ಪೋಸ್ಟ್‌ಗಳು

Poem ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾವ್ಯಕಲೆಯ ಮೇಲೊಂದು ಟಿಪ್ಪಣಿ

ಇಮೇಜ್
ಮೂಲ: ಡೈಲಾನ್ ಥಾಮಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕನಸಿನಲ್ಲೂ ನಾನು ಎಣಿಸಿರಲಿಲ್ಲ: ಪುಸ್ತಕಗಳ ಹೊದ್ದಿಕೆಗಳ ನಡುವಣ ಜಗತ್ತಿನಲ್ಲಿ  ನಡೆಯುತ್ತಿರಬಹುದು ಏನೆಲ್ಲ, ಪದಗಳ ಉಷ್ಣ-ಶೈತ್ಯ ಬಿರುಗಾಳಿಗಳು, ಅದೆಂಥ ಪರಮಶಾಂತಿ, ಅದೆಂಥ ಗಟ್ಟಿಯಾದ ನಗು, ಇನ್ನೂ ಇಂಥವೇ ಮತ್ತು ಕಣ್ಣುಕುಕ್ಕುವ ಬೆಳಕು ಪುಟಗಳ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ, ಚೂರುಚೂರಾಗಿ ಪದ, ಪದ, ಮತ್ತು ಇನ್ನಷ್ಟು ಪದಗಳಾಗಿ ಪ್ರತಿಯೊಂದೂ ಪಡೆದುಕೊಂಡು ಅಮರತ್ವ ಬಾಳುತ್ತಾ ಅನಂತಕಾಲಕ್ಕೂ, ಪ್ರತಿಯೊಂದಕ್ಕೂ ತನ್ನದೇ ಆನಂದ, ವೈಭೋಗ,ವೈಚಿತ್ರ್ಯ,ಬೆಳಕು.

ಕೃಷ್ಣನ ಎಚ್ಚರಿಕೆ

ಇಮೇಜ್
ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್"  ಕನ್ನಡ ಭಾಷಾಂತರ: ಸಿ. ಪಿ. ರವಿಕುಮಾರ್  ವರುಷಗಟ್ಟಲೆ ಅಲೆದಲೆ ದು ಕಾಡುಮೇಡುಗಳಲ್ಲಿ  ಎಲ್ಲೆಡೆ ಕಾಲ್ತೊಡರುವ ವಿಘ್ನ ಬಾಧೆಗಳ  ಬಳ್ಳಿ  ಚುಚ್ಚುವ ಕಲ್ಮುಳ್ಳು, ಬಿಸಿಲು ಮಳೆಗಾಳಿಗೆ  ಪಾಂಡವರು ಮಾಗಿದರು ವಿಧಿಯ ಈ ದಾಳಿಗೆ  ಸೌಭಾಗ್ಯವೆಂಬುದು ಸದಾ ನಿದ್ರಿಸುವುದಿಲ್ಲ  ಬನ್ನಿ ನೋಡುವ ಮುಂದಿನ  ಕುತೂಹಲ!  ತಿಳಿಸಿ ಹೇಳಲು ಸ್ನೇಹಮಾರ್ಗವನ್ನು  ಸರಿದಾರಿಗೆ ಕರೆತರಲು ಎಲ್ಲರನ್ನೂ  ದುರ್ಯೋಧನನಿಗೆ ಸಮಯಕ್ಕೆ ನೀಡಿ  ತಿಳುವಳಿಕೆ  ತಪ್ಪಿಸಲು ಭೀಷಣ ವಿಧ್ವಂಸ ಮುಂದಕ್ಕೆ  ಭಗವಂತನು ಕಾಲಿಟ್ಟನು ಹಸ್ತಿನಾಪುರಕೆ  ಹೊತ್ತು ಪಾಂಡವರ ಸಂದೇಶ, ಹಾರೈಕೆ  "ನ್ಯಾಯ ನೀಡುವುದಾದರೆ ನೀಡು ನಮ್ಮರ್ಧ  ಅಡ್ಡ ಬಂದರೆ ಅದಕ್ಕೂ  ನಿನ್ನ ಕಡುಸ್ವಾರ್ಥ  ಕೊಟ್ಟು ತೀರಿಸು ಕೇವಲ ಐದು ಗ್ರಾಮಗಳು  ಇಟ್ಟುಕೋ ನಿನ್ನ ಬಳಿ  ಬೇರೆಲ್ಲವನ್ನೂ   ಅಷ್ಟರಲ್ಲೇ ನಮಗೆ ಸಿಕ್ಕುವುದು ತೃಪ್ತಿ  ಬಂಧುಕಲಹದಲ್ಲಿಲ್ಲ ನಮಗೆ ಆಸಕ್ತಿ" ಅದನ್ನೂ ದುರ್ಯೋಧನ ಕೊಡಲಾರದೆ ಹೋದ  ಪಡೆಯಲಾರದೆ ಹೋದ ಸಮಾಜದ ಆಶೀರ್ವಾದ  ಸಾಲದಕ್ಕೆ  ಹರಿಯನ್ನೇ ...

