ಪೋಸ್ಟ್‌ಗಳು

John Keats ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಆತ್ಮೋನ್ನತಿ

ಇಮೇಜ್
ಮೂಲ ಇಂಗ್ಲಿಷ್ ಸಾನೆಟ್: ಜಾನ್ ಕೀಟ್ಸ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಆವರಿಸುವ ಕತ್ತಲಿನಿಂದ ಬೆಳ್ಳಕ್ಕಿಯೊಂದು ಹೇಗೆ ಮೇಲೆದ್ದು ಸಾಗುವುದೋ ಪೂರ್ವದ ಬೆಳಕಿನ ಕಡೆಗೆ ನಿಷ್ಕಲ್ಮಶ ಆನಂದದ ವಿನಾ ಬೇರೇನನ್ನೂ ನೂಕವೋ ರೆಕ್ಕೆ ಹಾಗೇ ನಿನ್ನ ಆತ್ಮವೂ ಹಾರುವುದು ಮೇಲಣ ರಾಜಾಧಿಪತ್ಯಕ್ಕೆ ಎಲ್ಲಿ ಶಾಂತಿಯು ಶಾಶ್ವತವೋ ಮತ್ತು ನಿರಂತರವೋ ಪ್ರೀತಿ ಎಲ್ಲಿ ಸುಖಾತ್ಮಗಳು ಧರಿಸಿ ಪ್ರಭಾವಳಿಯ ಮುಕುಟ  ಅನುಪಮ ವೇಷಭೂಷಣ ತೊಟ್ಟು ಅಮೃತ ಹೀರುತ್ತಾ, ಪುಣ್ಯಾತ್ಮಗಳಿಗೆ ಮಾತ್ರ ಸಿಕ್ಕುವುದು ಈ ರೀತಿ, ಅಲ್ಲಿ ನಿನ್ನಾತ್ಮವು ಪಡೆವುದು ಅಮರತ್ವದ ಉನ್ನತಿ. ಹಿನ್ನೆಲೆಯಲ್ಲಿ ದೈವೀಕ ಸಂಗೀತ ಮೊಳಗೆ ತುಂಬಿಕೊಳ್ಳುವುದು ಮಹದಾನಂದ ಆತ್ಮದೊಳಗೆ. ಅಥವಾ ಆಸೆಯೊಂದು ನಿನ್ನಾತ್ಮದಲ್ಲಿ ಆಗ ಪಡೆದೀತು ಅಂಕುರ ಸರ್ವಶಕ್ತ ಪಿತನ ಕೆಲಸಗಳನ್ನು ಮಾಡಬೇಕೆಂಬ ಕಾತುರ. ಕಂಡುಕೊಳ್ಳಬೇಕು  ಯಾವುದು ತರವೆಂಬ ಪ್ರಶ್ನೆಗೆ ಉತ್ತರ  ಮತ್ತು ಏಕೆ ಹೆದರಬೇಕು ದುಃಖಗಳು ಬಂದಾಗ ಹತ್ತಿರ?

