ಪೋಸ್ಟ್‌ಗಳು

ಜನವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧

ಇಮೇಜ್
ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧  ಮೂಲ: ಮಹಾತ್ಮಾ ಗಾಂಧಿ ಕನ್ನಡ ಅನುವಾದ:  ಡಾ. ಸಿ. ಪಿ. ರವಿಕುಮಾರ್ ಇಂದು ಗಾಂಧೀಜಿಯವರ ಪುಣ್ಯತಿಥಿ. ಯಾಂತ್ರೀಕೃತ ಮಗ್ಗಗಳು ಕೈಮಗ್ಗಗಳನ್ನು ನಿರ್ನಾಮಗೊಳಿಸಿ ನಿರುದ್ಯೋಗವನ್ನು ಸೃಷ್ಟಿಸುತ್ತವೆ ಎಂದು ಪ್ರತಿಭಟಿಸಿ ರಂಗ ನಾಟಕ ಕರ್ಮಿ ಮತ್ತು ಗಾಂಧೀವಾದಿ ಪ್ರಸನ್ನ ಇಂದು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಗಾಂಧೀಜಿ ಗುಡಿ ಕೈಗಾರಿಕೆಗಳನ್ನು ಕುರಿತು ವ್ಯಕ್ತ ಪಡಿಸಿರುವ ಅಭಿಪ್ರಾಯಗಳನ್ನು ನೋಡುವುದು ಸೂಕ್ತ.  ಗ್ರಾ ಮೀಣ ಕೈಗಾರಿಕೆಗಳ ಅಳಿವಿನಿಂದ ಭಾರತದ ಏಳು ಲಕ್ಷ ಗ್ರಾಮಗಳ ನಾಶವಾಗುತ್ತದೆ. ನಾನು ಕೊಟ್ಟ ಸಲಹೆಗಳನ್ನು ಕುರಿತು ಪತ್ರಿಕೆಗಳಲ್ಲಿ ಬಂದ ಟೀಕೆಗಳನ್ನು ಗಮನಿಸಿದ್ದೇನೆ. ನಿಸರ್ಗದ ಯಾವ ಶಕ್ತಿಗಳ ಮೇಲೆ ಮನುಷ್ಯ ವಿಜಯ ಸಾಧಿಸಿದ್ದಾನೋ ಆ ಶಕ್ತಿಗಳ ಬಳಕೆಗೆ ನಾನು ಶರಣಾಗಬೇಕೆಂದು ಕೆಲವರು ನನಗೆ ಸಲಹೆ ಕೊಟ್ಟಿದ್ದಾರೆ.  ನೀರು, ಗಾಳಿ, ತೈಲ ಮತ್ತು ವಿದ್ಯುತ್ - ಇವುಗಳನ್ನು ಪಾಶ್ಚಾತ್ಯರು ಬಳಸಿಕೊಂಡಷ್ಟೇ ಸಂಪೂರ್ಣವಾಗಿ ನಾವೂ ಉಪಯೋಗಿಸಬೇಕು ಎಂದು ನನ್ನ ಟೀಕಾಕಾರ ಅಭಿಪ್ರಾಯ. ನಿಸರ್ಗದ ನಿಗೂಢ ಶಕ್ತಿಗಳ ಮೇಲೆ ಸಾಧಿಸಿದ ಹತೋಟಿಯ ಕಾರಣ ಪ್ರತಿಯೊಬ್ಬ ಅಮೇರಿಕನ್ ಪ್ರಜೆಗೂ ಮೂವತ್ತಮೂರು ಜನ ದಾಸರು ದೊರೆತಿದ್ದಾರಂತೆ. ಇದೇ ಮಾದರಿಯನ್ನು ಭಾರತದಲ್ಲಿ ಅಳವಡಿಸಿದರೆ ಪ್ರತಿಯೊಬ್ಬನಿಗೂ ಮೂವತ್ತಮೂರು ದಾಸರು ಸಿಕ್ಕುವುದು ಹಾಗಿರಲಿ, ಭಾರತೀಯರನ್ನು ಮೂವತ್ತ

