ಪೋಸ್ಟ್‌ಗಳು

women ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒಂದು ಪುರಾತನ ಸಂಜ್ಞೆ

ಇಮೇಜ್
  ಒಂದು ಪುರಾತನ ಸಂಜ್ಞೆ ಮೂಲ: ಎಡ್ನಾ ಸೆಂಟ್ ವಿನ್ಸೆಂಟ್ ಮಿಲೇ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಹಿನ್ನೆಲೆ: ಯೂಲಿಸಿಸ್ ಯುದ್ಧಕ್ಕೆ ಹೋದಾಗ ಅವನ ಹೆಂಡತಿ ಪಿನೊಲಪಿ ಅವನಿಗಾಗಿ ಕಾಯುತ್ತಾಳೆ. ವರ್ಷಗಳು ಕಳೆದರೂ ಅವನು ಹಿಂತಿರುಗಿದೇ ಹೋದಾಗ ಅನೇಕರು ಅವಳನ್ನು ವರಿಸಲು ಮುಂದೆ ಬರುತ್ತಾರೆ. ಅವಳು ಒಂದು ವಸ್ತ್ರವನ್ನು ಹೆಣೆಯಲು ಪ್ರಾರಂಭಿಸಿ ಹೆಣಿಗೆ ಮುಗಿದಾಗ ತಾನು ಮತ್ತೊಮ್ಮೆ ಮದುವೆ ಆಗುತ್ತೇನೆ ಎಂದು ಆಶ್ವಾಸನೆ ನೀಡುತ್ತಾಳೆ. ಬೆಳಗ್ಗೆ ವಸ್ತ್ರ ಹೆಣೆದು ರಾತ್ರಿ ಅದನ್ನು ಬಿಚ್ಚಿಬಿಡುತ್ತಾಳೆ. ಹೀಗಾಗಿ ವಸ್ತ್ರದ ಹೆಣಿಗೆ ಮುಗಿಯುವುದೇ ಇಲ್ಲ. ಕೊನೆಗೆ ಯೂಲಿಸಿಸ್ ಹಿಂದಿರುಗಿ ಬಂದಾಗ ತನ್ನ ಪತ್ರ್ನಿ ತನಗೆ ನಿಷ್ಠೆಯಿಂದ ಕಾಯುವುದನ್ನು ಕಂಡು ಭಾವುಕನಾಗುತ್ತಾನೆ. (ಯುದ್ಧದಿಂದ ಹಿಂದಿರುಗುವಾಗ ಅವನು  ಪರಸ್ತ್ರೀಯರೊಂದಿಗೆ ಸಂಬಂಧ ಹೊಂದಿರುತ್ತಾನೆ.) ಸೆರಗಿನ ತುದಿಯಿಂದ ಒರೆಸಿಕೊಂಡಾಗ ಒದ್ದೆಗಣ್ಣು  ಯೋಚಿಸಿದೆ, ಇದನ್ನೇ ಮಾಡಿದಳು ಪಿನೋಲಪಿ ಸಹ ಒಮ್ಮೆಯಲ್ಲ  ದಿನವಿಡೀ ಮಾಡಿದಳು ಇದನ್ನು ಸುಲಭವೇ ಹೇಳಿ ದಿನವಿಡೀ ಹೆಣೆಯುವುದು ವಸ್ತ್ರ ಮತ್ತು ಇಡೀ ರಾತ್ರಿ ಬಿಚ್ಚುವುದು ಹಾಕಿದ ಹೆಣಿಗೆ? ಸೋತುಹೋಗುವುವು ತೋಳು, ಬಿಗಿಯುವುದು ಕುತ್ತಿಗೆ  ಯಾವಾಗ ಆದೀತೋ ಎಂದು ಕಾದು ಬೆಳಗಿನ ಹೊತ್ತಿಗೆ ಎಲ್ಲಿರುವನೋ ಗಂಡ ಮತ್ತು ಬರುವನೋ ಎಂದಿಗೆ  ಎಂದು ಪರಿತಪಿಸಿ ವರ್ಷಗಟ್ಟಲೆ  ದುಃಖ ಉಮ್ಮಳಿಸಿ ಒಮ್ಮೆಲೇ ಮತ್ತೆ ಬೇರೇ...

