್ನು ತ್ಯಜಿಸಬೇಕಾಗುತ್ತದೆ.  ನಂಬಿಕೆಗಾಗಿ ಪರಿತಪಿಸಿ ಅದೆಷ್ಟು ಜನ ಮಿತ್ರರ ಮೇಲೆ  ಹೊದಿಸಿದೆ  ನೀನು ಸುಳ್ಳುಗಾರರೆಂಬ ಆರೋಪ? ನಂಬಿಕೆಯನ್ನೇನೋ ಗಳಿಸಿಕೊಂಡೆ,  ಆದರೆ ಮಿತ್ರರನ್ನು ಕಳೆದುಕೊಂಡೆ ಪಾಪ! ಶಕ್ತಿ ಮೀರಿ  ಊದುತ್ತಾ ಅದೆಷ್ಟು ಬಲೂನುಗಳನ್ನು ಒಡೆದಿರಬಹುದು ನೀನು? ಅದರ ಶಕ್ತಿಯ ಮಿತಿಯೇನೋ ಗೊತ್ತಾಯಿತು,  ಆದರೆ ನಿನ್ನ ಬಳಿ ಉಳಿದದ್ದೇನು ವ್ಯಥೆಯನ್ನು ಹೊರತು? ನಾನು ಬಲೂನುಗಳನ್ನೇಕೆ ಊದುತ್ತೇನೆ ಎಂದು ನನಗೀಗ ಗೊತ್ತು.  ನಾನು ಹಂಬಲಿಸುತ್ತಿದ್ದೆ: ಸಿಕ್ಕುವುದೇ ಕೊನೆಯೇ ಇಲ್ಲದ  ವಸ್ತು, ನನಗೆಂದೂ ಮುಟ್ಟಲಾಗದ ತುದಿಯುಳ್ಳ ವಸ್ತು, ಒರಗಿಕೊಂಡು ತಳ್ಳಿ ಬೀಳಿಸಿದರೂ ನಿಂತೇ ಇರುವ ಗೋಡೆಗಳು, ಶಾಶ್ವತವಾದದ್ದು, ನಾನು ಪರೀಕ್ಷಿಸಿದರೂ ಒಡೆಯದ ವಸ್ತು. 