ಕವಿ ತೆರೆದ ಬಾಗಿಲು

ಇಮೇಜ್
ಸಿ. ಪಿ. ರವಿಕುಮಾರ್    ಕೆ. ಎಸ್. ನರಸಿಂಹಸ್ವಾಮಿ ಅವರ ನೂರನೇ ಹುಟ್ಟುಹಬ್ಬವನ್ನು ಇವತ್ತು ಆಚರಿಸಲಾಗುತ್ತಿದೆ. ಅವರನ್ನು ನಾನು ಸ್ವಲ್ಪ ಹತ್ತಿರದಿಂದ ನೋಡಿದ್ದರಿಂದ ಕೆಲವು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸುತ್ತಿದೆ.  ನ ನ್ನ ತಂದೆ ಸಿ.ಎಚ್. ಪ್ರಹ್ಲಾದರಾವ್ ಅವರಿಗೆ ಕೆ. ಎಸ್. ನ. ಅವರ ಪರಿಚಯವಿತ್ತು. ನಾವು ಆಗ ಜಯನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು; ನಮ್ಮ ತಂದೆ ತಮ್ಮ ಕೆಲಸದಿಂದ ನಿವೃತ್ತಿಯಾಗುವ ಕೆಲವು ವರ್ಷಗಳ ಹಿಂದೆ ಸ್ವಂತ ಮನೆ ಕಟ್ಟಿಸುವ ಯೋಚನೆ ಮಾಡಿದರು. ಮನೆಯ ಕೆಲಸ ಪ್ರಾರಂಭವಾಗಿತ್ತು.   ಕೆ. ಎಸ್. ನ. ಕೂಡಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ಏಜೀಸ್ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ನಮ್ಮ ತಂದೆ ಕಾಫಿ ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು.  ಇಬ್ಬರೂ ಪ್ರತಿದಿನ ಬಸ್ ನಲ್ಲಿ  ಪ್ರಯಾಣ ಮಾಡುತ್ತಿದ್ದರು. ಆಗ ಸರಕಾರೀ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಒಂದು ವಿಶೇಷ ಬಸ್ ಹೊರಡುತ್ತಿತ್ತು. ನಮ್ಮ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಸಂಜೆ ಕೆ. ಎಸ್. ನ. ಮತ್ತು ಇನ್ನೊಬ್ಬ ಕವಿ-ಮಿತ್ರರಾದ ಹಿ. ಮ. ನಾಗಯ್ಯ ಇಬ್ಬರೂ ಬಂದಿದ್ದು ನನಗೆ ನೆನಪಿದೆ. ಕೆ. ಎಸ್. ನ. ಅವರದ್ದು ಯಾವಾಗಲೂ ಒಂದೇ ಬಗೆಯ ಉಡುಗೆ. ಬಿಳಿ ಜುಬ್ಬಾ, ಬಿಳಿ ಪಂಚೆ.  ನೆರೆಯುತ್ತಿದ್ದ ದಟ್ಟವಾದ ಕೂದಲು. ಕನ್ನಡಕದ ಹಿಂದೆ ಮಿಂಚುವ ಕಣ್ಣುಗಳು. ಗಟ್ಟಿಯಾದ ಧ್ವನಿ. ನಸ್ಯ ಹಾಕುವ ಚಟ! ಕಾಫಿ ಅವರಿಗೆ ಪ್ರಿಯವಾದ ಪ