ನೇಯ್ಗೆಯ ಹಾಡು

ನೇಯ್ಗೆಯ ಹಾಡು  ಮೂಲ ಹಿಂದಿ ಕವಿತೆ: ಕೇದಾರನಾಥ್ ಸಿಂಗ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಎದ್ದೇಳಿ  ಮಲಗಿರುವ ದಾರಗಳೇ  ಎದ್ದೇಳಿ  ಎದ್ದೇಳಿ, ಚಕಚಕಿಸುತ್ತಿದೆ ಆಗಲೇ  ದರ್ಜಿಯ ಯಂತ್ರ   ಎದ್ದೇಳಿ, ಕೆರೆಯ ಕಟ್ಟೆಗೆ ಬಂದಾಗಿದೆ ಮಡಿವಾಳ ಎದ್ದೇಳಿ, ಶಾಲೆಗೆ ಹೊರಟುನಿಂತಿದ್ದಾರೆ  ಮಕ್ಕಳು ಬೆತ್ತಲೆ ಎದ್ದೇಳಿ, ನನ್ನ ಬೆಳಗಿನ ದಾರಗಳೇ   ಮತ್ತು ನನ್ನ ಸಂಜೆಯ ದಾರಗಳೇ ಎದ್ದೇಳಿ  ಎದ್ದೇಳಿ, ಎಲ್ಲೋ ಸಿಕ್ಕಿಹಾಕಿಕೊಳ್ಳುತ್ತಿದೆ ಎಳೆ  ಎದ್ದೇಳಿ, ಗಂಟಾಗಿದೆ ಎಲ್ಲೋ ಏನೋ  ಎದ್ದೇಳಿ, ಎಳೆದು ಕಟ್ಟಲು  ಕೊಂಚ ಕಡಿಮೆಯಾಗಿದೆ ಯಂತ್ರದಲ್ಲಿ ಸೂತ್ರ ಏಳಿ  ಅಂಗಿಗಳಲ್ಲಿ ಕಾಲುಚೀಲಗಳಲ್ಲಿ ಜೋಳಿಗೆಗಳಲ್ಲಿ ಹಾಸಿಗೆಗಳಲ್ಲಿ ಅದುಮಿಟ್ಟ ದಾರಗಳೇ ಏಳಿ ಏಳಿ, ಏಕೆಂದರೆ ಏನೋ ತಪ್ಪಾಗಿಹೋಗಿದೆ ಏಳಿ, ಏಕೆಂದರೆ  ನೇಯಬೇಕಾಗಿದೆ ಈ ಪ್ರಪಂಚದ ಎಲ್ಲಾ ಬಟ್ಟೆ ಮತ್ತೆ ಹೊಸದಾಗಿ ಏಳಿ ನನ್ನ ತುಂಡಾದ ದಾರಗಳೇ ನನ್ನ ಗೋಜಲಾದ ದಾರಗಳೇ ಏಳಿ ಏಳಿ ಏಕೆಂದರೆ ಆಗುತ್ತಿದೆ ನೇಯ್ಗೆಯ ಸಮಯ

ಗುರುವಿನ ದೃಷ್ಟಿ

ಇಮೇಜ್
(ಇವತ್ತು ಗುರು ನಾನಕ್ ಜಯಂತಿ. ಅವರ ಬಗ್ಗೆ ಹೇಳಲಾಗುವ ಒಂದು ಕಥೆಯನ್ನು ಕವಿತೆಯ ರೂಪದಲ್ಲಿ ನೀವು ಕೆಳಗೆ ಓದಬಹುದು) ಕಾಡುದಾರಿಯಲ್ಲಿ ಬರುವಾಗ ಒಮ್ಮೆ ಗುರು ನಾನಕ್ ಮತ್ತು ಮರ್ದಾನಾ ಬಾಡಿತು ಪಡುವಣದಲ್ಲಿ ಬೆಳಕು; ಇಳಿದುಕೊಳ್ಳಲು ಸಿಕ್ಕುವುದೇ ಸ್ಥಳವೆಂದು ನೋಡತೊಡಗಿದ ಶಿಷ್ಯನಿಗೆ ಕಂಡಿತು ಒಂದು ಮಣ್ಣಿನ ಜೋಪಡಿ. ಗೂಡಿನಲ್ಲಿ ವಾಸವಾಗಿದ್ದವನೊಬ್ಬ ನಿರ್ಗತಿಕ, ಗುರುಗಳ ಭಕ್ತ; ಓಡಿ ಬಂದು ಕಾಲಿಗೆ ಬಿದ್ದು ಒಳಗೆ ಕರೆದೊಯ್ದು ಉಪಚರಿಸಿದ ಮಾಡಿ ಬಡಿಸಿದ ಅಡುಗೆ ಮನೆಯಲ್ಲಿದ್ದ ಅಳಿದುಳಿದ ಆಹಾರ; ಬೇಡಿಕೊಂಡ ಸ್ವೀಕರಿಸಿರಿ ಬಡವನ ಮನೆಯ ಆತಿಥ್ಯವೆಂದು ಕೈಮುಗಿದು ಕೇಡೆನ್ನಿಸಿತು ಶಿಷ್ಯನಿಗೆ, ನುಂಗಲಾರದೆ ನುಂಗಿದ ತುತ್ತು ನೋಡಿ ಶಿಷ್ಯನ ಕಡೆಗೆ ನಾನಕ್ ಮುಗುಳುನಗೆ ನಕ್ಕು  ಆದೇಶಿಸಿದರು "ಒಡೆದು ಬಿಡು ಅವನ ಮಣ್ಣಿನ ಪಾತ್ರೆ!" ನಿರ್ವಾಹವಿಲ್ಲದೆ ಮರ್ದಾನಾ ಪಾಲಿಸಿದ ಆಜ್ಞೆ. ಮೂಡಣವು ಕೆಂಪಾದಾಗ ಹೊರಟು ನಿಂತಾಗ ಗುರುಗಳು  "ಕೆಡವಿಬಿಡು ಅವನ ಗುಡಿಸಲು!" ಎಂದು ತೋರಿದರು ಬೆರಳು! ಗೋಡೆಗಳನ್ನು ದೂಡಿ ಬೀಳಿಸಿದ ಶಿಷ್ಯ ಕಣ್ಣೀರು ಸುರಿಸುತ್ತ ಗೂಢವೇನಿದೆಯೋ ಅರಿಯಲಾರದೆ ಗುರು ನಾನಕರ ಚಿತ್ತ. ಆಡದೆ ಒಂದೂ ಮಾತು ಕೈಕಟ್ಟಿ ನಿಂತಿದ್ದ ಬಡವ!  ಬೀಳ್ಕೊಟ್ಟ ಪಾದಗಳಿಗೆ ಎರಗಿ ಸಾಷ್ಟಾಂಗ.  ಹೊಳೆದಂತೆ ಕಾಣಿಸಿತು ಏನೋ ಅವನ ಕಣ್ಣಿಗೆ ತೋಡಿದಾಗ ತಿಳಿಯಿತು ಗುಡಿಸಲು ನೆಲೆಯಾಗಿತ್ತು ಹೊನ್ನಿನ ಗ...

