ಪೋಸ್ಟ್‌ಗಳು

Women's Poetry ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒಂದು ಪುರಾತನ ಸಂಜ್ಞೆ

ಇಮೇಜ್
  ಒಂದು ಪುರಾತನ ಸಂಜ್ಞೆ ಮೂಲ: ಎಡ್ನಾ ಸೆಂಟ್ ವಿನ್ಸೆಂಟ್ ಮಿಲೇ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಹಿನ್ನೆಲೆ: ಯೂಲಿಸಿಸ್ ಯುದ್ಧಕ್ಕೆ ಹೋದಾಗ ಅವನ ಹೆಂಡತಿ ಪಿನೊಲಪಿ ಅವನಿಗಾಗಿ ಕಾಯುತ್ತಾಳೆ. ವರ್ಷಗಳು ಕಳೆದರೂ ಅವನು ಹಿಂತಿರುಗಿದೇ ಹೋದಾಗ ಅನೇಕರು ಅವಳನ್ನು ವರಿಸಲು ಮುಂದೆ ಬರುತ್ತಾರೆ. ಅವಳು ಒಂದು ವಸ್ತ್ರವನ್ನು ಹೆಣೆಯಲು ಪ್ರಾರಂಭಿಸಿ ಹೆಣಿಗೆ ಮುಗಿದಾಗ ತಾನು ಮತ್ತೊಮ್ಮೆ ಮದುವೆ ಆಗುತ್ತೇನೆ ಎಂದು ಆಶ್ವಾಸನೆ ನೀಡುತ್ತಾಳೆ. ಬೆಳಗ್ಗೆ ವಸ್ತ್ರ ಹೆಣೆದು ರಾತ್ರಿ ಅದನ್ನು ಬಿಚ್ಚಿಬಿಡುತ್ತಾಳೆ. ಹೀಗಾಗಿ ವಸ್ತ್ರದ ಹೆಣಿಗೆ ಮುಗಿಯುವುದೇ ಇಲ್ಲ. ಕೊನೆಗೆ ಯೂಲಿಸಿಸ್ ಹಿಂದಿರುಗಿ ಬಂದಾಗ ತನ್ನ ಪತ್ರ್ನಿ ತನಗೆ ನಿಷ್ಠೆಯಿಂದ ಕಾಯುವುದನ್ನು ಕಂಡು ಭಾವುಕನಾಗುತ್ತಾನೆ. (ಯುದ್ಧದಿಂದ ಹಿಂದಿರುಗುವಾಗ ಅವನು  ಪರಸ್ತ್ರೀಯರೊಂದಿಗೆ ಸಂಬಂಧ ಹೊಂದಿರುತ್ತಾನೆ.) ಸೆರಗಿನ ತುದಿಯಿಂದ ಒರೆಸಿಕೊಂಡಾಗ ಒದ್ದೆಗಣ್ಣು  ಯೋಚಿಸಿದೆ, ಇದನ್ನೇ ಮಾಡಿದಳು ಪಿನೋಲಪಿ ಸಹ ಒಮ್ಮೆಯಲ್ಲ  ದಿನವಿಡೀ ಮಾಡಿದಳು ಇದನ್ನು ಸುಲಭವೇ ಹೇಳಿ ದಿನವಿಡೀ ಹೆಣೆಯುವುದು ವಸ್ತ್ರ ಮತ್ತು ಇಡೀ ರಾತ್ರಿ ಬಿಚ್ಚುವುದು ಹಾಕಿದ ಹೆಣಿಗೆ? ಸೋತುಹೋಗುವುವು ತೋಳು, ಬಿಗಿಯುವುದು ಕುತ್ತಿಗೆ  ಯಾವಾಗ ಆದೀತೋ ಎಂದು ಕಾದು ಬೆಳಗಿನ ಹೊತ್ತಿಗೆ ಎಲ್ಲಿರುವನೋ ಗಂಡ ಮತ್ತು ಬರುವನೋ ಎಂದಿಗೆ  ಎಂದು ಪರಿತಪಿಸಿ ವರ್ಷಗಟ್ಟಲೆ  ದುಃಖ ಉಮ್ಮಳಿಸಿ ಒಮ್ಮೆಲೇ ಮತ್ತೆ ಬೇರೇ...