ಮೊಗ್ಗಾಗಿ, ಬೀಸುವ ತಂಗಾಳಿಯಾಗಿ

ಸಿ ಪಿ ರವಿಕುಮಾರ್ ಅಭಿನೇತ್ರಿ ಸುಚಿತ್ರಾ ಸೇನ್ ಇಲ್ಲವಾದರೆಂಬ ಸುದ್ದಿ ಬಂದಿದೆ.  "ಆಂಧಿ" ಹಿಂದಿ ಚಿತ್ರದಲ್ಲಿ ಮಾಡಿದ ಪಾತ್ರದಿಂದ ಅಪೂರ್ವ ಯಶಸ್ಸು ಗಳಿಸಿದ ಕಲಾವಿದೆ ಸುಚಿತ್ರಾ ಸೇನ್. ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ದಿನಗಳಲ್ಲಿ  ಈ ಚಿತ್ರ ಹೊರಬಂತು. ಇದರ ನಿರ್ದೇಶಕ ಗುಲ್ಜಾರ್. ಒಬ್ಬ ರಾಜಕಾರಣಿಯ ಕತೆಯನ್ನು ಚಿತ್ರ ಹೇಳುತ್ತದೆ;  ರಾಜಕಾರಣಕ್ಕೆ ಬಂದ ನಂತರ  ಗಂಡನೊಂದಿಗೆ ಕ್ರಮೇಣ ಸಂಬಂಧ ಕಳೆದುಕೊಳ್ಳುವ ನಾಯಕಿ ಸಮಾಜದಲ್ಲಿ ದೊಡ್ಡ ಹೆಸರು ಗಳಿಸಿದ್ದರೂ ತನ್ನ ಖಾಸಗಿ ಜೀವನದಲ್ಲಿ ಸೋಲು ಅನುಭವಿಸಿದವಳು. ಒಂದು ಸಲ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಏಕಾಏಕಿ ತನ್ನ ಪತಿಯನ್ನು ಸಂಧಿಸುತ್ತಾಳೆ. ಆತ ಒಂದು ಹೋಟೆಲ್ ಮಾಲೀಕ (ಅಭಿನಯ - ಸಂಜೀವ್ ಕುಮಾರ್). ಇಬ್ಬರಿಗೂ ಪರಸ್ಪರ ಗೌರವ ಮತ್ತು ಪ್ರೀತಿ ನಶಿಸಿಲ್ಲ. ಸುಪ್ತವಾಗಿದ್ದ ಭಾವನೆಗಳು ಮತ್ತೆ ಮೇಲೆದ್ದು ರಾಜಕಾರಣಿ ಸಾಂಸಾರಿಕ ಜೀವನಕ್ಕೆ ಮರಳುವ ನಿರ್ಧಾರಕ್ಕೆ ಬರುತ್ತಾಳೆ. ಚುನಾವಣೆಯಲ್ಲಿ ತನಗೆ ಮತದಾನ ಮಾಡಬೇಡಿ ಎಂದು ಜನರನ್ನು ಕೇಳಿಕೊಳ್ಳುತ್ತಾಳೆ   ಆದರೆ ಜನ ಅವಳನ್ನು ಗೆಲ್ಲಿಸುತ್ತಾರೆ! ತುರ್ತುಸ್ಥಿತಿಯ ಸಮಯದಲ್ಲಿ ಈ ಚಿತ್ರ ವಿವಾದಕ್ಕೆ ಸಿಕ್ಕಿತು. ರಾಜಕಾರಣಿಯೂ ಶ್ರೀಮತಿ ಇಂದಿರಾ ಗಾಂಧಿಯನ್ನೇ ಹೋಲುತ್ತಾಳೆ ಎಂಬ ಕಾರಣಕ್ಕಾಗಿ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಯಿತು. ಇದರಿಂದ ಚಿತ್ರಕ್ಕೆ ಲಾಭವೇ ಆಯಿತು. ಸ್ವಲ್ಪ ಸಮಯದ ನಂತರ ಚಿತ್ರವನ್ನು ಮ

