ಪೋಸ್ಟ್‌ಗಳು

History ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅನ್ವೇಷಕರು (ಅನುವಾದಿತ ಕವಿತೆ)

ಇಮೇಜ್
 ಅನ್ವೇಷಕರು ಮೂಲ: ಪಾಬ್ಲೋ ನೆರುಡಾ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಉತ್ತರದಿಂದ ತಂದನು ಅಲ್ಮಾಗ್ರೋ ಗುಡುಗು ಮಿಂಚಿನ ವಂಕಿ. ಮತ್ತು ಭೂಪಟದ ಮೇಲೆ ಬಾಗಿದಂತೆ ಕುಳಿತನು ಹಗಲೂರಾತ್ರಿ ಅತ್ತ ಹಿನ್ನೆಲೆಯಲ್ಲಿ ಬೆಳಗುತ್ತಿದ್ದಾಗ ಆಗಸವನ್ನು ವಿಸ್ಫೋಟಗಳು. ದತ್ತೂರಿಯ ನೆರಳು ಅವನು, ಮುಳ್ಳುಗಿಡದ ಅಂಟಿನ ನೆರಳು ಐತಂದು ಸ್ಪೇನ್ ದೇಶದಿಂದ ಐಕ್ಯನಾದನು ಒಣಕಲು ಆಕೃತಿಯಲ್ಲಿ ಕತ್ತು ಬಾಗಿಸಿ ಗಮನಿಸುತ್ತಾ ಭೂಮಿಯ ವ್ರಣಿತ ಹುನ್ನಾರಗಳನ್ನು. ಕತ್ತಲರಾತ್ರಿ, ಹಿಮ ಮತ್ತು ಉಸುಕು ಇವುಗಳಿಂದ ಆದದ್ದು  ನನ್ನ ತೆಳ್ಳನೆಯ ಪಿತೃಭೂಮಿ,  ಮೌನ ಆವರಿಸಿದೆ ಅದರ ಉದ್ದನೆಯ ಅಂಚನ್ನು. ಅದರ  ಕಡಲಗಡ್ಡದಿಂದ ಉಕ್ಕುತ್ತದೆ ನೊರೆ ಅದರ ಒಡಲನ್ನು ತುಂಬಿದೆ ಇದ್ದಲು ರಹಸ್ಯಮಯ ಮುತ್ತುಗಳಂತೆ. ಚಿನ್ನ ಉರಿಯುವುದು ಅದರ ಕೈಬೆರಳಲ್ಲಿ ಕೆಂಡದಂತೆ. ಬೆಳ್ಳಿ ಬೀರುವುದು ನಸುಬೆಳಕು  ಹಸಿರುಚಂದ್ರಮನಂತೆ ಈ ಸ್ಮಶಾನಭೂಮಿಯ ನೆರಳ ಮೇಲೆ. ಸ್ಪೇನ್ ದೇಶದಿಂದ ಬಂದು  ಗುಲಾಬಿಯ ಬಳಿಯಲ್ಲಿ ತೈಲದ ಬಳಿಯಲ್ಲಿ, ದ್ರಾಕ್ಷಾರಸದ ಬಳಿಯಲ್ಲಿ,  ವೃದ್ಧ ಆಕಾಶದ ಬಳಿಯಲ್ಲಿ  ಕೂತವನಿಗೆ  ಅರಿವಿಲ್ಲ ಒಂದು  ದಿನ  ಕಡಲಹದ್ದಿನ ಲದ್ದಿಯಿಂದ ಮೇಲೆದ್ದು ಬರಬಹುದು ಇಂಥದ್ದೊಂದು ಕೋಪಾವಿಷ್ಟ ಶಿಲೆ ಎಂದು.

ಐತಿಹಾಸಿಕ ನೋಟ

ಇಮೇಜ್
 ಮೂಲ ಕವಿತೆ: ಕ್ಯಾರಲ್ ಹ್ಯಾಮಿಲ್ಟನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನೇರನಡೆಯನ್ನು  ನಾವೆಲ್ಲರೂ  ಮರೆತಿದ್ದೇವೆಂಬುದು ಸುಳ್ಳು ಬಹುಶಃ ಅದರ ಹಿಂದೆ ಬಿದ್ದಿದ್ದೇವೆ ಲಗುಬಗೆಯಿಂದ ಹಿಂದೆಂದೂ ಇಲ್ಲದಷ್ಟು.   ಉದಾಹರಣೆಗೆ ಟಿವಿಯಲ್ಲಿ ವ್ಯಾಖ್ಯಾನ ಮಾಡಲು ಬರುವವರ ಮನೆಯಲ್ಲಿ ಅವರ ಹಿಂದಿರುವ ಕಪಾಟುಗಳಲ್ಲಿ ಕಾಣುವ ಪುಸ್ತಕಗಳನ್ನು ನೋಡಿ ಎಲ್ಲದರ ಬೆನ್ನೆಲುಬು ನೇರ, ಅಂದವಾದ ಜೋಡಣೆ, ಎಲ್ಲೂ ಕಾಣದು ಯಾವ ಗೊಂದಲ ಎಲ್ಲೂ ಕಾಣದು ಮಾಸಿದ ರಕ್ಷಾಕವಚ. ಇಷ್ಟಾದರೂ ನಾವು ಉತ್ಸಾಹದಿಂದ ಪ್ರತಿಪಾದಿಸಲು ಆಯ್ದುಕೊಳ್ಳುವ ಕಟ್ಟಾ ಸತ್ಯಗಳು ವಿರುದ್ಧ ಧ್ರುವಗಳು. ಇತಿಹಾಸದಲ್ಲಿ ಇದು ಮೊದಲ ಸಲವೇನಲ್ಲ ಬಿಡಿ.   ಬಿಗ್ ಬ್ಯಾಂಗ್ ನಂತರ ಕ್ವಾರ್ಕುಗಳು ಮಾಡಿದಹಾಗೆ  ನಾವು ಎಷ್ಟೇ ಅಂಟಿಕೊಂಡರೂ ಘರ್ಷಿಸಿದರೂ ನಮ್ಮ ಅಡ್ಡಾದಿಡ್ಡಿ ನಡೆಗಳು ಹೊತ್ತಿಸುವ ಮುನ್ನ ಬೆಳಕು  ನಾವು ಏನು ಮರೆಯುತ್ತೇವೆ ಎಂದರೆ,  ಮುನ್ನುಗ್ಗುವಾಗ ನಾವು ಎಷ್ಟೇ ಅಲಕ್ಷಿಸಿದರೂ, ಸತ್ಯದ ಧಾರಕರಾದ ನಾವು ಮರೆಯುತ್ತೇವೆ ಬಗ್ಗಲು,  ಮರೆಯುತ್ತೇವೆ ಕುತೂಹಲಗೊಳ್ಳಲು, ಮರೆಯುತ್ತೇವೆ ನಮ್ಮ ಅರ್ಧಮುಗಿದ ಕೆಲಸದ ಅವಶೇಷಗಳನ್ನು ಒಂದು ತೆರೆದ ಕಿಟಕಿಯ ಪಕ್ಕದಲ್ಲಿಡಲು.