ದೊರೆ ನೆಬುಕಡ್ನೆಜ್ಜರ್ ಕಂಡನಂತೆ ಒಂದು ದುಃಸ್ವಪ್ನ

ಇಮೇಜ್
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕವಿತೆ ಓದುವ ಮುನ್ನ: ನೆಬೂಕಡ್ನೆಜ್ಜರ್ ಎಂಬ ರಾಜನ ಕಥೆ ಬೈಬಲ್ಲಿನಲ್ಲಿದೆ. ಇವನು ಬ್ಯಾಬಿಲಾನ್ ದೇಶದ ದೊರೆ. ತನ್ನ ಬಗ್ಗೆ ಅವನಿಗೆ ಗರ್ವ ಉಂಟಾದಾಗ ದೇವರು ಅವನಿಗೆ ಪಾಠ ಕಲಿಸಲೆಂದು ಒಂದು ಕನಸು ಕಾಣುವಂತೆ ಮಾಡುತ್ತಾನೆ. ಈ ಕನಸಿನಲ್ಲಿ ಅವನ ಪ್ರತಿಮೆಯೊಂದು ಕಾಣುತ್ತದೆ. ಅದರ ತಲೆ ಬಂಗಾರದ್ದು. ತಲೆಯಿಂದ ಪಾದಗಳ ಕಡೆಗೆ ಇಳಿಯುತ್ತಾ ಬೆಳ್ಳಿ, ಕಂಚು ಇತ್ಯಾದಿ ಕಡಿಮೆ ಮೌಲ್ಯದ ಲೋಹಗಳು. ಈ ಕನಸಿನ ಅರ್ಥವೇನೆಂದು ಅವನಿಗೆ ಹೊಳೆದರೂ ಅವನು ತನ್ನ ಆಸ್ಥಾನದ ಮುತ್ಸದ್ದಿಗಳನ್ನು ಕೇಳುತ್ತಾನೆ. ಮುಂದೆ ಬರುವ ರಾಜರು ಇವನಿಗಿಂತಲೂ ಕಡಿಮೆ ಮಹತ್ವದ ರಾಜರು ಎಂಬುದು ಕನಸಿನ ಗೂಢ.  ಯಾರೂ ಕನಸಿನ ಅರ್ಥ ಹೇಳಲಾರದಾದಾಗ ಕೋಪಗೊಂಡ ರಾಜ ಅವರನ್ನು ಕೊಲ್ಲಿಸುತ್ತಾನೆ.  ಡೇನಿಯಲ್ ಎಂಬುವನು ಮಾತ್ರ ಅದರ ಅರ್ಥ ಹೇಳುತ್ತಾನೆ. ರಾಜನ ಗರ್ವಭಂಗ ಮಾಡಲು ದೇವರು ಅವನಿಗೆ ಹುಚ್ಚು ಹಿಡಿಯುವ ಹಾಗೆ ಮಾಡುತ್ತಾನೆ. ರಾಜನು ಇಲಿಬಾವಲಿಗಳೊಂದಿಗೆ ಬಾಳುತ್ತಾ ಹುಲ್ಲು ತಿನ್ನುತ್ತಾ ಬದುಕುತ್ತಾನೆ.  ಕೆಲವು ವರ್ಷಗಳ ನಂತರ ಅವನ ಮನೋವ್ಯಾಧಿ ಗುಣವಾಗಿ ಅವನು ದೇವರಿಗೆ ತಲೆಬಾಗುತ್ತಾನೆ.  ಪ್ರಸ್ತುತ  ಸಾನೆಟ್ಟಿನಲ್ಲಿ ಕೀಟ್ಸ್ ಅಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಕುರಿತು ಕೂಡಾ ವಿಶ್ಲೇಷಿಸುತ್ತಿರಬಹುದು.  ಕವಿತೆ: ಇಲಿಬಾವಲಿಗಳೊಂದಿಗೆ ವಾಸ ಮಾಡಲು ಹೊರಡುವ ಮುನ್ನ ದೊರೆ ನ...

ನಾನಿರುವುದಿಲ್ಲ ಎಂಬ ಭೀತಿ

ಇಮೇಜ್
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಾನಿರುವುದಿಲ್ಲ ಮುಂದೊಂದು ದಿನ, ಅದಕ್ಕೆ ಮೊದಲೇ ಜೇನುನೊಣದಂತೆ ಹೀರಿಕೊಂಡು ನನ್ನ ಲೇಖನಿಯು ಮಾನಸೋದ್ಯಾನದ ಅಸಂಖ್ಯ ಕಲ್ಪನಾಪುಷ್ಪಗಳ ಮಧುವನ್ನು ಘನೀಕರಿಸದಿದ್ದರೆ ಅಕ್ಷರರೂಪ ಗ್ರಂಥಮಾಲೆಯಲ್ಲಿ , ಎಂದು ಧೇನಿಸಿ ಭೀತಗೊಳ್ಳುವೆನು. ನೋಡಿದಾಗ ಆಗಸದ ಕಡೆಗೆ ಕಾಣಿಸಿ ನಕ್ಷತ್ರಪುಂಜದಲ್ಲಿ ಯಾವುದೋ ಪ್ರೇಮಕಥನವು ಬಾನಲ್ಲಿ, ನಿಡುಸುಯ್ಯುವೆನು ಅದರ  ನೆರಳನ್ನಾದರೂ ನಾನಿಲ್ಲಿ ಗ್ರಹಿಸಿಡಲು ಬಿಡುವುದೇ ವಿಧಿಯ ಮಾಯಾಹಸ್ತ! ನಿನ್ನ ಮೊಗದ ಚೆಲುವನ್ನು ನೋಡುತ್ತಾ ದುಃಖಿಸುವೆ ಮತ್ತೆ ಇನ್ನೆಂದೂ ಕಾಣಲು ಸಿಕ್ಕದೆಂದು;  ದೊರೆಯದು ನನಗೆ ಇನ್ನೆಂದೂ ಭಾವನಾತೀತ, ನಿಷ್ಕಲ್ಮಶ ಪ್ರೇಮದ ಸುಖ; ಕಣ್ಣಾಡಿಸಿ ನೋಡುತ್ತೇನೆ ಜಗತ್ತಿನ ಕಿನಾರೆಯಲ್ಲಿ ನಿಂತು: ಎಲ್ಲಿಯವರೆಗೆ ನಿಂತಿರುತ್ತೇನೆ ಇಲ್ಲಿ ನಾನೆಂದರೆ ಯಾವ ಘಳಿಗೆ ಮುಳುಗುವುವೋ ಕೀರ್ತಿ ಮತ್ತು ಪ್ರೇಮ ಶೂನ್ಯದೊಳಗೆ.