ಇನ್ಫರ್ಮೆಶನ್ ಟೆಕ್ನಾಲಜಿ

ಇಮೇಜ್

ದಾರಿ ತೋರುವ ಚಪ್ಪಲಿಗಳು

ಇಮೇಜ್
ಮೂಲ ... ಕಾಜಲ್ ಅಹ್ಮದ್ (ಕರ್ಡಿಸ್ತಾನ್ ಇರಾಕ್) ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ (ಇರಾಕ್ ದೇಶ ಅನೇಕ ರಾಷ್ಟ್ರಗಳಿಂದ ಬಹಿಷ್ಕಾರಕ್ಕೆ ಒಳಗಾದ ದೇಶ. ಬಹಳಷ್ಟು ದೇಶಗಳು ವ್ಯಾಪಾರ-ವಹಿವಾಟುಗಳ ವಿಷಯದಲ್ಲಿ ಇರಾಕ್ ದೇಶವನ್ನು ದೂರ ಇಟ್ಟಿವೆ. ಅನೇಕ ಯುವಕ-ಯುವತಿಯರು ತಮ್ಮ ದೇಶವನ್ನು ತೊರೆದು ಹೊರಡಲು ಸನ್ನದ್ಧರಾಗುವುದನ್ನು ಕಂಡಾಗ ಕವಯಿತ್ರಿಯ ಮನಸ್ಸು ಪ್ರತಿಕ್ರಯಿಸುತ್ತದೆ. ಹಿಂದೊಮ್ಮೆ ಬೆಟ್ಟಗಳನ್ನು ತೊರೆದು ನಗರಗಳಿಗೆ ಹೊರಟ ಜನರಂತೆಯೇ ತಾಯ್ನಾಡನ್ನು ತೊರೆದು ಜನ ಇನ್ನಿತರ ದೇಶಗಳಿಗೆ ಹೊರಟಿದ್ದಾರೆ. ಹಾಗೆ ಹೊರಟಾಗ ತಾಯ್ನಾಡಿನ ಹೃದಯದ (ರಾಜಧಾನಿ) ಮೂಲಕವೇ ವಿಮಾನ ಹತ್ತಿ ಹಾರಿಹೋಗಬೇಕು. ಹಾಗೆ ಹೋದ ಜನ ಪರದೇಶದಲ್ಲಿ ಸ್ವತಂತ್ರರಾಗಿ ತಲೆ ಎತ್ತಿ ಬದುಕುತ್ತಾರೆಯೇ? ಯಾರದೋ ಮನೆಯ ನೆಲಮಾಳಿಗೆಯಲ್ಲಿ ಗುಪ್ತವಾಗಿ ಬದುಕಬೇಕಾದ ಸಂದರ್ಭದಲ್ಲಿ ಸಿಲುಕಿಕೊಳ್ಳುವರೇ? ಅವರು ಕನಸಿದ ಬಣ್ಣಬಣ್ಣದ ಕಿಟಕಿಗಳ ಜಗತ್ತು ಅವರದ್ದಾದೀತೇ? ತಮ್ಮದೇ ದೇಶದಲ್ಲಿ ಅವರು ಇಂತಹ ಕನಸುಗಳನ್ನು ಕಾಣಲು ಸಾಧ್ಯವಿಲ್ಲವೇ?) ಅವನು ಬೆಟ್ಟಗಳಿಗೆ ಹೋಗುತ್ತಿದ್ದ ಕಾಲದಲ್ಲಿ ಶೂಗಳನ್ನು ಕಳಚಿಟ್ಟಾಗ ಅವು ನಗರದ ಕಡೆ ಮುಖ ಮಾಡುತ್ತಿದ್ದವು. ತನ್ನ ತಾಯ್ತಾಡು ಸ್ವತಂತ್ರವಾಗಲಿದೆ ಎಂಬುದೇ ಇದರರ್ಥ ಎಂದೇನೂ ಅವನು ಭ್ರಮಿಸಲಿಲ್ಲ. ಈಗ ಅವನು ನಗರದಲ್ಲೇ ವಾಸವಾಗಿದ್ದಾನೆ. ಶೂಗಳನ್ನು ಕಳಚಿಟ್ಟಾಗ ಅವು ಮುಖ ಮಾಡುತ್ತವೆ ದೂರದ ಯಾವುದೋ ನಾಡಿ...