ಕಾಬುಲ್

ಇಮೇಜ್
ಕವಿತೆ ಓದುವ ಮುನ್ನ: ಶಕೀಲಾ ಅಜೀಜ್ ಜಾದಾ (1964-) ಕಾಬುಲ್ ನಗರದಲ್ಲಿ ಹುಟ್ಟಿಬೆಳೆದರೂ ಅಫ್ಘಾನಿಸ್ತಾನದ ಸಂಘರ್ಷದ ಕಾರಣ ನೆದರ್ಲ್ಯಾಂಡ್ಸ್ ದೇಶಕ್ಕೆ ಹೋಗಿ ನೆಲೆಸಬೇಕಾಯಿತು. ಮೊದಲು ರಷ್ಯಾ, ಅನಂತರ ತಮ್ಮದೇ ದೇಶದ ಉಗ್ರರ ಕೈಗೆ ಸಿಕ್ಕಿ ಅಫ್ಘಾನಿಸ್ತಾನದ ಕ್ರಮಬದ್ಧ ವಿನಾಶವನ್ನು ಅನೇಕ ಕವಿಗಳು, ಕತೆಗಾರರು, ಕಾದಂಬರಿಕಾರರು ಚಿತ್ರಿಸಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ಕಾಬುಲ್ ನಗರದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆದಾಗ ತಮಗೆ ಉಂಟಾಗುವ ಸಂಕಟವನ್ನು ತೋಡಿಕೊಳ್ಳುತ್ತಾರೆ. ಬಾಲಾ ಹಿಸ್ಸಾರ್ ಎಂಬುದು ಕಾಬುಲ್ ನಗರದಲ್ಲಿರುವ ಗುಡ್ಡದ ಮೇಲಿರುವ ಕೋಟೆ. ಇದರ  ಬುಡದಲ್ಲಿ ಸ್ಮಶಾನವಿದೆ. ಈ ಕವಿತೆಯಲ್ಲಿ "ಬಲತೋಳಿನ ದೇವತೆ" ಎಂಬುದಕ್ಕೆ ಎರಡು ಅರ್ಥಗಳಿರಬಹುದು. ಇಂಥ ದೇವತೆಗಳು ಭುಜಗಳ ಮೇಲೆ ಸದಾ ಕುಳಿತಿದ್ದು ನಮ್ಮ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ಗಮನಿಸುತ್ತಿರುತ್ತವೆ ಎಂದು ನಂಬುತ್ತಾರೆ. ಕಾರ್ಟೂನ್ ಚಿತ್ರಗಳಲ್ಲಿ ಇಂಥ ಚಿತ್ರಗಳನ್ನು ಬಳಸುವುದನ್ನು ಕೂಡಾ ನಾವು ನೋಡುತ್ತೇವೆ. ಬೇಸಗೆಯ ರಜೆಗಳಲ್ಲಿ ಮನೆಯಲ್ಲಿದ್ದಾಗ ಮಕ್ಕಳು ಇಂಥ ಕಾರ್ಟೂನ್ ಚಿತ್ರಗಳನ್ನು ನೋಡುವ ಬಗ್ಗೆ ಕೂಡಾ ಲೇಖಕಿ ಉಲ್ಲೇಖಿಸುತ್ತಿರಬಹುದು.  ಮೂಲ : ಶಕೀಲಾ ಅಜೀಜ್ ಜಾದಾ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕಾಬುಲ್ ಗಾಗಿ ನನ್ನ ಎದೆ ಮಿಡಿಯುವುದು  ಬಾಲಾ ಹಿಸ್ಸಾರ್ ಕೋಟೆಯ ಇಳಿಜಾರುಗಳಿಗಾಗಿ  ಅ...

ಕವಿತೆ

ಇಮೇಜ್
ಹಿಂದಿ ಮೂಲ :  ಅಂಜನಾ ಬಕ್ಷಿ  ಕನ್ನಡಕ್ಕೆ : ಸಿ ಪಿ ರವಿಕುಮಾರ್  ಕವಿತೆ ನನ್ನನ್ನು ಬರೆಯುತ್ತದೋ  ನಾನು ಕವಿತೆಯನ್ನೋ  ತಿಳಿಯುತ್ತಿಲ್ಲ  ಒಳಗಿನ ತುಮುಲವು ಕುದ್ದು ಹೊರಬಂದಾಗ  ಕವಿತೆ ಮೂಡಿಸುತ್ತದೆ    ಶಬ್ದಗಳನ್ನು ಮತ್ತು ಶಬ್ದಗಳಿಂದ ಹೊರಸೂಸುತ್ತದೆ ಕವಿತೆ  ಹೇಗೆ ಕಟ್ಟೆಯಿಂದ ಸಂಸತ್ತಿನವರೆಗೂ  ಮೂಡುತ್ತವೋ ಪಾಪದ  ಅಸಂಖ್ಯ   ಕತೆಗಳು  ಹಾಗೇ  ಮುಷ್ಟಿ ತುಂಬ ಶಬ್ದಗಳು  ಹೊಮ್ಮಿಸುತ್ತವೆ ಕಾಗದದ ಮೇಲೆ  ಎಣಿಕೆ ಮೀರಿದಷ್ಟು ಕವಿತೆಗಳನ್ನು  ಈ ಕವಿತೆಗಳಲ್ಲಿ ಮೈದಳೆದ  ಅಕ್ಷರಗಳು  ಚೂಪಾಗಿ, ಉರುಟಾಗಿ, ಓರೆಕೋರೆಯಾಗಿವೆ  ನೇರವಾಗಿ, ಚಪ್ಪಟೆಯಾಗಿ, ಸಹಜವಾದ  ಅಕ್ಷರಮಾಲೆಯಂತಲ್ಲ 