ಚಿಕ್ಕಮ್ಮಂದಿರು

ಇಮೇಜ್
ಮೂಲ ಹಿಂದಿ ಕವಿತೆ - ಅನಾಮಿಕಾ  ಕವಿಕಾವ್ಯ ಪರಿಚಯ - ಬಿಹಾರದ ಮುಜಫ್ಫುರ್ ಪುರದವರಾಡ ಅನಾಮಿಕಾ (1961-) ಹಿಂದಿಯ ಜನಪ್ರಿಯ ಕವಯಿತ್ರಿ.  ಇವರ ಹಲವಾರು ಕವನಸಂಗ್ರಹಗಳು ಪ್ರಕಟವಾಗಿವೆ.  ಇಂಗ್ಲಿಷ್ ಭಾಷೆಯಿಂದ ಹಿಂದಿಗೆ ಕವಿತೆಗಳನ್ನು ಅನುವಾದಿಸಿದ್ದಾರೆ. ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ.  L ಕನ್ನಡಕ್ಕೆ - ಸಿ ಪಿ ರವಿಕುಮಾರ್  ಮಳೆಯ ನಡುವೆ ಬಿಸಿಲಿನ ಹಾಗೆ ಬರುತ್ತಾರೆ ಇವರು ಒಂದಿಷ್ಟು ಹೊತ್ತು, ಒಮ್ಮೆಲೇ ಕೈಯಲ್ಲಿ ಹೆಣೆದ ಸ್ವೆಟರ್, ಕಾಮನಬಿಲ್ಲು, ಎಳ್ಳುಂಡೆ,  ಭಾರೀಸೀರೆ  ಹೊತ್ತುಕೊಂಡು ಬರುತ್ತಾರೆ ಉಡುಗೊರೆ  ಉಯ್ಯಾಲೆ ತೂಗಲು. ವಾಕರಿಸಿದ ಸದ್ದು  ಹೇಗೋ ಪತ್ತೆಹಚ್ಚಿ  ಹೊಟ್ಟೆಯ ಮೇಲೆ ಕೈಯಾಡಿಸಿ  ಪಡೆದುಕೊಳ್ಳುತ್ತಾರೆ ಇಲ್ಲಿಯವರೆಗಿನ ವರದಿ  ಋತುಚಕ್ರ, ಹಾಸಿಗೆ ಅನಂತರ ಚಿಲ್ಲರೆ ಖಿನ್ನತೆಗಳ ಸರದಿ.  ಗುಡಿಸುತ್ತಾರೆ ಜೇಡರ ಬಲೆ, ಓರೆಯಾಗಿಡುತ್ತಾರೆ ಡಬ್ಬಿ, ಸಿಕ್ಕಟ್ಟಿಗೆಯಿಂದ  ಸಿಕ್ಕುಗಳನ್ನು ತೀಡಿ  ಬಿಡಿಸುತ್ತಾರೆ  ಹೆಣೆಯುತ್ತಾರೆ ಜಡೆ-ಗಿಡೆ  ಬೈಯುತ್ತಾರೆ - ನೀನೊಬ್ಬಳು  ನಿನಗೆ ಯಾವಾಗಲೂ ಏನೋ ಖಯಾಲಿ  ಕೂದಲಿನ ಸಿಕ್ಕು ಕೂಡಾ ಬಿಡಿಸಿಕೊಳ್ಳವಲ್ಲಿ.  ಕೂದಲಿನ ನೆಪದಲ್ಲಿ   ಜೀವನದ ಗಂಟುಗಳನ್ನು ಬಿಡಿಸುತ್ತಾರೆ  ಪರಿಹಾಸ್ಯ ಮಾಡುತ್ತಲೇ ಹೇಳುತ್ತಾರೆ ಕಥೆಗಳು  ನಗುತ್ತಾ ...