ಪತಿತೆ

ಇಮೇಜ್
  ಮೂಲ: ಥಾಮಸ್ ಹಾರ್ಡಿ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ “ಓಹ್ ಅಮೀಲಿಯಾ! ಇದಕ್ಕಿಂತಲೂ ಹೇಳು ವೈಚಿತ್ರ್ಯ ಇದ್ದೀತೆ ಒಂದು! ಕನಸಿನಲ್ಲೂ ಎಣಿಸಿರಲಿಲ್ಲ ಪಟ್ಟಣದಲ್ಲಿ ನಿನ್ನನ್ನು ಭೇಟಿಯಾಗುವೆನೆಂದು! ಎಷ್ಟು ಬೆಲೆ ಬಾಳುವ ಬಟ್ಟೆ ಧರಿಸಿರುವೆ, ಏನು ಕತೆ!” “ಗೊತ್ತಿರಲಿಲ್ಲವೇ ನಿನಗೆ ನಾನೊಬ್ಬ ಪತಿತೆ.” “ಹಳ್ಳಿ ಬಿಟ್ಟು ಹೊರಟೆ ಬರಿಗಾಲಲ್ಲಿ, ಚಿಂದಿ ತೊಟ್ಟು. ಹೊಲದಲ್ಲಿ ಕೆಲಸ ಮಾಡಿ ಮಾಡಿ ಕಂಗೆಟ್ಟು. ಈಗ ಕೈಗೆ ಬಳೆ, ಕಿವಿಗೆ ಲೋಲಾಕು, ಚೈನು ಕುತ್ತಿಗೆಗೆ.” “ಹೌದು, ಪತಿತರು ತೊಡುವುದು ಇಂಥದ್ದೇ ಉಡುಗೆ.” “ಐತೆ, ಪೈತೆ ಎಂದೆಲ್ಲ ಮಾತಾಡುತ್ತಿದ್ದೆ. ಪಿಸಪಿಸ ಏನೋ ಹೇಳಿ ಕಿಸಿಕಿಸಿ ನಗುತ್ತಿದ್ದೆ! ಈಗೆಷ್ಟು ಸುಧಾರಿಸಿದೆ ನಿನ್ನ ಭಾಷೆ, ನಡತೆ!” “ನಾಜೂಕು ಕಲಿಯುವಳು ಪ್ರತಿಯೊಬ್ಬ ಪತಿತೆ” “ನಿನ್ನ ಕೈಗಳು ಎಷ್ಟು ಒರಟಾಗಿದ್ದವು ಹೆಣ್ಣೇ! ಮುಖದಲ್ಲೋ ಸುರಿಯುತ್ತಿರುತ್ತಿತ್ತು ಎಣ್ಣೆ! ಈಗಲೋ ಕಾಣುತ್ತಿರುವೆ ಬಿಂಕದ ಸಿಂಗಾರಿಯಂತೆ.” “ಪತಿತೆಗೆ ಇರದು ಯಾವ ಕೆಲಸಬೊಗಸೆಗಳ ತಂಟೆ.” “ಮನೆಗೆಲಸವೆಂದರೆ ಕೆಟ್ಟ ಕನಸೆನ್ನುತ್ತಿದ್ದೆ. ದೂರುತ್ತಿದ್ದೆ ದುರ್ವಿಧಿ ಎಂದು, ನಿಡುಸುಯ್ಯುತ್ತಿದ್ದೆ. ಈಗ ಪಡೆದಿರುವಂತಿದೆ ನೀನು ನಿಶ್ಚಿಂತೆ.” “ನಿಜ! ಉಲ್ಲಾಸದಿಂದಿರುವಳು ಪ್ರತಿಯೊಬ್ಬ ಪತಿತೆ.” “ನನಗೂ ಬೇಕೆನಿಸುವುದು ಇಂಥ ಮಕಮಲ್ ಪೋಷಾಕು. ತೊಟ್ಟು ಪಟ್ಟಣದಲ್ಲಿ ಓಡಾಡಬೇಕು!” “ಇಲ್ಲ, ನೀನೊಬ್ಬ ಹಳ್ಳಿಯ ಅಮಾಯಕ ಹೆಣ್ಣು, ಪತಿತೆಯಲ್ಲದವಳು ಅಪೇಕ್ಷಿಸುವ...