ಏಕಾಂಗಿನಿ ಭೂಮಿ

ಇಮೇಜ್
ಮೂಲ ... ಕಾಜಲ್ ಅಹ್ಮದ್ (ಕರ್ಡಿಸ್ತಾನ್, ಇರಾಕ್) ಕನ್ನಡಕ್ಕೆ ... ಸಿಪಿರವಿಕುಮಾರ್ (ಕವಿತೆಯ ಸ್ವಾರಸ್ಯ: ಇರಾಕ್ ಅನೇಕ ರಾಷ್ಟ್ರಗಳಿಂದ ಬಹಿಷ್ಕೃತವಾದ ದೇಶ. "ಶ್ವೇತಕಾಯ" ಎನ್ನುವುದು ಇಲ್ಲಿ ಯಾವ ಅರ್ಥ ಹೊಮ್ಮಿಸುತ್ತಿದೆ ಎಂದು ಯೋಚಿಸಿ. ಇದೇ ರೀತಿ "ತಾರೆ" ಎನ್ನುವ ಪದದಲ್ಲೂ ನಿಮಗೆ ವಿಶಿಷ್ಟ ಅರ್ಥ ಗೋಚರಿಸಬಹುದು. ತಮ್ಮ ದೇಶದ ವಿರುದ್ಧ ಎಷ್ಟೆಲ್ಲಾ ನಿಂದನೆ/ಬಹಿಷ್ಕಾರಗಳು ಇದ್ದರೂ ದೇಶದ ಜನರಿಗೆ ತಾಯಿನಾಡನ್ನು ಕುರಿತು ಅಭಿಮಾನ ಇದ್ದೇ ಇರುತ್ತದೆ. ತಮ್ಮ ತಾಯಿನಾಡು ಏಕಾಂಗಿನಿ ಕನ್ಯೆಯಂತೆ ಕವಯಿತ್ರಿಗೆ ಕಾಣುತ್ತಾಳೆ. ಎಲ್ಲ ಕಿರಣಗಳನ್ನೂ ತಾನೇ ಕದಿಯುವ ಸೂರ್ಯ ಚಂದ್ರನ ಮೂಲಕ ಒಂದಿಷ್ಟು ಬೆಳಕನ್ನು ದಯಪಾಲಿಸುವುದು ಏನನ್ನು ಸೂಚಿಸುತ್ತದೆ?) ವಿಶ್ವದ ಒಂದಾದರೂ ಶ್ವೇತಕಾಯ ಅವಳಿಗೆ ಆನ್ನುವುದಿಲ್ಲ ಕ್ಯಾರೇ. ನಕ್ಕು ಮಾತಾಡಿಸುವುದಿಲ್ಲ ಒಂದಾದರೂ ತಾರೆ. ಅದೆಷ್ಟೋ ಗುಲಾಬಿ ಅದೆಷ್ಟೋ ಸುಂದರ ಭಾವನೆ ದಫನವಾಗಿದ್ದರೂ ಹಾತೊರೆಯುತ್ತಾಳೆ ಒಂದು ನೋಟಕ್ಕಾಗಿ, ಒಂದು ಗಂಧಕ್ಕಾಗಿ. ಏಕಾಂಗಿನಿಯಾಗಿದ್ದಾಳೆ ಧೂಳಿನ ಗೋಳವಾಗಿದ್ದಾಳೆ ವಸುಂಧರೆ. ಚಂದ್ರನ ತೇಪೆ ಹಾಕಿದ ಅಂಗಿ ನೋಡಿ ಅವಳಿಗೆ ತಿಳಿಯುತ್ತದೆ ಸೂರ್ಯನ ವಂಚನೆ. ಎಲ್ಲ ಕಿರಣಗಳನ್ನೂ ತಾನೇ ಕದ್ದು ತಮ್ಮನ್ನು ಬಾಡಿಗೆದಾರರಂತೆ ಕಾಣುತ್ತಾನೆ.

ಹಣ್ಣು ವ್ಯಾಪಾರಿಯ ಫಿಲಾಸಫಿ

ಇಮೇಜ್
ಮೂಲ ಕವಯಿತ್ರಿ ... ಕಾಜಲ್ ಅಹ್ಮದ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಓ ಗೆಳೆಯಾ, ನೀನು ನೇರಳೆಯ ಹಾಗೆ ಒಂದೇ ಸಲ ಕಚ್ಚಿದರೂ ಉಗಿದುಬಿಡುತ್ತೇನೆ ಒಳಗಿನ ಹೂರಣವನ್ನಷ್ಟೂ. ಓ ನನ್ನ ಪೂರ್ವದ ಪ್ರೇಮಾಗ್ನಿಯೇ, ನೀನು ಒಂದು ಕಿತ್ತಳೆಯ ಹಾಗೆ, ಸಲೀಸಾಗಿ ಕಳಚಿಬಿಡುವೆ. ಕೆಲವೊಮ್ಮೆ ನೀನು ಸೇಬಿನ ಹಾಗೆ. ಸಿಪ್ಪೆ ಸಮೇತವಾದರೂ ಸರಿ ಸಿಪ್ಪೆ ಇಲ್ಲದೆಯೂ ಓಕೆ. ಪಕ್ಕದ ಮನೆಯವರೇ! ನೀವು ಹಣ್ಣಿನ ಚಾಕುವಿನಂತೆ. ನಮ್ಮ ಊಟದ ಮೇಜಿಗೂ ನಿಮಗೂ ಬಿಡಿಸಲಾರದ ನಂಟು. ಬೇಸರಿಸಬೇಡಿ ಹೀಗೆ ಹೇಳಿದೆನೆಂದು: ಹಣ್ಣಿನ ಚಾಕು ನಿಷ್ಟ್ರಯೋಜಕ ವಸ್ತು ಓ ತಾಯ್ನಾಡೇ! ನೀನು ನಿಂಬೆಹಣ್ಣಿನ ಹಾಗೆ. ನಿನ್ನ ಹೆಸರು ಹೇಳಿದಾಗ ಎಲ್ಲರ ಬಾಯಲ್ಲಿ ಊರುತ್ತದೆ ನೀರು. ನನ್ನ ಮೈಮೇಲೆ ಏಳುತ್ತದೆ ಮುಳ್ಳು. ಓ ಅಪರಿಚಿತ! ಕಲ್ಲಂಗಡಿಯಂತೆ ನೀನು, ಖಂಡಿತ. ನಾನು ಚೂರಿಯ ಅವತಾರ ತಾಳದೇ ತಿಳಿಯದು ನಿನ್ನ ಅಂತರಂಗ.