ಹೆಣ್ಣು ಜಾತಿ (ಅನುವಾದಿತ ಕವಿತೆ)

ಇಮೇಜ್
  ಕೆಲವೊಮ್ಮೆ ನಿನಗೆ ಮಾತಾಡಬೇಕು ಎನ್ನಿಸುವುದು ಪ್ರೀತಿಯ ಕುರಿತು ಮತ್ತು ಹತಾಶೆಯ ಬಗ್ಗೆ ಹಾಗೂ ಮಕ್ಕಳ ಕೃತಘ್ನತೆಯ ವಿಷಯ. ಆಗ ಗಂಡಸರು ಏನೂ ಪ್ರಯೋಜನವಿಲ್ಲ. ನಿಮಗೆ ಬೇಕಾದದ್ದು ನಿಮ್ಮ ತಾಯಿ ಅಥವಾ ಸೋದರಿ ಅಥವಾ ಸ್ಕೂಲಿನಲ್ಲಿ ನಿಮ್ಮೊಂದಿಗೆ ಓದಿದ ಹುಡುಗಿ ನೀವು ಮೊದಲಸಲ ನಿಮ್ಮ ಹೃದಯವನ್ನು ಕೊಟ್ಟವಳು ಮತ್ತು ಅವಳ ಮೊದಲ ಮಗು - ಹೆಣ್ಣು - ಹಾಗೂ ನಿಮ್ಮ ಎರಡನೆಯದು. ಅವರೊಂದಿಗೆ ಕುಳಿತು ಮಾತಾಡುವಾಗ ಅವಳು ಹೊಲಿಗೆ ಹಾಕುವಾಗ ನೀವು ಕುಳಿತು ಗುಟುಕರಿಸುತ್ತಾ ಕೆದಕುವಿರಿ ಅಕ್ಕಿಯ ಧಾರಣೆ ಬಗ್ಗೆ ಚಹಾ ಬೆಲೆ ಕುರಿತು ಮತ್ತು ಗಿಣ್ಣು ಎಷ್ಟು ದುರ್ಲಭವೆಂಬ ವಿಷಯ. ನಿಮ್ಮಿಬ್ಬರಿಗೂ ಗೊತ್ತು ನಿಮ್ಮಿಬ್ಬರ ಈ  ಮಾತುಕತೆ ಪ್ರೇಮ ಮತ್ತು ಹತಾಶೆ ಕುರಿತು ಹಾಗೂ ಮಕ್ಕಳ ಕೃತಘ್ನತೆ.  ಮೂಲ: ಗೌರಿ ದೇಶಪಾಂಡೆ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್

ಕಾವ್ಯದಲ್ಲಿ ಮಹಿಳೆಯ ದನಿ

ಇಮೇಜ್
ಮ ಹಿಳಾದಿವಸದಂದು ಹಿಂದಿನ ಕೆಲವು ಬ್ಲಾಗ್ ಬರಹಗಳನ್ನು ಒಟ್ಟಿಗೆ ಕ್ರೋಢೀಕರಿಸಿ ಕೊಡುತ್ತಿದ್ದೇನೆ.  ಇವೆಲ್ಲವೂ ವಿವಿಧ ಕವಯಿತ್ರಿಯರ ರಚನೆಗಳ ಅನುವಾದಗಳು.  ಇವರು ವಿವಿಧ ದೇಶಗಳ ಕವಯಿತ್ರಿಯರು. ಇವರ ದೃಷ್ಟಿಕೋಣಗಳು ವಿಭಿನ್ನ.  ನಿಮಗೆ ಇವುಗಳಲ್ಲಿ ಬೇರೆ ಹೊಳಹುಗಳು ಕಾಣಬಹುದು.  ಅವಿವಾಹಿತೆಯರು - ಅನಾಮಿಕಾ ಅವರ ಒಂದು ಹಿಂದಿ ಕವಿತೆಯ ಅನುವಾದ  ಅಮ್ಮಾ ನಾನು ಬಚಾವಾದೆ - ಜೆಹ್ರಾ ನಿಗಾಹ್ ಅವರ ಒಂದು ಉರ್ದು ಕವಿತೆಯ ಅನುವಾದ  ಕನ್ನಡಿ - ಸಿಲ್ವಿಯಾ ಪ್ಲಾತ್ ಅವರ ಇಂಗ್ಲಿಷ್ ಕವಿತೆಯ ಅನುವಾದ  ಒಬ್ಬಂಟಿ - ಮಾಯಾ ಆಂಜೆಲೋ ಅವರ ಇಂಗ್ಲಿಷ್ ಕವಿತೆಯ ಅನುವಾದ  ಅವಳ ಹಾಡು - ವರ್ಡ್ಸ್ ವರ್ತ್ ಅವರ ಇಂಗ್ಲಿಷ್ ಕವಿತೆಯ ಅನುವಾದ  ಉನ್ಮಾದ - ಟಿ.ಎಸ್. ಈಲಿಯಟ್ ಅವರ ಕವಿತೆಯ ಅನುವಾದ  ಸ್ತ್ರೀಯರು - ಅನಾಮಿಕಾ ಅವರ ಹಿಂದಿ ಕವಿತೆಯ ಅನುವಾದ  ಹೆಣ್ಣು ಕೆಲಸ - ಮಾಯಾ ಆಂಜೆಲೋ ಅವರ ಇಂಗ್ಲಿಷ್ ಕವಿತೆಯ ಅನುವಾದ   ಕಟ್ಟಿ ಕಾಲಿಗೆ ಗೆಜ್ಜೆ - ಮೀರಾ ಬಾಯಿಯ ರಚನೆಯ ಅನುವಾದ  ಒಂದು ದುಃಖದಂತ(ಹ) ಕಥೆ - ಡೊರೊತಿ ಪಾರ್ಕರ್ ಅವರ ಕವಿತೆಯ ಅನುವಾದ  ಹೀಗೇ ಮೆಲುಕು ಹಾಕುತ್ತಿದ್ದೆ ಥಿಯೋಕ್ರೆಟಿಸ್ ಹಾಡಿದ ಪಂಕ್ತಿ  ನಿನಗಾಗಿ ತಂದಿರುವೆ ಈ ವೈಶಾಖ - ಕುಟ್ಟಿ ರೇವತಿ ಅವರ ಒಂದು...

