ಮೇರಿಯ ಮೇಕೆಮರಿ (ಶಿಶುಪ್ರಾಸ)
(ಇಂಗ್ಲಿಷ್ ಶಿಶುಪ್ರಾಸದ ಅನುವಾದ) ಮೇರಿ ಹತ್ರ ಇತ್ತಂತೆ ಇತ್ತಂತೆ, ಇತ್ತಂತೆ ಮೇರಿ ಹತ್ರ ಇತ್ತಂತೆ ಮುದ್ದು ಮೇಕೆಮರಿ! ಎಲ್ಲೀಗ್ ಹೋದ್ರೂ ಮೇಕೆ ಮರಿ ಮೇಕೆ ಮರಿ, ಮೇಕೆ ಮರಿ ಅವಳೆಲ್ಲಿಗ್ ಹೋದ್ರೂ ಮೇಕೆ ಮರಿ ಬಂತು ಸವಾರಿ! ಸ್ಕೂಲಿಗೆ ಹೋದಾಗ್ ಒಂದ್ ದಿನ ಒಂದ್ ದಿನ , ಒಂದ್ ದಿನ ಸ್ಕೂಲಿಗೆ ಹೋದಾಗ್ ಒಂದ್ ದಿನ ಮೇಕೇನೂ ಹೋಯ್ತು ರೀ! ಕೋಪ ಬಂತು ಟೀಚರ್ಗೆ ಟೀಚರ್ಗೆ, ಟೀಚರ್ಗೆ ಕೋಪ ಬಂತು ಟೀಚರ್ಗೆ ಮ್ಯಾ ಮ್ಯಾ ಮ್ಯಾಮ್ ಸಾರಿ! - ಸಿ. ಪಿ. ರವಿಕುಮಾರ್