ಪೋಸ್ಟ್‌ಗಳು

ಸೋಲು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸುಲ್ತಾನನ ಸೋಲು (ಕಥನಕವನ)

ಇಮೇಜ್
ಸಿ. ಪಿ. ರವಿಕುಮಾರ್  ಬೇಹುಗಾರರು ಸುದ್ದಿ ತಂದರು ಲೋಧಿ ಇಬ್ರಾಹಿಂ ಸುಲ್ತಾನನಿಗೆ ಸಾಧು ಒಬ್ಬನು ಬಂದು ಬೀಡುಬಿಟ್ಟಿದ್ದಾನೆ ದಿಲ್ಲಿ ಸಲ್ತನತ್ ಒಳಗೆ; ಜಹಾಪನಾಹ್! ಕರೆಯುತ್ತಾರೆ ಅವನನ್ನು ಗುರು ನಾನಕ್ ಎಂದು, ಸಹಚರರು ಹೆಚ್ಚು ಜನರಿಲ್ಲ, ಶಿಷ್ಯ ಮರ್ದಾನಾ ಒಬ್ಬನೇ ಬಂಧು; ಬಹಳ ಜನ ಸೇರುತ್ತಾರೆ ಸೆಹರ್‌ನಿಂದಲೂ ಹುಜೂರ್! ಸಹಗಾನ ನಡೆಯುತ್ತದೆ ಇಡೀ ದಿವಸ, ಎಲ್ಲರಿಗೂ ಬಾಬಾ ಸಿಹಿನೀರು ಹಂಚುತ್ತಾನೆ ತಾನೇ ತೋಡಿದ ಬಾವಿಯಿಂದ ಸಹಭೋಜನ ನಡೆಯುತ್ತದೆ ದಿನವೂ, ಬಡಿಸುತ್ತಾನೆ ಕೈಯಾರ! ಮಹಿಮಾವಂತ! ಕರಾಮತ್ ನಡೆಸಿದನು ನಮ್ಮ ಕಣ್ಮುಂದೆ! ಜಹರ್ ತಿಂದು ಸತ್ತು ಹೋಗಿತ್ತು ಒಬ್ಬ ಜಮೀನುದಾರನ ಆನೆ; ಸ್ನೇಹದಿಂದ ಬಾಬಾ ನೇವರಿಸಿ "ಏಳು, ಸಾಕು ನಿದ್ದೆ" ಎಂದಾಗ ಜೀ ಹುಜೂರ್! ಮೆಲ್ಲಗೆ ಕಣ್ತೆರೆದು ನೋಡಿ ಮೇಲೆದ್ದಿತು ಜನಾಬ್! ಕುಹಕನಗೆ ನಕ್ಕ ಸುಲ್ತಾನ್ "ಕರೆತನ್ನಿ ಕರಾಮತಿ ಬಾಬಾನನ್ನು! ನೋಡುವ! ಇಹಲೋಕ ಬಿಟ್ಟ ನನ್ನ ಮೆಚ್ಚಿನ ಕುದುರೆಗೆ ಕೊಡುವನೋ ಜೀವ" ಚಹರೆಯಲ್ಲಿದ್ದ ಕಾಂತಿಯ ಕಂಡು ಬೆರಗಾದ ಲೋಧಿ.  ಸ್ನೇಹದಿಂದ ಅವನೆಡೆಗೆ ನೋಡಿ ನಕ್ಕರು ಗುರು ನಾನಕ್ - "ದೇಹ ತ್ಯಜಿಸಿದವರನ್ನು ಮತ್ತೆ ಕರೆತರಲು ಆದೀತೇ ಸುಲ್ತಾನ್! ಇಹಪರದ ವ್ಯಾಪಾರಕ್ಕೆ ಲೆಕ್ಕ ಇಡುವವನು ಬೇರೊಬ್ಬ! ರಹಸ್ಯ ಔಷಧ ಯಾವುದೂ ಇಲ್ಲ ಮೃತ್ಯುವಿಗೆ! ತಾವು  ಸಹಿಸಿಕೊಳ್ಳಲೇ ಬೇಕು ಅಗಲಿಕೆಯ ನೋವು!" ...