ಅವಿವಾಹಿತೆಯರು

ಇಮೇಜ್
ಮೂಲ ಹಿಂದಿ ರಚನೆ... ಅನಾಮಿಕಾ ಕನ್ನಡಕ್ಕೆ ... ಸಿ.ಪಿ.ರವಿಕುಮಾರ್ "ಅಮ್ಮಾ ಯಾರೊಂದಿಗೆ ಹೇಳಿಕೊಳ್ಳಲಿ ಮನಸ್ಸಿನ ಪೀಡೆ!" ಈ ಹಾಡನ್ನು ಕೇಳಿದಾಗೆಲ್ಲಾ ಯೋಚನೆಗೆ ಬೀಳುತ್ತೇನೆ, ಇನ್ನೆಂಥ ಪೀಡೆ ಇರಬಹುದು, ಅಮ್ಮನೊಂದಿಗೂ ಹೇಳಿಕೊಳ್ಳಲಾಗದ್ದು? ಇಷ್ಟಾಗಿ ಗೀತೆಗಳಲ್ಲಿ ಸಂಬೋಧನೆ ಸಾಧಾರಣವಾಗಿ ಅಮ್ಮನಿಗೆ ತಾನೇ! ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ಹಿಂದಿರುವ ಢಾಬಾ! ಹತ್ತು ವರ್ಷದ ಛೋಟೂ ಮುಸುರೆ ತಿಕ್ಕುತ್ತಾ ಹಳೇ ಟೇಪ್ ರಿಕಾರ್ಡರ್ ಮೇಲೆ ಅದೇನು ಯೋಚಿಸಿಕೊಂಡು ಹಾಕುತ್ತಾನೋ ಈ ಹಾಡನ್ನು ಮತ್ತೆಮತ್ತೆ! ಅವನಲ್ಲೂ ಲಕ್ಷಣಗಳು ಕಾಣುತ್ತವೆ ಮುಂದೆ ಅವನೂ ಆಗುವನೇನೋ ಒಬ್ಬ ಮನಮೋಹನ ಪುರುಷ ಪುಟ್ಟ ಮೀರಾ ಒಬ್ಬಳ ಒಲವಿನ ಆಧಾರ, ಅಷ್ಟು ಹಠಮಾರಿಯಲ್ಲ, ಸ್ವಲ್ಪ ಮಧುರ! ವರ್ಕಿಂಗ್ ವಿಮೆನ್ಸ್ ಹಾಸ್ಟೆಲಿನ ಮಹಿಳೆಯರು ನಾವು ಹುಡುಕುತ್ತಲೇ ಇದ್ದುಬಿಟ್ಟೆವು. ಒಬ್ಬನಾದರೂ ಕಾಣುವನೇ ಪುರುಷ ಅವನನ್ನು ಕಂಡು ಮನದಲ್ಲಿ ಹುಟ್ಟುವುದೇ ಪ್ರೇಮಿಸುವ ಸಾಹಸ! ಸಿಕ್ಕಲಿಲ್ಲವೆಂದಲ್ಲ, ಆದರೆ ಎಂಥವರು ಸಿಕ್ಕರು! ಜ್ಞಾನಿಗಳಲ್ಲ, ಪಂಡಿತರು ನಿಷ್ಠಾವಂತರಲ್ಲ, ಬಾಲಬಡುಕರು ಸಾಹಸಿಗಳಲ್ಲ, ಜಗಳಗಂಟರು ದೃಢ ಪ್ರತಿಜ್ಞೆ ಎಲ್ಲಿ ಬಂತು, ಶುದ್ಧ ಮೊಂಡರು ಪ್ರಭಾವಿಗಳಲ್ಲ ಬರೀ ಮಾತಿನಮಲ್ಲರು ಸ್ನೇಹಿತರಲ್ಲ ಯಜಮಾನರು ಸಾಮಾಜಿಕರಲ್ಲ, ಏಕಾಂತಭೀರುಗಳು ಧಾರ್ಮಿಕರಲ್ಲ, ಸಂಪ್ರದಾಯವಾದಿಗಳು ಪ್ರತಿಪಕ್ಷ...