ಕವಿ ಮತ್ತು ಕಲಾಶ್ನಿಕೋವ್

ಇಮೇಜ್
ಕನ್ನಡದ ಕವಿ ಜಿ. ಎಸ್. ಎಸ್. ಅವರು ದಿವಂಗತರಾದ ದಿವಸವೇ ಎ.ಕೆ.-೪೭ ರೈಫಲ್ ಅನ್ವೇಷಕ ಕಲಾಶ್ನಿಕೋವ್ ಕೂಡಾ ನಿಧನನಾದ.   ಕವಿ ಮತ್ತು ಕಲಾಶ್ನಿಕೋವ್  ಸಿ. ಪಿ. ರವಿಕುಮಾರ್ ಸರಿಸುಮಾರು ಒಂದೇ ಹೊತ್ತಿಗೆ ಗರಿಬಿಚ್ಚಿ ಮೇಲಕ್ಕೆ ಹಾರಿದವು ಎರಡು ಪಕ್ಷಿ - ಒಂದು ಎದೆ ತುಂಬಿ ಹಾಡಿದ ಹಕ್ಕಿ ಬೆಂಗಳೂರಿನಿಂದ ಹಾರಿಬಂತು ಕವಿಯ ಪ್ರಾಣವನ್ನು ಬಾಯಲ್ಲಿ ಕಚ್ಚಿ ಇನ್ನೊಂದು ಎದೆಯನ್ನು ಜರಡಿಮಾಡುವ ಏಕೆ-ನಲವತ್ತೇಳರ ಪೇಟೆಂಟ್ ವಾರಸುದಾರನ ಪ್ರಾಣ ಕೊಕ್ಕಿನಲ್ಲಿಟ್ಟುಕೊಂಡ ರಣಭಕ್ಷಿ ಎರಡೂ ಕಾದು ಕೂತವು ಸ್ವರ್ಗದ ಬಾಗಿಲು ತೆರೆಯುವುದನ್ನೇ ನೆಚ್ಚಿ "ನೀನೇನು ಮಾಡಿದೆ ಅಲ್ಲಿ  ಭೂಮಿಯ ಮೇಲೆ?" ಮಾತು ಬಯಸಿತು ಕವಿಯ ಪ್ರಾಣಪಕ್ಷಿ "ಕಲಾ ಕೋವಿ-ದ ನಾನು" ಎಂದು ಉತ್ತರಿಸಿತು ಕಲಾ-ಶ್ನಿಕೋವಿನ ಹಕ್ಕಿ (ನಗೆಯುಕ್ಕಿ) "ಯಾವ ಕಲೆ? ನಾನೂ ಕಲಾವಿದನೆ! ಕವಿ, ವಿಮರ್ಶಕ, ಅಕ್ಷರಕುಕ್ಷಿ!" "ಕೊಲ್ಲುವುದೂ ಒಂದು ಕಲೆಯೇ! ಒಂದಲ್ಲ ಇಪ್ಪತ್ತು  ಜನರನ್ನು ಒಂದೇ ಸಮ ಧಡಧಡನೆ ಕುಕ್ಕಿಕುಕ್ಕಿ!" ಆಘಾತವಾಯಿತು ಕವಿಚೇತನಕ್ಕೆ! "ಏಕೆ ಮಾಡಿದೆ ಕೊಲ್ಲುವ ಯಂತ್ರಗಳ ಸೃಷ್ಟಿ?" "ಆತ್ಮರಕ್ಷಣೆಗೆ!" ಸಿದ್ಧವಾಗಿತ್ತು ಉತ್ತರ! ಧ್ವನಿಯೂ ಗಟ್ಟಿ! "ಶಾಲಾ ಬಾಲಕನೊಬ್ಬ ಕೊಂದು ಹಾಕಿದನಲ್ಲ ನಿರಪರಾಧಿಗಳನ್ನು ಕೊಚ್ಚಿ ಕೊಚ್ಚಿ! ನಿಶ್ಶಸ್ತ್ರ

