ಪೋಸ್ಟ್‌ಗಳು

Friendship ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮುಖಾಮುಖಿ

ಇಮೇಜ್
 ಮುಖಾಮುಖಿ ನಾವು ಹಿಂದೆ ಹೋಗಲು ಸಿದ್ಧರಿಲ್ಲ ಮತ್ತು ಅವರು ಮುಂದೆ ಸಾಗುತ್ತಿಲ್ಲ ಎಂದಾದರೆ ಕಾಲದ ಗುಳ್ಳೆಯನ್ನು ಆದಷ್ಟೂ ಎಳೆಯೋಣ ಎರಡೂ ಕಡೆ ಅದು ಒಡೆದುಹೋಗುವವರೆಗೆ ಅನಂತರ ಸಂಧಿಸೋಣ  ರೂಮಿ ವಿವರಿಸುವ ಹೊಲದಲ್ಲಿ ವಿರಮಿಸಿ ನೆನಪಿಸಿಕೊಳ್ಳೋಣ ಬಂಧುರವೆಂದರೆ ಏನೆಂಬುದನ್ನು. ಕೇಟ್ಲಿನ್ ಕರ್ಟಿಸ್ ಅನುವಾದ: ಸಿ. ಪಿ. ರವಿಕುಮಾರ್ If we're not going back  And they're not moving Forward then we will Stretch the bubble of time In both directions until  It bursts, and then we  Will meet in that field  That Rumi talks about,  Lay down in it, and try  To remember what it  Always meant to be kin. ~ Kaitlin B Curtice

ಟವರ್ ಆಫ್ ಪೀಟ್ಜಾ

ಇಮೇಜ್
"ಪೀಜಾ ಅಲ್ಲ ಕಣ್ರೀ ಪೀಟ್ಜಾ ಅನ್ನಬೇಕು" ಎಂದು ರಾಜಾರಾಂ ತಿದ್ದಿದರು. ಮರಿಗೌಡ ಅಂದು ಪೀಜಾ ತಿನ್ನಲು ಉತ್ಸುಕರಾಗಿದ್ದರು.  "ಕೆಲವರು ಪಿಜ್ಜಾ ಅಂತಾರೆ. ಕೆಲವರು ಪೀಜಾ ಅಂತಾರೆ. ಅಲ್ಲಿ ಟೀ ಇಲ್ಲವೇ ಇಲ್ಲ. ಪೀಟ್ಜಾ ಹೇಗ್ರೀ ಆಗತ್ತೆ?" ಎಂದು ಮರಿಗೌಡ ವಾದಿಸಿದರು. "ನೋಡಿ, ಪದದಲ್ಲಿ ಎರಡು ಜೆಡ್ ಪಕ್ಕಪಕ್ಕದಲ್ಲಿದ್ದಾಗ ಇಟಾಲಿಯನ್ ಜನ ಮೊದಲನೇ ಜೆಡ್ ಇದೆಯಲ್ಲ ಅದನ್ನ ಸ್ವಲ್ಪ ಟೀ ಥರಾ ಉಚ್ಚಾರಣೆ ಮಾಡ್ತಾರೆ. ಲವಾಟ್ಜಾ, ಪೀಟ್ಜಾ, ಮೋಟ್ಜರೆಲ್ಲಾ, ... ಗೊತ್ತಾಯ್ತಾ?" "ಹೀಗೆ ಎರಡು ಜೆಡ್ ಇಡೋದು ಯಾಕೆ ... ಅದರಲ್ಲಿ ಒಂದನ್ನು ಟೀ ಥರಾ ಉಚ್ಚಾರಣೆ ಮಾಡೋದು ಯಾಕೆ ... ಮೂರು ಜೆಡ್ ಇದ್ದರೆ ಏನು ಮಾಡ್ತಿದ್ರು?" *ಮೂರು ಜೆಡ್ ಇರೋ ಯಾವ ಪದವೂ ಇಲ್ಲ." "ಇದೆ ಕಣ್ರೀ. ಜೆಡ್ ಜೆಡ್ ಜೆಡ್ ಅಂತ ಹಾಕಿರ್ತಾರೆ ಕೆಲವು ಕಡೆ. ಅದನ್ನು ಹೇಗೆ ಉಚ್ಚಾರಣೆ ಮಾಡ್ತಾರೋ ಪುಣ್ಯಾತ್ಮರು!" "ರೀ! ಅದು ನಿದ್ದೆ ಹೋಗಿ ಗೊರಕೆ ಹೊಡೆಯೋ ಸದ್ದು ಕಣ್ರೀ. ಕಾಮಿಕ್ ಓದೋವಾಗ ಈ ಜೆಡ್ ಜೆಡ್ ಜೆಡ್ ಎಲ್ಲಾ ಓದಿರುತ್ತೀರಿ." "ಹೂಂ. ನನಗೆ ಅದು ಗೊರಕೆ ಸದ್ದು ಅಂತ ಗೊತ್ತಾಗಲಿಲ್ಲ ನೋಡಿ. ನಾನು ಗೊರಕೆ ಹಾಕುವಾಗ ಗೊರ್ ಗೊರ್ ಅಂತ ಹಾಕ್ತೀನಿ ಅಂತ ನಮ್ಮ ಮಿಸೆಸ್ ಹೇಳ್ತಾರೆ." "ಗೊರ್ ಇಂದಲೇ ಗೊರಕೆ ಬಂದಿರೋದು!" ಎಂದು ನಾನು ಮಧ್ಯ ಸೇರಿಸಿದೆ. "ಕನ್ನಡದ ಜನ ಗೊರ್ ಅಂತಲೇ ಗೊ...