ಒಂದು ದುಃಖ ದಂತ(ಹ)ಕಥೆ

ಇಮೇಜ್
ಒಂದು ದುಃಖ ದಂತ(ಹ)ಕಥೆ ಮೂಲ (ಇಂಗ್ಲಿಷ್) ಕವಿತೆ - ಡೊರೊತಿ ಪಾರ್ಕರ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ನನಗೇ ಗೊತ್ತಾಗಿಲ್ಲ ಇನ್ನೂ, ಗೊತ್ತಾಗಲಾರದು ಮುಂದೆಯೂ ನಾನೇಕೆ ಹೀಗೆ, ಹೀಗೇಕೆ ನಾನೆಂದು. ನೋಡುತ್ತೇನೆ ನನ್ನ ಮುಂದೆಯೇ ಬೇರೆ ಹುಡುಗಿಯರು ಗಂಡುಗಳಲ್ಲಿ ತುಂಬುವುದು ತೀವ್ರತೆಯನ್ನು, ಜ್ವಾಲೆಯ ಭುಗಿಲು ಪಡೆದುಕೊಂಡು ಗಾಜಿನ ಮನೋಹರ ಪಾರದರ್ಶಕ ಸತ್ತ್ವ, ಅನಂತರ ಏಪ್ರಿಲ್ ಮಾಸದ ಹುಲ್ಲಿನ ಮಕಮಲ್ ಮೃದುತ್ವ, ಕೊನೆಗೆ ಬಂಡೆಯಂಥ ಬಾಳಿಕೆ; ನನಗೋ ಇದೆಲ್ಲ ಮರೀಚಿಕೆ. ನನ್ನ ಜೊತೆ ಮನ್ಮಥನ ಹೂಬಾಣಕ್ಕೆ ಸಿಕ್ಕ ಹುಡುಗರು ಏನು ಹೇಳಲಿ, ಮದುವೆಯ ಹೊರಗೆ ಹುಟ್ಟಿದವರು, ನನ್ನ ಹೃದಯ ಮುರಿದು, ನಿಶ್ಶಬ್ದಗೊಳಿಸಿ ನನ್ನ ಹಾಡು ಇನ್ನು ತಡವಾಯ್ತು ಎಂದು ಹೊರಟು ನಿಂತವರು ನನ್ನ ಕಣ್ಣೀರನ್ನು ನೋಡಿ ಅವರು ಕೊಟ್ಟ ಸಮಜಾಯಿಷಿ ಅವರ ತಾಯ್ತಂದೆ ಮುಖ್ಯ, ಮೊದಲವರ ವೃತ್ತಿ. ಇಷ್ಟಾದರೂ ಅನುಭವವು ಕಲಿಸಿತೇ ನನಗೆ ಒಂದಿಷ್ಟು ಜಾಣ್ಮೆ, ಶಾಂತವಾಗಿರುವ ಕಲೆ, ತಿಳುವಳಿಕೆ? ಇಪ್ಪತ್ತೊಂದನೇ ಸಲವಾದರೂ ಹಿಡಿಯಬಹುದೆಂದು ಹೊರಡುವುದಿದೆಯಲ್ಲ ಪರಮಸುಖವನ್ನು  ಅದು ಮೂರ್ಖತನವೆಂದು ಗೊತ್ತಿದ್ದರೂ ನನಗೆ  ಹೊರಟು ನಿಲ್ಲುವೆ ಮತ್ತೆ, ಶಾಪವಾಗಿದೆ ಭರವಸೆ.  ಹಳೆಯದಾಯಿತು ಹೃದಯ ಇಬ್ಭಾಗವಾಗಿರುವ ಚಿತ್ರ  ನನ್ನದೋ ಮೊಸಾಯಿಕ್ ನಂತೆ ವಿಚ್ಛಿದ್ರ - ಈನಡುವೆ ಇದು ಹ...