ಆರತಿಗೊಂದು ಕನ್ನಡ, ಕೀರುತಿಗೊಂದು ಇಂಗ್ಲಿಷ್

ಇಮೇಜ್
ಡಾ. ಸಿ. ಪಿ. ರವಿಕುಮಾರ್ ನ ಮ್ಮ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಇಟ್ಟುಕೊಂಡಿದ್ದೆವು. ಈ ವರ್ಷ ಕನ್ನಡ ಚರ್ಚಾಸ್ಪರ್ಧೆ ಇಟ್ಟುಕೊಳ್ಳಿ ಎಂಬ ಸಲಹೆ ಕೊಟ್ಟವನು ನಾನೇ. ಕಾರ್ಯಕ್ರಮದ ಆಯೋಜಕರು ನನ್ನ ಮಾತನ್ನು ಕೇಳಿಕೊಂಡು ಪ್ರಕಟಣೆಯನ್ನು ಹೊರಡಿಸಿದರು. ಸ್ಪರ್ಧೆಯ ದಿವಸ ಹತ್ತಿರ ಬಂದಂತೆ ಮುಖ್ಯ ಆಯೋಜಕ ನನ್ನನ್ನು ಕಾಣಲು ಬಂದ. ಸ್ವಲ್ಪ ಗಾಬರಿಯಾಗಿದ್ದ. "ಸರ್, ಸ್ಪರ್ಧೆಗೆ ಕೇವಲ ಆರು ಜನ ಮಾತ್ರ ಹೆಸರು ಬರೆಸಿದ್ದಾರೆ!" ಎಂದ. "ಅದನ್ನು ಹಾಗೆ ಹೇಳಬೇಡಿ, ಮೂರ್ತಿ! ಸ್ಪರ್ಧೆಗೆ ಆರು ಜನ ಹೆಸರು ಬರೆಸಿಬಿಟ್ಟಿದ್ದಾರೆ ಸರ್! ಅಂತ ಉತ್ಸಾಹದಿಂದ ಹೇಳಿ. ಇದು ರೆಕಾರ್ಡ್ ಕಣ್ರೀ!" ಎಂದೆ. ಇಬ್ಬರೂ ನಕ್ಕೆವು. ಕಾಲೇಜುಗಳಲ್ಲಿ ಕನ್ನಡ ಪಾಠ ಹೇಳಿಕೊಡುವ ಪ್ರಾಧ್ಯಾಪಕರನ್ನು ತೀರ್ಪುಗಾರರನ್ನಾಗಿ ಕರೆಯಬೇಕು ಎಂಬ ತೀರ್ಮಾನವಾಯಿತು. ಸ್ಪರ್ಧೆಯ ದಿನವೂ ಬಂತು. "ಸರ್, ನನಗೆ ಯಾವ ಕನ್ನಡ ಪ್ರಾಧ್ಯಾಪಕರೂ ಗೊತ್ತಿಲ್ಲ; ನಾನು ಪ್ರಯತ್ನ ಪಟ್ಟ ಕಡೆ ಫಲ ಸಿಕ್ಕುವ ಭರವಸೆ ಇಲ್ಲ. ನೀವೇ ತೀರ್ಪುಗಾರರಾಗಬೇಕು" ಎಂದು ಮೂರ್ತಿ ತೀರ್ಪು ನುಡಿದ.  ಮಾಡಿದ್ದುಣ್ಣೋ ಎಂದು ಮನಸ್ಸಿನಲ್ಲೇ ಅಂದುಕೊಂಡು ಒಪ್ಪಿಕೊಂಡೆ. ಮತ್ತೊಬ್ಬ ತೀರ್ಪುಗಾರರನ್ನಾಗಿ ನನ್ನ ಸಹೋದ್ಯೋಗಿ ರಾವ್ ಅವರನ್ನು ಒಪ್ಪಿಸಿದೆ. ಸ್ಪರ್ಧೆಯ ವಿಷಯವನ್ನು ನಾನೇ ಕೊಟ್ಟಿದ್ದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ತಾನೇ! ಪ್ರಜಾವಾಣಿಯಲ

ಪದಗಳ ಹುಟ್ಟು ಮತ್ತು ಗುಟ್ಟು (ಹರಟೆ)

