ಪೋಸ್ಟ್‌ಗಳು

old age ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವೃದ್ಧ ನಿರುದ್ವೇಗಿಯ ಪ್ರಾರ್ಥನೆ

ಇಮೇಜ್
  ಮೂಲ: ಎಮಿಲಿ ಬ್ರಾಂಟಿ ಕನ್ನಡಕ್ಕೆ:  ಸಿ ಪಿ ರವಿಕುಮಾರ್  ಸಂಪತ್ತನ್ನು ಕಂಡರೆ ನನಗೆ ಅಷ್ಟಕ್ಕಷ್ಟೇ ಪ್ರೇಮವೆಂದರೆ ನಗುವೆ ತಿರಸ್ಕಾರದ ನಗೆ ಕೀರ್ತಿಗಾಗಿ ಕಾಮಿಸಿದೆನಾದರೂ ಅದು  ಬೆಳಗಾಗ ಲಯವಾಗುವ ಕನಸಿನ ಹಾಗೆ ಈಗ ನಾನು ಪ್ರಾರ್ಥಿಸಲೆಂದು ಬಾಯ್ತೆರೆದರೆ ಆಗ ತುಟಿಗಳ ಮೇಲೆ ಬರುವ ಮಾತೊಂದೇ : ನನಗೀಗ ಕೇಳುವುದೋ ಯಾವ ಹೃದಯದ ತುಡಿತ ಅದನ್ನು ಹಾಗೇ ಉಳಿಸಿ ನೀಡು ಮುಕ್ತಿ ನನಗೆ! ಬಿರುಸಾಗಿ ಉರುಳುತ್ತ ನನ್ನ ದಿನಗಳು ತಮ್ಮ ಗುರಿಯತ್ತ ಧಾವಿಸುತ್ತಿರಲು ನಾನು ಬೇಡುವುದು ಇಷ್ಟೇ ಬದುಕು ಸಾವುಗಳಲ್ಲಿ ನಾನು ಮುಕ್ತಳಾಗಿರುವಂತೆ ಮತ್ತು ಸಹಿಸುವ ಶಕ್ತಿ ನನಗೆ ನೀಡು ಎಂದಷ್ಟೇ.

ಜರೆ

ಇಮೇಜ್
 (ಚಾರ್ಲ್ಸ್ ಸ್ಪೆನ್ಸ್ಲೇ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ.) ಚಿತ್ರಕವಿತೆ: ಸಿ. ಪಿ. ರವಿಕುಮಾರ್ ಜರೆ  ಮರೆತ ರಾಗಗಳನ್ನು ಮತ್ತೆ ನೆನೆಸಿಕೊಳ್ಳುತ್ತಾ ನೆರೆತ ಕೂದಲಿನವನು ಕೂತಿರುವನು ಸುಮ್ಮನೆ ಬರುವವರಿದ್ದರಲ್ಲ ಇಂದು ಯಾರೋ? ಅಥವಾ ಕರೆದಿದ್ದರೋ ಅವರು ತನ್ನನ್ನೇ ಮನೆಗೆ? ಯಾರವರು? ಓರಗೆಯವರು ಒಬ್ಬರೂ ಇಲ್ಲವಲ್ಲ. ಹೊರದೇಶದಲ್ಲಿದ್ದಾರಲ್ಲವೆ ವರ್ಷಗಳಿಂದ ಮಕ್ಕಳು?  ಕರೆದು ಕೇಳೋಣ ಎಂದು ಕೂಗಿದ ಅವಳನ್ನು; ಮರುಕ್ಷಣವೇ ಅವಳು ಮನದಲ್ಲಿ ನಕ್ಕಳು: ತೆರೆತೆರೆಯಾಗಿ ನಗಬಲ್ಲವಳು ಅವಳೊಬ್ಬಳೇ ಪೊರೆಗಣ್ಣಿಗೂ ಕಾಣುತ್ತದೆ ಅವಳ ನಗುಮುಖ. ಅರಳು ಮರಳಾಗಿದೆ ಎಂದು ರೇಗಿಸಿ ನಕ್ಕರೂ ಬರಲಿಲ್ಲ ಏಕೆಂದು ಯೋಚಿಸಿದ ಮುದುಕ. ಬರಿದಾದ ರಂಗ, ವಾದ್ಯ ನುಡಿಸುತ್ತಿದ್ದಾಗ ತಾನೊಬ್ಬನೇ ತೆರೆ ಯಾಕೆ ಎಳೆಯುತ್ತಿದೆ? ಕಾರ್ಯಕ್ರಮ ಮುಗಿಯಿತೇ?