ಹೂವಿನ ಸಂಕೋಲೆ

ಇಮೇಜ್
ಮೂಲ ಇಂಗ್ಲಿಷ್ ಕವಿತೆ : ಜಾನ್ ಕೀಟ್ಸ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಕವಿತಾಸ್ವಾದನೆ: ಇಪ್ಪತ್ತಾರರ ಎಳೆಯ ವಯಸ್ಸಿನಲ್ಲೇ ಕಾಲವಾದ ಜಾನ್ ಕೀಟ್ಸ್ ಇಂಗ್ಲಿಷ್ ಭಾಷೆಯ ಪ್ರಮುಖ ಕವಿಗಳಲ್ಲಿ ಒಬ್ಬ. ಅವನು 64 ಸಾನೆಟ್ ಗಳನ್ನು ರಚಿಸಿದ್ದಾನೆ. ಅವನ ಸಮಕಾಲೀನ ವಿಮರ್ಶಕರು ಅವನ ಕಾವ್ಯವನ್ನು ಕಟುವಾಗಿ ವಿಮರ್ಶಿಸುತ್ತಿದ್ದರು. ಅಂದು ಸಾನೆಟ್ ಕಾವ್ಯಪ್ರಕಾರವನ್ನು ವಿಮರ್ಶಕರು ಕಡೆಗಣ್ಣಿನಿಂದ ನೋಡುತ್ತಿದ್ದರು. ಹಿಂದೊಮ್ಮೆ ಷೇಕ್ಸ್ ಪಿಯರ್ ಬಳಸಿದ ಈ ಕಾವ್ಯಪ್ರಕಾರವು ಜಾನ್ ಕೀಟ್ಸ್ ಗೆ ಆಪ್ಯಾಯವಾದದ್ದು. ವಿಮರ್ಶಕರ ಅಸಡ್ಡೆಯ ಬಗ್ಗೆ ಅವನಿಗೆ ತುಂಬಾ ಕೋಪ-ತಾಪಗಳಿದ್ದವು. ತನ್ನ ಕಾವ್ಯಕ್ಕೆ ಸಿಕ್ಕಿದ ಕಟುವಾದ ವಿಮರ್ಶೆಯೇ  ಅವನನ್ನು ಸಾವಿಗೆ ದೂಡಿತು ಎಂದು ಕೆಲವರು ನಂಬಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಅವನು ತನಗೆ ಇಷ್ಟವಾದ ಕಾವ್ಯಪ್ರಕಾರವಾದ ಸಾನೆಟ್ ಕುರಿತು ಬರೆದಿದ್ದಾನೆ. ಇಲ್ಲಿ ಬರುವ ಆಂಡ್ರೋಮೀಡಾ ಎಂಬ ಚೆಲುವೆಯ ಉಲ್ಲೇಖ ಗ್ರೀಕ್ ಪುರಾಣದಿಂದ ಆಯ್ದುಕೊಂಡದ್ದು. ಇವಳ ತಾಯಿಯು ತನ್ನ ಮಗಳ ಸೌಂದರ್ಯ ಜಲಕನ್ಯೆಯರ ಸೌಂದರ್ಯವನ್ನೂ ಮೀರಿದ್ದು ಎಂದು ಕೊಚ್ಚಿಕೊಂಡಾಗ ಕುಪಿತಗೊಂಡ ಸಮುದ್ರದೇವತೆ ಪೊಸೈಡನ್ ಜಲರಾಕ್ಷಸರನ್ನು ಕಳಿಸಿ ತಾಯಿ ಮತ್ತು ಮಗಳನ್ನು ಬಂಧಿಸುತ್ತಾನೆ. ಚೆಲುವೆ ಆಂಡ್ರೋಮೀಡಾಳನ್ನು ಜಲದೇವತೆಗೆ ಬಲಿ ನೀಡುವ ಉದ್ದೇಶದಿಂದ ಬಂಡೆಗೆ ಬಿಗಿದು ಕಟ್ಟಲಾಗುತ್ತದೆ. ಪರ್ಸಿಯಸ್ ಎಂಬ ದೇವತೆ ಅವಳನ್ನ...