ಕಾವ್ಯ ಪರಿಚಯ

ಇಮೇಜ್
ಮೂಲ: ಬಿಲ್ಲಿ ಕಾಲಿನ್ಸ್ (ಅಮೆರಿಕಾ ಸಂಸ್ಥಾನ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   (ಚಿತ್ರಕೃಪೆ - ವಿಕಿಪೀಡಿಯಾ) ನಾನು ಅವರಿಗೆ ಹೇಳಿದೆ: ಬಣ್ಣದ ಸ್ಲೈಡ್ ನೋಡಿದ ಹಾಗೆ ಕವಿತೆಯನ್ನು ತೊಗೊಂಡು ಬೆಳಕಿಗೆ ಹಿಡಿದು ನೋಡಿರಪ್ಪಾ ಅಂತ.  ಅಥವಾ ಅದರ ಗೂಡಿಗೆ ಕಿವಿ ಹಚ್ಚಿ ಕೇಳಿ. ಇಲ್ಲವೇ ಕವಿತೆಯೊಳಗೆ ಒಂದು ಇಲಿಯನ್ನು ಇಳಿಬಿಟ್ಟು ಅದು ಹೇಗೆ ಹೊರಬರುತ್ತದೋ ಗಮನಿಸಿ. ಇಲ್ಲವೇ ಕವಿತೆಯ ಕೋಣೆಯನ್ನು ಹೊಕ್ಕು ಅದರ ಗೋಡೆಗಳನ್ನು ಸವರುತ್ತಾ ಲೈಟ್ ಸ್ವಿಚ್ ಏನಾದರೂ ಕೈಗೆ ಹತ್ತುತ್ತದೋ ನೋಡಿ. ಕವಿತೆಯ ತರಂಗಗಳ ಮೇಲೆ ವಾಟರ್-ಸ್ಕೀ ಮಾಡುತ್ತಾ ದಡದಲ್ಲಿರುವ ಕವಿಯ ಹೆಸರಿನತ್ತ ಕೈ ಬೀಸಿ.  ಆದರೆ ಅವರೋ ಕವಿತೆಯನ್ನು ಹಗ್ಗದಿಂದ ಕಟ್ಟಿ ಒಂದು ಕುರ್ಚಿಗೆ ಅದಕ್ಕೆ ಚಿತ್ರಹಿಂಸೆ ಕೊಟ್ಟು ಅದರ ಬಾಯಿಂದ ಹೇಳಿಸಲು ಹೊರಟಿದ್ದಾರೆ ತಪ್ಪೊಪ್ಪಿಗೆ. ಒಂದು ಪೈಪ್ ತೊಗೊಂಡು  ಹೊಡೆಯುತ್ತಿದ್ದಾರೆ ಕವಿತೆಗೆ ರಪರಪ  ಏನೆಂದು ಬಗೆಯಲು  ಅದರ ನಿಜವಾದ ಅರ್ಥ. ಕವಿತೆಯ ಸ್ವಾರಸ್ಯ:  ಕವಿತೆಯಲ್ಲಿ ನಿಮಗೆ ಬೇಕಾದದ್ದು ಹುಡುಕಬಹುದು! ನಿಜವಾದ ಅರ್ಥಕ್ಕಾಗಿ ವ್ಯರ್ಥ ಹಿಂಸೆ ಕೊಡುವುದು (ಅಥವಾ ಕೊಟ್ಟುಕೊಳ್ಳುವುದು) ಬೇಡ ಎಂಬುದನ್ನು ಕವಿ ಹಾಸ್ಯಮಯವಾಗಿ ನಿರೂಪಿಸಿದ್ದಾನೆ. ಇದೊಂದು  ಮಕ್ಕಳಿಗಾಗಿ  ಬರೆದ ಕವಿತೆ.

ಕನಸಿನೊಳಗಿನ್ನೊಂದು ಕನಸು

ಇಮೇಜ್
­­­ ಕನಸಿನೊಳಗಿನ್ನೊಂದು  ಕನಸು  ಮೂಲ  ಇಂಗ್ಲಿಷ್ ಕವಿತೆ: ಎಡ್ಗರ್ ಆಲನ್ ಪೋ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಎಡ್ಗರ್ ಆಲೆನ್ ಪೋ (ಹತ್ತೊಂಬತ್ತನೇ ಶತಮಾನ) ಅಮೆರಿಕನ್ ಸಾಹಿತ್ಯಕಾರರಲ್ಲಿ ಅಗ್ರಮಾನ್ಯ ಹೆಸರು. ಜೀವನದಲ್ಲಿ ತುಂಬಾ ಯಾತನೆ ಅನುಭವಿಸಿದ ವ್ಯಕ್ತಿ. ನಲವತ್ತನೆಯ ವಯಸ್ಸಿಗೇ ತೀರಿಕೊಂಡ.  ಈತನ “ದ ರೇವೆನ್” ಕವಿತೆಯನ್ನು ಪ್ರಥಮ ಹಾರರ್ ಸಾಹಿತ್ಯ ಎಂದೂ ಕೆಲವರು ಪರಿಗಣಿಸುತ್ತಾರೆ.  ತನ್ನ 28ನೇ ವಯಸ್ಸಿನಲ್ಲಿ ತನ್ನ ಹದಿಮೂರು ವರ್ಷದ ಸಂಬಂಧಿಯೊಂದಿಗೆ ಮದುವೆಯಾದ. ಈಕೆಯ ಸಾವು ಅವನನ್ನು ದುಃಖಕ್ಕೆ ದೂಡಿತು. ಈ ಕವಿತೆಯನ್ನು ಅವನು ಬರೆದದ್ದು ಅದೇ ಸಂದರ್ಭದಲ್ಲಿರಬಹುದು.    ಇ ಗೋ ಬಂದಾಗಿದೆ ಬೀಳ್ಕೊಡುವ ಹೊತ್ತು ನಿನ್ನ ಹಣೆ ಮೇಲೊಂದು ಹೂಮುತ್ತನಿತ್ತು ಯೋಚಿಸುತ್ತೇನೆ ನೀನು ನನ್ನನ್ನು ಕುರಿತು ಆಗಲೇ ಹೇಳಿದೆಯಲ್ಲ ಒಂದು ಮಾತು: ಕನಸೆಂದೆಯಲ್ಲ ನನ್ನ ಇಡೀ ಬದುಕು ನಿಜವೆನ್ನಿಸುತ್ತಿದೆ ಆ ಮಾತು ನನಗೂ ಬಾಡಿಹೋದರೇನಾಯ್ತು ಒಂದೇ ದಿನದಲ್ಲಿ ನಿಜವಲ್ಲವೇ ಬಾಡಿದ್ದು ಭರವಸೆಯ ಬಳ್ಳಿ? ನಾವು ನೋಡಿದ್ದು, ನಾವು ಅನುಭವಿಸುವ ಎಲ್ಲವೂ ಮಾತ್ರವೇ ಒಂದು ಕನಸಿನೊಳಗಿನ್ನೊಂದು ಕನಸು!  ನಿಂ ತಿದ್ದೇನೆ ಕಡಲತೀರದಲ್ಲಿ ಒಬ್ಬನೇ ಭೋರ್ಗರೆಯುತ್ತಾ ಬಂದು ಅಪ್ಪಳಿಸುವ ಹೆದ್ದೆರೆ ನನ್ನ ಕೈಯಲ್ಲಿರುವ ಹಿಡಿ ಹೊನ್ನು ಮರಳು ಹಿಡಿಯಲಾಗದೆ ಯಾಕೋ ಸೋಲುತ್ತಿವೆ ಬೆರಳು...

