ಆಲ್ಬಂ
ಕಂಡಹಾರ್ ನಗರದಲ್ಲಿ ಹುಟ್ಟಿದ ಕವಿ ರೆಜಾ ಮೊಹಮ್ಮದಿ (1979-) ಇಂದಿನ ಪರ್ಷಿಯನ್ ಯುವಕವಿಗಳಲ್ಲಿ ಒಂದು ಪ್ರಮುಖ ಹೆಸರು. ಇರಾನ್ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಪಡೆದ ಮೊಹಮ್ಮದಿ ಪ್ರಸ್ತುತ ಕಾಬೂಲ್ ನಗರದಲ್ಲಿ ನೆಲೆಸಿದ್ದಾರೆ. ಬಿಬಿಸಿ, ದ ಗಾರ್ಡಿಯನ್ ಮೊದಲಾದ ಮಾಧ್ಯಮಗಳಿಗೆ ಅವರು ಹವ್ಯಾಸಿ ವರದಿಗಾರರಾಗಿ ಬರೆಯುತ್ತಾರೆ. ಈ ಕವಿತೆ ಮೊದಲ ನೋಟಕ್ಕೆ ಒಂದು ಪ್ರೇಮಕವಿತೆಯಂತೆ ತೋರುತ್ತದೆ. ಕವಿತೆಯನ್ನು ಹಾಗೂ ಅರ್ಥೈಸಿಕೊಳ್ಳಬಹುದು. ಆದರೆ ಇಲ್ಲಿ ಬರುವ ಸಖ ಮತ್ತು ಸಖಿ ಅಫ್ಘಾನಿಸ್ತಾನ್ ದೇಶವಾಸಿ ಮತ್ತು ಅಫ್ಘಾನಿಸ್ತಾನ್ ದೇಶ ಕೂಡಾ ಆಗಿರಬಹುದು. ಅಫ್ಘಾನಿಸ್ಥಾನವು ಮೊದಲು ರಷ್ಯಾ ಆನಂತರ ತನ್ನದೇ ದೇಶದ ಉಗ್ರರ ಕೈಯಲ್ಲಿ ಸಿಲುಕಿ ನಲುಗಿದ ದೇಶ. ಇಂದು ಸ್ವತಂತ್ರ ದೇಶವೆಂಬ ಮೊಹರು ಹೊಂದಿದ್ದರೂ ಅಲ್ಲಿ ಉಗ್ರರ ಕೈವಾಡ ಇಂದಿಗೂ ಗಾಢವಾಗಿದೆ. ಅನೇಕ ಲೇಖಕರು ಅಫ್ಘಾನಿಸ್ತಾನದ ದುರದೃಷ್ಟದ ಕಥೆಯನ್ನು ಕುರಿತು ಬರೆದಿದ್ದಾರೆ. ಆಲ್ಬಂ ಮೂಲ: ರೆಜಾ ಮೊಹಮ್ಮದಿ (ಅಫ್ಘಾನಿಸ್ತಾನ್) ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಚಿತ್ರದಲ್ಲಿ ನಿನ್ನ ಕೈ ನಿನ್ನ ಕೇಶಗಳಲ್ಲಿ ಆಡುತ್ತಿದೆ ನಿನ್ನ ಕೇಶಗಳು ನಿನ್ನ ಮುಖದ ಮೇಲೆ ಆಡುತ್ತಿವೆ ಮಧು ತುಂಬಿದ ಎರಡು ಬಟ್ಟಲುಗಳು ನಿನ್ನ ಕಣ್ಣುಗಳು ಮಧುಪಾನ ಮಾಡಲು ನನ್ನೆದೆ ಹಾತೊರೆಯುತ್ತದ...