ಇಮೇಜ್
ಸಿ. ಪಿ. ರವಿಕುಮಾರ್  ನನ್ನ ಫೇಸ್ ಬುಕ್ ಮಿತ್ರರಾದ ಭರತ್ ಕುಮಾರ್ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಕನ್ನಡ ಪದಗಳ ಮೂಲವನ್ನು ವಿಶ್ಲೇಷಿಸಿ ಬರೆಯಲು ಒಂದು ಫೇಸ್ ಬುಕ್ ಪುಟವನ್ನು ಹೊರತಂದಿದ್ದಾರೆ:  https://www.facebook.com/padaguttu ಇಂಗ್ಲಿಷ್ ಭಾಷೆಯಲ್ಲಿ ಪದಗಳ ಹುಟ್ಟು ಹೇಗಾಗಿದೆ ಎಂಬುದನ್ನು ಕುರಿತು ಹಲವು ಪುಸ್ತಕಗಳಿವೆ. ಜೀ ಆರ್ ಈ ಪರೀಕ್ಷೆಗೆ (ಗ್ರಾಜುಯೇಟ್ ರೆಕಾರ್ಡ್ ಎಕ್ಸಾಮಿನೇಷನ್)  ಕುಳಿತುಕೊಳ್ಳುವ ವಿದ್ಯಾರ್ಥಿಗಳೆಲ್ಲರೂ ಈ ಪುಸ್ತಕಗಳನ್ನು ಬಹಳ ಭಯ-ಭಕ್ತಿಗಳೊಂದಿಗೆ ಓದುವುದನ್ನು ಕಾಣಬಹುದು. ನಾನೂ ಓದಿದೆ! ಉತ್ತರ ಅಮೆರಿಕಾಗೆ ಉನ್ನತ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳು ಅನಂತರ ಈ ಮಟ್ಟದ ಇಂಗ್ಲಿಷ್ ಬಳಸುವುದು ಅಷ್ಟರಲ್ಲೇ ಇದೆ! ನನ್ನ ಕೆಲವು ವಿದ್ಯಾರ್ಥಿಗಳು ಜೀ ಆರ್ ಈ ಪರೀಕ್ಷೆಯಲ್ಲಿ ಅತ್ಯದ್ಭುತ ವಿಜಯ ಸಾಧಿಸಿದವರು ತಮ್ಮ ಪ್ರಾಜೆಕ್ಟ್ ರಿಪೋರ್ಟ್ ಬರೆಯುವಾಗ ಬರೀ ತಪ್ಪು ಬರೆದು ನನ್ನ ಕೆಂಪು ಮಸಿಯ ಲೇಖನಿಗೆ ಸಾಕಷ್ಟು ಕೆಲಸ ಕೊಟ್ಟಿದ್ದಾರೆ. ಅದು ಹಾಗಿರಲಿ! ನಾನು ಇಂಥ ಒಂದು ಪುಸ್ತಕ ಓದುವಾಗ ಜಗರ್ನಾಟ್   (juggernaut)      ಎಂಬ ಇಂಗ್ಲಿಷ್ ಪದದ ಮೂಲ ಜಗನ್ನಾಥ ಎಂಬುದನ್ನು ತಿಳಿದು ಉತ್ಸಾಹಿತನಾಗಿದ್ದು ನನಗೆ ನೆನಪಿದೆ.  ಒರಿಸ್ಸಾದಲ್ಲಿರುವ ಪುರಿ ಜಗನ್ನಾಥನ ತೇರನ್ನು ಎಳೆಯುವಾಗ ಅದನ್ನು ನಿಗ್ರಹಿಸುವುದು ಸಾಧ್ಯವಿಲ್ಲ; ತನ್ನ ಮನಸ್ಸಿಗೆ ಬಂದ ಹಾಗೆ ಅದು ಚಲಿಸುತ್ತದೆಯಂತೆ! ಆಗ ದಾರಿಯಲ್ಲಿ