ನನ್ನ ಪುಟ್ಟ ದೋಣಿ

ಇಮೇಜ್
  ನನ್ನ ಪುಟ್ಟ ದೋಣಿಯನ್ನು  ನೀರಿನಲ್ಲಿ ತೇಲಿಬಿಟ್ಟು ಮುಂದೆ ಸಾಗು ಎಂದು ನಾನು ಅಣತಿ ಮಾಡಿದೆ! ಇಲ್ಲ ದೋಣಿ ಸಾಗಲಿಲ್ಲ, ಮುಂದೆ ಮುಂದೆ ಹೋಗಲಿಲ್ಲ, ನಿಂತು ನನ್ನ ಅಣಕಿಸಿತು, ಮುಂದೆ ಕದಲದೆ! ನನ್ನ ಗೆಳತಿ ಸಪ್ಪೆ ಮೋರೆ ಹಾಕಿಕೊಂಡು ನೋಡಿದಳು, ದೋಣಿ ಏಕೆ ತೇಲದೆಂದು ಅವಳ ಕಾತುರ! ಕೈಗಳಿಂದ ನೀರು ಬಡಿದು ಅಲೆಯ ಮಾಡಿ ತಳ್ಳಿದಾಗ ದೋಣಿಯಲ್ಲಿ ಕಂಡು ಬಂತು ತೇಲುವಾತುರ! ಬೀಸಿತಾಗ ತಂಪು ಗಾಳಿ ಅಲುಗತೊಡಗಿ ದೋಣಿ ಹಾಯಿ ಕಾಣಬಂತು ಅದರ ನಡೆಯೊ- ಳೊಂದು ಸಂಭ್ರಮ! ದೋಣಿ ತೇಲುವುದನು ಕಂಡು ಚಪ್ಪಾಳೆಯ ತಟ್ಟಿ ನನ್ನ ಕೈಯ ಹಿಡಿದು ಮಾಡಿದಳು ಗೆಳತಿ, ನರ್ತನ!

