ಪೋಸ್ಟ್‌ಗಳು

Jahid Masood ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವ್ಯವಸ್ಥೆ ಬದಲಾಯಿಸುವುದು

ಇಮೇಜ್
ಈ ವ್ಯವಸ್ಥೆಯನ್ನು ಶಾಸಕ ಬದಲಾಯಿಸುವನೆ? ಅವನು ನನ್ನ ವೋಟಿನಿಂದಲೇ ಗೆದ್ದು ಬಂದು ನನ್ನ ಕನಸುಗಳಿಗೇ ತೆರಿಗೆ ಹಾಕುತ್ತಾನೆ. ಬಂಡವಾಳಕೋರ ಬದಲಾಯಿಸುವನೆ ಈ ವ್ಯವಸ್ಥೆ ? ಅವನು ನನ್ನಿಂದ ಹನ್ನೆರಡು ಗಂಟೆ ದುಡಿಸಿ ಎಂಟು ಗಂಟೆಯ ಸಂಬಳದಲ್ಲೂ ಕಡಿತ ಮಾಡುವವನು. ಬುದ್ದಿಜೀವಿ ಬದಲಾಯಿಸಬಲ್ಲನೇ? ಅವನು ಒಂದು ಸೈಟು ಅಥವಾ ವಿದೇಶಪ್ರವಾಸಕ್ಕಾಗಿ ಆಡಳಿತದಲ್ಲಿರುವವರ ಗುಣಗಾನ ಮಾಡಲು ಶಬ್ದಗಳನ್ನು ಸಂಗ್ರಹಿಸುತ್ತಿರುತ್ತಾನೆ. ವ್ಯವಸ್ಥೆಯನ್ನು ವರ್ತಕ ಹೇಗೆ ಬದಲಾಯಿಸಬಲ್ಲ? ಬಜೆಟ್ ಬಂದ ಕೂಡಲೇ ಅದರ ರಿಯಾಯಿತಿಯೆಲ್ಲಾ ತಾನು ಕಬಳಿಸಿ ನನ್ನ ಖಾತೆಗೆ ಬೆಲೆಯೇರಿಕೆಯನ್ನು ಜಮೆ ಮಾಡುವವನು? ಇನ್ನು ಪುಡಾರಿ ವ್ಯವಸ್ಥೆಯನ್ನು ಕಾಪಾಡದೆ ಏನು ಮಾಡಿಯಾನು? ಅದರ ಕೃಪೆಯಿಂದಲ್ಲವೇ ಅವನು ಸರಕಾರಿ ಶಾಲೆ ಡಿಸ್ಪೆನ್ಸರಿಗಳಲ್ಲಿ ತನ್ನ ಆಕಳು ಎಮ್ಮೆ ಕಟ್ಟಿ ಸರ್ಕಾರದ್ದಲ್ಲದ ಮರದ ನೆರಳಲ್ಲಿ ಪಾಠ ಹೇಳುವ ಹಠಮಾರಿ ಶಿಕ್ಷಕನಿಗೆ ಜೀಪ್ ಹಿಂದಕ್ಕೆ ಕಟ್ಟಿ ಎಳೆದೊಯ್ಯುವ ಬೆದರಿಕೆ ಹಾಕಬಲ್ಲ? ನಾನು ಪತ್ರಕರ್ತನನ್ನು ವ್ಯವಸ್ಥೆ ಬದಲಾಯಿಸಲು ಕೋರಿದೆ. ಅವನು ಗುಮಾಸ್ತೆಯ ಜೊತೆ ಕುಳಿತು ಚಹಾ ಹೀರುವುದರಲ್ಲೇ ಮಗ್ನನಾಗಿದ್ದ. ಇದೆಲ್ಲಾ ತಿಳಿದೇ ನಾನು ನನ್ನ ಚಹರೆಯನ್ನು ಮುಂದಿನ ಐದು ವರ್ಷಗಳವರೆಗೆ ಗ್ರಾಮಲೆಕ್ಕಿಗನಿಗೆ ಕೊಟ್ಟುಬಿಡುತ್ತೇನೆ. ಅವನು ಅದನ್ನು ಚಿತ್ರಪುಸ್ತಕದಲ್ಲಿ ಸುತ್ತಿಟ್ಟುಕೊಂಡು ವೋಟಿನ ಚೀಟಿಯಲ್ಲಿ ನನ್ನ ಹೆಬ್ಬೆರಳಿನ ...

