ಪೋಸ್ಟ್‌ಗಳು

Kamini Kaushal ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಮನಬಿಲ್ಲು

ಇಮೇಜ್
ಮೂಲ ಹಿಂದಿ ... ಕಾಮಿನಿ ಕೌಶಲ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಯೋಚಿಸುತ್ತಾ ಮಲಗಿದ್ದೆ ಇರುಳಿನಲಿ ಹಾಗೇ ಯಾಕೋ ನಿದ್ದೆಯೇ ಹತ್ತದಾದಾಗ ಕಣ್ಣಿಗೆ ಅದೆಷ್ಟು ಬಣ್ಣದ ಖಾದ್ಯ ಕಬಳಿಸಿದೆ ನಾನು ಬೆಳಗಿಂದಲೂ ಆರ್ಡರ್ ಮಾಡುತ್ತ, ಬಗೆಬಗೆ! ಎದ್ದಾಗ ಕುಡಿದ ಹಾಲು ಬಿಳಿಬಣ್ಣ ತಿಳಿಹಳದಿ ಬಣ್ಣ ನಾ ತಿಂದ ಬೆಣ್ಣೆ ಕೇಸರಿಬಣ್ಣದ ಕಿತ್ತಳೆಹಣ್ಣು ಕಚ್ಚಿದೆ ಕೆಂಪು ಸೇಬಿನ ಕೆನ್ನೆ ಗುಲಾಬಿ ಬಣ್ಣದ ಐಸ್ ಕ್ರೀಮ್ ಸವಿದೆ ಕಂದು ಬಣ್ಣ ಚಾಕೊಲೆಟ್ ಮೆದ್ದೆ | ಹಸಿರುದಂಟು ಸೊಪ್ಪಿನ ಬಿಸಿಬಿಸಿ ಸಾರು ಜೊತೆಗೆ ಕಡುಗಪ್ಪು ರಾಗಿಮುದ್ದೆ ಅಬ್ಬಾ ಇಷ್ಟೆಲ್ಲಾ ತಿಂದೆನೇ ನಾನು! ಒಡೆದರೆ ಹೊಟ್ಟೆಯು ಅಯ್ಯೋ ಗತಿ ಏನು! ಒಡೆದೇ ಹೋದರೆ ಹೊಟ್ಟೆಯು ಡೊಳ್ಳು ಹೊರಗೆ ಬರುವುದೇ ಕಾಮನಬಿಲ್ಲು!