ಚಿಕ್ಕಮ್ಮಂದಿರು

ಇಮೇಜ್
ಮೂಲ ಹಿಂದಿ ಕವಿತೆ - ಅನಾಮಿಕಾ  ಕವಿಕಾವ್ಯ ಪರಿಚಯ - ಬಿಹಾರದ ಮುಜಫ್ಫುರ್ ಪುರದವರಾಡ ಅನಾಮಿಕಾ (1961-) ಹಿಂದಿಯ ಜನಪ್ರಿಯ ಕವಯಿತ್ರಿ.  ಇವರ ಹಲವಾರು ಕವನಸಂಗ್ರಹಗಳು ಪ್ರಕಟವಾಗಿವೆ.  ಇಂಗ್ಲಿಷ್ ಭಾಷೆಯಿಂದ ಹಿಂದಿಗೆ ಕವಿತೆಗಳನ್ನು ಅನುವಾದಿಸಿದ್ದಾರೆ. ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ.  L ಕನ್ನಡಕ್ಕೆ - ಸಿ ಪಿ ರವಿಕುಮಾರ್  ಮಳೆಯ ನಡುವೆ ಬಿಸಿಲಿನ ಹಾಗೆ ಬರುತ್ತಾರೆ ಇವರು ಒಂದಿಷ್ಟು ಹೊತ್ತು, ಒಮ್ಮೆಲೇ ಕೈಯಲ್ಲಿ ಹೆಣೆದ ಸ್ವೆಟರ್, ಕಾಮನಬಿಲ್ಲು, ಎಳ್ಳುಂಡೆ,  ಭಾರೀಸೀರೆ  ಹೊತ್ತುಕೊಂಡು ಬರುತ್ತಾರೆ ಉಡುಗೊರೆ  ಉಯ್ಯಾಲೆ ತೂಗಲು. ವಾಕರಿಸಿದ ಸದ್ದು  ಹೇಗೋ ಪತ್ತೆಹಚ್ಚಿ  ಹೊಟ್ಟೆಯ ಮೇಲೆ ಕೈಯಾಡಿಸಿ  ಪಡೆದುಕೊಳ್ಳುತ್ತಾರೆ ಇಲ್ಲಿಯವರೆಗಿನ ವರದಿ  ಋತುಚಕ್ರ, ಹಾಸಿಗೆ ಅನಂತರ ಚಿಲ್ಲರೆ ಖಿನ್ನತೆಗಳ ಸರದಿ.  ಗುಡಿಸುತ್ತಾರೆ ಜೇಡರ ಬಲೆ, ಓರೆಯಾಗಿಡುತ್ತಾರೆ ಡಬ್ಬಿ, ಸಿಕ್ಕಟ್ಟಿಗೆಯಿಂದ  ಸಿಕ್ಕುಗಳನ್ನು ತೀಡಿ  ಬಿಡಿಸುತ್ತಾರೆ  ಹೆಣೆಯುತ್ತಾರೆ ಜಡೆ-ಗಿಡೆ  ಬೈಯುತ್ತಾರೆ - ನೀನೊಬ್ಬಳು  ನಿನಗೆ ಯಾವಾಗಲೂ ಏನೋ ಖಯಾಲಿ  ಕೂದಲಿನ ಸಿಕ್ಕು ಕೂಡಾ ಬಿಡಿಸಿಕೊಳ್ಳವಲ್ಲಿ.  ಕೂದಲಿನ ನೆಪದಲ್ಲಿ   ಜೀವನದ ಗಂಟುಗಳನ್ನು ಬಿಡಿಸುತ್ತಾರೆ  ಪರಿಹಾಸ್ಯ ಮಾಡುತ್ತಲೇ ಹೇಳುತ್ತಾರೆ ಕಥೆಗಳು  ನಗುತ್ತಾ ...

ಹೆಣ್ಣು ಜಾತಿ (ಅನುವಾದಿತ ಕವಿತೆ)