ಸ್ತ್ರೀಯರು

ಇಮೇಜ್
ಮೂಲ ಹಿಂದಿ ಕವಿತೆ - ಅನಾಮಿಕಾ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನಮ್ಮನ್ನು ಓದಲಾಯಿತು  ಕಡಲೆಪುರಿ ಸುತ್ತಿಕೊಡಲು ಬಳಸುತ್ತಾರಲ್ಲ  ಮಕ್ಕಳ ನೋಟ್ ಪುಸ್ತಕದ ಹರಿದ ಹಾಳೆಗಳು,  ಹಾಗೆ.  ನಮ್ಮನ್ನು ನೋಡಿದ್ದು ಹೇಗೆಂದರೆ  ಬೆಳ್ಳಂಬೆಳಗ್ಗೆ ಅಲಾರಂ ಹೊಡೆದಾಗ ನಿದ್ದೆಗಣ್ಣಿನಲ್ಲಿ ಕೈಗಡಿಯಾರದ ಕಡೆ ನೋಡಿದಂತೆ. ನಮ್ಮನ್ನು ಕೇಳಿದ್ದು  ಲಹರಿಯ ಮನಸ್ಸಿನಿಂದ, ಅಗ್ಗದ ಕ್ಯಾಸೆಟ್ ಹಚ್ಚಿ  ಸಿನಿಮಾಹಾಡು ಕೇಳುತ್ತಾರಲ್ಲ  ನೂಕುನುಗ್ಗಲಿನ ಬಸ್ಸಿನಲ್ಲಿ,  ಹಾಗೆ.  ನಮ್ಮನ್ನು ಭೋಗಿಸಿದ್ದು  ಬಹಳ ದೂರದ ನಂಟರ ದುಃಖದ ಹಾಗೆ.  ಒಂದು ದಿನ ನಾವು ಅಂದೆವು - ನಾವೂ ಮನುಷ್ಯರು. ನಮ್ಮನ್ನು ಲಕ್ಷಣವಾಗಿ ಓದಿ  ಹೇಗೆ ಬಿ.ಎ. ಮುಗಿಸಿ ನೌಕರಿ ಹುಡುಕುವಾಗ  ಮೊದಲ ಜಾಹೀರಾತಿನ ಅಕ್ಷರ ಅಕ್ಷರವನ್ನೂ  ಬಿಡದೇ ಓದಿದಿರಲ್ಲ, ಹಾಗೆ. ನೋಡಿ ನಮ್ಮ ಕಡೆ  ಚಳಿಯಲ್ಲಿ ನಡುಗುತ್ತಾ  ದೂರದಲ್ಲಿ ಉರಿಯುವ ಬೆಂಕಿಯನ್ನು ನೋಡಿದ ಹಾಗೆ.  ನಮ್ಮನ್ನು ಕೇಳಿಸಿಕೊಳ್ಳಿ   ಅನಂತವನ್ನು ಕೇಳಿಸಿಕೊಂಡಂತೆ. ನಮ್ಮನ್ನು ಅರ್ಥೈಸಿಕೊಳ್ಳಿ  ಹೊಸದಾಗಿ ಕಲಿತ ಭಾಷೆಯನ್ನು ಅರ್ಥೈಸಿಕೊಂಡಂತೆ. ಇಷ್ಟು ಕೇಳಿದ್ದೇ ತಡ  ತುಟಿಗಳಿಂದ ಜೋತಾಡುತ್ತಿದ್ದ ಒಂದು ಅದೃಶ್ಯ ಟೊಂಗೆಯಿಂ...