ಶೇಕ್ಸ್ ಪಿಯರ್ - ಸಾನೆಟ್ 116

ಇಮೇಜ್
ಮೂಲ ಕವಿತೆ - ಶೇಕ್ಸ್ ಪಿಯರ್ - ಸಾನೆಟ್ 116 ಕನ್ನಡಕ್ಕೆ - ಸಿ ಪಿ ರವಿಕುಮಾರ್ ಒಂದಾಗಲೆರಡು ಮನಗಳು ಅಡೆತಡೆಗಳಿವೆಯೆಂದು  ನಾನು ಒಪ್ಪುವುದಿಲ್ಲ  ಹೊಂದಾಣಿಕೆ ಮಾಡಿಕೊಳ್ಳುತ್ತಾ ಹೋಗುವುದು ಪ್ರೇಮವೇ ಅಲ್ಲ ಬಂದು ಹೋಗುತ್ತವೆ ಮಾತುಗಳು ನೂರೆಂಟು; ಮನಸ್ಸು ಚಂಚಲ; ಸಂದೇಹ, ಸಂತಾಪಗಳು ಬಂದಾಗ ಭಗ್ನವಾಗುವುದೇ ಪ್ರೇಮ? ಇಲ್ಲ! ಪರೀಕ್ಷೆ ಎಂದು ಸ್ವೀಕರಿಸಿ ಗೆಲ್ಲುತ್ತದೆ. ಪ್ರೇಮವೆಂಬುದು  ನೆರೆಯುಕ್ಕುವ  ಕಡಲಲ್ಲೂ ನಂದದೆ ನಿರ್ಭಯವಾಗಿ ನಿಲ್ಲುವ ದೀಪಗಂಬದ ಹಾಗೆ; ಕಂಗೆಡಿಸುವ  ಅಂಧಕಾರದಲ್ಲಿ ದಿಸೆಗೆಟ್ಟ ದೋಣಿಗಳಿಗೆ ದಿಕ್ಕುಗಾಣಿಸುವ  ದಾರಿದೀಪಕ್ಕೆ  ಇಂತಿಷ್ಟು ಎಂದು ಬೆಲೆಕಟ್ಟಲಾದೀತೇ? ಎತ್ತರ ಎಷ್ಟು ಅಡಿ ಎಷ್ಟು ಅಂಗುಲ   ಎಂದು ಹೇಳಬಹುದೇನೋ! ಕಾಲದ ಅತಿರೇಕಗಳಿಗೆ ಅಂಜದೆ ನಿಂದಿದೆ ಎದೆ- ಗುಂದದೆ. ಕಾಲನ ಬಾಗುಗತ್ತಿಯ ಹೊಡೆತಕ್ಕೆ ಕಳೆಗುಂದಬಹುದು ಹೊರಗಿನ  ಅಂದ;  ಬದಲಾಗದು ಆದರೂ ಒಳಗಿನ ಸೌಂದರ್ಯ ಒಂದಿಷ್ಟೂ.  ಸಂದರೂ ಎಷ್ಟೇ ಕಾಲಮಾನಗಳೂ ಬದಲಾಗದೆ ನಿಲ್ಲುವುದು ಸಾವು  ಸಂಧಿಸುವವರೆಗೂ. ಇದು ನಿಜವಲ್ಲವಾದರೆ ಪ್ರಮಾಣಿಸುವೆ ಸುಳ್ಳೆಂದು ನಾನು  ಹಿಂದೆ ಬರೆದದ್ದೆಲ್ಲ; ಹಿಂದೆ ಯಾರಾದರೂ ಪ್ರೇಮಿಸಿದರೆಂಬುದೂ ಸುಳ್ಳು. 