ಸ್ನೇಹಿತ

ಇಮೇಜ್
ಮೂಲ: ಹೆಕ್ಟರ್ ರೋಜಾಸ್ ಹೆರಾಜೋ (ಸ್ಪಾನಿಷ್ ಭಾಷೆ, ಕೊಲಂಬಿಯಾ ರಾಷ್ಟ್ರ) ಇಂಗ್ಲಿಷ್ ಭಾಷೆಗೆ: ನಿಕೋಲಾಸ್ ಸೂಸ್ಕುನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ನನ್ನ ಕಡೆಗೆ ಅವನು ಒಮ್ಮೆಲೇ ನೋಡಿದ  ಎಲ್ಲರಿಗಿಂತ ಹೆಚ್ಚು ಏಕಾಂತದಲ್ಲಿ.  ಅವನು ನನ್ನ ಕಡೆ ನೋಡಿದ ತನ್ನ ಕಣ್ಣುಗಳಿಂದ, ತನ್ನ ಮೂಳೆಗಳಿಂದ, ಪಾದರಕ್ಷೆಗಳೊಳಗಿನ ತನ್ನ ಬರಿಪಾದಗಳಿಂದ.  ನನಗೆ ತಡೆದುಕೊಳ್ಳಲಾಗಲಿಲ್ಲ.  (ನಾವು ತಡೆಯಲಾರೆವು  ನಮ್ಮ ಆಳಕ್ಕೆ ಇಣುಕುವ ಯಾವುದನ್ನೂ.) ಅವನ ಹಿಂದೆ ಇತ್ತು ಸ್ವರ್ಗ  ಅಲ್ಲಿದ್ದರು ರಾಕ್ಷಸರು,  ಕೊತಕೊತ ಕುಡಿಯುವ ಎಣ್ಣೆಯ ಕೊಪ್ಪರಿಗೆ ಮತ್ತು ಸಾಬೂನಿನ ಗುಳ್ಳೆಗಳನ್ನು ಊದುತ್ತಿರುವ ದೇವಪಿತ.  ಈ ಕಡೆ ಇತ್ತು ಕಂಪ್ಯೂಟರ್ ಮೇಜು, ಫರ್ನಿಚರ್ ಸಾಮಾನು, ಕೋಣೆಯ ಮತ್ತೆಲ್ಲಾ ಸಾಕ್ಷಿಗಳು.  ಸ್ನೇಹಿತನು ಕುಳಿತಿದ್ದ ಪುಟ್ಟ ಕುರ್ಚಿಯ ಮೇಲೆ,  ನನ್ನ ಕಡೆ ನೋಡುತ್ತಾ, ಕುಳಿತುಕೊಂಡು, ಉಸಿರಾಡುತ್ತಾ.  ಕವಿತೆಯ ಸ್ವಾರಸ್ಯ: ಇಲ್ಲಿ ಕವಿತೆಯ ನಾಯಕನಿಗೆ ಕಾಣುವ ಸ್ನೇಹಿತ ಬೇರೊಬ್ಬನೇ ಆಗಿರಬೇಕಾಗಿಲ್ಲ. ಸ್ವತಃ ನಾಯಕನೇ ಆಗಿರಬಹುದು ಎಂಬ ಸುಳಿವಿನೊಂದಿಗೆ ಕವಿತೆಯನ್ನು ಮತ್ತೊಮ್ಮೆ ಓದಿ. ಕಂಪ್ಯೂಟರ್ ತೆರೆಯ ಹಿಂದೆ ಕಾಣುತ್ತಿರುವ "ಸ್ವರ್ಗ"ದಲ್ಲಿ  ನರಕವಾಸಿಗಳಾದ ರಾಕ್ಷಸರು, ಎಣ್ಣೆಯ ಕೊಪ್ಪರಿಗೆ ಇವೆಲ್ಲಾ ಯಾಕಿವೆ? ...

ಸ್ನೇಹ ... !

ಇಮೇಜ್
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಸ್ನೇಹ - ತಾನು ಪರೀಕ್ಷೆ ಒಡ್ಡುವುದಿಲ್ಲ ತನ್ನನ್ನು ಪರೀಕ್ಷೆಗೆ ಒಡ್ಡಿಕೊಳ್ಳುವುದೂ ಇಲ್ಲ ಹೇಳುತ್ತೇನೆ ಕೇಳು ಸ್ನೇಹ ಏನೆಂದು - ಮಳೆಯಲ್ಲಿ ನೆಂದ ಚೆಹರೆಯ ಮೇಲೂ ಗುರುತಿಸುವುದಿದೆಯಲ್ಲ ಕಣ್ಣೀರ ಕಲೆ  ಸ್ನೇಹದ ಗುರುತೆಂದರೆ ನೋಡು, ಅದೇ! ಇಂದು ಕಳೆದೆ ಒಂದಿಷ್ಟು ಹೊತ್ತು ಭಗವಂತನ ಜೊತೆ ನನ್ನ ಬಗ್ಗೆ ಸಾಕಷ್ಟು ಆಯಿತು ಮಾತುಕತೆ ನಾನೆಂದೆ - "ಎಂಥೆಂಥ ಗೆಳೆಯರಿದ್ದಾರೆ ನನಗೆ! ನನ್ನ ಭಾಗ್ಯಕ್ಕೆ ತುಂಬಿ ಬರುತ್ತದೆ ಎದೆ" ಭಗವಂತನು ಹೀಗೆಂದ:  "ಜೋಪಾನ! ಕಳೆದುಕೊಂಡೀಯೆ ಜೋಕೆ!" ನನ್ನ ಮೆಚ್ಚಿನವರು ಅವರು, ಹೇಗೋ ಬಂದಿದ್ದಾರೆ ನಿನ್ನ ಭಾಗಕ್ಕೆ!" ದಿನಗಳು ಕಳೆದುಹೋಗಿ ಉಳಿಯುತ್ತವೆ ಸವಿನೆನಪು ಕತೆಗಳಾಗಿ ಉಳಿಯುತ್ತವೆ ನಡೆದು ಹೋದ ಮಾತು ಆದರೆ ಗೆಳೆಯರೋ! ಇರುವರು ಸದಾ ನಮ್ಮ ಹೃದಯಕ್ಕೆ  ಹತ್ತಿರದಲ್ಲಿ  ಕೆಲವೊಮ್ಮೆ ಮುಗುಳ್ನಗೆಯಾಗಿ, ಕೆಲವೊಮ್ಮೆ ಕಣ್ಣಲ್ಲಿ ಸುರಿವ ಜಲವಾಗಿ. --- Translation of a poem by Harivansha Rai Bachchan  C.P. Ravikumar