ಅವಿವಾಹಿತೆಯರು

ಇಮೇಜ್
ಮೂಲ ಹಿಂದಿ ಕವಿತೆ - ಅನಾಮಿಕಾ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಅಮ್ಮಾ ಯಾರೊಂದಿಗೆ ಹೇಳಿಕೊಳ್ಳಲಿ ಮನಸ್ಸಿನ ಪೀಡೆ! ಮೀರಾಬಾಯಿ, ನಿನ್ನ ಈ ರಚನೆ ಕೇಳಿದಾಗೆಲ್ಲಾ ಯೋಚನೆಗೆ ಬೀಳುತ್ತೇನೆ. ಇನ್ನೆಂಥ ಪೀಡೆ ಇರಬಹುದು, ಅಮ್ಮನೊಂದಿಗೂ ಹೇಳಿಕೊಳ್ಳಲಾಗದ್ದು? ಇಷ್ಟಾಗಿ ಗೀತೆಗಳಲ್ಲಿ ಸಂಬೋಧನೆ  ಸಾಧಾರಣವಾಗಿ ಅಮ್ಮನಿಗೆ ತಾನೇ! ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ಹಿಂದಿರುವ ಢಾಬಾ! ಹತ್ತು ವರ್ಷದ ಛೋಟೂ ಮುಸುರೆ ತಿಕ್ಕುತ್ತಾ ಹಳೇ ಟೇಪ್ ರಿಕಾರ್ಡರ್ ಮೇಲೆ ಅದೇನು ಯೋಚಿಸಿಕೊಂಡು ಹಾಕುತ್ತಾನೋ ನಿನ್ನ ಹಾಡನ್ನು ಮತ್ತೆಮತ್ತೆ! ಅವನಲ್ಲೂ ಲಕ್ಷ್ಮಣಗಳು ಕಾಣುತ್ತವೆ ಮುಂದೆ ಅವನೂ ಆಗುವನೇನೋ ಒಬ್ಬ ಮನಮೋಹನ ಪುರುಷ ಪುಟ್ಟ ಮೀರಾ ಒಬ್ಬಳ ಒಲವಿನ ಆಧಾರ, ಅಷ್ಟು ಹಠಮಾರಿಯಲ್ಲ, ಸ್ವಲ್ಪ ಮಧುರ! ವರ್ಕಿಂಗ್ ವಿಮೆನ್ಸ್ ಹಾಸ್ಟೆಲಿನ ಮಹಿಳೆಯರು ನಾವು ಹುಡುಕುತ್ತಲೇ ಇದ್ದುಬಿಟ್ಟೆವು ಒಬ್ಬನಾದರೂ ಕಾಣುವನೇ ಪುರುಷ ಅವನನ್ನು ಕಂಡು ಮನದಲ್ಲಿ ಹುಟ್ಟುವುದೇ ಪ್ರೇಮಿಸುವ ಸಾಹಸ! ಸಿಕ್ಕಲಿಲ್ಲವೆಂದಲ್ಲ, ಆದರೆ ಎಂಥವರು ಸಿಕ್ಕರು! ಜ್ಞಾನಿಗಳಲ್ಲ, ಪಂಡಿತರು ನಿಷ್ಠಾವಂತರಲ್ಲ, ಬಾಲಬಡುಕರು ಸಾಹಸಿಗಳಲ್ಲ, ಜಗಳಗಂಟರು ದೃಢ ಪ್ರತಿಜ್ಞೆ ಎಲ್ಲಿ ಬಂತು, ಶುದ್ಧ ಮೊಂಡರು ಪ್ರಭಾವಿಗಳಲ್ಲ ಬರೀ ಮಾತಿನಮಲ್ಲರು ಸ್ನೇಹಿತರಲ್ಲ ಯಜಮಾನರು ಸಾಮಾಜಿಕರಲ್ಲ, ಏಕಾಂತಭೀರುಗಳು ಧಾರ್ಮಿಕರಲ್ಲ, ಸಂಪ್ರದಾಯವಾದಿಗಳು ಪ್ರತಿಪಕ್ಷಿಗಳ ಮೇಲೆ ಸದಾ ದಾಳಿ ಮಾಡಲು ಸಿದ್ಧ ಪ್ರತಿಪಕ...