ಹರೀಶ್ ನಂಜಪ್ಪ ಅವರಿಗೆ

ಹರೀಶ್ ನಂಜಪ್ಪ ಅವರಿಗೆ  ೧೬-೨-೧೬ : ಸಮತೋಲನವುಳ್ಳ ದಿನಾಂಕ ಅಲ್ಲವೇ? ಆದರೆ ಹರೀಶ್ ನಂಜಪ್ಪ ಅವರಿಗೆ ಈ ದಿವಸ ಶುಭಕರವಾಗಲಿಲ್ಲ. ರಸ್ತೆ ಅಪಘಾತದಲ್ಲಿ ಅವರು ಭೀಕರ ರೀತಿಯಲ್ಲಿ ಸಾವನ್ನಪ್ಪಿದರು. ಅವರ ದೇಹ ಎರಡು ತುಂಡುಗಳಾಗಿ  ಆಚೀಚೆ ಬಿದ್ದಿತ್ತು. ಜನ ಅದನ್ನು ಚಿತ್ರೀಕರಿಸಿಕೊಂಡು ನಿಂತರು. ಕೊನೆಗೊಬ್ಬ ಕರುಣಾಳು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ದ. ದಾರಿಯಲ್ಲಿ ಅವರು ಮಾತಾಡುತ್ತಿದ್ದರು. "ನಾನು ಬದುಕಿ ಉಳಿಯುವುದಿಲ್ಲ, ನನ್ನ ಕಣ್ಣುಗಳನ್ನು ದಾನ ಮಾಡಿ," ಎಂದು ತಮ್ಮ ಅಂತಿಮ ಇಚ್ಛೆ ವ್ಯಕ್ತ ಪಡಿಸಿದರು.  ಅವರ ಚೇತನಕ್ಕೆ ಇದೊಂದು ಶ್ರದ್ಧಾಂಜಲಿ.   ಸಿ. ಪಿ. ರವಿಕುಮಾರ್  ನಮ್ಮನ್ನು ಕ್ಷಮಿಸಿ ಹರೀಶ್ ನಮಗೆ ವಿಪರೀತ ತರಾತುರಿ ಇಪ್ಪತ್ತೊಂದನೇ ಶತಮಾನದಲ್ಲಿ ಹಾಗಿರುತ್ತದೆ ಎದೆ ಉರಿ ಯಾರಿಗೂ ನಾವು ನಿಲ್ಲುವುದಿಲ್ಲ ಇದೋ ಹೇಳುತ್ತೇವೆ ಸಾರಿಸಾರಿ ಗಂಟೆಗೆ ಎಂಬತ್ತು ವೇಗದಲ್ಲಿ ನಮ್ಮದು ಮುಕ್ತ ಹೆದ್ದಾರಿ ವೇಗವಾಗಿ ಹೊರಟಿದ್ದೇವೆ ಮುಟ್ಟಬೇಕಾಗಿದೆ ಗುರಿ ಯಾವುದು ಗುರಿ ಎಂಬುದೆಲ್ಲ ಕಲ್ಪನೆಯ ನವಿಲುಗರಿ!   ವೇಗವಾಗಿ ದಾಟಲಾರದ ಮುದುಕರು ಮಕ್ಕಳು-ಮರಿ ಕಾಯುತ್ತಿರಿ ಹಹ್ಹಹ್ಹ!   ಹಕ್ಕು ನಮ್ಮದೀಗ, ಸಾರಿ! ನಮ್ಮನ್ನು ಕ್ಷಮಿಸಿ ಹರೀಶ್ ನಮಗಿದೆ ವಿಪರೀತ ತರಾತುರಿ ಇಪ್ಪತ್ತೊಂದನೇ ಶತಮಾನದಲ್ಲಿ ಹಾಗಿರುತ್ತದೆ ಎದೆ ಉರಿ ನಮ್ಮ ಆತುರಕ್ಕೆ ಬಲಿ...

ನಾವು ಆಡುತ್ತೇವೆ ಅಸಹನೆಯ ಮಾತು

ಇಮೇಜ್
ಸಿ ಪಿ ರವಿಕುಮಾರ್  ಮಳೆ ಬಂದು ಟ್ರಾಫಿಕ್ ಜಾಮಾದರೆ ನಾನು ಸಿಟ್ಟಾಗುತ್ತೇನೆ - ಹೊಳೆಯೇ ಹರಿದು ಬರುತ್ತಿದೆ ಚೆನ್ನೈ ನಗರದಲ್ಲಿ.  ಅಸಾಧ್ಯ ನೋವೆಂದು ಮುಖ ಕಿವಿಚುತ್ತೇನೆ    ಚರ್ಮ ಕಿತ್ತರೆ ಬೆರಳಿನ ಉಗುರಿನಲ್ಲಿ. ಬಾಂಬ್ ದಾಳಿಯಲ್ಲಿ ಇವನ ಕೈ ಕತ್ತರಿಸಿಹೋಗಿದೆ,    ಕಂಡಕಂಡವರನ್ನು ಸುಡುತ್ತಿದ್ದಾರೆ ಉಗ್ರರಲ್ಲಿ.  ಮನೆಗೆ ಬರುವುದು ತಡವಾದರೆ ಸಿಟ್ಟಾಗುತ್ತೇನೆ    ತಡೆಯದೆ ಹಸಿವು-ಬಾಯಾರಿಕೆ. ಅದೆಷ್ಟು ಜನರಿಗೆ ಇದು ನಿತ್ಯದ ಚಡಪಡಿಕೆ.  ಆಫ್ರಿಕಾದಲ್ಲಿ, ಇರಾಕಿನಲ್ಲಿ, ಆಫ್ಘಾನಿಸ್ತಾನದಲ್ಲಿ, ಸಿರಿಯಾದಲ್ಲಿ ಜಗತ್ತಿನ ಪ್ರತಿಯೊಂದು ಮೂಲೆಯಲ್ಲಿ  ನಿರಂತರವಾಗಿ ಸಾಗಿದೆ ಮಾನವನಿಂದ ಮಾನವನ ಬೇಟೆ. ಜನ ಕಂಗಾಲಾಗಿದ್ದಾರೆ,  ಹಸಿದಿದ್ದಾರೆ, ನೊಂದಿದ್ದಾರೆ, ಉಟ್ಟಬಟ್ಟೆಯಲ್ಲೇ ಓಡಿ ಬಂದಿದ್ದಾರೆ, ಮನೆ-ಮಾರು ಕಳೆದುಕೊಂಡಿದ್ದಾರೆ.  ಹಸಿವೆಯಿಂದ ಅಳುವ ಮಕ್ಕಳು   ಕಡಲಿನ ಪಾಲಾಗಿವೆ.  ಸಾಗರವೂ ತನಗೆ ಬೇಡವೆಂದು  ದಡಕ್ಕೆ ತಂದು ಹಾಕಿದೆ.  ಹೋದೆಡೆಗೆ ಇವರನ್ನು ಹಿಂಬಾಲಿಸುತ್ತದೆ ಸಂಶಯದ ದೃಷ್ಟಿ.  ಹೋದೆಡೆಗೆ ಇವರ ಮೇಲೆ ಸುರಿಯುತ್ತದೆ ಬೈಗುಳದ ವೃಷ್ಟಿ.  ಉಗ್ರರಿಂದ ಓಡಿ ಬಂದವರಿಗೇ  ಉಗ್ರರೆಂಬ ಹಣೆಪಟ್ಟಿ. ಎದೆಯನ್ನು ಬಗೆದು ತೋರಿಸುವಂತಿದ್ದರೆ ಮನುಷ್ಯ! ಕಾಣಿಸುವಂತಿದ್ದರೆ ಮಸ್ತಿಷ್ಕ...