ಇತಿಹಾಸಕ್ಕೆ ವಿದಾಯ

ಇಮೇಜ್
ಸಿ ಪಿ ರವಿಕುಮಾರ್  ಯಾರಾದರೂ ನನ್ನನ್ನು ಮಾಡಿದರೆ ಶಿಕ್ಷಣ ಸಚಿವ ತಕ್ಷಣ ಮಾಡುವೆನು ಒಂದು ಅತಿಮುಖ್ಯ ಕೆಲಸ! ಸಿಲಬಸ್ ಪುಸ್ತಕದಿಂದ ಹೊಡೆಸಿಹಾಕಿಬಿಡುವೆ ಹಿಸ್ಟರಿ, ಚರಿತ್ರೆ, ಇತಿಹಾಸ. ಆಗುವುದೇ ಇಲ್ಲ ಆಗ ಇತಿಹಾಸದ ಪುನರಾವರ್ತನೆ ಮಾಯವೇ ಆಗಿಬಿಡುವುದು ದ್ವೇಷ.  ಮಾಗದಂತೆ ಎಂದೂ ನೂರಾರು ವರ್ಷದ ಗಾಯ ಕಿತ್ತುತ್ತಲೇ ಇರುವ ಇತಿಹಾಸದ ಪಾಠಗಳು! ಎಂದೋ ಉರಿದ ಅಗ್ನಿಗೆ ಇನ್ನಷ್ಟು ಉರುವಲನ್ನಿಟ್ಟು ಕೆದಕುವ ಈ ಆಟಗಳು! ಹಳೆಯ ತಪ್ಪುಗಳನ್ನು ಮತ್ತೆ ಮಾಡದೇ ಇರುವುದು ಇತಿಹಾಸದಿಂದ ಕಲಿಯಬೇಕಾದ ಪಾಠ. ನಮಗಿಲ್ಲ ಅದಕ್ಕೆ ಬೇಕಾದ ತಾಳ್ಮೆ ಮತ್ತು ತಯಾರಿ ಆದ್ದರಿಂದ ಹೇಳೋಣ ಇತಿಹಾಸಕ್ಕೆ ಟಾಟಾ. -- ಸಿ ಪಿ ರವಿಕುಮಾರ್

ಇತಿಹಾಸ

ಇಮೇಜ್
ಸಿ ಪಿ ರವಿಕುಮಾರ್  ನಾಣ್ಯದ ಒಂದು ಮುಖ ಸಾಚಾ, ಇನ್ನೊಂದು ಮುಖ ಖೋಟಾ. ಅವನು ಸಾಚಾ ಮುಖ ಮೇಲಿಟ್ಟು ಕೊಡುತ್ತಾನೆ, ಹೇಗೋ ನಡೆಯಬಹುದು ಆಟ. ನಾಣ್ಯಕ್ಕೆ ಬದಲಾಗಿ ಅವನಿಗೆ ಸಿಕ್ಕಿದ್ದು - ಖೋಟಾ ಮಾಲು + ಸವಕಲು ನಾಣ್ಯ ಚಿಲ್ಲರೆ. ನಿನ್ನದು ಖೋಟಾ ಎಂದು ಜಗಳವಾಡುತ್ತಾರೆ, ಉರಿದುಬೀಳುತ್ತಾರೆ ಮಾತೆತ್ತಿದರೆ. ಯೋಚಿಸಿದರೆ ತೋರುವುದು ನಿಮಗೆ, ಸ್ವಲ್ಪ ಹೀಗೇ ಅಲ್ಲವೇ ನಮ್ಮ ಇತಿಹಾಸ? ಸಾಚಾ ಮುಖ ಕಾಣಿಸಿತೆ ನಿನಗೆ, ಅವನಿಗೆ ಖೋಟಾಮುಖವಾಗುತ್ತಿದೆ ಭಾಸ. ಹಳೆಯದನ್ನೆಲ್ಲಾ ತೆಗೆದು ಪ್ರತಿನಿತ್ಯವೂ ಜಗಳ, ಗೊತ್ತಾಗುತ್ತಿಲ್ಲ ನಾನು ಅಳಲಾ ಅಥವಾ ನಗಲಾ? ಸಿ ಪಿ ರವಿಕುಮಾರ್