ಅಮ್ಮಾ ನಾನು ಬಚಾವಾದೆ

ಇಮೇಜ್
ಕವಿತೆ ಓದುವ ಮುನ್ನ:  ಈ ಕವಿತೆಯನ್ನು ಬರೆದ ಜೆಹ್ರಾ ನಿಗಾಹ್ ಪಾಕೀಸ್ತಾನದ ಖ್ಯಾತ ಕವಯಿತ್ರಿ.  ಉರ್ದೂ ಕಾವ್ಯ ಪರಂಪರೆಯಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಕವಯಿತ್ರಿಯರ ಸಾಲಿನಲ್ಲಿ ಇವರದ್ದು ಮುಂಚೂಣಿಯ ಸ್ಥಾನ.  ಭಾರತದ ಹೈದರಾಬಾದಿನಲ್ಲಿ ಹುಟ್ಟಿದ ಜೆಹ್ರಾ ೧೯೪೭ರ ವಿಭಜನೆಯಾದಾಗ ಪಾಕೀಸ್ತಾನಕ್ಕೆ ವಲಸೆ ಹೋಗಬೇಕಾಯಿತು. ಪ್ರಸ್ತುತ ಕವಿತೆಯಲ್ಲಿ ಒಂದು ಹೆಣ್ಣು ಭ್ರೂಣವು ತಾಯಿಯೊಂದಿಗೆ ಮಾತನಾಡುತ್ತಾ "ನಾನು ಹುಟ್ಟದೇ ಇದ್ದದ್ದೇ ಒಳ್ಳೆಯದಾಯಿತು, ಬಚಾವಾದೆ" ಎಂದು ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರಗಳತ್ತ ಗಮನ ಸೆಳೆಯುತ್ತದೆ. ಮೂಲ ಉರ್ದೂ ಕವಯಿತ್ರಿ: ಜೆಹ್ರಾ ನಿಗಾಹ್ (ಪಾಕೀಸ್ತಾನ್)  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ನಾನು ಬಚಾವಾದೆನಮ್ಮ, ಅಮ್ಮಾ ನಾನು ಬಚಾವಾದೆ  ನಿನ್ನ ನೆತ್ತರ ಗೋರಂಟಿಯಲ್ಲಿ ಮಿಂದು  ಕೆಂಪಾಗಿದೆ ನನ್ನ ಕಣವು  ಪ್ರತಿಯೊಂದೂ  ನನಗೆ ದೊರಕಿದ್ದರೂ ಒಂದು ರೂಪ-ಆಕಾರ  ರಕ್ತ ಹರಿಯುತ್ತಿತ್ತು ನರಮಾಂಸಗಳ ಗೂಡಿಗೆ   ಹೊಕ್ಕಿದ್ದರೆ ನನ್ನ ಕಣ್ಣುಗಳಲ್ಲಿ ಬೆಳಕು  ಶೃಂಗಾರಕ್ಕೆ ದೊರಕುತ್ತಿತ್ತು ಆಸಿಡ್ ಕಾಡಿಗೆ ಮಾರಿಬಿಡುತ್ತಿದ್ದರು ನನ್ನನ್ನು ಸಟ್ಟಾ ಬಜಾರಿನಲ್ಲಿ ಎಕ್ಸ್ಚೇಂಜ್ ಆಫರಿಗೆ  ಅಥವಾ ಉಪಯುಕ್ತಳಾಗುತ್ತಿದ್ದೆನೇನೋ  ಮರ್ಯಾದಾ ಹತ್ಯೆಗೆ  ನನ್ನ ಎಲ್ಲಾ ಕನಸ...