ಇಮೇಜ್
  ಕೆಲವೊಮ್ಮೆ ನಿನಗೆ ಮಾತಾಡಬೇಕು ಎನ್ನಿಸುವುದು ಪ್ರೀತಿಯ ಕುರಿತು ಮತ್ತು ಹತಾಶೆಯ ಬಗ್ಗೆ ಹಾಗೂ ಮಕ್ಕಳ ಕೃತಘ್ನತೆಯ ವಿಷಯ. ಆಗ ಗಂಡಸರು ಏನೂ ಪ್ರಯೋಜನವಿಲ್ಲ. ನಿಮಗೆ ಬೇಕಾದದ್ದು ನಿಮ್ಮ ತಾಯಿ ಅಥವಾ ಸೋದರಿ ಅಥವಾ ಸ್ಕೂಲಿನಲ್ಲಿ ನಿಮ್ಮೊಂದಿಗೆ ಓದಿದ ಹುಡುಗಿ ನೀವು ಮೊದಲಸಲ ನಿಮ್ಮ ಹೃದಯವನ್ನು ಕೊಟ್ಟವಳು ಮತ್ತು ಅವಳ ಮೊದಲ ಮಗು - ಹೆಣ್ಣು - ಹಾಗೂ ನಿಮ್ಮ ಎರಡನೆಯದು. ಅವರೊಂದಿಗೆ ಕುಳಿತು ಮಾತಾಡುವಾಗ ಅವಳು ಹೊಲಿಗೆ ಹಾಕುವಾಗ ನೀವು ಕುಳಿತು ಗುಟುಕರಿಸುತ್ತಾ ಕೆದಕುವಿರಿ ಅಕ್ಕಿಯ ಧಾರಣೆ ಬಗ್ಗೆ ಚಹಾ ಬೆಲೆ ಕುರಿತು ಮತ್ತು ಗಿಣ್ಣು ಎಷ್ಟು ದುರ್ಲಭವೆಂಬ ವಿಷಯ. ನಿಮ್ಮಿಬ್ಬರಿಗೂ ಗೊತ್ತು ನಿಮ್ಮಿಬ್ಬರ ಈ  ಮಾತುಕತೆ ಪ್ರೇಮ ಮತ್ತು ಹತಾಶೆ ಕುರಿತು ಹಾಗೂ ಮಕ್ಕಳ ಕೃತಘ್ನತೆ.  ಮೂಲ: ಗೌರಿ ದೇಶಪಾಂಡೆ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್

ಹೆಣಿಗೆ (ಕವನ)

ಇಮೇಜ್
ಹೆಣಿಗೆ ಹೆಣಿಗೆಯಲ್ಲಿ ಏನೂ ತಪ್ಪಿಲ್ಲದಂತೆ ಜೋಕೆ ಎಣಿಸುತ್ತ ಸಮ ಎಷ್ಟೆಂದು ಎಷ್ಟು ಬೆಸವೆಂದು ಕುಣಿಕೆ ಹಾಕಿ ಕಡ್ಡಿಗೆ ಉಣ್ಣೆಯ ದಾರದಿಂದ ಜಾಣತನದಿಂದ ಎಳೆದುಕೊಂಡು ಮತ್ತೊಂದನ್ನು ಎಳೆದು ಭದ್ರಗೊಳಿಸುತ್ತ ಸಾಗುತ್ತಿವೆ ಬೆರಳು ಬಳೆಗಳ ಸದ್ದು ಕಿಣಿಕಿಣಿಸುತ್ತಿರಲು ಹಿನ್ನೆಲೆಯಲ್ಲಿ ತಳಕು ಹಾಕಿಕೊಂಡ ಅಸಂಖ್ಯ ಜಡೆಗಳನ್ನು; ಅಳತೆಯನ್ನು ಅಂದಾಜಿಸುತ್ತವೆ ಆಗಾಗ ಕಣ್ಣು. ಇಣುಕಿ ನಡುವೆ ಎಣಿಕೆ ತಪ್ಪಿತು ಎಂದೆಣಿಸದಿರು  ಕಾಣುವ ಮಾದರಿಯಲ್ಲಿದ್ದರೂ ಅಸಮರೂಪ ಹೆಣೆಯುತ್ತಿರಬಹುದು ಕೈಗಳು ಬೇರಾವುದೋ ಗುಣವಿನ್ನೂ ಗಣಿಕೆಗೆ ಬರದ ಸಮಸೂತ್ರವನ್ನು. ಜಡೆ ಹೆಣೆಯುವುದು ಬೇಡುತ್ತದೆ ಅಪಾರ ತಾಳ್ಮೆ ಬಿಡದೆ ಹೆಣೆಯುತ್ತಿರುವುದರಲ್ಲಿ ಎಲ್ಲ ಮಹಿಮೆ.    ಲೀನಾ ನಿಯೋ ಅವರ ಕಲಾಕೃತಿ ನೋಡಿ ಬರೆದ ಚಿತ್ರಕವಿತೆ: ಸಿ ಪಿ ರವಿಕುಮಾರ್ 