ಇತಿಹಾಸಕ್ಕೆ ವಿದಾಯ

ಇಮೇಜ್
ಸಿ ಪಿ ರವಿಕುಮಾರ್  ಯಾರಾದರೂ ನನ್ನನ್ನು ಮಾಡಿದರೆ ಶಿಕ್ಷಣ ಸಚಿವ ತಕ್ಷಣ ಮಾಡುವೆನು ಒಂದು ಅತಿಮುಖ್ಯ ಕೆಲಸ! ಸಿಲಬಸ್ ಪುಸ್ತಕದಿಂದ ಹೊಡೆಸಿಹಾಕಿಬಿಡುವೆ ಹಿಸ್ಟರಿ, ಚರಿತ್ರೆ, ಇತಿಹಾಸ. ಆಗುವುದೇ ಇಲ್ಲ ಆಗ ಇತಿಹಾಸದ ಪುನರಾವರ್ತನೆ ಮಾಯವೇ ಆಗಿಬಿಡುವುದು ದ್ವೇಷ.  ಮಾಗದಂತೆ ಎಂದೂ ನೂರಾರು ವರ್ಷದ ಗಾಯ ಕಿತ್ತುತ್ತಲೇ ಇರುವ ಇತಿಹಾಸದ ಪಾಠಗಳು! ಎಂದೋ ಉರಿದ ಅಗ್ನಿಗೆ ಇನ್ನಷ್ಟು ಉರುವಲನ್ನಿಟ್ಟು ಕೆದಕುವ ಈ ಆಟಗಳು! ಹಳೆಯ ತಪ್ಪುಗಳನ್ನು ಮತ್ತೆ ಮಾಡದೇ ಇರುವುದು ಇತಿಹಾಸದಿಂದ ಕಲಿಯಬೇಕಾದ ಪಾಠ. ನಮಗಿಲ್ಲ ಅದಕ್ಕೆ ಬೇಕಾದ ತಾಳ್ಮೆ ಮತ್ತು ತಯಾರಿ ಆದ್ದರಿಂದ ಹೇಳೋಣ ಇತಿಹಾಸಕ್ಕೆ ಟಾಟಾ. -- ಸಿ ಪಿ ರವಿಕುಮಾರ್

ಇತಿಹಾಸ

ಇಮೇಜ್
ಸಿ ಪಿ ರವಿಕುಮಾರ್  ನಾಣ್ಯದ ಒಂದು ಮುಖ ಸಾಚಾ, ಇನ್ನೊಂದು ಮುಖ ಖೋಟಾ. ಅವನು ಸಾಚಾ ಮುಖ ಮೇಲಿಟ್ಟು ಕೊಡುತ್ತಾನೆ, ಹೇಗೋ ನಡೆಯಬಹುದು ಆಟ. ನಾಣ್ಯಕ್ಕೆ ಬದಲಾಗಿ ಅವನಿಗೆ ಸಿಕ್ಕಿದ್ದು - ಖೋಟಾ ಮಾಲು + ಸವಕಲು ನಾಣ್ಯ ಚಿಲ್ಲರೆ. ನಿನ್ನದು ಖೋಟಾ ಎಂದು ಜಗಳವಾಡುತ್ತಾರೆ, ಉರಿದುಬೀಳುತ್ತಾರೆ ಮಾತೆತ್ತಿದರೆ. ಯೋಚಿಸಿದರೆ ತೋರುವುದು ನಿಮಗೆ, ಸ್ವಲ್ಪ ಹೀಗೇ ಅಲ್ಲವೇ ನಮ್ಮ ಇತಿಹಾಸ? ಸಾಚಾ ಮುಖ ಕಾಣಿಸಿತೆ ನಿನಗೆ, ಅವನಿಗೆ ಖೋಟಾಮುಖವಾಗುತ್ತಿದೆ ಭಾಸ. ಹಳೆಯದನ್ನೆಲ್ಲಾ ತೆಗೆದು ಪ್ರತಿನಿತ್ಯವೂ ಜಗಳ, ಗೊತ್ತಾಗುತ್ತಿಲ್ಲ ನಾನು ಅಳಲಾ ಅಥವಾ ನಗಲಾ? ಸಿ ಪಿ ರವಿಕುಮಾರ್