ಬೈರನ್! ನಿನ್ನ ಕಾವ್ಯದಲ್ಲಿರುವ ನೋವದೆಷ್ಟು ಮಧುರ!

ಇಮೇಜ್
ಸಮಕಾಲೀನ ಕವಿ ಜಾರ್ಜ್ ಬೈರನ್ (1788-1824) ಕುರಿತು ಇನ್ನೊಬ್ಬ ಕವಿ ಜಾನ್ ಕೀಟ್ಸ್ (1795-1821) ರಚಿಸಿದ ಸಾನೆಟ್ಟಿನ ಅನುವಾದ.  ಮೂಲ ಸಾನೆಟ್ : ಜಾನ್ ಕೀಟ್ಸ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್    ಬೈರನ್! ನಿನ್ನ ಕಾವ್ಯದಲ್ಲಿರುವ ನೋವದೆಷ್ಟು ಮಧುರ! ಆತ್ಮವನು ಇನ್ನಷ್ಟು ಮಿದುಗೊಳಿಸಲು  ಸುಮಕೋಮಲ ಕರುಣೆ ನಡುಗುವ ಕೈಯಲ್ಲೆತ್ತಿಕೊಂಡು ತನ್ನೆದೆಗಿಂತ ಭಾರ ರುದ್ರವೀಣೆ   ಶಕ್ತಿಮೀರಿ ಮೀಟಿದಾಗ ಉಂಟಾದ ಆರ್ತ ಸ್ವರಸಂಚಾರ  ಸನಿಹದಲ್ಲಿದ್ದ ನೀನು ಹಿಡಿದಿಟ್ಟುಕೊಂಡಂತಿದೆ ಲಯವಾಗದಂತೆ.  ಬಿದ್ದಿದ್ದರೂ ನಿನ್ನ ಕಾವ್ಯದ ಮೇಲೆ ಗಾಢ ದುಃಖದ ನೆರಳು  ಕ್ಷತವಾಗದು ಅದರ ಹರ್ಷಗುಣ: ನಿನ್ನ ಶೋಕಗಳೂ  ದೇದೀಪ್ಯಮಾನವಾಗಿವೆ, ಪ್ರಜ್ವಲಿಸುತ್ತಿದೆ ಮೇಲೊಂದು ಪ್ರಭೆ! ಚಂದ್ರಮನ ಆವರಿಸಿಕೊಂಡರೂ ಕಾರ್ಮುಗಿಲ ಸೆರಗು  ಮುಗಿಲಂಚು ಕಂಗೊಳಿಸುವಂತೆ ಜರಿಯಂಚಿನ ಹಾಗೆ  ಅಮೃತಶಿಲೆಯಲ್ಲಿ ಹಾಸುಹೊಕ್ಕಾದ ಗೆರೆಗಳು ಹೇಗೆ  ಹಾಡುತ್ತವೋ ಕ್ಷೀಣದನಿಯಲ್ಲಿ ಸಂಗೀತ ಕೊನೆವರೆಗೂ  ಹೇಗೆ ಹಂಸೆಯು ಹಾಡುವುದೋ ಕೊನೆಯುಸಿರೆಳೆಯುವ ಮುನ್ನ  ಉಲಿಯುತ್ತಿದೆ ಹಾಗೆ ನಿನ್ನ ಸಾಲುಗಳು ಶೋಕಕಥೆಯ ಸವಿಯನ್ನ! (c) 2017, ಸಿ.ಪಿ. ರವಿಕುಮಾರ್