ತಾಯಿ

ಇಮೇಜ್
 ತಾಯಿ ಟರ್ಕಿಯ ಭೂಕಂಪದ ನಾಲ್ಕು ದಿವಸಗಳ ತರುವಾಯ ಸಿಕ್ಕಿದ್ದಾರೆ ಜೀವಂತವಾಗಿ ಕಲ್ಲುಮಣ್ಣುಗಳ ತಳದಲ್ಲಿ ಹೊಕ್ಕಳುಬಳ್ಳಿಗೆ ಅಂಟಿಕೊಂಡಿದ್ದ ನವಜಾತ ಶಿಶು ಮತ್ತು ಪಕ್ಕದಲ್ಲಿ ಇನ್ನೂ ಜೀವಕ್ಕೆ ಅಂಟಿಕೊಂಡಿದ್ದ  ಅದರ ತಾಯಿ. ಮೂಳೆ ಕೊರೆವ ಚಳಿಯಲ್ಲಿ ಹೇಗೆ ಕಾಪಾಡಿದಳೊ ಎಳೆಯ ಬಾಳನ್ನು! ಎದೆಗವಚಿಕೊಂಡು, ಕತ್ತಲೆಯ ಕಂಬಳಿಯನ್ನೇ ಸೀಳಿ ಹೊದ್ದಿಸಿಕೊಂಡು! ತನ್ನೆದೆಯ ಹಾಲೇ ಅಮೃತವೆಂದು ಸೋಲನ್ನೊಪ್ಪದೆ ಹಾಡುತ್ತಾ ಕ್ಷೀಣದನಿಯಲ್ಲಿ ಹಳ್ಳುಳ್ಳಾಯಿ. ಎಲ್ಲಿದ್ದಾನೋ ಮಗುವಿನ ತಂದೆ! ಹುಡುಕುತ್ತಿರುವನೋ ಇಲ್ಲ ತತ್ತರಿಸಿಹೋದನೋ ವಿಧಿಯ ವಜ್ರಾಘಾತಕ್ಕೆ? ತಲ್ಲಣಿಸಿ ಅಳಲು ತಾಯಿಗೆ ಪುರುಸೊತ್ತೆಲ್ಲಿ! ಕರುಳಿನ ಬಳ್ಳಿಯನ್ನು ಕಾಪಾಡುವ ಹೊರೆಹೊತ್ತ ಏಕಧ್ಯೇಯಿ. ಕಪ್ಪುತೆರೆ ಆವರಿಸುತ್ತಿದೆ ಕಣ್ಮುಂದೆ, ನಿದ್ರೆಯ ಸುಖದ ಸುಪ್ಪತ್ತಿಗೆಯು ಕರೆಯುತ್ತಿದೆ, ಆದರೆ ಕಣ್ಮುಚ್ಚಲು ಅಳುಕು! ತಪ್ಪಿ ಕಣ್ತೆರೆಯದೇ ಹೋದರೆ ಏನಾದೀತು ಇದರ ಗತಿ! ಅಪ್ಪಿಕೊಂಡು ನನ್ನನ್ನೇ ನಂಬಿಕೊಂಡಿದೆ ಬಡಪಾಯಿ! ದೂರದಲ್ಲೆಲ್ಲೋ ಕುಟ್ಟಿದ ಸದ್ದು ಕೇಳುತ್ತಿದೆ, ಅರೆಮರುಳೇ? ತೂರಿ ಬರುತ್ತಿದೆ ಎಲ್ಲಿಂದಲೋ ಬೆಳಕು, ಸ್ವರ್ಗದ ಬಾಗಿಲೇ? ಯಾರೋ ಮೇಲೆತ್ತಿಕೊಂಡರು, ಅಂತಿಮಯಾತ್ರೆಯೇ? ನೀರು ಕುಡಿಸುತ್ತಿದ್ದಾರೆ! 'ನೋಡಿ ಇಲ್ಲಿದೆ ಮಗುವಿನ ಬಾಯಿ.' ದಪ್ಪ ಕಾಂಕ್ರೀಟ್ ಕೆಳಗೇನು ಸಿಕ್ಕಿತೆಂಬ ಪ್ರಶ್ನೆಗೆ ಸಪ್ಪಗೆ ನಕ್ಕು ಉತ್ತರಿಸಿದ  ರಕ್ಷಣಾ ಸಿಬ್ಬಂದಿ:  ಇಪ್ಪತ್ತುಸಾವಿರಕ್ಕೂ ಸ...