ಜೀವಂತ

ಮೂಲ ... ಜಾಹೀದ್ ಮಸೂದ್ ಕನ್ನಡಕ್ಕೆ ... ಸಿ.ಪಿ.ರವಿಕುಮಾರ್ ದಿನಕ್ಕೆ ನೂರು ರೂಪಾಯಿ ನನ್ನ ಸಂಪಾದನೆ. ಮಗನಿಗೆ ಟಯರ್ ಪಂಚರ್ ಅಂಗಡಿಯಲ್ಲಿ ಕೆಲಸ. ಮಾಲೀಕನ ಬೈಗುಳ ಮತ್ತು ಏಟುಗಳಲ್ಲದೆ ದಿನಕ್ಕೆ ಮೂವತ್ತು ರೂಪಾಯಿ ಗಳಿಸುತ್ತಾನೆ. ಹೆಂಡತಿ ಮತ್ತು ಒಂಬತ್ತು ವರ್ಷದ ಮಗಳು ನಾಲ್ಕು ಮನೆಯಲ್ಲಿ ಕಸಮುಸುರೆ ಮಾಡುತ್ತಾರೆ. ಈ ನನ್ನ ದೊಡ್ಡ ಕುಟುಂಬದ ಎಲ್ಲರೂ ಒಟ್ಟಿಗೆ ಕೂತು ನಾಷ್ಟಾ ಮಾಡಿದ್ದೋ ರಾತ್ರಿ ಊಟದ ನಂತರ ಮಾತಾಡುತ್ತಾ ಕುಳಿತದ್ದೋ ನನಗೆ ನೆನಪಿಲ್ಲ. ನನ್ನ ಮಕ್ಕಳು ನನ್ನಿಂದ ಬೇಡುವುದಿಲ್ಲ ಈದ್ ಇನಾಮು. ಹೆಂಡತಿ ಕೇಳುವುದಿಲ್ಲ ಕಿವಿಯೋಲೆ ಅಥವಾ ಹೂಮಾಲೆಯನ್ನು. ನಾವು ಊಟ ಮಾಡುವುದಕ್ಕಾಗಿ ಸಾಯುತ್ತೇವೆ. ಯೂಟಿಲಿಟಿ ಬಿಲ್ ತೆರಲು ಜೀವಂತವಾಗಿದ್ದೇವೆ. ಪರಸ್ಪರ ಸಂಧಿಸುತ್ತೇವೆ ಅಪರಿಚಿತರಂತೆ. ಬದುಕುತ್ತೇವೆ ಪೂರ್ವಜರ ಮನೆಯಲ್ಲಿ ಬಾಡಿಗೆದಾರರಂತೆ.

ವ್ಯವಸ್ಥೆ ಬದಲಾಯಿಸುತ್ತಿದೆ

ಇಮೇಜ್
ಮೂಲ ಉರ್ದೂ ... ಜಾಹಿದ್ ಮಸೂದ್ ಕನ್ನಡಕ್ಕೆ .. ಸಿ.ಪಿ. ರವಿಕುಮಾರ್ ವ್ಯವಸ್ಥೆ ಬದಲಾಯಿಸುತ್ತಿದೆ. ಹೊಸ ನಾಣ್ಯಗಳು ಚಾಲ್ತಿಗೆ ಬಂದಾಗಿದೆ. ಹೊಸ ರಿಜಿಸ್ಟರುಗಳಲ್ಲಿ ಹಳೆಯ ಅಂಕಿಗಳು ನೊಣಗಳ ಹಾಗೆ ಗುಂಯ್ಗುಡುತ್ತಿವೆ ಕೀಬೋರ್ಡಿಗೆ ಸರಪಳಿಯಿಂದ ಕಟ್ಟಿಹಾಕಿದ ಕೈ ಸಪ್ತವರ್ಣದ ಆಕಾಶದ ಕದತಟ್ಟುವ ಪ್ರಯಾಸ ಮಾಡುತ್ತಿದೆ. ನಿಯಾನ್ ಸೈನಿನಿಂದ ಹೊರಬಂದ ಯುವತಿ ಖಾಲಿಜೋಬುಗಳತ್ತ ಸನ್ನೆ ಮಾಡಿ ಮುಗುಳಗುತ್ತಾಳೆ. ನವಯೌವ್ವನ ತಾಳಿದ ವೃದ್ದರು ನೆಕ್ ಟೈ ಧರಿಸಿ ಫೈವ್ ಸ್ಟಾರ್ ಹೋಟೆಲಿನ ಎದುರು ಎಸೆದ ಬಾಟಲಿಗಳಲ್ಲಿ ಮನಿಪ್ಲಾಂಟ್ ಬೆಳೆಸುವ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ. ಪಾಲಕರು ಮಲಿನ ರಜಾಯಿಗಳಲ್ಲಿ ಹಾಟ್ ವಾಟರ್ ಬಾಟಲ್ ಇಟ್ಟುಕೊಂಡು ಪೂರ್ವಜರ ಕಬ್ರಸ್ಥಾನಗಳ ಕನಸು ಕಾಣುತ್ತಿದ್ದಾರೆ. ಮಕ್ಕಳು ಮೂಸಿಕ್ ಚಾನೆಲ್ ಸಂಗೀತಕ್ಕೆ "ಇಡೀ ಪ್ರಪಂಚವೇ ಒಂದು ಹಳ್ಳಿ" ಹಾಡುತ್ತಾರೆ.